Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್20) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ವಿಷ್ಕಂಭ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:05 ರಿಂದ 03:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 6:17 ರಿಂದ 07:51ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:24 ರಿಂದ ಮಧ್ಯಾಹ್ನ 10:58ರ ವರೆಗೆ.
ಮೇಷ: ಅರ್ಧಕ್ಕೇ ಕಾರಣಾಂತರಗಳಿಂದ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಮನೆಯಲ್ಲಿ ಪ್ರಶಾಂತವಾದ ವಾತಾವರಣವಿರಲಿದ್ದು ನಿಮಗೆ ಬಹಳ ಖುಷಿ ಎನಿಸುವುದು. ಧಾರ್ಮಿಕ ಕಾರ್ಯಗಳಿಗೆ ಖರ್ಚು ಮಾಡುವಿರಿ ಅಥವಾ ಧಾರ್ಮಿಕ ಕಾರ್ಯದಿಂದ ಹಣವೂ ಬರಬಹುದು. ನಿಮ್ಮ ತಮಾಷೆಯ ಸ್ವಭಾವವು ಇತರರಿಗೆ ಬೇಸರ ತರಿಸಬಹುದು. ಹಿರಿಯರ ಭೇಟಿಯಿಂದ ನಿಮ್ಮ ಜೀವನದ ಕೆಲವು ಭಾಗಗಳನ್ನು ಬದಲಿಸಿಕೊಳ್ಳುವಿರಿ. ವೃತ್ತಿಯನ್ನು ನೀವು ಗೌರವಿಸಲಿದ್ದೀರಿ. ಅದರ ಬಗ್ಗೆ ಯಾರಾದರೂ ನಕರಾತ್ಮಕವಾಗಿ ಮಾತನಾಡಿದರೆ ಅವರ ಜೊತೆ ವಿವಾದಕ್ಕೆ ಇಳಿಯುವಿರಿ. ದಿನದಲ್ಲಿ ಶುಭವು ಹೆಚ್ಚಿರಲಿದೆ.
ವೃಷಭ: ಅಂದುಕೊಂಡಿದ್ದು ಆಗುವುದಿಲ್ಲ ಎಂಬ ನಂಬಿಕೆಯಿಂದ ಹೊರಗೆ ಬನ್ನಿ. ಎಲ್ಲವನ್ನೂ ನಾವಂದು ಕೊಂಡಂತೆ ನಡೆಸಲು ಸಾಧ್ಯವಿಲ್ಲ. ಸೂರ್ಯನು ಪಶ್ಚಿಮ ದಿಕ್ಕಿಗೆ ಉದಯಿಸುವುದನ್ನು ನೋಡಬೆಕು ಎಂಬ ಕನಸು ಅಥವಾ ಆಸೆ ಎಂದಾರೂ ಆದೀತಾ? ಬೇರೆ ಊರಿಗೆ ಪ್ರಯಾಣಮಾಡುವಿರಿ. ಆರ್ಥಿಕತೆಯು ಸ್ವಲ್ಪ ದುರ್ಬಲಗೊಳ್ಳುವುದು. ಹತಾಶರಾಗುವ ಅವಶ್ಯಕತೆ ಇಲ್ಲ. ಗ್ರಹಗಳ ಮತ್ತೆ ನಿಮ್ಮನ್ನು ಎತ್ತರಕ್ಕೆ ಏರಿಸುತ್ತವೆ. ನಿಮ್ಮ ಬಗ್ಗೆ ನಿಮ್ಮವರಿಗೆ ತಿಳಿಸುವ ಅನಿವಾರ್ಯತೆ ಬರಬಹುದು. ನಿಮ್ಮ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ. ಸೂರ್ಯನನ್ನು ಏಕಾಗ್ರಚಿತ್ತದಿಂದ ಧ್ಯಾನಿಸಿ, ಸ್ತುತಿ ಮಾಡಿ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವನು. ಮಿಶ್ರಫಲವನ್ನು ಪಡೆಯುವಿರಿ.
ಮಿಥುನ: ನಿರೀಕ್ಷಿತವಾದ ಸಂಪತ್ತು ನಿಮಗೆ ಸಿಗಲಿದೆ. ಯಾವದೇ ವಿಚಾರವನ್ನು ನಿಮ್ಮ ಸಾಮರ್ಥ್ಯ ಹಾಗೂ ವಿದ್ಯೆ ತಕ್ಕಂತೆ ಯೋಚಿಸಿ. ಎಲ್ಲವನ್ನೂ ಸರಿ ಮಾಡುತ್ತೇನೆ ಎಂಬ ಹುಂಬುತನವನ್ನು ತೋರಿಸಬೇಡಿ. ನೀವಿಂದು ಮಹತ್ತರವಾದ ಏನನ್ನಾದರೂ ಮಾಡಲು ಹೊರಟಿದ್ದರೆ ನಿಮಗೆ ಶುಭಸೂಚನೆಗಳು ಸಿಗಬಹುದು. ಅದನ್ನು ಗಮನಿಸಿಕೊಂಡು ನಿಮ್ಮ ಕೆಲಸವನ್ನು ಮುಂದುವರಿಸಿ. ಸ್ನೇಹಿತರು ದಾರಿಯನ್ನು ತಪ್ಪಿಸಬಹುದು. ಯಾರ ಬಳಿ ಏನನ್ನು ಹೇಳಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಮೆಲ್ಲಗೆ ಮಾತನಾಡಿ. ಲಕ್ಷ್ಮೀನಾರಾಯಣ ನಾರಾಯಣನ ಸ್ತೋತ್ರ ಮಾಡಿ.
ಕಟಕ: ಯಾವುದನ್ನಾದರೂ ಹೇಳುವುದು ಸುಲಭ, ಸ್ವತಃ ಮಾಡಲು ಬಂದಾಗ ವಾಸ್ತವದ ಪರಿಚಯವಾಗುವುದು. ಸಂಗಾತಿಯನ್ನು ನೀವು ಇಷ್ಟಪಡಬಹುದು. ಆದರೆ ಪ್ರತಿಯಾಗಿ ಪ್ರೀತಿಯು ಸಿಗುತ್ತದೆ ಎಂದು ತಿಲಕಿಯಬೇಡಿ. ಅನಾರೋಗ್ಯವಿದ್ದರೂ ಸದಾ ಉತ್ಸಾಹಿಗಳಾಗಿ ಇರುವಿರಿ. ಉದ್ಯೋಗದ ಬದಲಾವಣೆಯು ನಿಮಗೆ ಹವ್ಯಾಸದಂತೆ ಆಗುವುದು. ಸರ್ಜನಶೀಲವ್ಯಕ್ತಿಗಳಾಗಿದ್ದರೆ ನಿಮಗೆ ಅವಕಾಶಗಳು ಹೆಚ್ಚು ಬರುತ್ತದೆ. ಒಳ್ಳೆಯದನ್ನು ಬೆಂಬಲಿಸಿ. ಸುಮ್ಮನೇ ಸುತ್ತಾಟ ಇಂದು ಬೇಡ. ಕುಮಾರಸ್ವಾಮಿಯ ದೇವಾಲಯಕ್ಕೆ ಹೋಗಿ ದರ್ಶನಮಾಡಿ ಬನ್ನಿ. ನಿಮಗಾಗುತ್ತಿರುವ ನಷ್ಟವನ್ನು ತಡೆಯುವನು.