Rashi Bhavishya: ಈ ರಾಶಿಯವರಿಗೆ ಸಂಗಾತಿ ಜೊತೆ ಸಮಯ ಕಳೆಯುವಾಸೆ

|

Updated on: Jun 06, 2023 | 12:10 AM

ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (2023 ಜೂನ್ 6) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Rashi Bhavishya: ಈ ರಾಶಿಯವರಿಗೆ ಸಂಗಾತಿ ಜೊತೆ ಸಮಯ ಕಳೆಯುವಾಸೆ
ಪ್ರಾತಿನಿಧಿಕ ಚಿತ್ರ
Follow us on

ಶುಭೋದಯ ಓದುಗರೇ ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದರೆ ಇಂದಿನ (2023 ಜೂನ್ 6) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ಉತ್ತರಾಯಣ, ವಸಂತ ಋತು, ವೃಷಭ ಮಾಸ, ಮಹಾನಕ್ಷತ್ರ: ರೋಹಿಣೀ, ಮಾಸ: ಜ್ಯೇಷ್ಠ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಷಾಢಾ, ಯೋಗ: ಶುಭ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 03 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 58 ನಿಮಿಷಕ್ಕೆ, ರಾಹು ಕಾಲ 03:45 ರಿಂದ 05:21ರ ವರೆಗೆ, ಯಮಘಂಡ ಕಾಲ 09:17 ರಿಂದ 10:54ರ ವರೆಗೆ, ಗುಳಿಕ ಕಾಲ 12:30 ರಿಂದ 02:08ರ ವರೆಗೆ.

ಮೇಷ: ತೆರಿಗೆಗೆ ಸಂಬಂಧಿಸಿದಂತೆ ನಿಮ್ಮ ದಾಖಲೆಗಳು ಸರಿಯಾಗಿರಲಿ. ಆರೋಗ್ಯವು ಹದವು ತಪ್ಪಬಹುದು. ವಾಹನಕ್ಕಾಗಿ ಖರ್ಚನ್ನು ಮಾಡಬೇಕಾದೀತು. ನಿಮ್ಮ ಸಹಾಯವನ್ನು ಯಾರಾದರೂ ಕೇಳಿಬರಬಹುದು. ಒಂಟಿಯಾಗಿ ಇರಲು ನೀವಿಂದು ಇಷ್ಟಪಡಬಹುದು. ಭೂಮಿಯ ಕಲಹವು ತಾತ್ಕಾಲಿಕವಾಗಿ ನಿಲ್ಲಬಹುದು. ಸುಮ್ಮನೇ ಕುಳಿತು ಅಸಾಂವಿಧಾನಿಕ ವಿಚಾಗಳಲ್ಲಿ ಮಗ್ನರಾಗಬಹುದು. ವಾಹನ ಚಲಾಯಿಸಲು ನಿನಗೆ ಆತಂಕವಾಗಬಹುದು. ಮೊಂಡು ಧೈರ್ಯವನ್ನು ಮಾಡುವುದು ಬೇಡ.

ವೃಷಭ: ಇಂದು ನಿಮ್ಮ ಸ್ನೇಹ ಸಂಬಂಧವು ಸಡಿಲಾಗುವ ಸಾಧ್ಯತೆ ಇದೆ. ಹೊಸಬರನ್ನು ನೀವು ಸ್ನೇಹಿತರನ್ನಾಗಿ ಆಯ್ಕೆ ಮಾಡಿಕೊಳ್ಳುವಿರಿ. ಕಛೇರಿಯಲ್ಲಿ ಒತ್ತಡದ ವಾತಾವರಣವನ್ನು ನೀವು ನಿಭಾಯಿಸಲು ಕಷ್ಟವಾದೀತು. ಸಂಗಾತಿಯ ಜೊತೆ ಹೆಚ್ಚು ಸಮಯವನ್ನು ಕಳೆಯುವ ಸಾಧ್ಯತೆ ಇದೆ. ನಿಮ್ಮ ಸಂತೋಷವನ್ನು ಹಾಳು‌ಮಾಡಲು ಕೆಲವರು ಚಿಂತಿಸಬಹುದು. ನಿಮ್ಮ ಘಟ್ಟಿತನವನ್ನು ನೀವು ಇಟ್ಟಕೊಳ್ಳುವುದು ಉತ್ತಮ. ವಸ್ತುಗಳನ್ನು ಕಳೆದುಕೊಂಡು ಸಂಕಟಪಡಬೇಕಾದೀತು.

ಮಿಥುನ: ನಿಮ್ಮದೇ ಹಣವಾದರೂ ನೀವು ಅದನ್ನು ಪಡೆಯಲು ಓಡಾಟ ಮಾಡಬೇಕಾದೀತು. ಸರ್ಕಾರಿ ದಾಖಲೆಗಳನ್ನು ನೀವು ಜೋಪಾನ ಮಾಡಿ ಇಟ್ಟುಕೊಳ್ಳುವುದು ಒಳ್ಳೆಯದು. ಬಂಧುಗಳನ್ನು ನೀವು ಭೇಟಿ ಮಾಡುವ ಸಂದರ್ಭವು ಬರಬಹುದು. ನಿಮ್ಮ‌ ನಿಯಮ ಪಾಲನೆ ನಿಮಗೆ ಖುಷಿ ಕೊಟ್ಟೀತು. ನಿಮಗೆ ಒತ್ತಡದಲ್ಲಿ ಕೆಲಸ ಮಾಡುವುದು ಅಭ್ಯಾಸವಾಗಿ ಹೋಗಿರಬಹುದು. ತಾಯಿಯ ಸಹಕಾರವನ್ನು ನೀವು ಅಧಿಕವಾಗಿ ಬಯಸುವಿರಿ. ಜನರೊಟ್ಟಿಗೆ ಬೆರೆಯಲು ನಿಮಗೆ ಇಂದು ಸಮಯ ಸಾಕಾಗದು. ಸಂಗಾತಿಯನ್ನು ನೀವು ಖುಷಿ‌ಪಡಿಸಲು ಪ್ರಯತ್ನಿಸುವಿರಿ.

ಕಟಕ: ಯಾರ ಬಗ್ಗೆಯೂ ತಿಳಿಯದೇ ಮಾತನಾಡುವುದು ನಿಮಗೆ ಉಚಿತವಲ್ಲ. ವಂಚನೆಗೆ ನೀವು ಬೆಲೆಯನ್ನು ಕೊಡಬೇಕಾದೀತು. ಹಿರಿಯರಿಗೆ ಕೊಡಬೇಕಾದ ಗೌರವವನ್ನು ಕೊಡಿ. ನಿಮ್ಮವರನ್ನು ರಕ್ಷಿಸಿಕೊಳ್ಳಲು ನೀವು ಬಹಳ ಪ್ರಯತ್ನ ಪಡುವಿರಿ. ನೀವು ಇಂದು ಬಯಸಿದ್ದನ್ನು ಪಡೆದುಕೊಂಡು ನೆಮ್ಮದಿಯಾಗಿ ಇರುವಿರಿ. ಮನೆಯವರ ವೈರವನ್ನು ಕಟ್ಟಿಕೊಂಡು ಏನು ಸಾಧಿಸಲು ಸಾಧ್ಯ.‌ ಪ್ರೀತಿಯಿಂದ ಅವರ ಜೊತೆ ಬರೆಯಿರಿ. ನಿಮ್ಮ ಮನಸ್ಸೂ ಹಗುರಾದೀತು. ವಿದ್ಯಾರ್ಥಿಗಳಿಗೆ ಓದಿನ ಆಸಕ್ತಿಯನ್ನು ತೋರಿಸಲು ಪೋಷಕರು ಶ್ರಮಿಸುವರು.