Daily Horoscope: ಎಲ್ಲ ಸಮಯದಲ್ಲಿಯೂ ನಿಮ್ಮ ಮಾತು ಸರಿಯಲ್ಲ, ಹಿರಿಯರಿಗೆ ಗೌರವ ನೀಡಿ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 19) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ನೋಡುತ್ತಾರೆ. ಇದರ ಜೊತೆಗೆ ನಿತ್ಯಪಂಚಾಂಗ ಕೂಡ ಓದುತ್ತಾರೆ. ಹಾಗಾದರೆ ಇಂದಿನ (2023 ಜೂನ್ 19) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮಿಥುನ ಮಾಸ, ಮಹಾನಕ್ಷತ್ರ: ಮೃಗಶಿರಾ, ಮಾಸ: ಆಷಾಢ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಆರ್ದ್ರಾ, ಯೋಗ: ಗಂಡ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ಗಂಟೆ 05 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 07 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 07:42 ರಿಂದ 09:20 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:57 ರಿಂದ ಮಧ್ಯಾಹ್ನ 12:34ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 02:11 ರಿಂದ 03:48ರ ವರೆಗೆ.
ಮೇಷ: ಇಂದು ನೀವು ಸ್ನೇಹಿತರ ಸಹಾಯದಿಂದ ವಾಹನವನ್ನು ಖರೀದಿಸುವಿರಿ. ವಿದೇಶೀಯ ವ್ಯಾಪಾರವು ಯಾವುದೇ ತೊಂದರೆ ಇಲ್ಲದೇ ನಡೆಯುವುದು. ನಿಮ್ಮ ಮಂತ್ರಕ್ಕೆ ಮಾವಿನ ಕಾಯಿ ಬೀಳದು. ಪ್ರಯತ್ನ ಬಹಳ ಮುಖ್ಯ. ನಿಮ್ಮ ವಿರುದ್ಧ ಯಾರಾದರೂ ಮಾತನಾಡಬಹುದು. ಹಿತಶತ್ರುಗಳ ನಿಮ್ಮ ವಿರುದ್ಧ ಸಂಚುರೂಪಿಸುವರು. ಆನ್‌ಲೈನ್ ವ್ಯಾಪಾರವು ಬಹಳ ಖರ್ಚಿನದ್ದಾಗಿದೆ. ಇಂದು ಮಿತಿ ಮೀರಿದ ದೂರವಾಣಿ ಕರೆಗಳು ಬರಬಹುದು. ಸರ್ಕಾರದಿಂದ ನಿಮಗೆ ಶುಭವಾರ್ತೆ ಸಿಗಲಿದೆ. ರಾಜಕೀಯದವರ ಒಡನಾಟ ಬೆಳೆಯಬಹುದು. ಸ್ತ್ರೀಯರ ಸಹವಾಸ ಸಿಗಲಿದೆ.
ವೃಷಭ: ನಿಮ್ಮದೇ ಆದ ಚಿಂತನೆಯನ್ನು ಬಿಟ್ಟ ಬರಲು ನೀವು ತಯಾರಿಲ್ಲ. ನಿಮ್ಮವರನ್ನು ನೀವು ಕಳೆದುಕೊಂಡು ದುಃಖಪಡಬೇಕಾದೀತು. ಒಳ್ಳೆಯ ಅಭ್ಯಾಸವನ್ನು ಬೆಳೆಸಿಕೊಳ್ಳುವುದು ಉತ್ತಮ. ಈ ದಿನವನ್ನು ಬಹಳ ಉತ್ಸಹದಿಂದ ಕಳೆಯುವಿರಿ. ಆರ್ಥಿಕವಾಗಿ ನೀವು ಸಬಲರಾಗಬೇಕಾಗಿದೆ. ಸಂಗಾತಿಯ ಮಾತುಗಳು ನಿಮಗೆ ಅಸಮಾಧಾನ ತರಿಸಬಹುದು. ದೇವತಾರಾಧನೆಗೆ ಹೆಚ್ಚು ಮನಸ್ಸು ತೊಡಗುವುದು. ನಿಮ್ಮ ಇಚ್ಛಯನ್ನು ಪೂರ್ಣಗೊಳಿಸಿಕೊಳ್ಳುವಿರಿ. ಆತುರದ ನಿರ್ಧಾರವನ್ನು ಬಿಟ್ಟು ವಾಸ್ತವವಾಗಿ ಯೋಚಿಸಿ. ಏಕಮುಖಗಮನವು ತೊಂದರೆ ಕೊಟ್ಟೀತು.
ಮಿಥುನ: ಸಮಯವನ್ನು ಕಳೆಯುವುದು ಇಂದು ನಿಮಗೆ ಕಷ್ಟವಾದೀತು. ಸಮಯವನ್ನು ಸದುಪಯೋಗಮಾಡಿಕೊಳ್ಳಲು ನೀವು ಪ್ರಯತ್ನಿಸಬಹುದು. ದಾಂಪತ್ಯದಲ್ಲಿ ಸಾಮರಸ್ಯವು ಸ್ವಲ್ಪವೇ ಬರಲಿದೆ. ಅಪರಿಚಿತರು ನಿಮ್ಮ ನಡುವೆ ಏನಾದರೂ ಆಗುವಂತೆ ನೋಡಬಹುದು. ಪಾಲುದಾರಿಕೆಯಲ್ಲಿ ಇರುವವರು ಪರಸ್ಪರರ ಮಾತನ್ನು ಮಾತ್ರ ನಂಬಿ. ಅನ್ಯರ ಮಾತನ್ನು ಕೇಳಿಸಿಕೊಳ್ಳುವುದು ಬೇಡ. ಶ್ರದ್ಧೆಯ ಕೊರೆತೆಯು ಕಾಣಿಸುವುದು. ಕಛೇರಿಯಲ್ಲಿ ಕೆಲವರ ಕೆಲಸವು ನಿಮ್ಮ ಮೇಲೆ ಬರಬಹುದು. ಸಾಧ್ಯವಾದಷ್ಟು ಮಾಡಿ. ನಕಾರಾತ್ಮಕ ಪ್ರತಿಕ್ರಿಯೆ ಬೇಡ.
ಕರ್ಕ: ಪ್ರಯಾಣದ ದಣಿವು ನಿಮ್ಮನ್ನು ಬಾಧಿಸೀತು. ನೀವು ಯಾರಿಗಾದರೂ ಮಾದರಿಯಾಗಬೇಕು ಎಂದುಕೊಳ್ಳಬೇಕಿಲ್ಲ. ಮಕ್ಕಳಿಗೆ ಆದರೆ ಸಾಕು. ಸಂಗಾತಿಯ ತಪ್ಪನ್ನು ಹೇಳುವ ರೀತಿಯಲ್ಲಿ ಹೇಳಿ. ಇಲ್ಲವಾದರೆ ಸುಮ್ಮನೇ ವೈಮನಸ್ಯ ಉಂಟಾಗಬಹುದು. ಆವರಣವನ್ನು ಖರೀದಿಸಲಿದ್ದೀರಿ. ನಿಮ್ಮ ನಂಬಿಕೆಯು ಅರ್ಧ ಸತ್ಯ ಹಾಗೂ ಸುಳ್ಳಿನಿಂದ ಇರಲಿದೆ. ಮಕ್ಕಳನ್ನು ಇಷ್ಟಪಡುವಿರಿ. ಎಲ್ಲ ಸಮಯದಲ್ಲಿಯೂ ನಿಮ್ಮ ಮಾತು ಸರಿಯಲ್ಲ. ಹಿರಿಯರಿಗೆ ಎದುರಾಡುವುದು ನಿಮಗೆ ಶೋಭೆಯಾಗದು.