Nithya Bhavishya: ಮೇಷ, ವೃಷಭ, ಮಿಥುನ, ಕಟಕ ರಾಶಿಗಳ ಇಂದಿನ ಭವಿಷ್ಯ ಹೀಗಿದೆ
ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್25) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ 25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಅತಿಗಂಡ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:38 ರಿಂದ 05:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:22 ರಿಂದ 10:56ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:30 ರಿಂದ 02:04ರ ವರೆಗೆ.
ಮೇಷ: ಪುಣ್ಯಕ್ಷೇತ್ರಗಳ ದರ್ಶನವನ್ನು ಮಾಡಲಿದ್ದೀರಿ. ಓಡಾಟದಿಂದ ಖರ್ಚಾಗಲಿದೆ. ತಾಳ್ಮೆಯನ್ನು ಇಟ್ಟುಕೊಂಡು ಮಾತನಾಡಿ. ಏನಾದರೂ ಪ್ರಯೋಜನವಾದೀತು. ಸಂಬಂಧದಲ್ಲಿ ವ್ಯವಹಾರವನ್ನು ಬಹಳ ಜಾಗರೂಕತೆಯಿಂದ ಮಾಡಬೇಕಿದೆ. ಅಥವಾ ಮಾಡದಿದ್ದರೇ ಒಳ್ಳೆಯದು. ಸಂಬಂಧವು ಹಾಳಾಗಲಿದೆ. ಸಂಗಾತಿಯ ಆದಾಯವು ಹೆಚ್ಚಾಗಲಿದೆ. ಸರ್ಕಾರಿ ಕೆಲಸದಲ್ಲಿರುವವರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆ ಇದೆ. ಸಂಗಾತಿಯ ಜೊತೆ ಪ್ರಯಾಣ ಮಾಡಲಿರುವಿರಿ. ವಸ್ತುಗಳು ಕಾಣೆಯಾಗಬಹುದು.
ವೃಷಭ: ಕಛೇರಿಯಿಂದ ಬಂದ ಊಹಾಪೋಹ ಸುದ್ದಿಗಳಿಂದ ವಿಕ್ಷಿಪ್ತಗೊಳ್ಳಬೇಡಿ. ಆರೋಗ್ಯದ ವಿಚಾರದಲ್ಲಿ ನೆಮ್ಮದಿ ಇರಲಿದೆ. ಹತ್ತಿರದ ವ್ಯಕ್ತಿಗಳು ಕಾರಣಾಂತರಗಳಿಂದ ದೂರಾಗಬಹುದು. ಸ್ವಂತ ವ್ಯವಹಾರಗಳಿಗೆ ಮಧ್ಯವರ್ತಿಗಳನ್ನು ಬಳಸಿಕೊಳ್ಳಬೇಡಿ. ದೂರಪ್ರಯಾಣವು ಕಷ್ಟವಾದೀತು. ಒತ್ತಡವುಂಟು ಮಾಡುವ ಕೆಲಸಗಳನ್ನು ಕೈಬಿಡಿ. ಸಮಯ ಸಂದರ್ಭಗಳನ್ನು ನೋಡಿಕೊಂಡು ಮಾತನಾಡಿ. ಅಪಹಾಸ್ಯಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆಬಿದೆ. ನಿಮಗೆ ಸಿಗುವ ಸೂಚನೆಗಳನ್ನು ಗಮನಿಸಿಕೊಂಡು ವ್ಯವಹಾರಾದಿಗಳನ್ನು ಮಾಡಿ.
ಮಿಥುನ: ಇಂದು ನಿಮ್ಮ ಕೆಲಸವನ್ನು ಕೇಳಿ ಸಲಹೆಗಳನ್ನು ಕೊಡಲು ಯಾರಾದರೂ ಬರಬಹುದು. ರಾಜಕೀಯ ವ್ಯಕ್ತಿಗಳಿಗೆ ಓಡಾಟ ಹೆಚ್ಚಾಗಿ, ಹೆಚ್ಚು ಜನಸಂಪರ್ಕ ಮಾಡಬೇಕಾದ ಅನಿವಾರ್ಯವಿರುತ್ತದೆ. ಬರಬೇಕಾದ ಹಣವು ಮಧ್ಯವರ್ತಿಗಳ ಕೈಯ್ಯಲ್ಲಿರುತ್ತದೆ. ಯಂತ್ರೋಪಕರಣ ತಯಾರಕರು ಆದಷ್ಟು ಎಚ್ಚರವಾಗಿರಬೇಕು. ಸರ್ಕಾರಿ ಕಚೇರಿಗಳಿಗೆ ಹೆಚ್ಚು ಅಲೆದಾಟ ಮಾಡಿ ಕೆಲಸವನ್ನು ಮಾಡಿಕೊಳ್ಳುವಿರಿ. ನಿಮಗೆ ಪ್ರೇರಕರ ಅವಶ್ಯಕತೆ ಇದೆ. ಕೃಷಿಯನ್ನು ಮಾಡುವ ಮನಸ್ಸಿರಲಿದೆ. ಕುಟುಂಬದಲ್ಲಿ ಖುಷಿಯ ವಾತಾವರಣ ಇರಲಿದೆ. ಮಕ್ಕಳು ನಿಮ್ಮನ್ನು ವಿಧವಿಧವಾಗಿ ಪ್ರಶ್ನಿಸಬಹುದು.
ಕಟಕ: ಕಛೇರಿಯ ಕೆಲಸದ ನಡುವೆ ಕುಟುಂಬದ ಜೊತೆ ಸಮಯವನ್ನು ಕಳೆಯುವುದು ಕಷ್ಡವಾದೀತು. ಹಳೆಯ ಸ್ನೇಹಿತರ ಸಂಪರ್ಕ ದೊರೆತು ಸಂತೋಷಪಡುವಿರಿ. ಮನೆಯಲ್ಲಿ ನಡೆದ ಕಲಹದಿಂದ ಕಛೇರಿಯಲ್ಲಿ ಕೆಲಸ ಮಾಡಲು ಅಸಾಧ್ಯವಾದೀತು. ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪಬಹುದು. ಬಂಧುಗಳು ತಾವು ಮಾಡಿದ ತಪ್ಪನ್ನು ನಿಮ್ಮ ಮೇಲೆ ಹಾಕಲು ಯತ್ನಿಸುವರು. ಕೆಲಸವಿಲ್ಲದೇ ಮನೆಯಲ್ಲಿ ಕುಳಿತಿರುವುದು ಹಿಂಸೆಯಾದೀತು. ಆತುರಾತುರದಿಂದ ನೀವು ಮಾಡುವ ನಿರ್ಧಾರಗಳು ಮುಜುಗರ ಉಂಟುಮಾಡಲಿದೆ. ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಸಿಗಲಿದೆ.