Horoscope Today: ರಾಶಿಭವಿಷ್ಯ, ಈ ರಾಶಿಯವರು ಬಂದಷ್ಟು ಆದಾಯವನ್ನು ಪ್ರೀತಿಯಿಂದ ಸ್ವೀಕರಿಸಿ
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 13) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 13 ಭಾನುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ಅಧಿಕ ಶ್ರಾವಣ, ಪಕ್ಷ: ಕೃಷ್ಣ, ವಾರ: ಭಾನು, ತಿಥಿ: ತ್ರಯೋದಶೀ, ನಿತ್ಯನಕ್ಷತ್ರ: ಪುನರ್ವಸು, ಯೋಗ: ಪರಿಘ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 57 ನಿಮಿಷಕ್ಕೆ, ರಾಹು ಕಾಲ ಸಂಜೆ 05:21 ರಿಂದ 06:55ರ ವರೆಗೆ, ಯಮಘಂಡ ಕಾಲ ಮಧ್ಯಾಹ್ನ 12:37 ರಿಂದ 02:12ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:46 ರಿಂದ 05:21ರ ವರೆಗೆ.
ಧನು ರಾಶಿ: ಮಕ್ಕಳಿಂದ ನಿಮಗೆ ಆರ್ಥಿಕ ನೆರವು ಸಿಗಲಿದೆ. ದುರಭ್ಯಾಸವನ್ನು ಬಿಡಲು ಒಬ್ಬೊಬ್ಬರಾಗಿ ಹೇಳಬಹುದು. ಅಪಮಾನವಾಗುವ ಸಂದರ್ಭದಲ್ಲಿ ನೀವು ಇರಲಾರಿರಿ. ನಿಮ್ಮ ಉತ್ಸಾಹದ ಕೆಲಸವು ಮಾದರಿಯಾಗುವುದು. ನಿರ್ಲಕ್ಷ್ಯದಿಂದ ಉತ್ತಮ ಅವಕಾಶಗಳಿಂದ ವಂಚಿತರಾಗುವಿರಿ. ಕುಟುಂಬ ಮಹತ್ವವು ತಿಳಿಯುವುದು. ಮನೆಯ ಹಿರಿಯ ಆರೋಗ್ಯವು ದುರ್ಬಲವಾಗಿದ್ದು ಇದೇ ನಿಮಗೆ ಚಿಂತೆಯು ಆಗಬಹುದು. ಆತ್ಮಾಭಿಮಾನವು ಅಧಿಕವಾಗಿ ತೋರುವುದು. ಸಹೋದರಿಯ ಜೊತೆ ನಿಮ್ಮ ಭಾವನೆಗಳನ್ನು ಹಂಚಿಕೊಳ್ಳುವಿರಿ.
ಮಕರ ರಾಶಿ: ದಾಂಪತ್ಯದ ವಿರಸವು ಸಾಮರಸ್ಯವಾಗಲು ಎಷ್ಟೇ ಪ್ರಯತ್ನಿಸಿದರೂ ಸಾಧ್ಯವಾಗದು. ಸ್ವಪ್ರತಿಷ್ಠೆಯನ್ನು ಬಿಟ್ಟು ಬಿಡಿವುದು ಉತ್ತಮ. ವ್ಯಾಪಾರದಲ್ಲಿ ಯಾರ ಹಸ್ತಕ್ಷೇಪವನ್ನು ಸಹಿಸಲಾರಿರಿ. ತಂದೆಯ ವಿಚಾರದಲ್ಲಿ ನಿಮಗೆ ಬೇಸರವಾಗಬಹುದು. ರಾಜಕೀಯದಲ್ಲಿ ನಿಮ್ಮ ವರ್ಚಸ್ಸು ಹೆಚ್ಚುವುದು. ಸಣ್ಣ ವಿಚಾರಗಳನ್ನು ದೊಡ್ಡ ಮಾಡಿಕೊಳ್ಳುವಿರಿ. ಕೆಲಸದ ಒತ್ತಡವು ಇಂದು ಅಧಿಕವಾಗುವುದು. ಸಹೋದರನಿಗೆ ಕಾರ್ಯದ ಅನ್ವೇಷಣೆಯನ್ನು ಮಾಡಲಿದ್ದೀರಿ. ನೀವು ನಿರೀಕ್ಷಿಸಿದ ಕೆಲಸದಿಂದ ಯಶಸ್ಸು ಸಿಗಲಿದೆ. ಮಾತನ್ನು ಸರಿಯಾಗಿ ಆಡಿದರೆ ಗೌರವವು ಪ್ರಾಪ್ತವಾಗಬಹುದು. ಭೋಗದ ಕಾರಣಕ್ಕೆ ಹಣವು ಖರ್ಚಾಗುವುದು.
ಕುಂಭ ರಾಶಿ: ಬಂಧುಗಳ ನಾನಾ ಪ್ರಶ್ನೆ ತರದ ಪ್ರಶ್ನೆಗಳಿಗೆ ಉತ್ತರಿಸಿ ಸಾಕೆನಿಸುವುದು. ಎಷ್ಟೇ ಪ್ರಯತ್ನಿಸದರೂ ಕೆಲಸವು ಅಡೆತಡೆಗಳಿಂದ ಇದ್ದರೆ ಅದನ್ನು ಬಿಡುವುದು ಉತ್ತಮ. ಮನೆಯ ಕೆಲಸಗಳನ್ನು ನಿರಾಸಕ್ತಿಯು ಇರುವುದು. ಈ ದಿನವನ್ನು ನೀವು ಆರಾಮವಾಗಿ ಕಳೆಯಲು ನಮ್ಮನ್ನು ಮೊದಲೇ ಸಿದ್ಧಪಡಿಸಿಕೊಂಡಿರುವಿರಿ. ರಾಜಕೀಯ ನಾಯಕನಿಂದ ನಿಮಗೆ ಬೇಕಾದ ಬೆಂಬಲವು ಸಿಗುವುದು. ಕೆಲಸ ಮಾಡುವ ವಿಧಾನದ ಬಗ್ಗೆ ತಿಳಿದುಕೊಳ್ಳಿ. ಅಮೂಲ್ಯವಾದ ವಸ್ತುವನ್ನು ಖರೀದಿಸಿ ಸಂತೋಷಪಡುವಿರಿ. ಬಂದಷ್ಟು ಆದಾಯವನ್ನು ಪ್ರೀತಿಯಿಂದ ಸ್ವೀಕರಿಸಿ. ನಿಮ್ಮ ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು.
ಮೀನ ರಾಶಿ: ಇಂದು ನಿಮಗೆ ಸಹಾಯದ ಮನೋಭಾವವು ಅಧಿಕವಾಗಿ ಇರಲಿದೆ. ಸಮಯಕ್ಕೆ ಸರಿಯಾಗಿ ಕೆಲಸ ಮಾಡದೇ ಮನೆಯಲ್ಲಿ ಬೈಗುಳವನ್ನು ತಿನ್ನುವಿರಿ. ವಾಹನದಿಂದ ಅಪಘಾತವಾಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಸಾಮಾನ್ಯವಾಗಿರುವುದು. ನಿಮ್ಮ ಆತ್ಮವಿಶ್ವಾಸದಲ್ಲಿ ಕೊರತೆ ಕಾಣಿಸುವುದು. ಎಲ್ಲ ಕಾರ್ಯಗಳಲ್ಲಿಯೂ ಹೆಜ್ಜೆಯನ್ನು ಹಿಂದಿಡುವಿರಿ. ನಿಮ್ಮ ನಿರೀಕ್ಷೆಗೆ ವಿರುದ್ಧವಾದ ಮಾತುಗಳು ಬರಬಹುದು. ಪ್ರಯಾಣದಲ್ಲಿ ಎಚ್ಚರಿಕೆ ಇರಲಿ. ಮೃದು ಮಾತಿನಿಂದ ಹೆಚ್ಚು ಪ್ರಯೋಜನ ಆಗಬಹುದು.
ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




