Horoscope: ರಾಶಿಭವಿಷ್ಯ, ಈ ರಾಶಿಯವರು ಇಂದು ಗೊಂದಲದ ತೀರ್ಮಾನ ಕೈಗೊಳ್ಳುವುದು ಬೇಡ

ನೀವು ಧನು, ಮಕರ, ಕುಂಭ, ಮೀನ ರಾಶಿಯವರಾಗಿದ್ದು, ಬೆಳಗ್ಗೆ ಎದ್ದು ಕೂಡಲೇ ನಿಮ್ಮ ಭವಿಷ್ಯದ ಬಗ್ಗೆ ತಿಳಿದುಕೊಳ್ಳುವ ಅಭ್ಯಾಸ ಇದೆಯೇ? ಹಾಗಿದ್ದರೆ ಇಂದಿನ (2023 ನವೆಂಬರ್​ 21) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.

Horoscope: ರಾಶಿಭವಿಷ್ಯ, ಈ ರಾಶಿಯವರು ಇಂದು ಗೊಂದಲದ ತೀರ್ಮಾನ ಕೈಗೊಳ್ಳುವುದು ಬೇಡ
ದಿನಭವಿಷ್ಯImage Credit source: iStock Photo
Follow us
| Edited By: Rakesh Nayak Manchi

Updated on: Nov 21, 2023 | 12:45 AM

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ನವಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ವೃದ್ಧಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 37 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:09 ರಿಂದ 04:34ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:28 ರಿಂದ 10:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:18 ರಿಂದ 01:44ರ ವರೆಗೆ.

ಧನು ರಾಶಿ: ಅಂದುಕೊಂಡ ಕೆಲಸವನ್ನು ಪೂರೈಸಲು ನಿಮಗೆ ಸಮಸ್ಯೆಯು ಬರಬಹುದು. ಸ್ವಲ್ಪ ನಿಮ್ಮ‌ ಧೈರ್ಯವು ಕುಂದಬಹುದು. ಸ್ವಂತ ಉದ್ಯಮದ ಕಾರಣಕ್ಕೆ ಹೊರಗೆ ಹೋಗಬೇಕಾಗುವುದು. ಸರ್ಕಾರಕ್ಕೆ ಕೊಡಬೇಕಾದ ಹಣವನ್ನು ಇಂದು ಕೊಡಲಿದ್ದೀರಿ. ಪ್ರಭಾವೀ ವ್ಯಕ್ತಿಗಳನ್ನು ಎದುರು ಹಾಕಿಕೊಳ್ಳುವ ಸಂದರ್ಭವು ಬರಬಹುದು. ನೂತನ ಅಧಿಕಾರವು ಪ್ರಾಪ್ತವಾಗಲಿದೆ. ಮೇಲಧಿಕಾರಿಹಳ ಜೊತೆ ಯೋಜನೆಯ ಕುರಿತು ಚರ್ಚೆ ನಡೆಸುವಿರಿ. ಉದ್ಯೋಗದ ಕಿರಿಕಿರಿಯನ್ನು ನೀವು ಸಹಿಸಲಾರಿರಿ. ಯಂತ್ರಗಳ ಮಾರಾಟ ಮಾಡುವವರಿಗೆ ಉತ್ತಮ ಲಾಭವಿರಲಿದೆ. ಕೆಲಸದಲ್ಲಿ ಆಸಕ್ತಿ ಇದ್ದರೂ ನಿಮ್ಮನ್ನು ಟೀಕಿಸಿದ ಕಾರಣ ಹಿಂದೇಟು ಹಾಕುವಿರಿ. ಆಹಾರಕ್ಕೋಸ್ಕರ ಅಧಿಕ ವೆಚ್ಚವನ್ನು ನೀವು ಮಾಡುವಿರಿ. ನಟರ ನಿರೀಕ್ಷೆಯು ಸತ್ಯವಾಗುವುದು. ಸಂಬಂಧಗಳ ನಡುವೆ ಪರಸ್ಪರ ಸೌಹಾರ್ದವನ್ನು ತಂದುಕೊಳ್ಳುವಿರಿ.

ಮಕರ ರಾಶಿ: ಪ್ರೀತಿಪಾತ್ರರನ್ನು ಆಕಸ್ಮಿಕವಾಗಿ ಭೇಟಿ ಮಾಡುವಿರಿ. ಖಾಸಗಿ ಉದ್ಯೋಗದಲ್ಲಿ ನಿಮಗೆ ಸ್ತ್ರೀಯರಿಂದ ಸಹಕಾರವು ಲಭ್ಯವಾಗುವುದು. ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ. ತಂದೆಯ ಜೊತೆ ವಾಗ್ವಾದ ಮಾಡಿಕೊಳ್ಳುವಿರಿ. ವ್ಯವಹಾರದಲ್ಲಿ ಪಾರದರ್ಶಕತೆಯನ್ನು ತೋರಿಸಬೇಕಾಗುವುದು. ಸಹೋದರಿಯರಿಗೆ ಉಡುಗೊರೆ ನೀಡಿ ಸಂತೋಷಪಡಿಸುವಿರಿ. ಹಿತಶತ್ರುಗಳು ನಿಮ್ಮ ಸ್ಥಿತಿಯನ್ನು ಕಂಡು ಒಳಗೊಳಗೇ ಸಂತೋಷಪಡುವರು. ಸ್ಥಿರಾಸ್ತಿಯ ವಿಚಾರದಲ್ಲಿ ಗೊಂದಲು ಇರಲಿದೆ. ಇಂದು ಎಲ್ಲರಿಂದ ಪ್ರತ್ಯೇಕವಾಗಿ ಇರಲು ಇಷ್ಟಪಡುವಿರಿ. ನಿಮ್ಮ ಸಾಮರ್ಥ್ಯವನ್ನು ಇತರರು ಪ್ರಶಂಸಿಸುವರು. ಸಂಪತ್ತಿನ ಹರಿವನ್ನು ನೋಡಿ ಖರ್ಚನ್ನು ನಿರ್ಧರಿಸಿ.

ಕುಂಭ ರಾಶಿ: ನೀವು ಸುಲಭವಾಗಿ ಯಾರನ್ನೂ ನಂಬಲಾರಿರಿ. ಕೆಲವರ ಮಾತು ಉದ್ಧಟತನವೆನಿಸಬಹುದು. ಖರ್ಚಿನಿಂದ ಮನಸ್ತಾಪವಾಗಬಹುದು. ಅಪರೂಪದ ವ್ಯಕ್ತಿಗಳನ್ನು ಭೇಟಿ ಮಾಡುವ ಸಂದರ್ಭವು ತಪ್ಪಿಹೋಗಬಹುದು. ಉಪಕಾರದ ಸ್ಮರಣೆಯನ್ನು ನೀವು ಬಿಡುವಿರಿ. ಇಂದಿನ ದುಡಿಮೆಯು ಕಷ್ಟವೆನಿಸಬಹುದು. ವಿದ್ಯಾರ್ಥಿಗಳು ಪರೀಕ್ಷೆಯತ್ತ ಗಮನ ಕೊಡಬೇಕಾಗುವುದು. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ಪುಣ್ಯಸ್ಥಳಗಳ ಭೇಟಿ ಮಾಡವಿರಿ. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಬಹುದು. ಚಂಚಲವಾದ ಮನಸ್ಸನ್ನು ನಿಶ್ಚಲಗೊಳಿಸಲು ಪ್ರಯತ್ನಿಸುವಿರಿ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನಿಮಗೆ ಕೆಲವು ತಂತ್ರಗಳನ್ನು ಕೇಳಿ ಪಡೆಯುವಿರಿ. ಬಂಧುಗಳ ಜೊತೆ ಓಡಾಟವು ಅಧಿಕವಾಗಿ ಇರುವುದು.

ಮೀನ ರಾಶಿ: ಸಿಕ್ಕ ಹುದ್ದೆಯನ್ನು ಸ್ವೀಕರಿಸುವುದು ಉತ್ತಮ.‌ ನಿಮ್ಮ ಈ ಸ್ವಭಾವವು ಇತರರಿಗೂ ಇಷ್ಟವಾದೀತು. ‌ಆಸೆಯನ್ನು ಈಡೇರಿಸಿಕೊಂಡು ಸಂತೋಷಪಡುವಿರಿ. ದಾನದಲ್ಲಿ ಹೆಚ್ಚಿನ ಶ್ರದ್ಧೆಯನ್ನು ತೋರುವಿರಿ. ನಿಮ್ಮ ಬಗ್ಗೆ ಒಳ್ಳೆಯ ಭಾವವು ಬರಬಹುದು. ಸಂಗಾತಿಯ ಇಂದಿನ ಮಾತುಕತೆಗಳು ವಾಗ್ವಾದಕ್ಕೆ ತಿರುಗಬಹುದು. ಆಕಸ್ಮಿಕ ಧನಪ್ರಾಪ್ತಿಯಿಂದ ಸಂತೋಷವು ಇರುವುದು. ವಿದ್ಯುತ್ ಉಪಕರಣಗಳ ಉದ್ಯಮದಿಂದ ಲಾಭವಾಗಲಿದೆ. ಉದ್ಯೋಗದ ಸ್ಥಳದಲ್ಲಿ ಒತ್ತಡ ಅನಿರೀಕ್ಷಿತವಾಗಿ ಹೆಚ್ಚುವುದು. ಗೊಂದಲದ ತೀರ್ಮಾನವು ಬೇಡ. ಎಲ್ಲವೂ ಅಂದುಕೊಂಡಂತೆ ಆಗದು ಎಂಬುದು ನಿಮ್ಮ ವಿಚಾರದಲ್ಲಿ ಸತ್ಯವಾಗುವುದು. ನಿಮ್ಮ ಆರಂಭವೇ ಸರಿಯಾಗದೇ ಇರುವುದರಿಂದ ಗುರಿಯೂ ತಪ್ಪಬಹುದು. ಗುರು, ಹಿರಿಯರಲ್ಲಿ ಭಕ್ತಿ ಉಂಟಾಗಬಹುದು.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ನದಿಯಲ್ಲಿ ಕಳಕೊಂಡಿದ್ದ ಸರ ಮೂಕಾಂಬಿಕೆಯ ಬೇಡಿದ್ದಕ್ಕೆ ತಕ್ಷಣ ಸಿಕ್ತು!
ನದಿಯಲ್ಲಿ ಕಳಕೊಂಡಿದ್ದ ಸರ ಮೂಕಾಂಬಿಕೆಯ ಬೇಡಿದ್ದಕ್ಕೆ ತಕ್ಷಣ ಸಿಕ್ತು!
ಎಂಟು ಜನರ ಮೇಲೆ ಎಲಿಮಿನೇಷನ್​ ತೂಗುಗತ್ತಿ; ಯಾರಾಗಲಿದ್ದಾರೆ ಔಟ್?
ಎಂಟು ಜನರ ಮೇಲೆ ಎಲಿಮಿನೇಷನ್​ ತೂಗುಗತ್ತಿ; ಯಾರಾಗಲಿದ್ದಾರೆ ಔಟ್?
ಈ ರೀತಿಯ ಸಿಕ್ಸ್ ರಿಂಕು ಸಿಂಗ್ ಮಾತ್ರ ಸಿಡಿಸಲು ಸಾಧ್ಯ: ರೋಚಕ ವಿಡಿಯೋ
ಈ ರೀತಿಯ ಸಿಕ್ಸ್ ರಿಂಕು ಸಿಂಗ್ ಮಾತ್ರ ಸಿಡಿಸಲು ಸಾಧ್ಯ: ರೋಚಕ ವಿಡಿಯೋ
ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ
ಕೊಪ್ಪಳ: ಹೊತ್ತಿ ಉರಿದ ಮೂರು ಅಂತಸ್ತಿನ ಜ್ಯುವೆಲ್ಲರಿ ಶಾಪ್ ಕಟ್ಟಡ
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​