Horoscope Today: ಮನೆಯ ಜವಾಬ್ದಾರಿ ತೆಗೆದುಕೊಳ್ಳಬೇಕಾದಿತು, ಅಧಿಕ ಶ್ರಮ ಪಡುವಿರಿ
ನೀವು ಧನು, ಮಕರ, ಕುಂಭ, ಮೀನ ರಾಶಿಯವರೇ? ಹಾಗಿದ್ದರೆ ಇಂದಿನ (2023 ಆಗಸ್ಟ್ 17) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ಆಗಸ್ಟ್ 17 ಗುರುವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ವರ್ಷ ಋತು, ಕರ್ಕಾಟಕ ಮಾಸ, ಮಹಾನಕ್ಷತ್ರ: ಆಶ್ಲೇಷಾ, ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ, ವಾರ: ಗುರು, ತಿಥಿ: ಪ್ರತಿಪತ್, ನಿತ್ಯನಕ್ಷತ್ರ: ಮೇಘಾ, ಯೋಗ: ಪರಘ, ಕರಣ: ಬವ, ಸೂರ್ಯೋದಯ ಬೆಳಗ್ಗೆ 06 ರಿಂದ 19 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 53 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 02:10 ರಿಂದ 03:45ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 06:20 ರಿಂದ 07:54ರ ವರೆಗೆ, ಗುಳಿಕ ಕಾಲ ಬೆಳಗ್ಗೆ 09:28 ರಿಂದ11:02ರ ವರೆಗೆ.
ಧನು ರಾಶಿ: ವೃತ್ತಿಯ ಸ್ಥಳದಲ್ಲಿ ನೀವು ಇಂದು ಖುಷಿಯಿಂದ ಇರುವಿರಿ. ನೀವಾಡುವ ಮಾತು ಸರಳವೂ ಸ್ಪಷ್ಟವಾಗಿ ಆಗಿರಲಿ. ಆಗ ಮಾತ್ರ ನಿಮ್ಮ ಮಾತನ್ನು ಆಲಿಸುವರು. ಆಸ್ತಿಯನ್ನು ಸ್ವಾಯತ್ತ ಮಾಡಿಕೊಳ್ಳಲು ಏನಾದರೂ ತಂತ್ರವನ್ನು ಹೂಡುವಿರಿ. ಅಧ್ಯಾತ್ಮದ ಕಡೆ ಒಲವು ಅಧಿಕವಾಗಿ ಕಾಣುವುದು. ಪ್ರೇಮ ವಿವಾಹವು ನಿಮಗೆ ಇಷ್ಟವಾಗದು. ಮನೆಯ ಜವಾಬ್ದಾರಿಯು ಬಹಳ ಬೇಗ ಬಂದಿದ್ದು ನಿಮ್ಮ ಎಲ್ಲ ಕ್ರಿಯಾಶೀಲತೆಯನ್ನು ಸದ್ಯ ನಿಲ್ಲಿಸಬೇಕಾಗುವುದು. ನಿಮ್ಮ ವಸ್ತುಗಳನ್ನು ಕಳೆದುಕೊಂಡಿದ್ದು ಗೊತ್ತಾಗದೇಹೋಗುವುದು. ಸಮಾರಂಭಗಳಿಗೆ ಭೇಟಿಯು ಅನಿರೀಕ್ಷಿತವವೂ ಆಗಬಹುದು.
ಮಕರ ರಾಶಿ: ನಿಮ್ಮ ಅಧಿಕ ಶ್ರಮದಿಂದ ನಿಮಗೇ ಯಶಸ್ಸು ಸಿಗುವುದು. ಸ್ವಲ್ಪಮಟ್ಟಿಗೆ ಆಯಾಸವೂ ಆಗುವುದು. ಪುಣ್ಯಕ್ಷೇತ್ರಗಳ ದರ್ಶನದ ಬಗ್ಗೆ ನೀವು ಹೆಚ್ಚು ಉತ್ಸುಕರಾಗಿ ಇರುವಿರಿ. ನಿಮ್ಮ ಕಡೆಯಿಂದ ಆದ ತಪ್ಪಿಗೆ ಕ್ಷಮೆಯನ್ನು ಯಾಚಿಸಿ. ಸರಳವಾದ ಕಾರ್ಯವನ್ನು ಕಷ್ಟವಾಗಿಸಿಕೊಳ್ಳುವುದು ಬೇಡ. ನೀವು ಕುಟುಂಬದ ವಿಚಾರದಲ್ಲಿ ತೆಗೆದುಕೊಂಡ ತೀರ್ಮಾನವು ಇತರರಿಗೂ ಸರಿ ಎನಿಸಬಹುದು. ಆರೋಗ್ಯದ ಹೆಚ್ಚು ಗಮನವಿರಲಿ. ಹೊಸ ಸಂಬಂಧದಲ್ಲಿ ನಿಮಗೆ ಆಸಕ್ತಿಯು ಹೆಚ್ಚಿರುವುದು. ನಿಮಗೆ ಬರುವ ಜವಾಬ್ದಾರಿಯನ್ನು ಅಕಾರಣವಾಗಿ ತಳ್ಳಿಹಾಕುವಿರಿ. ಗಣ್ಯರ ಭೇಟಿಯು ಸಂತೋಷವನ್ನು ನೀಡುವುದು.
ಕುಂಭ ರಾಶಿ: ಮನಸ್ಸಿಗೆ ಅಹಿತಕರ ಘಟನೆಗಳು ತೊಂದರೆಯನ್ನು ತರಬಹುದು. ಯಾರ ಮಾತನ್ನೇ ಕೇಳುವುದಿದ್ದರೂ ನಿಮ್ಮದಾದ ಪೂರ್ವಯೋಜನೆ ಇರಲಿ. ನಿಮ್ಮ ಕಷ್ಟಕ್ಕೆ ಯಾರೂ ಬರದಿರುವುದು ನಿಮಗೆ ಬೇಸರವನ್ನು ತರಿಸಬಹುದು. ಮನೆಯಿಂದ ಅನಿರೀಕ್ಷಿತ ಸುದ್ದಿಯೊಂದು ಬರಬಹುದು. ನಿಮ್ಮ ಸಾಮರ್ಥ್ಯದ ಮೇಲೆ ನಿಮಗೆ ಪೂರ್ಣವಿಶ್ವಾಸವು ಇರದು. ತಂದೆ ಹಾಗೂ ತಾಯಿಗಳ ಆಶೀರ್ವಾದವೇ ನಿಮಗೆ ಬಲವನ್ನು ತಂದುಕೊಡುವುದು. ಯಾವುದಾದರೂ ಆಮಿಷಕ್ಕೆ ಬಲಿಯಾಗಿ ಕಾನೂನಿಗೆ ವಿರುದ್ಧವಾದ ಕಾರ್ಯದಲ್ಲಿ ತೊಡಗುವಿರಿ. ಪತ್ನಿಯ ಭಾವಕ್ಕೆ ಸ್ಪಂದಿಸಲು ನಿಮಗೆ ಇಂದು ಆಗದು. ಇದು ಮನಸ್ತಾಪಕ್ಕೆ ಕಾರಣವಾದೀತು.
ಮೀನ ರಾಶಿ: ಉನ್ನತಸ್ಥಾನದ ಪ್ರಾಪ್ತಿಗೆ ಕೆಲವು ಅಡೆತಡೆಗಳು ಎದುರಾಗಬಹುದು. ಆಪ್ತರ ನಡುವೆ ಸಂದೇಹವು ಬರುವ ಸಂಭವವಿದೆ. ಯಾರದೋ ಮಾತಿಗೆ ನಿಮ್ಮ ಪ್ರತಿಕ್ರಿಯೆ ಸಲ್ಲದು. ನೂತನ ಗೃಹನಿರ್ಮಾಣದ ಕಾರ್ಯಕ್ಕೆ ದೊಡ್ಡ ಯೋಜನೆಯನ್ನು ರೂಪಿಸುವಿರಿ. ನಿಮಗೆ ಸಿಗಬೇಕಾದ ವಸ್ತುಗಳನ್ನು ಹಕ್ಕಿನಿಂದ ಪಡೆಯುವಿರಿ. ನಿಮ್ಮ ಉದ್ಯೋಗವು ಅನ್ಯರ ಕಿವಿಕಚ್ಚುವಿಕೆಯಿಂದ ಕಳೆದುಕೊಳ್ಳುವಿರಿ. ಪಿತ್ರಾರ್ಜಿತ ಆಸ್ತಿಯನ್ನು ಸಹೋದರನಿಗೆ ಕೊಟ್ಟು ಮನೆಯಿಂದ ದೂರ ಹೋಗುವಿರಿ. ಶತ್ರುಗಳ ತೊಂದರೆಯನ್ನು ತಡೆಯಲು ಕಾನೂನಿಗೆ ಶರಣಾಗುವಿರಿ.