Horoscope Today: ಇಂದು ಗುರುವಾರ, ಮಾರ್ಚ್ 16ರ ದೈನಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಿ

ಇಂದಿನ ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

Horoscope Today: ಇಂದು ಗುರುವಾರ, ಮಾರ್ಚ್ 16ರ ದೈನಂದಿನ ರಾಶಿ ಭವಿಷ್ಯ ತಿಳಿದುಕೊಳ್ಳಿ
ಪ್ರಾತಿನಿಧಿಕ ಚಿತ್ರImage Credit source: astroyogi.com
Follow us
ಗಂಗಾಧರ​ ಬ. ಸಾಬೋಜಿ
| Updated By: ರಮೇಶ್ ಬಿ. ಜವಳಗೇರಾ

Updated on: Mar 16, 2023 | 6:34 AM

ಶುಭೋದಯ ಓದುಗರೇ. ಪ್ರತಿಯೊಬ್ಬರ ಜೀವನದಲ್ಲಿ ರಾಶಿ ಭವಿಷ್ಯ ವಿಭಿನ್ನವಾಗಿರುತ್ತದೆ. ಹಾಗಾಗಿ ಕೆಲವರು ಬೆಳಗ್ಗೆ ಎದ್ದ ಕೂಡಲೇ ಇಂದಿನ ತಮ್ಮ ಭವಿಷ್ಯ (Daily horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು, ಏನು ಮಾಡಬಾರದು? ಹೀಗೆ ನಿತ್ಯಭವಿಷ್ಯ ಜೊತೆಗೆ ನಿತ್ಯಪಂಚಾಂಗ ನೋಡುತ್ತಾರೆ. ಹಾಗಾದ್ರೆ ಇಂದಿನ (2023 ಮಾರ್ಚ್ 16) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ, ಯಾರಿಗೆ ನಷ್ಟ, ಶುಭ, ಅಶುಭಗಳ ಮಾಹಿತಿಯನ್ನು ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಕುಂಭ ಮಾಸ, ಮಹಾನಕ್ಷತ್ರ : ಪೂರ್ವಾಭಾದ್ರ, ಮಾಸ : ಫಾಲ್ಗುಣ, ಪಕ್ಷ : ಕೃಷ್ಣ, ವಾರ : ಗುರು, ತಿಥಿ : ನವಮೀ, ನಿತ್ಯನಕ್ಷತ್ರ : ಪೂರ್ವಾಷಾಢ, ಯೋಗ : ವ್ಯತಿಪಾತ್, ಕರಣ : ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 41 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 41 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ14:12 – 15:42ರ ವರೆಗೆ, ಯಮಘಂಡ ಕಾಲ ಬೆಳಗ್ಗೆ06:41 – 08:112ರವರೆಗೆ, ಗುಳಿಕ ಕಾಲ ಬೆಳಗ್ಗೆ09:41 – 11:11ರ ವರೆಗೆ.

ಮೇಷ: ಇಂದು ಪ್ರಮುಖ ವ್ಯಕ್ತಿಗಳ ಸಂಬಂಧವು ಆಗಲಿದೆ. ನಿಮ್ಮ ಹವ್ಯಾಸವು ಆರ್ಥಿಕಮೂಲವಾಗಿ ಬದಲಾಗಲಿದೆ. ನಿಮ್ಮ ಕ್ರಿಯಾತ್ಮಕತೆ ಬೆಳೆಯಲಿದೆ. ನಿಮ್ಮ ಅದ್ಭುತ ಪ್ರತಿಭೆಯಿಂದ ಅನೇಕ ಉತ್ತಮ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತದೆ. ನಿಮ್ಮ ಆಲೋಚನೆಗಳು ನಿಮ್ಮ ವ್ಯಕ್ತಿತ್ವವನ್ನು ಪರಿಚಯಿಸುವಂತೆ ಮಾಡುತ್ತವೆ. ಹಿರಿಯರ ಅನುಭವದಿಂದ ಪ್ರಯೋಜನ ಪಡೆಯಲಿದ್ದೀರಿ. ಅನಗತ್ಯ ವಾದಗಳು ಕುಟುಂಬದವರಲ್ಲಿ ಮಾಡಬೇಡಿ‌. ಹಿರಿಯರು‌ ನೊಂದಾರು. ಸೋಮಾರಿಗಳಾಗಿ ಸಮಯ ವ್ಯರ್ಥ ಮಾಡುವುದರಿಂದ ನಿಮ್ಮ ಕಾರ್ಯಗಳು ಹಿಂದುಳಿಯುವುವು.

ವೃಷಭ: ಇಂದು ಕೆಲವು ಆಸೆಗಳನ್ನು ಈಡೇರಿಸಲು ದಾರಿ ಸಿಗಲಿದೆ. ವ್ಯಾಪಾರದಲ್ಲಿ ಲಾಭದ ಹೊಸ ದಾರಿಗಳು ಸಿಗಬಹುದು. ಸಾಧ್ಯತೆಗಳು ಕಾಣಿಸಿಕೊಳ್ಳುತ್ತವೆ. ಮನೆಯಲ್ಲಿ ಉತ್ತಮ ವಾತಾವರಣ ಇರುತ್ತದೆ. ದಾನ ಧರ್ಮದಲ್ಲಿ ಹೆಚ್ಚಿನ ಆಸಕ್ತಿಯು ಇಂದು ಇರಲಿದೆ. ಸಹೋದರರ ವರ್ತನೆಯು ನಿಮ್ಮ ಮನಸ್ಸಿಗೆ ಬೇಸರವನ್ನು ತರಬಹುದು. ಆರ್ಥಿಕವಾಗಿ ನೀವು ಸಬಲರಾಗುವ ದಿನ. ಒಳ್ಳೆಯ ಅವಕಾಶಗಳು ಸಿಗಲಿದೆ. ವೇಗದಿಂದ ಕೆಲಸವನ್ನು ಮಾಡಿ ಕಾರ್ಯಹಾನಿಯನ್ನು ಮಾಡಿಕೊಳ್ಳಬೆ. ಮಕ್ಕಳ ನಡವಳಿಕೆಯಿಂದ ನೋವು ಉಂಟಾಗಲಿದೆ‌.

ಮಿಥುನ: ಇಂದು ಹೆಚ್ಚಿನ ಖರ್ಚುಗಳು ಆಗಬಹುದು. ನಿಮ್ಮ ಉತ್ತಮವಾದ ಆದಾಯದ ಕಾರಣ ಅದರ ಬಾಧೆ ನಿಮಗೆ ತಟ್ಟದು. ಧೈರ್ಯವು ಹೆಚ್ಚಾಗಿ ಇರಲಿದೆ‌. ಇಂದು ಚಿಂತನಶೀಲರಾಗಿ ಇರುವಿರಿ. ಹೊಸ ಭರವಸೆಗಳು ಸಂತೋಷವನ್ನು ತರುತ್ತವೆ. ಸೇವೆ ಮತ್ತು ದಾನದಲ್ಲಿ ಆಸಕ್ತಿ ಹೆಚ್ಚಾಗಲಿದೆ. ಹೊಸತಾದ ಸಂಪರ್ಕಗಳಿಂದ ಪ್ರಯೋಜನವನ್ನು ಪಡೆಯುವಿರಿ. ನಿಮ್ಮ ಕೆಲಸಗಳಿಗೆ ಸಂಗಾತಿಯ ಬೆಂಬಲ ಇರುತ್ತದೆ. ಉತ್ತಮ ಆರೋಗ್ಯ ಇರುತ್ತದೆ. ಕಾಲುಗಳು ಮತ್ತು ಸ್ನಾಯುಗಳಲ್ಲಿ ನೋವು ಇರುತ್ತದೆ.

ಕಟಕ: ವೃತ್ತಿಜೀವನದಲ್ಲಿ ಇಂದು ಅನುಕೂಲಕರ ವಾತಾವರಣ ಇರಲಿದೆ. ವ್ಯಾಪಾರದಲ್ಲಿ ಉನ್ನತಿ ಹಾಗೂ ಕಾರ್ಯದ ವಿಸ್ತರಣೆಯು ಸಂತೋಷವನ್ನು ತರುತ್ತದೆ. ನಿಮ್ಮ ಕೀರ್ತಿಯನ್ನು ಹೆಚ್ಚುಗೊಳಿಸಲಿದೆ‌. ಹಳೆಯ ಹೂಡಿಕೆಯು ಸೂಕ್ತವಾದ ಸಮಯಕ್ಕೆ ಬಂದೊದಗುತ್ತದೆ. ಬುದ್ಧಿವಂತಿಕೆಯು ಬೆಳೆಯುತ್ತದೆ. ಈ ಸಮಯದಲ್ಲಿ ಮಾನಸಿಕ ಗೊಂದಲವೂ ಹೆಚ್ಚಾಗಬಹುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ. ಕೆಲಸ ಮಾಡುವವರ ಪ್ರಭಾವ ಹೆಚ್ಚಾಗಲಿದೆ. ಕಾರ್ಯದ ಸ್ಥಳದಲ್ಲಿ ಕೆಲವು ಹಿನ್ನಡೆಗಳು ಆಗಲಿವೆ. ಮುಂದು ಯಶಸ್ಸಿನ ದಾರಿ ಸಿಗುತ್ತದೆ.

ಸಿಂಹ: ನಿಮ್ಮ ಸ್ವಭಾವವು ಸಂತೋಷದಿಂದ ಕೂಡಿರುತ್ತದೆ. ನೀವು ಭೇಟಿಯಾಗುವ ಪ್ರತಿಯೊಬ್ಬರೂ ನಿಮ್ಮ ಶಕ್ತಿಯ ಬಗ್ಗೆ ಭಯ ಪಡುತ್ತಾರೆ. ಕೆಲಸದಲ್ಲಿ ನೀವು ಮೇಲುಗೈ ಹೊಂದಿರುವಿರಿ. ನೀವು ಕಾಳಜಿ ವಹಿಸದಿದ್ದರೆ ಈ ಆತ್ಮವಿಶ್ವಾಸವು ಅಹಂಕಾರವಾಗಿ ಬದಲಾಗಬಹುದು. ಇಂದಿನ ಕೆಲಸಗಳು ನಕಾರಾತ್ಮ ಪರಿಣಾಮಗಳನ್ನು ಉಂಟುಮಾಡುತ್ತದೆ. ಕೆಲಸದ ವಿಷಯದಲ್ಲಿ ಸ್ವಯಂ ಶಿಸ್ತಿನ ಮೇಲೆ ಕೆಲಸ ಮಾಡಿ. ಇಂದು ಎಲ್ಲವೂ ನಿಮ್ಮ ಪರವಾಗಿರುವುದರಿಂದ ನೀವು ಪ್ರಯತ್ನಿಸಿದರೆ ಸಾಕಷ್ಟು ಲಾಭಕರವಾದುದನ್ನು ಗಳಿಸಲು ಸಾಧ್ಯವಾಗುತ್ತದೆ.

ಕನ್ಯಾ: ಪ್ರೇಮ ಜೀವನವು ನಿರೀಕ್ಷೆಗಳಿಂದ ತುಂಬಿರುತ್ತದೆ. ಇದೇ ಇಂದು ಸಾಕಷ್ಟು ಗೊಂದಲಗಳಿಗೆ ಕಾರಣವಾಗಲಿದೆ. ವೃತ್ತಿಜೀವನವು ಅನಿರೀಕ್ಷಿತ ದಿಕ್ಕಿನತ್ತ ಹೊರಳಬಹುದು. ನಿಮ್ಮ ತುಂಬಾ ಉತ್ಸಾಹವು ಹೊಸ ಅವಕಾಶಗಳ ಉಗಮಕ್ಕೆ ಕಾರಣವಾಗಲಿದೆ. ಈ ಹೊಸ ಉದ್ಯಮದಲ್ಲಿ ನಿಮ್ಮ ಪೋಷಕರು ಅಥವಾ ನಿಮ್ಮ ಕುಟುಂಬಗಳ ಬೆಂಬಲ ನಿಮಗೆ ಕಡಿಮೆ ಇರಲಿದೆ. ನೀವು ಊಹಿಸದಷ್ಟು ಯಶಸ್ಸು ನಿಮ್ಮದಾಗಲುದೆ. ನೀವು ಮಾಡುತ್ತಿರುವ ಹೂಡಿಕೆಗಳ ಬಗ್ಗೆ ನಿರಂತರವಾಗಿ ಗಮನವಿಡಿ. ನೀವು ಬಹಳಷ್ಟು ಆತಂಕವನ್ನು ಅನುಭವಿಸಲಿದ್ದೀರಿ.

ತುಲಾ: ಇಂದು ಬಹಳಷ್ಟು ಹೊಸ ಸ್ನೇಹಿತರನ್ನು ಮಾಡಿಳ್ಳುವ ಸಾಧ್ಯತೆ ಇದೆ. ನೀವು ಪ್ರವಾಸಕ್ಕೆ ಹೋಗಲಿದ್ದೀರಿ. ನಿಮ್ಮ ವ್ಯಾಪಾರ, ವ್ಯವಹಾರವು ಎತ್ತರದ ಸ್ಥಿತಿಯನ್ನು ಕಾಣಲಿದಗದೀರಿ. ನೀವು ಈಗ ತೆಗೆದುಕೊಳ್ಳುವ ನಿರ್ಧಾರಗಳು ಅತ್ಯಂತ ನಿರ್ಣಾಯಕವಾಗಿರುತ್ತವೆ. ಇಂದು ನಿಮಗೆ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಅವಕಾಶವಿರತ್ತದೆ. ಸ್ಪಷ್ಟವಾದ ಯೋಚನೆಗಳು ಇರಲಿದೆ.ಅನುಭವಿಗಳಿಂದ ಸಾಕಷ್ಟು ಸಲಹೆಗಳನ್ನು ಪಡೆಯಯವಿರಿ. ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ಹೆಚ್ಚು ಸಮಯವನ್ನು ತೆಗದುಕೊಳ್ಳಿ. ಆತುರರಾಗಬೇಡಿ.

ವೃಶ್ಚಿಕ: ಕೋಪ ಮತ್ತು ಹತಾಶೆಯು ದಿನವಿಡೀ ನೀವು ಅನುಭವಿಸುವ ಭಾವನೆಗಳಾಗಿವೆ. ನಿಮ್ಮರೇ ನಿಮ್ಮ ವಿರುದ್ಧ ಕೆಲಸ ಮಾಡುವುದರಿಂದ ನಿಮಗೆ ಸಂಕಟವಾಗಲಿದೆ. ನಿಮ್ಮ ಪ್ರೇಮಜೀವನ ಮತ್ತು ವೃತ್ತಿಪರಜೀವನ ದುರ್ಮಾರ್ಗವನ್ನು, ಅನೇಕ ತಿರುವನ್ನು ಪಡೆದುಕೊಳ್ಳಬಹುದು. ನೀವು ಹಣಕಾಸಿನ ನಷ್ಟವನ್ನು ನಿವಾರಿಸಲು ಹೆಚ್ಚಿನ ಆದಾಯದ ಕೆಲಸವನ್ನು ಹುಡುಕುವಿರಿ. ಈ ವಿಷಯದಲ್ಲಿ ನಿಮ್ಮ ಪಾಲುದಾರರಿಂದ ನೀವು ತುಂಬಾ ಕಡಿಮೆ ಬೆಂಬಲ ಪಡೆಯುವಿರಿ. ಆರೋಗ್ಯವು ಸ್ವಲ್ಪ ಏರುಪೇರಾಗುತ್ತದೆ.

ಧನುಸ್ಸು: ಇಂದು ನಿಮ್ಮ ಜೀವನದಲ್ಲಿ ಬಹಳಷ್ಟು ಪ್ರಮುಖ ಬದಲಾವಣೆಗಳು ಆಗಬಹುದು. ವೃತ್ತಿಜೀವನವು ಉತ್ತಮವಾದ ಬದಲಾವಣೆಯನ್ನು ಬಯಸಲಿದೆ‌. ತೀರ್ಥಕ್ಷೇತ್ರಗಳಿಗೆ ಪ್ರಯಾಣ ಮಾಡುವ ಸಂದರ್ಭಗಳು ಎದುರಾಗಬಹುದು. ನೀವು ಹೆಚ್ಚು ಶ್ರಮಪಡದೇ ಉತ್ತಮ ಮೊತ್ತವನ್ನು ಗಳಿಸಲು ಪ್ರಾರಂಭಿಸುವ ಸಾಧ್ಯತೆ ಇದೆ. ನೀವು ತೆಗೆದುಕೊಳ್ಳುವ ನಿರ್ಧಾರಗಳು ದೀರ್ಘಕಾಲೀನ ಪರಿಣಾಮಗಳನ್ನು ಬೀರುವುದರಿಂದ ಸಮಯವನ್ನು ತೆಗೆದುಕೊಳ್ಳಿ. ನೀವು ಚೆನ್ನಾಗಿ ಸಂವಹನ ಮಾಡಿ ಮತ್ತು ನಿಮ್ಮ ಕೆಲಸದ ಮೇಲೆ ಗಮನಹರಿಸಲು ಸಮಯವನ್ನು ತೆಗೆದುಕೊಳ್ಳುವಿರಿ.

ಮಕರ: ಕುಟುಂಬಕ್ಕೆ ನೂತನ ಸದಸ್ಯರ ಆಗಮನವಾಗಲಿದೆ‌. ಈ ದಿನ ನಿಮಗೆ ವಿಶ್ರಾಂತಿ ಕಡಿಮೆಯಾಗಲಿದೆ. ನಿಮ್ಮ ಜೀವನದ ಪ್ರತಿಯೊಂದು ಅಂಶವು ನೀವು ಬಯಸಿದಂತೆ ಆಗಲಿದೆ. ನೀವು ಹೋರಾಟದ ಮೂಲಕ ಇಂದಿನ‌ ಸೌಲಭ್ಯವನ್ನು ಪಡೆದುಕೊಳ್ಳುವಿರಿ. ನಿಮಗಿಂತ ಕಿರಿಯ ಜನರು ನಿಮ್ಮ ಸ್ಥಾನವನ್ನು ಪಡೆದುಕೊಳ್ಳಲು ಪ್ರಯತ್ನಿಸುವರು. ನಿಮ್ಮ ಪ್ರತಿಭೆಯನ್ನು ನವೀಕರಿಸಿಕೊಳ್ಳುವುದು ಉತ್ತಮ. ಆದಾಯದ ಅಂದಾಜಿನ ಆಧಾರದ ಮೇಲೆ ನೀವು ಈಗಾಗಲೇ ಹೂಡಿಕೆ ಮಾಡಿರುತ್ತೀರಿ. ನಿಮಗೆ ಆರ್ಥಿಕತೆಯ ಕುರಿತು ನಿಮ್ಮಲ್ಲಿ ಆತಂಕ ಮತ್ತು ಚಿಂತೆಗಳು ಇರಲಿವೆ.

ಕುಂಭ: ಇಂದು ನಿಮ್ಮ ಎಂದಿಗಿಂತಲೂ ಪ್ರಬಲ ವ್ಯಕ್ತಿ ಎನ್ನುವುದನ್ನು ಸಾಬೀತುಪಡಿಸಲಿದ್ದೀರಿ. ನಿಮ್ಮ ವೃತ್ತಿಗೆ ನೀವು ಹೆಚ್ಚು ಸಮಯ ಮತ್ತು ಗಮನವನ್ನು ನೀಡುವುದು ಕಷ್ಟವಾದೀತು. ನಿಮ್ಮ ಸಂಗಾತಿಯಿಂದ ನೀವು ಸಾಕಷ್ಟು ಪ್ರೀತಿಯನ್ನು ಸ್ವೀಕರಿಸುತ್ತೀರಿ. ಇತರ ಜನರನ್ನು ಸಂತೋಷಪಡಿಸುವುದು ಇಂದು ನಿಮ್ಮ ಉತ್ಸಾಹವನ್ನು ಹೆಚ್ಚಿಸುತ್ತದೆ. ನಿಮ್ಮಿಂದ ಸಾಧ್ಯವಾದಷ್ಟು ಸಂತೋಷವನ್ನು ಕೊಡಲು ಪ್ರಯತ್ನಿಸಿ. ಕುಟುಂಬವು ನಿಮ್ಮ ರಕ್ಷಣೆಗೆ ಇರಲಿದೆ.

ಮೀನ: ಇಂದು ಸೌಂದರ್ಯದ ಕುರಿತು ಅತಿಯಾದ ಕಳಜಿಯನ್ನು ಹೊಂದಲಿದ್ದೀರಿ. ಪ್ರತಿಕೂಲ ಪರಿಸ್ಥಿತಿಗಳನ್ನು ನಿವಾರಿಸಿಕೊಳ್ಳುವ ಚಾಣಕ್ಷತನ ನಿಮ್ಮಲ್ಲಿದೆ. ಎದುರಾಳಿಗಳು ತಾವೇ ಆರಂಭಿಸಿದ ಆಟದಲ್ಲಿ ತಾವೇ ಸೋಲುವರು. ನಿಮ್ಮ ಕೆಲವು ಸಂಕೀರ್ಣ ಕೆಲಸಗಳು ಪರಿಹರಿಸಲ್ಪಡುತ್ತವೆ. ದಿನದ ಆರಂಭವು ಸುಂದರವಾಗಿಯೂ ಉತ್ಸಾಹಭರಿತವಾಗಿಯೂ ಇದ್ದರೆ ನಿಮ್ಮ ಪ್ರಯತ್ನಗಳು ಫಲಪ್ರದವಾಗುತ್ತವೆ. ಸರಿಯಾದ ಮಾರ್ಗವನ್ನು ಆಯ್ಕೆ ಮಾಡಿಕೊಂಡರೆ ಮಾತ್ರ ವಿಜಯಕ್ಕೆ ಕಾರಣವಾಗುತ್ತದೆ. ಹೊಸ ಆಲೋಚನೆಗಳನ್ನು ಪ್ರಶಂಸಿಸಲಾಗುತ್ತದೆ. ಧಾರ್ಮಿಕ ಆಸಕ್ತಿ ಹೆಚ್ಚಲಿದೆ.

ಲೇಖನ-ಲೋಹಿತಶರ್ಮಾ ಇಡುವಾಣಿ

‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
‘ವಟವಟ ಅಂತಾನೆ’; ಐಶ್ವರ್ಯಾಗೆ ಶಿಶಿರ್ ಮೇಲಿದ್ದ ಅಭಿಪ್ರಾಯ ಬದಲಾಯ್ತಾ?
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಮನೆಯಲ್ಲಿ ತೆಂಗಿನಕಾಯಿ ಕಟ್ಟುವುದರ ಹಿಂದಿನ ಅರ್ಥವೇನು ಗೊತ್ತಾ? ವಿಡಿಯೋ ನೋಡಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಇಂದಿನ ರಾಶಿ ಫಲ, ಪಂಚಾಂಗ ಮತ್ತು ಜ್ಯೋತಿಷ್ಯ ಭವಿಷ್ಯ ತಿಳಿಯಿರಿ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಶರಣಾದ ನಕ್ಸಲರ ಶಸ್ತ್ರಾಸ್ತ್ರ ಎಲ್ಲಿ? ಕೊನೆಗೂ ಉತ್ತರಿಸಿದ ಸಿದ್ದರಾಮಯ್ಯ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಬುಲಂದ್‌ಶಹರ್‌ನಲ್ಲಿ ಟ್ರ್ಯಾಕ್ಟರ್ ಸ್ಟಂಟ್‌ ವೇಳೆ ದುರಂತ
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಸರ್ಕಾರದ ಪ್ರಸ್ತಾವನೆಯನ್ನು ಆಶಾ ಕಾರ್ಯಕರ್ತೆಯರು ಒಪ್ಪಿಲ್ಲವೇ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಡಿಕೆಶಿ ಮಾಡಿಸಿದ ಹೋಮದ ಹಿಂದಿನ ರಹಸ್ಯವೇನು? ಶತ್ರುನಾಶವಾಗುತ್ತಾ?
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಶಾಸಕ ಚಂದ್ರರನ್ನು ಸುನೀಲ ಮಾಮಾ ಅಂತ ಕರೆಯುತ್ತಿದ್ದ: ಆನಂದ್
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ