Daily Horoscope: ಹಲವು ದಿನಗಳಿಂದ ಕಾಡುತ್ತಿರುವ ಸಮಸ್ಯೆಗಿಂದು ಮುಕ್ತಿ, ಶಿವಾರಾಧನೆ ಮಾಡಿ

ಇಂದಿನ (2023 ಏಪ್ರಿಲ್​ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Daily Horoscope: ಹಲವು ದಿನಗಳಿಂದ ಕಾಡುತ್ತಿರುವ ಸಮಸ್ಯೆಗಿಂದು ಮುಕ್ತಿ, ಶಿವಾರಾಧನೆ ಮಾಡಿ
ಪ್ರಾತಿನಿಧಿಕ ಚಿತ್ರImage Credit source: www.indiamart.com
Follow us
ಗಂಗಾಧರ​ ಬ. ಸಾಬೋಜಿ
|

Updated on: Apr 20, 2023 | 5:10 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್​ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ: ಅಶ್ವಿನೀ, ಮಾಸ: ಚೈತ್ರ, ಪಕ್ಷ: ಕೃಷ್ಣ, ವಾರ: ಗುರು, ತಿಥಿ: ಅಮಾವಾಸ್ಯಾ, ನಿತ್ಯನಕ್ಷತ್ರ: ಅಶ್ವಿನೀ, ಯೋಗ: ವಿಷ್ಕಂಭ, ಕರಣ: ಕಿಂಸ್ತುಘ್ನ, ಸೂರ್ಯೋದಯ ಬೆಳಗ್ಗೆ 06 ಗಂಟೆ 17 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 45 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:05 ರಿಂದ 03:39ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 6:17 ರಿಂದ 07:51ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:24 ರಿಂದ ಮಧ್ಯಾಹ್ನ 10:58ರ ವರೆಗೆ.

ಮೇಷ: ಅರ್ಧಕ್ಕೇ ಕಾರಣಾಂತರಗಳಿಂದ ನಿಂತಿದ್ದ ಕೆಲಸಗಳನ್ನು ಪೂರ್ಣಗೊಳಿಸುವಿರಿ. ಮನೆಯಲ್ಲಿ‌ ಪ್ರಶಾಂತವಾದ ವಾತಾವರಣವಿರಲಿದ್ದು ನಿಮಗೆ ಬಹಳ ಖುಷಿ ಎನಿಸುವುದು. ಧಾರ್ಮಿಕ ಕಾರ್ಯಗಳಿಗೆ ಖರ್ಚು ಮಾಡುವಿರಿ ಅಥವಾ ಧಾರ್ಮಿಕ ಕಾರ್ಯದಿಂದ ಹಣವೂ ಬರಬಹುದು. ನಿಮ್ಮ ತಮಾಷೆಯ ಸ್ವಭಾವವು ಇತರರಿಗೆ ಬೇಸರ ತರಿಸಬಹುದು. ಹಿರಿಯರ ಭೇಟಿಯಿಂದ ನಿಮ್ಮ ಜೀವನದ ಕೆಲವು ಭಾಗಗಳನ್ನು ಬದಲಿಸಿಕೊಳ್ಳುವಿರಿ. ವೃತ್ತಿಯನ್ನು ನೀವು ಗೌರವಿಸಲಿದ್ದೀರಿ. ಅದರ ಬಗ್ಗೆ ಯಾರಾದರೂ ನಕರಾತ್ಮಕವಾಗಿ ಮಾತನಾಡಿದರೆ ಅವರ ಜೊತೆ ವಿವಾದಕ್ಕೆ ಇಳಿಯುವಿರಿ. ದಿನದಲ್ಲಿ ಶುಭವು ಹೆಚ್ಚಿರಲಿದೆ.

ವೃಷಭ: ಅಂದುಕೊಂಡಿದ್ದು ಆಗುವುದಿಲ್ಲ ಎಂಬ ನಂಬಿಕೆಯಿಂದ ಹೊರಗೆ ಬನ್ನಿ. ಎಲ್ಲವನ್ನೂ ನಾವಂದು ಕೊಂಡಂತೆ ನಡೆಸಲು ಸಾಧ್ಯವಿಲ್ಲ. ಸೂರ್ಯನು ಪಶ್ಚಿಮ ದಿಕ್ಕಿಗೆ ಉದಯಿಸುವುದನ್ನು ನೋಡಬೆಕು ಎಂಬ ಕನಸು ಅಥವಾ ಆಸೆ ಎಂದಾರೂ ಆದೀತಾ? ಬೇರೆ ಊರಿಗೆ ಪ್ರಯಾಣಮಾಡುವಿರಿ. ಆರ್ಥಿಕತೆಯು ಸ್ವಲ್ಪ ದುರ್ಬಲಗೊಳ್ಳುವುದು. ಹತಾಶರಾಗುವ ಅವಶ್ಯಕತೆ ಇಲ್ಲ. ಗ್ರಹಗಳ ಮತ್ತೆ ನಿಮ್ಮನ್ನು ಎತ್ತರಕ್ಕೆ ಏರಿಸುತ್ತವೆ. ನಿಮ್ಮ ಬಗ್ಗೆ ನಿಮ್ಮವರಿಗೆ ತಿಳಿಸುವ ಅನಿವಾರ್ಯತೆ ಬರಬಹುದು. ನಿಮ್ಮ ಬಗ್ಗೆ ನಿಮಗೆ ಸ್ಪಷ್ಟತೆ ಇರಲಿ. ಸೂರ್ಯನನ್ನು ಏಕಾಗ್ರಚಿತ್ತದಿಂದ ಧ್ಯಾನಿಸಿ, ಸ್ತುತಿ ಮಾಡಿ. ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಬಗೆಹರಿಸುವನು. ಮಿಶ್ರಫಲವನ್ನು ಪಡೆಯುವಿರಿ.

ಮಿಥುನ: ನಿರೀಕ್ಷಿತವಾದ ಸಂಪತ್ತು ನಿಮಗೆ ಸಿಗಲಿದೆ. ಯಾವದೇ ವಿಚಾರವನ್ನು ನಿಮ್ಮ ಸಾಮರ್ಥ್ಯ ಹಾಗೂ ವಿದ್ಯೆ ತಕ್ಕಂತೆ ಯೋಚಿಸಿ. ಎಲ್ಲವನ್ನೂ ಸರಿ ಮಾಡುತ್ತೇನೆ ಎಂಬ ಹುಂಬುತನವನ್ನು ತೋರಿಸಬೇಡಿ. ನೀವಿಂದು ಮಹತ್ತರವಾದ ಏನನ್ನಾದರೂ ಮಾಡಲು ಹೊರಟಿದ್ದರೆ ನಿಮಗೆ ಶುಭಸೂಚನೆಗಳು ಸಿಗಬಹುದು. ಅದನ್ನು ಗಮನಿಸಿಕೊಂಡು ನಿಮ್ಮ ಕೆಲಸವನ್ನು ಮುಂದುವರಿಸಿ. ಸ್ನೇಹಿತರು ದಾರಿಯನ್ನು ತಪ್ಪಿಸಬಹುದು. ಯಾರ ಬಳಿ ಏನನ್ನು ಹೇಳಬೇಕು ಎಂಬ ಬಗ್ಗೆ ಸ್ಪಷ್ಟತೆ ಇರಲಿ. ಮೆಲ್ಲಗೆ ಮಾತನಾಡಿ. ಲಕ್ಷ್ಮೀನಾರಾಯಣ ನಾರಾಯಣನ ಸ್ತೋತ್ರ ಮಾಡಿ.

ಕಟಕ: ಯಾವುದನ್ನಾದರೂ ಹೇಳುವುದು ಸುಲಭ, ಸ್ವತಃ ಮಾಡಲು ಬಂದಾಗ ವಾಸ್ತವದ ಪರಿಚಯವಾಗುವುದು. ಸಂಗಾತಿಯನ್ನು ನೀವು ಇಷ್ಟಪಡಬಹುದು. ಆದರೆ ಪ್ರತಿಯಾಗಿ ಪ್ರೀತಿಯು ಸಿಗುತ್ತದೆ ಎಂದು ತಿಳಿಯಬೇಡಿ. ಅನಾರೋಗ್ಯವಿದ್ದರೂ ಸದಾ ಉತ್ಸಾಹಿಗಳಾಗಿ ಇರುವಿರಿ. ಉದ್ಯೋಗದ ಬದಲಾವಣೆಯು ನಿಮಗೆ ಹವ್ಯಾಸದಂತೆ ಆಗುವುದು. ಸರ್ಜನಶೀಲವ್ಯಕ್ತಿಗಳಾಗಿದ್ದರೆ ನಿಮಗೆ ಅವಕಾಶಗಳು ಹೆಚ್ಚು ಬರುತ್ತದೆ. ಒಳ್ಳೆಯದನ್ನು ಬೆಂಬಲಿಸಿ. ಸುಮ್ಮನೇ ಸುತ್ತಾಟ ಇಂದು ಬೇಡ. ಕುಮಾರಸ್ವಾಮಿಯ ದೇವಾಲಯಕ್ಕೆ ಹೋಗಿ ದರ್ಶನಮಾಡಿ ಬನ್ನಿ. ನಿಮಗಾಗುತ್ತಿರುವ ನಷ್ಟವನ್ನು ತಡೆಯುವನು.

ಸಿಂಹ: ಇಂದು ನೀವು ಹಲವು ದಿನಗಳಿಂದ ಕಾಡುತ್ತಿರುವ ಅಥವಾ ಅನುಭವಿಸುತ್ತಿರುವ ಸಮಸ್ಯೆಗಳಿಗೆ ಪರಿಹಾರವನ್ನು ಹುಡುಕಿಕೊಳ್ಳುವಿರಿ. ಪೂರ್ವಯೋಚನೆ ಇಲ್ಲದೇ ಆರಂಭಮಾಡಿದ ಕೆಲಸವನ್ನು ಆಮೇಲೆ ಪರಿಶೀಲಿಸದರೆ ಏನು ಬಂತು? ಪೂರ್ವಸಿದ್ಧತೆ ಚೆನ್ನಾಗಿರಬೇಕಾಗುತ್ತದೆ. ಸ್ನೇಹಿತರಿಂದ ಅಪಹಾಸ್ಯಕ್ಕೆ ಒಳಗಾಗುವಿರೊ. ಸರ್ಕಾರಿ ಉದ್ಯೋಗದಲ್ಲಿ ಇದ್ದವರಿಗೆ ಕೆಲವೊಂದಿಷ್ಟು ಗೊಂದಲಗಳು ಆಗಬಹುದು. ಬೇರೆ ಕಡೆಗೆ ಇಟ್ಟಿದ್ದ ಗಮನವನ್ನು ಬದಲಿಸಿ, ನಿಮ್ಮ ಜೀವನದ ಬಗ್ಗೆ ಯೋಚಿಸುವುದು ಒಳ್ಳೆಯದು ಎಂದು ಅನ್ನಿಸಬಹುದು. ಸಪ್ತಮದ ಶನಿಯು ವಿವಾಹಕ್ಕೆ ಸಂಬಂಧಿಸಿದ ವಿಷಯದಲ್ಲಿ ನಿಧಾನ ಮಾಡುವನು. ಶಿವಾರಾಧನೆಯನ್ನು ಮಾಡಿ.

ಕನ್ಯಾ: ತಾಳ್ಮೆಯಿಂದ ಆದಷ್ಟು ವ್ಯವಹಿರಿಸಿ. ಅಪರೂಪದ ವಿಚಾರಗಳು ನಿಮಗೆ ಗೊತ್ತಾಗಲಿದೆ. ನೆರೆ ಹೊರೆಯರ ಜೊತೆ ಚೆನ್ನಾಗಿರಿ. ಅತಿಯಾದ ಸಲುಗೆಯಿಂದ ನಿಮಗೆ ಕಷ್ಟವಾಗಬಹುದು. ಪತಿಯ ಮೇಲೆ ಸಿಟ್ಟುಗೊಳ್ಳುವ ಸಾಧ್ಯತೆ ಇದೆ. ನಿಮ್ಮ ನಡೆ ಹಾಗು ನುಡಿಗಳು ಅವರಿಗೆ ವಿರೋಧದಂತೆ ಕಾಣಬಹುದು. ಮನಸ್ಸನ್ನು ನಕಾರಾತ್ಮಕವಾಗಿ ಹರಿಯಲು ಬಿಡಬೇಡಿ. ಕೃಷಿಗೆ ಸಂಬಂಧಿಸಿದ ಚಟುವಟಿಕೆಲ್ಲಿ ಭಾಗವಹಿಸುವಿರಿ. ಮಕ್ಕಳ ಜೊತೆ ಸಮಯವನ್ನು ಕಳೆಯುವಿರಿ. ಗುಡ್ಡ ಬೆಟ್ಟಗಳ, ನದಿಪ್ರದೇಶಗ ಸುತ್ತಿವ ಮನಸ್ಸಾದೀತು. ಗಣಪತಿಗೆ ದೂರ್ವಾಪತ್ರವನ್ನು ಹಾಕಿ.

ತುಲಾ: ಉದ್ಯಮವನ್ನು ನಡೆಸುತ್ತಿದ್ದರೆ, ಹೊಸಮಾರ್ಗವನ್ನು ಯೋಚಿಸಿ. ನಿಮ್ಮ ಆಸ್ತಿಯನ್ನು ಮಾರಾಟಮಾಡಲು ಆಲೋಚಿಸಿಸುವಿರಿ. ನೂತನ ವಾಹನಖರೀದಿಯನ್ನು ಮಾಡಲಿದ್ದೀರಿ. ಮಾನಸಿಕ ಒತ್ತಡದಿಂದ ಸ್ವಲ್ಪ ಸಮಸ್ಯೆಯನ್ನು ಅನುಭವಿಸುವಿರಿ. ಶ್ರಮವಹಿಸಿದ ಕಾರ್ಯಕ್ಕೆ ಫಲವು ಸಿಗಬಹುದಿ. ಒಳ್ಳೆಯವರ ಸಂಗ ಸಿಗಬಹುದು ಅಥವಾ ಉತ್ತಮ ಪುಸ್ತಕವನ್ನು ಓದುವಿರಿ. ನಿಮಗೆ ಆಸ್ತಿಯ ವಿಚಾರದಲ್ಲಿ ವಂಚನೆಯಾಗಲಿದೆ. ಕೋಪ ಮಾಡಿಕೋಳ್ಳದೇ ಸಹಜವಾಗಿರಿ ಇರಿ. ಆಭರಣಗಳನ್ನು ಖರೀದಿಸಬಹುದು ಇಂದು. ದೇಹಕ್ಕೆ ಆಯುಧದಿಂದ ಹೊಡೆತಬೀಳಬಹುದು. ದುರ್ಗಾರಾಧನೆಯನ್ನು ಮಾಡಿ.

ವೃಶ್ಚಿಕ: ನಿಮ್ಮ ಮತಿಕೌಶಲಕ್ಕೆ ಕಛೇರಿಯಲ್ಲಿ ಬೆರಗಾಗುವರು. ಉದ್ಯೋಗದಲ್ಲಿ ಭಡ್ತಿಯನ್ನು ಒಡೆಯಬಹುದು. ಪರರಿಗೆ ಸಹಾಯ ಮಾಡಲು ಅವಕಾಶ ಬಂದರೆ ಮಾಡಿ. ಹಿಂದೆ ಹೆಜ್ಜೆ ಇಡಬೇಡಿ. ಮುಂದೆ ನಿಮಗೇ ಅಪಾಯವು ಬಂದಾಗ ಸಹಾಯವಾಗುವುದು. ನಿಮ್ಮವರ ಬಳಿ ವಿಧೇಯತೆಯನ್ನು ಇಟ್ಟುಕೊಳ್ಳುವುದು ಉತ್ತಮ. ಕೆಲಸವನ್ನು ಬದಲಿಸುವ ಮನಸ್ಸು ಮಾಡುವಿರಿ. ಹಿತಶತ್ರುಗಳು ನಿಮಗೆ ಏನನ್ನಾದರೂ ಮಾಡಲು ಇಚ್ಛಿಸುವರು. ಆರ್ಥಿಕವಿಚಾರದಲ್ಲಿ ಹಿನ್ನಡೆಯಾಗಲಿದೆ. ನೂತನಗೃಹದ ಪ್ರವೇಶ ಮಾಡುವಿರಿ. ಅನಾರೋಗ್ಯ ನಿಮ್ಮನ್ನು ಕಾಡಬಹುದು. ಗಮನವಿರಲಿ.

ಧನು: ಆಕಾಶದಲ್ಲಿ ಕಾಣುವ ಎಲ್ಲ ಮೋಡಗಳು ಮಳೆಗರೆಯವು. ಎಲ್ಲರೂ ನಿಮಗೆ ಬೇಕಾದುದನ್ನು ಕೊಡುವವರಲ್ಲಿ ಮಾತ್ರ ಕೇಳಿ. ಇಂದು ಏನಾಗುವುದೋ ಎಂಬ ಭಯವು ಕಾಡಬಹುದು. ಇಷ್ಟದೇವರ ಸ್ಮರಣೆ ಮಾಡಿ. ಮಾತುಗಳಿಂದ ನಿಮಗೆ ಕಿರಿ ಕಿರಿಯಾಗುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ದೂರದ ಊರಿಗೆ‌ ಪ್ರಯಾಣ ಮಾಡುವಿರಿ. ನಿಮ್ಮೊಳಗಿದ್ದ ಬೇಸರವು ಇಂದು ವ್ಯಕ್ತವಾಗುವುದು. ಮಕ್ಕಳಿಂದ ಮಾನಸಿಕ ಹಿಂಸೆ ಎದುರಾದೀತು. ಖರ್ಚು ಹೆಚ್ಚಾಯಿತು ಎನ್ನುವ ಆತಂಕ ಬೇಡ, ಆದಾಯಕ್ಕೂ ದಾರಿಯು ಸಿಗಲಿದೆ. ಉದ್ಯಮಿಗಳಿಗೆ ವ್ಯಾಪಾರಕ್ಕೆ ಸಂಬಂಧಿಸಿದ ಅನಿರೀಕ್ಷಿತ ಪ್ರಯಾಣವು ಬರಲಿದೆ‌. ಉದ್ಯೋಗದಲ್ಲಿ ಭಡ್ತಿ ಸಿಗಲಿ. ಸ್ತ್ರೀಯರು ನಿಮಗೆ ಶತ್ರುವಾಗುವರು.

ಮಕರ: ಸಾಗುವ ದಾರಿಯು ಎಷ್ಟೇ ಚೆನ್ನಾಗಿದ್ದರೂ ಒಮ್ಮೆ ಹಿಂತಿರುಗಿ ನೋಡುವುದು ಒಳ್ಳೆಯದು. ಅಸಂಬದ್ಧ ಮಾತುಕತೆಗಳನ್ನು ನಿಲ್ಲಿಸಿ. ನಿಮ್ಮ ಬಗ್ಗೆ ಇರುವ ಭಾವನೆ ಬದಲಾಗಬಹುದು. ವಿದ್ಯಾರ್ಥಿಗಳಿಗೆ ಆಟದಲ್ಲಿ ಹೆಚ್ಚು ಮಗ್ನರಾಗುವರು. ನಿಮ್ಮವರನ್ನು ಶತ್ರುಗಳನ್ನಾಗಿ ಮಾಡಿಕೊಳ್ಳುವಿರಿ. ನಿಮ್ಮ ಎಂದಿನ‌ ನಿಚ್ಚಲ ಮನಸ್ಸಿನಿಂದ ವಿಚಲಿತರಾಗಬೇಡಿ. ಪ್ರರಕ್ಷುಬ್ಧ ವಾತಾವರಣವಿರಬಹುದು ಇಂದು. ಲೆಕ್ಕಕ್ಕೆ ಸಿಗದ, ಆದರೆ ನಿರಂತರವಾಗಿ ಇರುವ ಸಮಸ್ಯೆಯಿಂದ ಹೊರಬರುವುದು ಸದ್ಯ ಕಷ್ಟವಾಗಲಿದೆ. ದೈವಾನುಗ್ರಹದ ಅವಶ್ಯಕತೆ ಬಹಳ ಇದೆ.

ಕುಂಭ: ಯಾರಾದರೂ ಏನನ್ನಾದರೂ ಬಂದು ಕೇಳಿದರೆ ಇಲ್ಲವೆನ್ನದೇ ಇರುವಷ್ಟರಲ್ಲಿ ಅಲ್ಪವನ್ನಾದರೂ ಕೊಡಿ. ಅದು ಅಕ್ಷಯವೂ ಆದೀತು ಮುಂದೊಂದು ದಿನ. ಅಸಾಧ್ಯವನ್ನು ಸಾಧಿಸುವ ಛಲವು ಒಳ್ಳೆಯದೇ. ಆದರೆ ಎಲ್ಲವೂ ಕೈಗೂಡುತ್ತದೆ ಎಂಬ ಅತಿಯಾದ ನಂಬಿಕೆ ಬೇಡ. ಪವಿತ್ರ ತಾಣದಲ್ಲಿ ಇಂದಿನ ಹೆಚ್ಚಿನ ಸಮಯವನ್ನು ಕಳೆಯುವಿರಿ. ಹೊಸ ಜವಾಬ್ದಾರಿಗಳು ನಿಮ್ಮ ಹೆಗಲಿಗೆ ಬರಬಹುದು. ನಿಭಾಯಿಸುವ ದಾರ್ಢ್ಯವನ್ನು ಬೆಳೆಸಿಕೊಳ್ಳಿ. ವೃತ್ತಿಯಲ್ಲಿ ಬದಲಾವಣೆಯನ್ನು ಬಯಸುವಿರಿ. ಆದರೆ ಅದನ್ನು ಕೈಬಿಡುವುದು ಸೂಕ್ತ. ಶಿವಾಲಯಕ್ಕೆ ಹೋಗಿ ಧ್ಯಾನ‌ವನ್ನು ಮಾಡಿ.

ಮೀನ: ಪೂರ್ಣವಿಚಾರವನ್ನು ತಿಳಿದು ಮಾತನಾಡಿ.‌ ಅರ್ಧವಿಷಯವನ್ನು ತಿಳಿದು ಮಾತನಾಡಿದರೆ ಇನ್ನೊಬ್ಬರಿಗೆ ನೋವಾದೀತು. ಅವರ ಶಾಪಕ್ಕೂ ಗುರಿಯಾಗುವಿರಿ. ನಿಮ್ಮ ಮನಸ್ಸಿನಲ್ಲಿ ಒಂದು ಕೃತಿಯಲ್ಲಿ ಒಂದು ಎನ್ನುವ ವಿಷಯವು ಇಂದಿನ‌ ನಿಮ್ಮ ವರ್ತನೆಯಿಂದ ತಿಳಿಯಲಿದೆ. ಉತ್ಸಾಹಭಂಗವನ್ನು ನಿಮ್ಮ ಸ್ನೇಹಿತರು ಮಾಡುವರು. ಆನಾರೋಗ್ಯವಿದ್ದರೂ ಬಾಯಿ ಚಪಲಕ್ಕೆ ಆಹಾರವನ್ನು ತಿಂದು ಆನಾರೋಗ್ಯವನ್ನು ಹೆಚ್ಚುಮಾಡಿಕೊಳ್ಳುವ ಲಕ್ಷಣವಿದೆ. ಕುತೂಹಲದ‌ ನೆಪದಲ್ಲಿ ಏನಾದರೂ ಮಾಡಿಕೊಳ್ಳಬೇಡಿ. ನಿಮಗೆ ನೀವು ಮಾಡುವ ಕೆಲಸದ ಬಗ್ಗೆ ಗಮನವಿರಲಿ.

ಲೋಹಿತಶರ್ಮಾ ಇಡುವಾಣಿ – 8762924271 (what’s app only)

ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ವಾರಾಣಸಿಯಲ್ಲಿ 70 ವರ್ಷಗಳ ಬಳಿಕ ತೆರೆದ ಸಿದ್ಧೇಶ್ವರ ಮಹಾದೇವ ದೇಗುಲ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ಶರಣಾದ ನಕ್ಸಲರಿಗೆ ತ್ವರಿತವಾಗಿ ನ್ಯಾಯ ಒದಗಿಸಲಾಗುವುದು: ಸಿದ್ದರಾಮಯ್ಯ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ವಿಶಾಖಪಟ್ಟಣದ ದಾರಿಯುದ್ಧಕ್ಕೂ ಮೋದಿಗೆ ಹೂವಿನ ಸುರಿಮಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಡಿವೈಎಸ್​ಪಿಯ ಆ ವರ್ತನೆ ಕಂಡು ಶಾಕ್ ಆಯ್ತು... ಕಣ್ಣೀರಿಟ್ಟ ಮಹಿಳೆ
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಮಹಾಕುಂಭದ ವಿಶೇಷ ಹಾಡು ಬಿಡುಗಡೆ ಮಾಡಿದ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಠಾಣೆಯ ರೂಂ ಕ್ಲೋಸ್ ಮಾಡಿ ನನ್ನ ಮೈಕೈ ಮುಟ್ಟಿ.. ಸಂತ್ರಸ್ತೆ ಕಣ್ಣೀರ ಮಾತು
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಗಾಂಧಿ ಭಾರತ ಕಾರ್ಯಕ್ರಮ; ಹಿಂದಿನ ಕೆಲಸವನ್ನೇ ನಿರ್ವಹಿಸುತ್ತಿದ್ದೇನೆ: ಸಚಿವ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಪೊಲೀಸ್ ಠಾಣೆಯ ಚಪಲಚೆನ್ನಿಗರಾಯ ರಾಮಚಂದ್ರಪ್ಪನ ಕರಾಳ ಮುಖ ಬಿಚ್ಚಿಟ್ಟ ಮಹಿಳೆ
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಸಿಎಂ ಮುಂದೆ ಶರಣಾದ ಬಳಿಕ ನಕ್ಸಲ್​ ನಾಯಕಿ ಹೇಳಿದ್ದೇನು?
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್
ಗಾಂಧಿ ಭಾರತ ಸಮಾವೇಶ ನಿಂತ ಹಂತದಿಂದಲೇ ಪುನರಾರಂಭ: ಶಿವಕುಮಾರ್