AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope Today: ಈ ರಾಶಿಯವರ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ

ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಏಪ್ರಿಲ್​ 25) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope Today: ಈ ರಾಶಿಯವರ ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ
ಇಂದಿನ ರಾಶಿ ಭವಿಷ್ಯ
Rakesh Nayak Manchi
|

Updated on: Apr 25, 2023 | 6:17 AM

Share

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಏಪ್ರಿಲ್ ​25) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ಮೇಷ ಮಾಸ, ಮಹಾನಕ್ಷತ್ರ : ಅಶ್ವಿನೀ, ಮಾಸ : ವೈಶಾಖ, ಪಕ್ಷ : ಶುಕ್ಲ, ವಾರ : ಮಂಗಳ, ತಿಥಿ : ಪಂಚಮೀ, ನಿತ್ಯನಕ್ಷತ್ರ : ಆರ್ದ್ರಾ, ಯೋಗ : ಅತಿಗಂಡ, ಕರಣ : ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 14 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 46 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:38 ರಿಂದ 05:13ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:22 ರಿಂದ 10:56ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:30 ರಿಂದ 02:04ರ ವರೆಗೆ.

ಧನಸ್ಸು: ಸಾಧ್ಯವಾದಷ್ಟು ಇಂದು ಮೌನವಾಗಿ ಇರುವುದಕ್ಕೆ ಪ್ರಯತ್ನಿಸಿ. ಉದ್ಯೋಗದ ನಿಮಿತ್ತ ಹೊರ ನಡೆಯಬೇಕಾಗಬಹುದು. ವ್ಯಾಪಾರ ಮತ್ತು ವ್ಯವಹಾರಗಳಲ್ಲಿ ಚೇತರಿಕೆ ಕಂಡರೂ ಇನ್ನಷ್ಟು ಸಂಪಾದಿಸುವ ಆಸೆ ಇರಲಿದೆ. ನಿಮ್ಮ ವೈಯಕ್ತಿಕ ಕೆಲಸಗಳಿಗೆ ಹೆಚ್ಚು ಪ್ರಾಮುಖ್ಯ ಕೊಡಿ. ಆರ್ಥಿಕತೆಯ ದೃಷ್ಟಿಯಿಂದ ನಿಮಗೆ ಅನುಕೂಲವಿದೆ. ಸರ್ಕಾರದಿಂದ ಲಾಭವನ್ನು ಪಡೆಯದೇ ಸ್ವಂತವಾಗಿ ಉದ್ಯೋಗವನ್ನು ನಡೆಸುತ್ತೇನೆಂಬ ನಿರ್ಧಾರ ಮಾಡಲಿದ್ದೀರಿ. ಮನೆಗೆ ಬೇಕಾದ ವಸ್ತುಗಳನ್ನು ಖರೀದಿ ಮಾಡಿ, ಹಣವನ್ನು ಖಾಲಿ ಮಾಡುವಿರಿ. ತಂದೆ – ತಾಯಿಯರ ಜಗಳದಲ್ಲಿ ಯಾರ ಪರವಾಗಿ ಇರಬೇಕು ಎಂಬ ಗೊಂದಲ‌ವು ಸೃಷ್ಟಿಯಾಗುವುದು.

ಮಕರ: ನಿಮಗೆ ಯಾರಿಂದಲಾದರೂ ಕೆಲಸವಾಗಬೇಕಿದ್ದರೆ ಪ್ರೀತಿಯಿಂದ ಹೇಳಿ, ಅನಾಯಾಸವಾಗಿ ಆಗುವುದು. ನೀವಿಂದು ನಡವಳಿಕೆಯಿಂದ ಎಲ್ಲರ ಮನಗೆಲ್ಲುವಿರಿ. ವಿದೇಶದಿಂದ ಸ್ವದೇಶಕ್ಕೆ ಬರಬೇಕು ಎನ್ನುವ ಹಂಬಲ ಅತಿಯಾಗಿ ಕಾಡಬಹುದಿ. ನೀವಿಂದು ನಿಮ್ಮ ಗುರುಗಳನ್ನು ಕಾಣಬೇಕೆನಿಸಿ ಅವರನ್ನು ಭೇಟಿಯಾಗಲು ಇಚ್ಛಿಸುವಿರಿ. ಕೆಲಸಗಳನ್ನು ನಿರಾಸಕ್ತಿಯಿಂದ ಮಾಡಬೇಡಿ. ಯಾವ ಲಾಭವೂ ಸಿಗದು. ಮೆಚ್ಚುಗೆ ಗಳಿಸಿಕೊಳ್ಳಬೇಕೆಂದು ಹೋಗಿ ಹಿರಿಯರಿಂದ ಅಪಮಾನಗೊಳ್ಳುವ ಪ್ರಸಂಗವು ಬರಬಹುದು. ಸಮಾಜದ ಬಗ್ಗೆ ಚಿಂತಕರಾಗಿದ್ದರೆ ಅತಿಥಿಯಾಗಿ ನೀವು ಇರುವಿರಿ.

ಕುಂಭ: ಕುಟುಂಬದ ವಿರೋಧದ ನಡುವೆಯೂ ನೀವು ನಿಮ್ಮ ಕೆಲಸವನ್ನು ಮಾಡಿಕೊಳ್ಳುವಿರಿ. ಖರ್ಚಿಗೆ ತಕ್ಕಂತೆ ಆದಾಯವು ಇಲ್ಲದೇ ಹಣಕಾಸಿನ ಸ್ಥಿತಿ ಅಸಮತೋಲನವಾಗಲಿದೆ. ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಬಂಧುಗಳ ನಡುವೆ ಭಿನ್ನಾಭಿಪ್ರಾಯವು ಬರಲಿದೆ. ಬರುವ ಹಣದ ನಿರೀಕ್ಷೆಯಲ್ಲಿ ಇರುವುದು ಬೇಡ. ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸವಾಗುವ ಸಾಧ್ಯತೆ ಇದೆ. ಮನೆಯ ಔಷಧದಿಂದ ಅದು ಸರಿಯಾಗಬಹುದು. ರಾಜಕೀಯಕ್ಕೆ ಪ್ರವೇಶಿಸಬೇಕು ಎನ್ನುವ ಹಂಬಲ ಪೂರ್ಣವಾಗದೇ ಇರಬಹುದು. ಸಕಾರಾತ್ಮಕ ಚಿಂತನೆಯನ್ನು ಮಾಡಿ.

ಮೀನ: ಕೆಲವೇ ಕೆಲವು ಮಿತ್ರರ ಬಳಗವನ್ನು ಹೊಂದಿರುವಿರಿ. ನಿಮಗೆ ಎಂದು ಯಾರ ಬಳಿಯೂ ಏನನ್ನೂ ಹೇಳಬೇಕು ಎಂದು ಅನ್ನಿಸದಿರಬಹುದು. ನಿಮ್ಮ ಬಗ್ಗೆ ಹಗುರವಾದ ಮಾತುಗಳು ಬರಬಹುದು. ಖಾಸಗಿ ಉದ್ಯೋಗದಲ್ಲಿ ಇದ್ದವರಿಗೆ ಮುಖ್ಯವಾದ ಅಧಿಕಾರ ಸಿಗಲಿದೆ. ನೀವಂದಕೊಂಡಿದ್ದೇ ಸತ್ಯ ಎಂಬುದನ್ನು ಬಿಟ್ಟು ಸಂತೋಷದದಿಂದ‌ ಮಾತನಾಡಿ. ನಗುಮುಖವು ನಿಮ್ಮನ್ನು ಮತ್ತಷ್ಡು ಆಪ್ತವಾಗಿಸೀತು. ಪ್ರಾಮಾಣಿಕವಾದ‌ ಪ್ರಯತ್ನವು ಇರಲಿ. ಫಲವೂ ಉತ್ತಮವಾದುದೇ ಸಿಗುವುದು. ಹೆಚ್ಚಿನ ನೀರಿಕ್ಷೆಯನ್ನು ಮಾಡಿ ಕೊರಗಬೇಡಿ ಆನಂತರದ‌ ಜೀವನದಲ್ಲಿ.

-ಲೋಹಿತಶರ್ಮಾ ಇಡುವಾಣಿ