Daily Horoscope: ಅನ್ಯರಿಂದ ಅಪಹಾಸ್ಯಕ್ಕೆ ಒಳಗಾಗುವಿರಿ, ಮೋಸ ಹೋಗಬಹುದು ಎಚ್ಚರ!

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜುಲೈ 28) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Daily Horoscope: ಅನ್ಯರಿಂದ ಅಪಹಾಸ್ಯಕ್ಕೆ ಒಳಗಾಗುವಿರಿ, ಮೋಸ ಹೋಗಬಹುದು ಎಚ್ಚರ!
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Jul 28, 2023 | 12:10 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಜುಲೈ 28 ಶುಕ್ರವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಭವಿಷ್ಯ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಪುಷ್ಯಾ, ಮಾಸ: ಅಧಿಕ ಶ್ರಾವಣ, ಪಕ್ಷ: ಶುಕ್ಲ, ವಾರ: ಶುಕ್ರ, ತಿಥಿ: ದಶಮೀ, ನಿತ್ಯನಕ್ಷತ್ರ: ಜ್ಯೇಷ್ಠಾ, ಯೋಗ: ಶುಕ್ಲ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 15 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 11:03 ರಿಂದ 12:39ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 03:50 ರಿಂದ 5:26ರ ವರೆಗೆ, ಗುಳಿಕ ಕಾಲ ಬೆಳಗ್ಗೆ 07:52 ರಿಂದ 09:27ರ ವರೆಗೆ.

ಮೇಷ: ಆಲಸ್ಯದಿಂದ ಇರುವ ಕಾರಣ ಯಾವ ಕೆಲಸವೂ ಸರಿಯಾದ ಸಮಯಕ್ಕೆ ಮಾಡಲಾಗದು. ತಪ್ಪು ಕೆಲಸದಿಂದ ಅಧಿಕಾರಿಗಳು ಬೈಯ್ಯಬಹುದು.‌ ಆರ್ಥಿಕ ಬಲಕ್ಕೆ ನೀವು ದೈವಕ್ಕೆ ಶರಣಾಗುವಿರಿ. ಏಕಾಗ್ರವಾದ ಕೆಲಸವನ್ನು ಮಾಡಲು ಕಷ್ಟವಾದೀತು. ಸಂಗಾತಿಯಿಂದ ನಿಮಗೆ ಸಲಹೆಯಂತೆ ಮುಂದುವರಿಯಿರಿ. ಆಗಬೇಕಾದ ಕೆಲಸಕ್ಕೆ ಇಂದಿನ ಸುತ್ತಾಟವು ವ್ಯರ್ಥವಾಗಲಿದೆ. ಮನೆಯ ನಿರ್ಮಾಣದ ಕಾರ್ಯವನ್ನು ಮಾಡುವುದು ಕಷ್ಟವಾಗಲಿದೆ. ಸಹೋದ್ಯೋಗಿಗಳಿಂದ ಸಹಕಾರದ ಕೊರತೆ ಇರಲಿದೆ. ಏಕಾಂತದಲ್ಲಿ ಇರಲು ಇಷ್ಟವಾಗುವುದು.

ವೃಷಭ: ಅಪ್ತರ ಮೇಲಿನ ನಂಬಿಕೆಯು ಹೋಗಲಿದೆ. ಮನೆಯಿಂದ ದೂರವಿರುವ ನಿಮಗೆ ಅಲ್ಲಿಗೆ ಹೋಗಬೇಕು ಎಂದು ಅನ್ನಿಸಬಹುದು. ಸಂಗಾತಿಯ ಮಾತಗಳು ನಿಮಗೆ ಕಿರಿಕಿರಿ ಎನಿಸಿದರೂ ಮಾತನ್ನೇ ಅನುಸರಿಸುವಿರಿ. ಖರ್ಚಿನ ಮಾರ್ಗಗಳು ಒಂದೊಂದೇ ತೆರೆದುಕೊಂಡು ನಿಮಗೆ ಬೇಸರವನ್ನು ಉಂಟುಮಾಡಬಹುದು. ಹೊಸ ಯೋಜನೆಯನ್ನು ನೀವು ಇಂದು ಆರಂಭಿಸುವಿರಿ. ಬೆಂಬಲವು ಚೆನ್ನಾಗಿರಲಿದೆ. ನಿಮ್ಮ ಸೌಂದರ್ಯವನ್ನು ನೆಚ್ಚಿಕೊಳ್ಳುವರು. ಹಲವು ತೊಡಕುಗಳಿಂದ ನೀವು ಮುಕ್ತರಾಗಲು ಬಯಸುವಿರಿ.

ಮಿಥುನ: ನಿಮ್ಮ‌ ಬಗ್ಗೆ ಅಪವಾದವನ್ನು ನೀವು ಜೀರ್ಣಿಸಿಕೊಳ್ಳಲು ಕಷ್ಟವಾದೀತು. ಸಂಗಾತಿಯ ವಿಚಾರದಲ್ಲಿ ನಿಮಗೆ ಸಂಪೂರ್ಣ ಖಷಿಯು ಇರದು. ವೃತ್ತಿಯಲ್ಲಿ ಖುಷಿಯಿಂದ ಈ ದಿನವನ್ನು ಕಳೆಯುವಿರಿ. ಅನ್ಯರಿಂದ ಅಪಹಾಸ್ಯಕ್ಕೆ ಒಳಗಾಗುವಿರಿ. ಅಪರಿಚಿತ ದೂರವಾಣಿ‌‌ ಕರೆಗಳು ನಿಮ್ಮನ್ನು ಮೋಸ ಮಾಡಬಹುದು. ಆಹಾರದ ವ್ಯಾಪಾರವನ್ನು ನೀವು ನಡೆಸುತ್ತಿದ್ದರೆ ಎಂದಿಗಿಂತ ಅಧಿಕ ಲಾಭವು ಆಗಬಹುದು. ಕಲೆಯಲ್ಲಿ ಆಸಕ್ತಿ ಬರಬಹುದು. ಕೆಲಸದ ನಿಮಿತ್ತ ದೂರ ಪ್ರಯಾಣವನ್ನು ಮಾಡುವಿರಿ. ಮಾತಗಳನ್ನು‌ ಇಂದು ಕಡಿಮೆ ಆಡಲಿದ್ದೀರಿ.

ಕಟಕ: ಪ್ರೀತಿ ಪಾತ್ರರನ್ನು ನೀವು ದೂರಮಾಡಿಕೊಳ್ಳುವಿರಿ. ನಿರಂತರ ಕೆಲಸವನ್ನು ಮಾಡದೇ ಸ್ವಲ್ಪ ವಿಶ್ರಾಂತಿಯನ್ನು ಪಡೆಯುವುದು ಉತ್ತಮ. ಭೂಮಿಯ ದಾಖಲೆಗಳನ್ನು ಸರಿಮಾಡಿಕೊಳ್ಳಲು ಶ್ರಮಿಸಬೇಕಾದೀತು. ವಿದ್ಯಾರ್ಥಿಗಳು ವಿದ್ಯಾಭ್ಯಾಸದಿಂದ ವಿಮುಖರಾಗುವ ಸಾಧ್ಯತೆ ಇದೆ. ಸಹೋದರನ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದೆ. ಅಪರೂಪದ ಸ್ಥಳಕ್ಕೆ ಹೋಗಲಿದ್ದೀರಿ. ಎಲ್ಲ ಸಂದರ್ಭದಲ್ಲಿ ನಿಮ್ಮ ವರ್ತನೆಯನ್ನು ಸರಿಯಾಗಿ ಇಟ್ಟುಕೊಳ್ಳಿ. ಹಣವನ್ನು ಕಳೆದುಕೊಳ್ಳಬಹುದು. ಸಂಗಾತಿಯ ಮೇಲೆ ಸಿಟ್ಟುಗೊಳ್ಳಲಿದ್ದೀರಿ.

ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
ನಟಿ ತಾರಾಗೆ ಗೌರವ ಡಾಕ್ಟರೇಟ್​: ಉತ್ತರ ಕರ್ನಾಟಕದ ನಂಟಿನ ಬಗ್ಗೆ ವಿಶೇಷ ಮಾತು
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
’ಬಿಜೆಪಿ ನಾಯಕರದ್ದು ಲಂಚ್, ಕಾಂಗ್ರೆಸ್ ನಾಯಕರು ಮಾಡ್ತಿರೋದು ಡಿನ್ನರ್!’
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಒಂದು ರಾಷ್ಟ್ರ ಒಂದು ಚುನಾವಣೆ ಮಸೂದೆ ಹಿಂದೆ ಹುನ್ನಾರ ಅಡಗಿದೆ: ಶಿವಕುಮಾರ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಜೊತೆಗೆ ಇದ್ದವರಿಂದಲೇ ಧನರಾಜ್​ಗೆ ಬಂತು ಇಂಥ ಸ್ಥಿತಿ; ಫಿನಾಲೆ ಟಿಕೆಟ್ ಮಿಸ್
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ಹಕ್ಕಿಯ ಪ್ರಾಣ ತೆಗೆದ ಬ್ಯಾಟರ್ ಬಾರಿಸಿದ ಚೆಂಡು; ವಿಡಿಯೋ
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ರೆಡ್​ಹ್ಯಾಂಡಾಗಿ ಸಿಕ್ಕಿಬಿದ್ದರೂ ಅಧಿಕಾರಿಗಳು ಅಮಾಯಕರೇ?
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ವಿಜಯ್ ಹಜಾರೆ ಟ್ರೋಫಿ: ಒಂದೇ ಓವರ್​ನಲ್ಲಿ ಸತತ 7 ಬೌಂಡರಿ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಕೇಂದ್ರದಲ್ಲಿ ಮಂತ್ರಿಯಾಗಿರುವ ಕುಮಾರಸ್ವಾಮಿ ಘನತೆ ಉಳಿಸಿಕೊಳ್ಳಲಿ: ಶಾಸಕ
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಮಂಜು ಅನ್ನು ನೀರಲ್ಲಿ ಮುಳುಗಿಸಿದರೇ ಗೌತಮಿ, ಗೆದ್ದಿದ್ದು ಯಾರು?
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್
ಹಣೇಲಿ ಬರೆದಿದ್ರೆ ಶಿವಕುಮಾರ್ ಮುಖ್ಯಮಂತ್ರಿ ಆಗೇ ಆಗುತ್ತಾರೆ: ಸೋಮಶೇಖರ್