Daily Horoscope: ಅತಿಯಾದ ಆತ್ಮವಿಶ್ವಾಸವೇ ಈ ರಾಶಿಯವರಿಗೆ ತೊಡಕುಂಟಾಗಬಹುದು
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ಆಗಸ್ಟ್ 17) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 17 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಮೇಘಾ, ಯೋಗ: ಪರಘ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ರಿಂದ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:10 ರಿಂದ 03:45ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:20 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:28 ರಿಂದ11:02ರ ವರೆಗೆ.
ಮೇಷ ರಾಶಿ: ಎಷ್ಟೇ ಹೇಳಿದರೂ ನೀವು ನಿಮ್ಮ ತನವನ್ನು ಬಿಟ್ಟು ಹೋಗಲಾರಿರಿ. ಇಂದು ಗಳಿಸಿದ ಹಣವು ಇಂದೇ ಖಾಲಿಯಾಗಬಹುದು. ಏನನ್ನೋ ಯೋಚಿಸುತ್ತಲೇ ಇರುವಿರಿ. ನಿಮ್ಮದಾದ ವಸ್ತುಗಳನ್ನು ಇಟ್ಟುಕೊಳ್ಳಲು ಪ್ರಯತ್ನಿಸುವಿರಿ. ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವು ಇರಲಿದೆ. ಇನ್ನೊಬ್ಬರನ್ನು ಹಾಸ್ಯವಸ್ತುವನ್ನಾಗಿ ಮಾಡಿಕೊಳ್ಳುವಿರಿ. ಸಂಗಾತಿಯಿಂದ ಬಂದ ಕೆಲವು ಮಾತುಗಳು ನಿಮಗೆ ಬೇಸರವನ್ನು ತರಿಸಬಹುದು. ಶುಭ ಕಾಲದ ನಿರೀಕ್ಷೆಯನ್ನು ನೀವು ಇರುವಿರಿ. ಯಾರ ಮಾತನ್ನೂ ಗಂಭೀರವಾಗಿ ಪರಿಗಣಿಸುವುದಿಲ್ಲ. ವ್ಯಾಮೋಹವನ್ನು ಕಡಿಮೆ ಮಾಡಿಕೊಳ್ಳುವುದು ಕಷ್ಡವೆನಿಸುವುದು.
ವೃಷಭ ರಾಶಿ: ಕಾರ್ಯದಲ್ಲಿ ಒತ್ತಡವು ಅಧಿಕವಾಗಿ ಇರುವುದು. ಖರ್ಚಿಗೆ ಕಡಿವಾಣ ಹಾಕುವುದು ಕಷ್ಟವಾದೀತು. ಅಬಲರ ಮೇಲೆ ನಿಮ್ಮ ಸಿಟ್ಟನ್ನು ತೋರಿಸುವಿರಿ. ನಿರುದ್ಯೋಗವು ನಿಮಗೆ ಸಮಸ್ಯೆಯನ್ನು ಉಂಟುಮಾಡಬಹುದು. ಯಾವುದೇ ಕೆಲಸಕ್ಕೂ ಮುನ್ನುಗ್ಗುವುದು ನಿಮಗೆ ಕಷ್ಟವಾದೀತು. ವ್ಯಾಪಾರದಲ್ಲಿ ನಮಗೆ ಮೋಸವಾಗುವ ಸಾಧ್ಯತೆ ಇದೆ. ಕೊಟ್ಟ ಕೆಲಸವನ್ನು ನಿಷ್ಠೆಯಿಂದ ಮಾಡುವುದು ನಿಮಗೆ ಕೀರ್ತಿಯನ್ನು ತಂದುಕೊಡುವುದು. ಯಾರನ್ನೂ ನಂಬವುದು ನಿಮಗೆ ತೊಂದರೆಯಾಗಬಹುದು. ಇಂದಿನ ಕೆಲವು ಸಮಯವು ನಿಮಗೆ ನೆಮ್ಮದಿಯನ್ನು ಕೊಡುವುದು.
ಮಿಥುನ ರಾಶಿ: ಪ್ರಯಾಣದ ಆಯಾಸದಿಂದ ವಿಶ್ರಾಂತಿಯನ್ನು ಪಡೆಯುವಿರಿ. ನಿಮ್ಮದೊಂದೇ ಸಮಸ್ಯೆ ಎನ್ನುವಂತೆ ಎಲ್ಲವನ್ನೂ ನೀವು ಚಿಂತೆಯಿಂದ ಇರುವಿರಿ. ಕುಟುಂಬದ ಜೊತೆ ಇರುವುದು ನಿಮ್ಮ ಬಹಳ ಖುಷಿಯನ್ನು ಕೊಡುವುದು. ಹಣಾಕಾಸಿಗೆ ಸಂಬಂಧಿಸಿದಂತೆ ನೀವು ಕಠೋರ ನಿಲುವನ್ನು ತೆಗೆದುಕೊಳ್ಳುವಿರಿ. ಸಂಗಾತಿಯ ದುಃಖದಲ್ಲಿ ಭಾಗಿಯಾಗಿ ಸಾಂತ್ವನವನ್ನು ಹೇಳುವಿರಿ. ಆಕಸ್ಮಿಕವಾಗಿ ಧನಲಾಭವೂ ಆಗಬಹುದು. ನಿಮ್ಮ ನಿರಂತರ ಪರಿಶ್ರಮದಿಂದ ನಿಮಗೆ ಕಾರ್ಯವು ಸಫಲವಾಗುವುದು. ಕೆಲಸದ ಹಿಂದೆ ಬಿದ್ದು ಆಗಬೇಕಾದುದನ್ನು ಮಾಡಿಕೊಳ್ಳುವಿರಿ.
ಕರ್ಕ ರಾಶಿ: ಅತಿಯಾದ ಆತ್ಮವಿಶ್ವಾಸವೇ ಎಲ್ಲ ಕೆಲಸಗಳನ್ನೂ ಅರ್ಧಕ್ಕೆ ನಿಲ್ಲುವಂತೆ ಮಾಡುವುದು. ವ್ಯಾಪಾರದಲ್ಲಿ ಚುರುಕುತನದ ಅವಶ್ಯಕತೆ ಹೆಚ್ಚು ಇರಬೇಕಾಗುವುದು. ಮಾತು ಸರಳವೂ ನೇರವೂ ಆಗಿರಲಿ. ಹೊಸ ಮನೆಗೆ ಹೋಗುವ ಯೋಚನೆ ಇರಲಿದೆ. ನಿಮ್ಮನ್ನೇ ನೀವು ಪ್ರಶಂಸಿಸಿಕೊಳ್ಳುವುದು ಬೇಡ. ಮಕ್ಕಳ ವಿಚಾರದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರವು ಸರಿಯಾಗಿರದೇ ಹೋಗಬಹುದು. ನಿಮ್ಮ ರಹಸ್ಯವಾದ ಸಂಗತಿಯನ್ನು ನೀವು ಇನ್ನೊಬ್ಬರಿಗೆ ಗೊತ್ತಾಗದೇ ಹೇಳುವಿರಿ. ಸಂಬಂಧಗಳಲ್ಲಿ ಬಿರುಕು ಉಂಟಾಗುವ ಸಾಧ್ಯತೆ ಇದೆ. ಮಾತು ಹಿತವಾಗಿ ಇರಲಿ.