Horoscope 21 Nov: ದಿನಭವಿಷ್ಯ, ಸಣ್ಣ ಸಣ್ಣ ವಿಚಾರಗಳೂ ದೊಡ್ಡ ಮನಸ್ತಾಪಕ್ಕೆ ಕಾರಣವಾಗಬಹುದು

ಇಂದಿನ ರಾಶಿ ಭವಿಷ್ಯ ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಹಾಗಾದರೆ ಇಂದಿನ (2023 ನವೆಂಬರ್​ 21) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

Horoscope 21 Nov: ದಿನಭವಿಷ್ಯ, ಸಣ್ಣ ಸಣ್ಣ ವಿಚಾರಗಳೂ ದೊಡ್ಡ ಮನಸ್ತಾಪಕ್ಕೆ ಕಾರಣವಾಗಬಹುದು
ಪ್ರಾತಿನಿಧಿಕ ಚಿತ್ರ
Follow us
| Edited By: ಗಂಗಾಧರ​ ಬ. ಸಾಬೋಜಿ

Updated on: Nov 21, 2023 | 12:02 AM

ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚೆನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದರೆ 2023 ನವೆಂಬರ್​​​ 21 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಮಂಗಳ, ತಿಥಿ: ನವಮೀ, ನಿತ್ಯನಕ್ಷತ್ರ: ಶತಭಿಷಾ, ಯೋಗ: ವೃದ್ಧಿ, ಕರಣ: ಬಾಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 37 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 03:09 ರಿಂದ 04:34ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 09:28 ರಿಂದ 10:53ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 12:18 ರಿಂದ 01:44ರ ವರೆಗೆ.

ಮೇಷ ರಾಶಿ: ಯಾರನ್ನೂ ನಿಮ್ಮ ದೃಷ್ಟಿಯಿಂದ ಅಳೆಯಲು ಆಗದು. ಅದಕ್ಕಾಗಿ ಸಮಯವನ್ನೂ ವ್ಯರ್ಥ ಮಾಡುವುದು ಬೇಡ. ಸಮಯದ ಹೊಂದಾಣಿಕೆ ಅವಶ್ಯಕ. ಪ್ರೇಯಸಿಯ ನೆನಪನ್ನು ನಿಯಂತ್ರಿಸುವುದು ಕಷ್ಟವಾಗಬಹುದು. ವಾಹನದಲ್ಲಿ ಸಂಚಾರಕ್ಕೆ ತೊಂದರೆ ಬರಬಹುದು. ನೀವು ಅಂದುಕೊಂಡಷ್ಟು ಸರಳ ಕೆಲಸಗಳು ಇಂದು ಆಗದು. ಕೆಲವು ಸಂಗತಿಯನ್ನು ಅನುಭವಿಸದೇ ಇರಲಾಗದು. ಕಾರಣವಿಲ್ಲದೇ ಕೋಪವು ಬರುವುದು. ಅತಿಯಾದ ಮೋಹದಿಂದ ಹೊರಬರುವಿರಿ. ಶಿಕ್ಷಣಕ್ಕೆ ಸಂಬಂಧಿಸಿದಂತೆ ನಿಮಗೆ ಸಮಾರಂಭಗಳಿಗೆ ಆಹ್ವಾನವು ಬರಬಹುದು. ಬಹು ದಿನಗಳ ಅನಂತರ ಮನೆಯವರ ಜೊತೆ ಕಾಲ ಕಳೆಯುವ ಅವಕಾಶ ಸಿಗುವುದು.‌ ದಾಂಪತ್ಯದಲ್ಲಿ ಪರಸ್ಪರ ಕಾದಾಟವು ಮಿತಿಮೀರಬಹುದು. ನಿಮ್ಮ‌ ಮೌನವು ಚಿಂತೆಗೀಡುಮಾಡಬಹುದು. ಸಹೋದರರಿಗೆ ಉಡುಗೊರೆಯನ್ನು ಕೊಟ್ಟು ಖುಷಿಪಡಿಸುವಿರಿ.

ವೃಷಭ ರಾಶಿ: ಎಲ್ಲರ‌‌‌ ಮೇಲೂ ಸಿಟ್ಟಾಗುವಿರಿ. ಮನಸ್ಸು ಸ್ತಿಮಿತವನ್ನು ತಪ್ಪಬಹುದು. ಸಹನೆಯು ನಿಮ್ಮ ಅಸ್ತ್ರವಾಗಬೇಕಾಗಬಹುದು. ಸಂಗಾತಿಯ ಸ್ವಭಾವವನ್ನು ಸುಲಭದಿಂದ ತಿಳಿಯಲು ಸಾಧ್ಯವಾಗದು. ಅತಿಯಾದ ಬಂಧನವೂ ನಿಮಗೆ ಕಿರಿಕಿರಿ ಎನಿಸಬಹುದು. ವೃತ್ತಿಯಲ್ಲಿ ನಿಮ್ಮ ಮೇಲೆ ಅಭಿಮಾನವು ಹೆಚ್ಚಾಗಬಹುದು. ಸ್ನೇಹಿತರ ಜೊತೆ ಸಮಯವು ವ್ಯರ್ಥವಾದೀತು. ನಿಮ್ಮ ನಂಬಿಕೆಗೆ ತೊಂದರೆಯಾಗುವುದು.‌ ಹಣಕಾಸಿನ ವೃದ್ಧಿಗೆ ಮಾರ್ಗೋಪಾಯ ಅಗತ್ಯ. ಕೂಡಿಟ್ಟ ಹಣಕ್ಕೆ ಸರಿಯಾದ ಸಮಯವು ಸಿಗುವುದು.‌ ನೀವು ಬಯಸಿದ ವಸ್ತುವು ಯಾವುದೋ ರೂಪದಲ್ಲಿ ನಿಮ್ಮನ್ನು ಬಂದು ಸೇರಬಹುದು.‌ ಧಾರ್ಮಿಕ ಶ್ರದ್ಧೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಸರ್ಕಾರದ ಕೆಲಸಕ್ಕಾಗಿ ಓಡಾಡುವುದು ನಿಮಗೆ ಬೇಸರ ತಂದೀತು. ಖುಷಿಗೆ ದಾರಿಯನ್ನು ಹುಡುಕುವಿರಿ.

ಮಿಥುನ ರಾಶಿ: ಸರ್ಕಾರದ ಕೆಲಸದಲ್ಲಿ ಹಿನ್ನಡೆಯಾಗಲಿದೆ. ಪ್ರಾಮಾಣಿಕತೆಯಿಂದ ಕೆಲವು ನಷ್ಟವೂ ಆದೀತು. ನಿಮ್ಮ ಪ್ರಯತ್ನಕ್ಕೆ ಬೆಲೆ ಕಟ್ಟಲಾಗದು ಎಂದು ಇತರರಿಗೆ ತಿಳಿಯಬಹುದು. ಮಕ್ಕಳ‌ ಮೇಲೆ‌ ಪ್ರೀತಿ ಅಧಿಕವಾಗುವುದು. ಕಾರ್ಯದ ಬಗ್ಗೆ ಕಛೇರಿಯನ್ನು ಅಧಿಕಾರಿಯ ಜೊತೆ ಚರ್ಚಿಸುವಿರಿ. ಬೇಡದ ಸಲಹೆಯನ್ನು ಕೊಡಬಹುದು. ವಿವಾಹದಲ್ಲಿ ನಿರಾಸಕ್ತಿಯು ಬರಬಹುದು. ಹಿರಿಯರ ಕೋಪಕ್ಕೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸ್ವತಂತ್ರವಾಗಿರುವುದು ನಿಮಗೆ ಇಷ್ಟದ ಸಂಗತಿಯಾಗಲಿದೆ. ಅತಿಥಿಗಳನ್ನು ಸತ್ಕರಿಸುವಿರಿ. ಆರ್ಥಿಕತೆಯ ಮೇಲೆ ಹೆಚ್ಚು ಒಲವು ಉಂಟಾಗುವುದು. ಸ್ತ್ರೀಯರಿಂದ ಕೆಲವು ಸಹಾಯವು ಸಿಗುವುದು. ಮಕ್ಕಳನ್ನು‌ ಮನೆಯಿಂದ ಹೊರಗೆ ಕಳುಹಿಸಿ ಓದಿಸುವುದು ಸೂಕ್ತವಾದೀತು.‌ ನಿಮ್ಮ ತಪ್ಪನ್ನು ನೀವು ಗಮನಿಸಿಕೊಳ್ಳುವುದು ಉತ್ತಮ.

ಕಟಕ ರಾಶಿ: ಹೂಡಿಕೆಯ ವಿಚಾರದಲ್ಲಿ ಗೊಂದಲವು ಇರುವುದು. ವಾಣಿಜ್ಯದ ಉದ್ಯಮವು ಲಾಭವನ್ನು ತಂದುಕೊಡುವುದು. ನಿಮ್ಮ ಕೆಲಸಕ್ಕೆ ಹಣ ದೊರಕುವುದು ಎಂಬ ನಿರೀಕ್ಷೆಯು ಇರುವುದು. ತಾಯಿಯ ಅನಾರೋಗ್ಯಕ್ಕೆ ಚಿಕಿತ್ಸೆ ಕೊಡಲು ಓಡಾಡಬೇಕಾಗಬಹುದು. ಯಾರದೋ ಮಾತಿನಿಂದ ಮನೆಯಲ್ಲಿ ಅಸಮಾಧಾನದ ವಾತಾವರಣವು ಇರುವುದು. ನಿಮ್ಮ ಸ್ವಭಾವಗಳು ನಿಮ್ಮವರಿಗೆ ಇಷ್ಟವಾಗದೇ ಹೋಗುವುದು. ಕುಟುಂಬದ ಕೆಲವು ವಿಚಾರವು ನಿಮಗೆ ಹಿಡಿಸದೇಹೋದೀತು. ನಿಮ್ಮ‌ ಮಾತುಗಳಿಗೆ ನೌಕರಿಂದ ಬೆಲೆ ಸಿಗದು. ಸಂಬಂಧವನ್ನು ಆತ್ಮೀಯಗೊಳಿಸಿಕೊಳ್ಳಲು ಪ್ರಯತ್ನಪಡುವಿರಿ. ಉದ್ಯೋಗದ ಸ್ಥಳದಲ್ಲಿ ಭಡ್ತಿಯ ನಿರೀಕ್ಷೆ ಇರುವುದು. ಮಾತನ್ನು ಅಪಾರ್ಥ ಮಾಡಿಕೊಳ್ಳುವ ಸಾಧ್ಯತೆ ಇದೆ. ನಿಮಗೆ ಸಿಗುವ ಗೌರವದಲ್ಲಿ ವ್ಯತ್ಯಾಸವಾಗಿ ಸಿಟ್ಟು ಬರಬಹುದು.

ಸಿಂಹ ರಾಶಿ: ಮಾತಿನಿಂದ ಪರಸ್ಪರ ಕಾದಾಟವಾಗಬಹುದು. ಸಣ್ಣ ಸಣ್ಣ ವಿಚಾರಗಳೂ ದೊಡ್ಡ ಮನಸ್ತಾಪಕ್ಕೆ ಕಾರಣವಾಗಬಹುದು. ನಿಮ್ಮ ಸ್ವಂತಿಕೆಯನ್ನು ಉಳಿಸಿಕೊಳ್ಳುವ ಅನಿವಾರ್ಯತೆ ಇರಲಿದೆ. ದೂರದ ಬಂಧುಗಳ ಆಗಮನವು ಆಗಲಿದೆ. ನಿಮ್ಮ ಆರ್ಥಿಕ ದೌರ್ಬಲ್ಯವನ್ನು ಆಡುಕೊಳ್ಳಬಹುದು. ನಿಮಗೆ ಗೊತ್ತಿಲ್ಲದೇ ಚರಾಸ್ತಿಯು ಇಲ್ಲವಾಗಬಹುದು. ಸಕಾಲಕ್ಕೆ ಯಾವದೂ ಆಗದೇ ಎಲ್ಲವೂ ಅಸ್ತವ್ಯಸ್ತವಾಗಲಿದೆ. ಇಷ್ಟವಿಲ್ಲದಿದ್ದರೂ ಕೆಲಸವನ್ನು ಮಾಡಬೇಕಾದೀತು. ಉದ್ವಿಗ್ನತೆಗೆ ದಾರಿ ಮಾಡಿಕೊಡದೇ ಸಮಚಿತ್ತದಲ್ಲಿ ಇರುವಂತೆ ನೋಡಿಕೊಳ್ಳಿ. ನಿಮ್ಮ ಇರುವಿಕೆಯನ್ನು ತೋರಿಸುವ ಪ್ರಯತ್ನ ಮಾಡುವಿರಿ. ನೌಕರರ ವಿಷಯದಲ್ಲಿ ಕೋಪಗೊಳ್ಳುವ ಸನ್ನಿವೇಶ ಬರಬಹುದು. ನಿಮ್ಮ ಕೈಲಾಗದು ಎಂದು ಕೈಕಟ್ಟಿ ಕುಳಿತುಕೊಳ್ಳುವುದು ಬೇಡ, ಪ್ರಯತ್ನವು ಇರಲಿ. ನಿಮ್ಮನ್ನು ಯಾರಾದರೂ ಆಕರ್ಷಿಸಿಯಾರು‌.

ಕನ್ಯಾ ರಾಶಿ: ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸವನ್ನು ಪೂರ್ಣ ಮಾಡಲು ನಾನಾ ತೊಂದರೆಗಳು ಕಾಣಿಸಿಕೊಂಡೀತು. ಶತ್ರುಗಳ ಹುಡುಕಾಟದಲ್ಲಿ ಸಫಲರಾಗುವುದಿಲ್ಲ. ಕೆತ್ತನೆಯ ಕಲಾವಿದರಿಗೆ ಹೆಚ್ಚು ಬೇಡಿಕೆ ಬರಬಹುದು. ಪಕ್ಷಪಾತದಿಂದ ಕಲಹವಾಗುವುದು. ನೌಕರರ ವಿಚಾರದಲ್ಲಿ ನಿಮ್ಮ ವರ್ತನೆಯು ಸರಿಯಾಗಿರಲಿ. ನಿಮ್ಮದೇ ಆದ ಚಿಂತನೆಯಿಂದ ಕಾರ್ಯವನ್ನು ಮಾಡುವಿರಿ. ಬೌದ್ಧಿಕ ಕಸರತ್ತನ್ನು ಪ್ರದರ್ಶಿಸುವಿರಿ. ಒಂದೇ ರೀತಿಯಲ್ಲಿ ಜೀವನ ಸಾಗುವುದು ನಿಮಗೆ ಇಷ್ಟವಾಗದು. ಯಾವುದಕ್ಕೆ ಎಷ್ಟು ಸಮಯವನ್ನು ಕೊಡಬೇಕು ಎನ್ನುವುದನ್ನು ಪರೀಕ್ಷೆಯ ವಿದ್ಯಾರ್ಥಿಗಳು ನಿರ್ಧರಿಸಿ. ಭೂಮಿಯ ವ್ಯವಹಾರವು ಗೊಂದಲಮಯ ಆಗಬಹುದು. ಸ್ವಂತ ಉದ್ಯೋಗವನ್ನು ಮಾಡಬೇಕು ಎಂಬ ಚಿಂತನೆ ಹುಟ್ಟಿಕೊಳ್ಳಬಹುದು. ಪ್ರೀತಿಯನ್ನು ದೂರಮಾಡಿಕೊಳ್ಳಲಿದ್ದೀರಿ. ನಿಮ್ಮ ಮೇಲೆ ಅಸಂಬದ್ಧ ಮಾತುಗಳು ಕೇಳಿಬರುವುದು.

ತುಲಾ ರಾಶಿ: ಕಾರಣಾಂತರಗಳಿಂದ ಸ್ಥಗಿತವಾದ ಉದ್ಯೋಗವನ್ನು ಪುನಃ ಆರಂಭಿಸುವ ಆಲೋಚನೆ ಇರಲಿದೆ. ನಿಮ್ಮ ಬಗ್ಗೆ ಯಾರಾದರೂ ಅಂದುಕೊಂಡಾರು ಎನ್ನುವ ಹಿಂಜರಿಕೆಯು ಇರಲಿದೆ‌. ಉನ್ನತಮಟ್ಟದ ಅಧ್ಯಯನವು ಮುಗಿಯುತ್ತಿರುವುದು ನಿಮಗೆ ಹೆಮ್ಮೆ ಎನಿಸುವುದು. ಸಂಗಾತಿಯ ಮಾತಿನಿಂದ ಬೇಸರವಾಗಲಿದೆ. ನಿಮಗೆ ಯಾವ ಸಂಬಂಧವೇ ಇಲ್ಲದಿದ್ದರೂ ಅಪವಾದವು ಬರಲಿದೆ. ಸಮಯಪಾಲನೆಯಿಂದ ನಿಮ್ಮ ಕೆಲಸಗಳು ಸರಿಯಾಗುವುದು. ನೀರಿನಿಂದ ಭೀತಿಯು ಉಂಟಾಗುವುದು. ವಾಹನದ ಮೇಲಿನ ಪ್ರೀತಿ ವ್ಯಾಮೋಹವಾದೀತು. ನಿಮ್ಮ ಮಾತುಗಳಲ್ಲಿ ನಂಬಿಕೆ ಇಲ್ಲವಾದೀತು. ವೃತ್ತಿಯನ್ನು ಉತ್ಸಾಹದಿಂದ ಮಾಡುವಿರಿ. ಸಂಗಾತಿಯು ನಿಮಗೆ ಕೆಲವು ಉಪಯುಕ್ತ ಮಾತುಗಳನ್ನು ಹೇಳಬಹುದು. ಕಾರ್ಯದ ಒತ್ತಡವನ್ನು ನಿವಾರಿಸಿಕೊಳ್ಳಲು ಕೆಲವು ವಿಧಾನಗಳನ್ನು ಅನುಸರಿಸಿ.

ವೃಶ್ಚಿಕ ರಾಶಿ: ಆರ್ಥಿಕತೆಯ ದೃಷ್ಟಿಯಿಂದ ವಿದೇಶಪ್ರಯಾಣವನ್ನು ಮುಂದೂಡುವಿರಿ. ದಾಂಪತ್ಯದಲ್ಲಿ ಅನ್ಯೋನ್ಯತೆಯನ್ನು ಹಿರಿಯರ ಮೂಲಕ ತಂದುಕೊಳ್ಳಬೇಕಾಗುವುದು. ಮಹಿಳೆಯ ಕಾರಣದಿಂದ ನಿಮಗೆ ಧನನಷ್ಟವು ಆಗಬಹುದು. ಭೂಮಿಯನ್ನು ನಿಮ್ಮದಾಗಿಸಿಕೊಳ್ಳುವ ಪ್ರಯತ್ನವು ಸಫಲವಾಗುವುದು. ನಿಮಗೆ ಸಪ್ಪೆ ಎನಿಸಿದ ವಿಷಯವನ್ನು ಮುಂದುವರಿಸುವುದಿಲ್ಲ. ನಿಮಗೆ ಬರುವ ಪ್ರಶಂಸೆಯ ಮಾತನ್ನು ಅಲ್ಲಗಳೆಯುವಿರಿ. ಉದ್ಯೋಗದ ಒತ್ತಡದಿಂದ ನಿಮಗೆ ಅನಾರೋಗ್ಯದಿಂದ ಬಳಲುವಿರಿ. ಬರಬೇಕಾದ ಹಣವನ್ನು ಪಡೆದರೂ ಖರ್ಚಿಗೆ ದಾರಿ ತೆರೆದುಕೊಂಡು ಇರುವುದು. ಆದಾಯವನ್ನು ಹೆಚ್ಚಿಸಿಕೊಳ್ಳುವುದು ಅನಿವಾರ್ಯವಾದೀತು. ಆಸ್ತಿಯ ಕಲಹವನ್ನು ಮನೆಯಲ್ಲಿಯೇ ಇತ್ಯರ್ಥ ಮಾಡಿಕೊಳ್ಳಿ. ಕಲಾವಿದರಿಗೆ ಅವಕಾಶವು ಬರುವುದು. ವಿದೇಶದ ವ್ಯವಹಾರಕ್ಕೆ ಮತ್ತಷ್ಟು ಬಲ ಬರಬಹುದು. ಗೃಹನಿರ್ಮಾಣದ ರೂಪವನ್ನು ನಿರ್ಧರಿಸಿಕೊಳ್ಳುವಿರಿ.

ಧನು ರಾಶಿ: ಅಂದುಕೊಂಡ ಕೆಲಸವನ್ನು ಪೂರೈಸಲು ನಿಮಗೆ ಸಮಸ್ಯೆಯು ಬರಬಹುದು. ಸ್ವಲ್ಪ ನಿಮ್ಮ‌ ಧೈರ್ಯವು ಕುಂದಬಹುದು. ಸ್ವಂತ ಉದ್ಯಮದ ಕಾರಣಕ್ಕೆ ಹೊರಗೆ ಹೋಗಬೇಕಾಗುವುದು. ಸರ್ಕಾರಕ್ಕೆ ಕೊಡಬೇಕಾದ ಹಣವನ್ನು ಇಂದು ಕೊಡಲಿದ್ದೀರಿ. ಪ್ರಭಾವೀ ವ್ಯಕ್ತಿಗಳನ್ನು ಎದುರು ಹಾಕಿಕೊಳ್ಳುವ ಸಂದರ್ಭವು ಬರಬಹುದು. ನೂತನ ಅಧಿಕಾರವು ಪ್ರಾಪ್ತವಾಗಲಿದೆ. ಮೇಲಧಿಕಾರಿಹಳ ಜೊತೆ ಯೋಜನೆಯ ಕುರಿತು ಚರ್ಚೆ ನಡೆಸುವಿರಿ. ಉದ್ಯೋಗದ ಕಿರಿಕಿರಿಯನ್ನು ನೀವು ಸಹಿಸಲಾರಿರಿ. ಯಂತ್ರಗಳ ಮಾರಾಟ ಮಾಡುವವರಿಗೆ ಉತ್ತಮ ಲಾಭವಿರಲಿದೆ. ಕೆಲಸದಲ್ಲಿ ಆಸಕ್ತಿ ಇದ್ದರೂ ನಿಮ್ಮನ್ನು ಟೀಕಿಸಿದ ಕಾರಣ ಹಿಂದೇಟು ಹಾಕುವಿರಿ. ಆಹಾರಕ್ಕೋಸ್ಕರ ಅಧಿಕ ವೆಚ್ಚವನ್ನು ನೀವು ಮಾಡುವಿರಿ. ನಟರ ನಿರೀಕ್ಷೆಯು ಸತ್ಯವಾಗುವುದು. ಸಂಬಂಧಗಳ ನಡುವೆ ಪರಸ್ಪರ ಸೌಹಾರ್ದವನ್ನು ತಂದುಕೊಳ್ಳುವಿರಿ.

ಮಕರ ರಾಶಿ: ಪ್ರೀತಿಪಾತ್ರರನ್ನು ಆಕಸ್ಮಿಕವಾಗಿ ಭೇಟಿ ಮಾಡುವಿರಿ. ಖಾಸಗಿ ಉದ್ಯೋಗದಲ್ಲಿ ನಿಮಗೆ ಸ್ತ್ರೀಯರಿಂದ ಸಹಕಾರವು ಲಭ್ಯವಾಗುವುದು. ಧನವು ನಷ್ಟವಾದ ವಿಚಾರಗಳನ್ನು ಯಾರ ಬಳಿಯೂ ಹೇಳಲಾರಿರಿ. ತಂದೆಯ ಜೊತೆ ವಾಗ್ವಾದ ಮಾಡಿಕೊಳ್ಳುವಿರಿ. ವ್ಯವಹಾರದಲ್ಲಿ ಪಾರದರ್ಶಕತೆಯನ್ನು ತೋರಿಸಬೇಕಾಗುವುದು. ಸಹೋದರಿಯರಿಗೆ ಉಡುಗೊರೆ ನೀಡಿ ಸಂತೋಷಪಡಿಸುವಿರಿ. ಹಿತಶತ್ರುಗಳು ನಿಮ್ಮ ಸ್ಥಿತಿಯನ್ನು ಕಂಡು ಒಳಗೊಳಗೇ ಸಂತೋಷಪಡುವರು. ಸ್ಥಿರಾಸ್ತಿಯ ವಿಚಾರದಲ್ಲಿ ಗೊಂದಲು ಇರಲಿದೆ. ಇಂದು ಎಲ್ಲರಿಂದ ಪ್ರತ್ಯೇಕವಾಗಿ ಇರಲು ಇಷ್ಟಪಡುವಿರಿ. ನಿಮ್ಮ ಸಾಮರ್ಥ್ಯವನ್ನು ಇತರರು ಪ್ರಶಂಸಿಸುವರು. ಸಂಪತ್ತಿನ ಹರಿವನ್ನು ನೋಡಿ ಖರ್ಚನ್ನು ನಿರ್ಧರಿಸಿ.

ಕುಂಭ ರಾಶಿ: ನೀವು ಸುಲಭವಾಗಿ ಯಾರನ್ನೂ ನಂಬಲಾರಿರಿ. ಕೆಲವರ ಮಾತು ಉದ್ಧಟತನವೆನಿಸಬಹುದು. ಖರ್ಚಿನಿಂದ ಮನಸ್ತಾಪವಾಗಬಹುದು. ಅಪರೂಪದ ವ್ಯಕ್ತಿಗಳನ್ನು ಭೇಟಿ ಮಾಡುವ ಸಂದರ್ಭವು ತಪ್ಪಿಹೋಗಬಹುದು. ಉಪಕಾರದ ಸ್ಮರಣೆಯನ್ನು ನೀವು ಬಿಡುವಿರಿ. ಇಂದಿನ ದುಡಿಮೆಯು ಕಷ್ಟವೆನಿಸಬಹುದು. ವಿದ್ಯಾರ್ಥಿಗಳು ಪರೀಕ್ಷೆಯತ್ತ ಗಮನ ಕೊಡಬೇಕಾಗುವುದು. ಬಂಧುಗಳ ಮಾತು ನಿಮಗೆ ಕಿರಿಕಿರಿ ತರಿಸಬಹುದು. ಪುಣ್ಯಸ್ಥಳಗಳ ಭೇಟಿ ಮಾಡವಿರಿ. ನಿಮ್ಮ ಸೌಂದರ್ಯಕ್ಕೆ ಹೆಚ್ಚು ಮಹತ್ವವನ್ನು ಕೊಡುವಿರಿ. ಕುಟುಂಬದ ಜವಾಬ್ದಾರಿಯು ನಿಮಗೆ ಸಿಗಬಹುದು. ಚಂಚಲವಾದ ಮನಸ್ಸನ್ನು ನಿಶ್ಚಲಗೊಳಿಸಲು ಪ್ರಯತ್ನಿಸುವಿರಿ. ಆತ್ಮವಿಶ್ವಾಸವನ್ನು ಹೆಚ್ಚಿಸಿಕೊಳ್ಳಲು ನಿಮಗೆ ಕೆಲವು ತಂತ್ರಗಳನ್ನು ಕೇಳಿ ಪಡೆಯುವಿರಿ. ಬಂಧುಗಳ ಜೊತೆ ಓಡಾಟವು ಅಧಿಕವಾಗಿ ಇರುವುದು.

ಮೀನ ರಾಶಿ: ಸಿಕ್ಕ‌ ಹುದ್ದೆಯನ್ನು ಸ್ವೀಕರಿಸುವುದು ಉತ್ತಮ.‌ ನಿಮ್ಮ ಈ ಸ್ವಭಾವವು ಇತರರಿಗೂ ಇಷ್ಟವಾದೀತು. ‌ಆಸೆಯನ್ನು ಈಡೇರಿಸಿಕೊಂಡು ಸಂತೋಷಪಡುವಿರಿ. ದಾನದಲ್ಲಿ ಹೆಚ್ಚಿನ ಶ್ರದ್ಧೆಯನ್ನು ತೋರುವಿರಿ. ನಿಮ್ಮ ಬಗ್ಗೆ ಒಳ್ಳೆಯ ಭಾವವು ಬರಬಹುದು. ಸಂಗಾತಿಯ ಇಂದಿನ ಮಾತುಕತೆಗಳು ವಾಗ್ವಾದಕ್ಕೆ ತಿರುಗಬಹುದು. ಆಕಸ್ಮಿಕ ಧನಪ್ರಾಪ್ತಿಯಿಂದ ಸಂತೋಷವು ಇರುವುದು. ವಿದ್ಯುತ್ ಉಪಕರಣಗಳ ಉದ್ಯಮದಿಂದ ಲಾಭವಾಗಲಿದೆ. ಉದ್ಯೋಗದ ಸ್ಥಳದಲ್ಲಿ ಒತ್ತಡ ಅನಿರೀಕ್ಷಿತವಾಗಿ ಹೆಚ್ಚುವುದು. ಗೊಂದಲದ ತೀರ್ಮಾನವು ಬೇಡ. ಎಲ್ಲವೂ ಅಂದುಕೊಂಡಂತೆ ಆಗದು ಎಂಬುದು ನಿಮ್ಮ ವಿಚಾರದಲ್ಲಿ ಸತ್ಯವಾಗುವುದು. ನಿಮ್ಮ ಆರಂಭವೇ ಸರಿಯಾಗದೇ ಇರುವುದರಿಂದ ಗುರಿಯೂ ತಪ್ಪಬಹುದು. ಗುರು, ಹಿರಿಯರಲ್ಲಿ ಭಕ್ತಿ ಉಂಟಾಗಬಹುದು.

ಲೋಹಿತಶರ್ಮಾ – 8762924271 (what’s app only)

ತಾಜಾ ಸುದ್ದಿ
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ತಾವು ನೋಡಿದ ಕನ್ನಡ ಸಿನಿಮಾಗಳನ್ನು ಹೆಸರಿಸಿದ ಮಾಜಿ ಕ್ರಿಕೆಟಿಗ ಮುರಳೀಧರನ್
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ಎಸ್​ಪಿ ರೋಡ್​ನಲ್ಲಿ ರಸ್ತೆ ಗುಂಡಿ ವೀಕ್ಷಿಸಿದ ಡಿಸಿಎಂ ಡಿಕೆ ಶಿವಕುಮಾರ್​
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ನನ್ನ ಬಯೋಪಿಕ್ ನಿರ್ಮಾಣವಾಗೋದು ಇಷ್ಟವಿರಲಿಲ್ಲ: ಮುತ್ತಯ್ಯ ಮುರಳೀಧರನ್
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಬಿಗ್​ ಬಾಸ್​ ಮನೆಯಲ್ಲಿ ಗಮನ ಸೆಳೆಯುತ್ತಿದೆ ಮೈಕೆಲ್​ ಮಾತನಾಡುವ ಕನ್ನಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಪ್ರಧಾನಿ ನರೇಂದ್ರ ಮೋದಿಯವರ ಕೈ ಬಲಪಡಿಸಲು ಒಂದಾಗಿ ಹೋರಾಟ: ಹೆಚ್ ಡಿ ದೇವೇಗೌಡ
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಉಡುಪಿ: ಭಜನೆ ಹಾಡಿಗೆ ಹೆಜ್ಜೆ ಹಾಕಿದ ಗೋವು; ವಿಡಿಯೋ ವೈರಲ್​
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕನಕದಾಸ ಜಯಂತಿಯಲ್ಲಿ ಜನರೊಂದಿಗೆ ಡೊಳ್ಳು ಬಾರಿಸಿ ಕುಣಿದ ಸಚಿವ ಸಂತೋಷ್ ಲಾಡ್ 
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಕಾಂಗ್ರೆಸ್ ಅಧಿಕಾರದಲ್ಲಿ ಕಾನೂನು ವ್ಯವಸ್ಥೆ ಕುಲಗೆಟ್ಟು ಹೋಗಿದೆ: ಹೆಚ್​ಡಿಕೆ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಟಿವಿ9 ಡಿಜಿಟಲ್​ ವರದಿ ಫಲಶ್ರುತಿ: ಕಲಬುರಗಿ ಸರ್ಕಾರಿ ಶಾಲೆಯಲ್ಲೇ ಊಟ ಸಿದ್ಧ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ
ಅಯೋಧ್ಯೆಯಲ್ಲಿ ಮಹಾಮೃತ್ಯುಂಜಯ ಹೋಮ ಮಾಡಿದ ಕರ್ನಾಟಕ ತಂಡ