Horoscope: ದಿನಭವಿಷ್ಯ; ಈ ರಾಶಿಯವರು ಸಹೋದ್ಯೋಗಿಗಳ ಜೊತೆ ಮನಸ್ತಾಪ ಬಂದು ಜಗಳವಾಡುವಿರಿ
ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ಅಕ್ಟೋಬರ್ 09) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ಅಕ್ಟೋಬರ್ 09) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಭಾದ್ರಪದ, ಪಕ್ಷ: ಕೃಷ್ಣ, ವಾರ: ಸೋಮ, ತಿಥಿ: ಏಕಾದಶೀ, ನಿತ್ಯನಕ್ಷತ್ರ: ಆಶ್ಲೇಷಾ, ಯೋಗ: ಸಿದ್ಧ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06:24ಕ್ಕೆ, ಸೂರ್ಯಾಸ್ತ ಸಂಜೆ 06:15ಕ್ಕೆ, ರಾಹು ಕಾಲ ಬೆಳಿಗ್ಗೆ 07:53-09:22ರ ವರೆಗೆ, ಯಮಘಂಡ ಕಾಲ ಬೆಳಿಗ್ಗೆ 10:51–12:20ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:49 –03:18ರ ವರೆಗೆ.
ಧನು ರಾಶಿ : ಮಕ್ಕಳು ನಿಮ್ಮ ಮಾತಿಗೆ ಸ್ಪಂದಿಸುವರು. ಆಸ್ತಿಯ ಖರೀದಿಗೆ ಎರಡು ಮನಸ್ಸು ಇರುವುದು. ಗೊಂದಲದಿಂದ ಹೊರಬರುವುದು ಕಷ್ಟವಾದೀತು. ನಂಬಿಕೆಯಿಂದ ಕೆಲಸವನ್ನು ಮಾಡುವಿರಿ. ಯತ್ನಿಸಿದ ಕಾರ್ಯಗಳು ನಿಮಗೆ ಬಹುಪಾಲು ಉತ್ತಮ ಫಲಿತಾಂಶವು ಇರಲಿದೆ. ಸ್ವಂತ ಉದ್ಯೋಗಸ್ಥರು ಲಾಭ ಗಳಿಸುವರು. ಸರ್ಕಾರದಿಂದ ಕೆಲವು ವಿಚಾರಕ್ಕೆ ಕಿರಿಕಿರಿ ಉಂಟಾದೀತು. ಸ್ವತಂತ್ರವಾಗಿದ್ದರೂ ಏನನ್ನಾದರೂ ಕಳೆದುಕೊಳ್ಳುತ್ತೇನೆ ಎಂಬ ಭಯವು ಇರಲಿದೆ. ದಾಂಪತ್ಯದ ಬಿರುಕನ್ನು ನೀವು ಸರಿ ಮಾಡಲು ಪ್ರಯತ್ನಿಸಿದರೆ ಆಗುವುದು. ಹೊಸತನ್ನು ಕಲಿಯುವ ಅವಕಾಶವನ್ನು ಹುಡುಕಿಕೊಳ್ಳುವಿರಿ. ನಿಮ್ಮ ಕುಲದಿಂದ ಗೌರವ ಸಿಗಬಹುದು. ನೀವೇ ಬೇಡದ್ದನ್ನು ಮೈಮೇಲೆ ಹಾಕಿಕೊಂಡು ಒದ್ದಾಡಬೇಕಾದೀತು.
ಮಕರ ರಾಶಿ : ನಿಮ್ಮ ಚುರುಕುತನಕ್ಕೆ ಅಚ್ಚರಿಗೊಳ್ಳುವರು. ಜವಾಬ್ದಾರಿಯು ನಿಮಗೆ ಅತಿಯಾಗುವುದು. ಒತ್ತಡವನ್ನು ನಿಭಾಯಿಸಕೊಳ್ಳಲು ಕಷ್ಟವಾದೀತು. ಸಹೋದ್ಯೋಗಿಗಳ ಜೊತೆ ಮನಸ್ತಾಪ ಬಂದು ಜಗಳವಾಡುವಿರಿ. ಮೇಲಧಿಕಾರಿಗಳ ಜೊತೆ ವಿನಾಕಾರಣ ವಾಗ್ವಾದ ಬೇಡ. ಎಷ್ಟೋ ಕೆಲಸಗಳು ನಿಮ್ಮ ಬಳಿಯೇ ಬಾಕಿ ಇರುವುದು. ನೀವು ಹೇಳಬೇಕಾದ ವಿಷಯಗಳನ್ನು ಇನ್ನೊಬ್ಬರಿಗೆ ಹೇಳುವಿರಿ. ಯಾವುದೋ ಯೋಚನೆಯಲ್ಲಿ ಮುಖ್ಯ ಕಾರ್ಯಗಳು ಮರೆತುಹೋಗಬಹುದು. ಭೂಮಿಯ ವಿಚಾರಕ್ಕೆ ಸಂಬಂಧಿಸಿದಂತೆ ಕೆಲವು ಕಾನೂನಾತ್ಮಕ ತೊಂದರೆ ಬರುವುದು. ಉದ್ಯಮವನ್ನು ಮಾಡುವ ಮೊದಲು ಸರಿಯಾದ ಯೋಜನೆಯನ್ನು ತಯಾರಿಸಿ. ಅಪರಿಚಿತರ ಕರೆಯಿಂದ ದೂರವಿರುವಿರಿ. ಅಹಂಕಾರದಿಂದ ಸಜ್ಜನರ ಸಹವಾಸದಿಂದ ಮಾಡಲಾರಿರಿ.
ಕುಂಭ ರಾಶಿ : ಆರ್ಥಿಕತೆಯು ನಿಮ್ಮನ್ನು ಚಿಂತೆಗೀಡುಮಾಡುವುದು. ನಿಮ್ಮ ತಪ್ಪುಗಳೇ ಫಲಿತಾಂಶದಲ್ಲಿ ಬರುವುದು. ಮಂದಗತಿಯ ಕಾರ್ಯಕ್ಕೆ ನಿಮ್ಮನ್ನು ಯಾರಾದರೂ ಹೀಯಾಳಿಸಬಹುದು. ನೀವು ಪ್ರಯಾಣ ಮಾಡದೇ ಬಹಳ ದಿನಗಳಾದಂತೆ ಅನ್ನಿಸುವುದು. ಪುಣ್ಯಸ್ಥಳಗಳ ದರ್ಶನವನ್ನು ಮಾಡಲು ಆಸಕ್ತಿ ಇರುವುದು. ಸಾಮಾಜಿಕ ಕಾರ್ಯಗಳು ನಿಮಗೆ ಯಶಸ್ಸನ್ನು ತಂದುಕೊಡುವುದು. ಇರುವ ಸಮಯವನ್ನು ವ್ಯರ್ಥ ಮಾಡಿಕೊಳ್ಳದೇ ಸದುಪಯೋಗ ಆಗುವಂತೆ ಮಾಡಿ. ವೃತ್ತಿಯಲ್ಲಿ ನಿಮಗೆ ಭಯವು ಕಾಡಲಿದ್ದು ಆಪ್ತರ ಜೊತೆ ಅದನ್ನು ಹೇಳಿ. ನಿಮ್ಮ ಸಾಮರ್ಥ್ಯವು ಇಂದು ಕಾಣಿಸಿಕೊಳ್ಳದು. ಪ್ರೀತಿಯನ್ನು ಹೇಳಲು ಹಿಂದೇಟು ಹಾಕುವಿರಿ. ಮಾತುಗಳನ್ನು ಸಕಾರಾತ್ಮಕವಾಗಿ ತೆಗೆದುಕೊಳ್ಳುವಿರಿ. ಮಕ್ಕಳ ವಿಚಾರದಲ್ಲಿ ನೀವು ದುರ್ಬಲರಾಗುವಿರಿ.
ಮೀನ ರಾಶಿ : ಪರೋಪಕಾರಕ್ಕೆ ನಿಮ್ಮ ಮನಸ್ಸು ಕರಗುವುದು. ಸ್ತ್ರೀಯರು ಈ ದಿನವನ್ನು ಬಹಳ ಉತ್ಸಾಹದಿಂದ ಕಳೆಯುವರು. ಕುಟುಂಬದ ಸೌಖ್ಯದಲ್ಲಿ ನೀವು ಭಾಗಿಯಾಗುವಿರಿ. ಮಾನಸಿಕ ಒತ್ತಡವನ್ನು ಕಡಿಮೆ ಮಾಡಿಕೊಂಡು ಕಾರ್ಯದಲ್ಲಿ ಪ್ರಗತಿಯನ್ನು ಕಾಣುವಿರಿ. ಸ್ಥಿರಾಸ್ತಿಗೆ ಸಂಬಂಧಿಸಿದಂತೆ ಕೆಲವು ದಾಖಲೆಗಳನ್ನು ಮಾಡಿಕೊಳ್ಳುವಿರಿ. ಮಕ್ಕಳಿಂದ ಆಗುವ ಅಸಮಾಧಾನವನ್ನು ಸಹಿಸಲಾರಿರಿ. ನಿಮ್ಮ ಇಂದಿನ ಧೈರ್ಯವು ಹೆಚ್ಚಿನ ಪ್ರಗತಿಗೆ ಪೂರಕ. ನಿಮ್ಮ ಉದ್ಯೋಗದ ತೊಂದರೆಗಳನ್ನು ಸರಿಮಾಡಿಕೊಂಡು ಮುನ್ನಡೆಯುವಿರಿ. ಯುವಕರಿಗೆ ಸರಿಯಾದ ಮಾರ್ಗದರ್ಶನ ಸಿಗುವುದು. ವಾಹನ ಖರೀದಿಯ ವ್ಯವಹಾರವು ನಿಮಗೆ ಸರಿಯಾಗದು. ಉಪಕಾರ ಸ್ಮರಣೆಯನಲು ನಿಮಗೆ ಇಲ್ಲದೇ ಹೋಗುವುದು. ಸಹೋದರರ ನಡುವೆ ಆಪ್ತತೆಯು ಇರುವುದು. ನಿಮ್ಮ ಕೈತಪ್ಪಿ ಹೋದ ಸ್ಥಾನವನ್ನು ಪುನಃ ಪಡೆದುಕೊಳ್ಳುವಿರಿ.
-ಲೋಹಿತಶರ್ಮಾ – 8762924271 (what’s app only)