Horoscope: ದಿನಭವಿಷ್ಯ; ತಮಾಷೆಗೆ ಆಡಿದ ಮಾತು ಕಲಹವಾಗಿ ಪರಿವರ್ತಿತವಾದೀತು

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 02) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ದಿನಭವಿಷ್ಯ; ತಮಾಷೆಗೆ ಆಡಿದ ಮಾತು ಕಲಹವಾಗಿ ಪರಿವರ್ತಿತವಾದೀತು
ಪ್ರಾತಿನಿಧಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 02, 2023 | 12:45 AM

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 02) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ತೃತೀಯಾ / ಚತುರ್ಥೀ, ನಿತ್ಯನಕ್ಷತ್ರ: ಭರಣೀ, ಯೋಗ: ಹರ್ಷಣ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06-23ಕ್ಕೆ, ಸೂರ್ಯಾಸ್ತ ಸಂಜೆ 06 – 20ಕ್ಕೆ, ರಾಹು ಕಾಲ ಬೆಳಿಗ್ಗೆ 07:53 – 09:23ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:52 – 12:22ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:52 – 03:21ರ ವರೆಗೆ.

ಧನು ರಾಶಿ : ತಮಾಷೆಗೆ ಆಡಿದ ಮಾತು ಕಲಹವಾಗಿ ಪರಿವರ್ತಿತವಾದೀತು. ಸರ್ಕಾರದ ಅಧಿಕಾರಗಳ ಭಯವು ಇರಲಿದೆ. ಕಳೆದುಕೊಂಡಿದ್ದನ್ನು ಮತ್ತೆ ಪಡೆಯುವ ಆಸೆ ಇರಲಿದೆ. ಆಹಾರ ವ್ಯತ್ಯಾಸದಿಂದ ಹೊಟ್ಟೆಯಲ್ಲಿ ಶೂಲೆ ಕಾಣಿಸಿಕೊಳ್ಳಬಹುದು. ಮನೆಯ ಔಷಧಿಯಿಂದ ಅದನ್ನು ಸರಿ ಮಾಡಿಕೊಳ್ಳಿ. ನಿಮಗೆ ಯಾವುದಾದರೂ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸಲು ಕರೆ ಬರಬಹುದು. ಇಂದು ಸಾಲದಿಂದ ನೀವು ಮುಕ್ತರಾಗಿ ಸ್ವಲ್ಪ ನೆಮ್ಮದಿ ಪಡುವಿರಿ. ಕೃಷಿಕರು ತಮ್ಮ ಉತ್ಪನ್ನದಿಂದ ಅಲ್ಪ ಲಾಭ ಪಡೆವರು. ವಿನಾಕಾರಣ ಇನ್ನೊಬ್ಬರ ಮೇಲೆ ಸಿಟ್ಟಾಗುವುದು ಬೇಡ. ಇನ್ನೊಬ್ಬರ ಮಾತನ್ನು‌ ಕೇಳುವ ಸಹನೆ ಇರಲಿ. ನಿಮ್ಮ ಪ್ರೇಮ ಪ್ರಕರಣವು ಹೊಸ ರೂಪವನ್ನು ಪಡೆದುಕೊಳ್ಳಬಹುದು. ದೂರ ಪ್ರಯಾಣವನ್ನು ಇಂದು ಮಾಡಬೇಡಿ. ಧಾರ್ಮಿಕ ಕ್ಷೇತ್ರಗಳ ದರ್ಶನವನ್ನು ಪಡೆಯುವಿರಿ. ಕೆಲಸದಲ್ಲಿ ನಿಮಗೆ ಗೊಂದಲ ಇರುವುದು. ಸಭೆಯಲ್ಲಿ ನಿಮ್ಮ ಹೆಸರನ್ನು ಪ್ರಸ್ತಾಪಿಸಬಹುದು.

ಮಕರ ರಾಶಿ : ಸಂಗಾತಿಗೆ ವಾಹನ ಖರೀದಿಗೆ ಒತ್ತಾಯಿಸುವಿರಿ. ಆಪ್ತರಿಂದ ನಿಮಗೆ ಇಷ್ಟವಾದ ವಸ್ತುವು ಪ್ರಾಪ್ತವಾಗುವುದು. ಆಕಸ್ಮಿಕವಾಗಿ ಅನಾರೋಗ್ಯವು ಕಾಣಿಸಿಕೊಳ್ಳಬಹುದು. ಸಾಲ‌ಪಡೆದವರು ನಿಮ್ಮನ್ನು ಪೀಡಿಸಬಹುದು. ಪಾಲುದಾರಿಕೆಯಲ್ಲಿ ಇಂದು ಸಣ್ಣ ವಿಚಾರಕಗಕೇ ಕಲಹವಾಗುವುದು. ಇಂದು ಅಗತ್ಯವಿರುವಷ್ಟು ಮಾತ್ರವೇ ಮಾತನಾಡಿ. ನಿಮ್ಮದಲ್ಲದ ವಸ್ತುಗಳನ್ನು ಯಾರಿಗಾದರೂ ಕೊಡುವ ಮೊದಲು ಯೋಚಿಸಿ. ಗೊತ್ತಿಲ್ಲ ಕೆಲಸಕ್ಕೆ ಹುಂಬುತನ‌ ಬೇಡ. ನಿಮ್ಮ ಮಾತುಗಳು ಹಾಸ್ಯಾಸ್ಪದವಾಗುವುದು. ಹೊಸ ಯೋಜನೆಗಳನ್ನು ಶುರು‌ ಮಾಡಲು ಆಪ್ತರ ಜೊತೆ ಚರ್ಚಿಸಿ. ಹಣಕಾಸಿನ ವ್ಯವಹಾರದಲ್ಲಿ ನೀವು ಸಹೋದರರ ಜೊತೆ ಕುಳಿತು ಮಾತನಾಡಿ. ಕುಟುಂಬದವರ ಎಲ್ಲರ ಭೇಟಿಯಾಗಿ ಅವರ ಜೊತೆ ಸಮಯವನ್ನು ಕಳೆಯುವಿರಿ. ಇಂದು ಮುಗಿಯಬೇಕಾದ ಕೆಲಸಗಳು ಉಳಿದುಕೊಳ್ಳುವುದು.

ಕುಂಭ ರಾಶಿ : ಆಕಸ್ಮಿಕ ಧನಲಾಭದಿಂದ ಅಲ್ಪ ತೃಪ್ತಿ ಸಿಗುವುದು. ರಪ್ತು ಉದ್ಯಮದಲ್ಲಿ ನಿಮಗೆ ಲಾಭವಾಗುವುದು. ಮನಸ್ಸು ಬಹಳ ಉತ್ಸಾಹದಿಂದ ಇರಲಿದೆ. ಮನೆಯ ಹಿರಿಯರ ಸೇವೆಯನ್ನು ಮಾಡುವಿರಿ. ಪರೀಕ್ಷೆಯಲ್ಲಿ ನೀವು ಅಂದುಕೊಂಡಷ್ಟು ಫಲಿತಾಂಶ ಸಿಗದು. ಸಂಗಾತಿಯು ನಿಮಗೆ ಒಂದೇ ವಿಚಾರಗಳನ್ನು ಮತ್ತೆ ಮತ್ತೆ ಹೇಳಿ ಬೇಸರ ತರಿಸುವರು. ಮೈ ಚಳಿಯನ್ನು ಬಿಟ್ಟು ಧೈರ್ಯದಿಂದ ಮುನ್ನಡೆಯಿರಿ. ನಿಮಗಾದ ಸಹಾಯವನ್ನು ನೀವು ಸ್ಮರಿಸಿಕೊಳ್ಳುವಿರಿ. ಅಧಿಕಾರಿಗಳ ಪ್ರಶ್ನೆಗೆ ನಿಮ್ಮ ಉತ್ತರವು ಸರಿಯಾಗಿ ಇರಲಿ. ಸಿಟ್ಟನ್ನು ಬಿಟ್ಟು ಶಾಂತವಾಗಿ ಸಮಾಧಾನ ಚಿತ್ತದಿಂದ ಮಾತನಾಡಿ. ನೆರಹೊರೆಯರ ಸಂಕಷ್ಟಕ್ಕೆ ನೀವು ಇಂದು ನೆರವಾಗುವಿರಿ. ಕಛೇರಿಯಲ್ಲಿ ನೀವು ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ಅರಾಮಾಗಿ ಇರುವಿರಿ.

ಮೀನ ರಾಶಿ : ಇಂದು ನಿಮ್ಮ ಜೀವನ ಸಂಗಾತಿಯನ್ನು ಆಶ್ಚರ್ಯಗೊಳಿಸುವಿರಿ. ನಿಮ್ಮ ಎಲ್ಲ ಕಾರ್ಯವನ್ನು ಬಿಟ್ಟು ಇಂದು ನೀವು ಅವರ ಜೊತೆ ಸಮಯವನ್ನು ಕಳೆಯುವಿರಿ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ನಿಮಗೆ ಚಿಂತೆ ಇರಲಿದೆ. ಆರೋಗ್ಯವು ನಿನ್ನೆಗಿಂತ ಉತ್ತಮವಾಗಿದ್ದು, ಹಾಗೆಯೇ ಉಳಿಸಿಕೊಳ್ಳಲು ಪ್ರಯತ್ನಿಸಿ. ಆಸ್ತಿಯನ್ನು ಮಾರಾಟ‌ಮಾಡುವ ಆಲೋಚನೆ ಇರಲಿದೆ. ನಿಮ್ಮ ಸ್ನೇಹಿತರಲ್ಲಿ ಇಂದು ದೊಡ್ಡ ಸಾಲವನ್ನು ಕೇಳುವಿರಿ. ಸ್ವೋದ್ಯೋಗವನ್ನು ಮಾಡುತ್ತಿದ್ದರೆ ಸ್ವಲ್ಪ ನಷ್ಟವಾಗಬಹುದು. ಕುಟುಂಬವು ನಿಮ್ಮ ಜೊತೆಗೆ ನಿಲ್ಲುವುದು. ಹಳೆಯ ವಿಚಾರಗಳನ್ನು ನೀವು ಮತ್ತೆ ಕೆದಕುವಿರಿ. ಬಾಯಿ‌ ಮಾತಿನ ಯಾವುದನ್ನೂ ದಾಖಲೆಯಾಗಿ ಪಡೆಯದೇ ಬರಹದ ಮೂಲಕ ವ್ಯಕ್ತಪಡಿಸಿ.

-ಲೋಹಿತಶರ್ಮಾ – 8762924271 (what’s app only)

ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ರಜತ್​ಗೆ ಕಿಚ್ಚನ ಮಾತಿನ ಗುದ್ದು, ಕಣ್ಣೀರು ಹಾಕಿದ ಭವ್ಯಾ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಶಾಲಾ ಬ್ಯಾಂಡ್​ನೊಂದಿಗೆ ಮಕ್ಕಳಿಂದಲೂ ರವಿಚಂದ್ರ ತಳವಾರಗೆ ಶ್ರದ್ಧಾಂಜಲಿ
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಕಲಬುರಗಿ: ರಾಷ್ಟ್ರ ಧ್ವಜ ಸ್ತಂಭದಲ್ಲಿ ಮುಸ್ಲಿಂ ಧ್ವಜಾರೋಹಣ, ಅಪಮಾನ ಆರೋಪ‌
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ಬಂತು ಶನಿವಾರ, ಕಳ್ಳಾಟ ಆಡಿದ ರಜತ್, ಭವ್ಯಾಗೆ ಕಾದಿದೆ ಗಂಡಾಂತರ?
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಣ್ಣ ಹೇಳೋದನ್ನು ಯಾರಾದರೂ ನಂಬುತ್ತಾರೆಯೇ? ಜಗದೀಶ್ ಶೆಟ್ಟರ್
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಜಕಾರಣದಲ್ಲಿ ಯಾರೂ ಶತ್ರುಗಳಲ್ಲ, ಪ್ರತಿಸ್ಪರ್ಧಿಗಳು ಅಷ್ಟೇ: ಜೋಶಿ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನೆ ವಾರ್ಷಿಕೋತ್ಸವ; ರಾಮಲಲ್ಲಾಗೆ ಮಹಾ ಅಭಿಷೇಕ
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ವಿಜಯೇಂದ್ರ ಸಭೆ ನಡೆಸಿದರೆ ನನಗ್ಯಾಕೆ ಹಿನ್ನಡೆಯಾದೀತು: ಬಸನಗೌಡ ಯತ್ನಾಳ್
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ತ್ಯಾಗದ ಪ್ರತಿಫಲ;ರಾಮಮಂದಿರ ಪ್ರತಿಷ್ಠಾಪನೆ ವಾರ್ಷಿಕೋತ್ಸವ ಕುರಿತು ಮೋದಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ
ನಿಖಿಲ್ ರಾಜ್ಯಾಧ್ಯಕ್ಷನಾಗಲಿ ಅಂತ ನನ್ನ ಮಗ ಹೇಳಿದರೆ ತಪ್ಪೇನು? ಜಿಟಿಡಿ