Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ಇಂದಿನ ಸೋಲು ನಿಮಗೆ ಪಾಠ ಕಲಿಸಲಿದೆ

ನಿಮ್ಮ ರಾಶಿ ಫಲ ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ. ನೀವು ಮೇಷ, ವೃಷಭ, ಮಿಥುನ, ಕಟಕ ರಾಶಿಯವರೇ? ಹಾಗಿದ್ದರೆ ಇಂದಿನ (ನವೆಂಬರ್​ 20) ಭವಿಷ್ಯದಲ್ಲಿ ನಿಮ್ಮ ರಾಶಿ ಫಲ ಹೇಗಿದೆ? ಲಾಭ, ನಷ್ಟ, ಶುಭ, ಅಶುಭ ಇದೆಯಾ? ಈ ಬಗ್ಗೆ ಮಾಹಿತಿ ಇಲ್ಲಿದೆ.

Horoscope: ರಾಶಿಭವಿಷ್ಯ, ಈ ರಾಶಿಯವರಿಗೆ ಇಂದಿನ ಸೋಲು ನಿಮಗೆ ಪಾಠ ಕಲಿಸಲಿದೆ
ಇಂದಿನ ದಿನಭವಿಷ್ಯImage Credit source: iStock Photo
Follow us
| Edited By: Rakesh Nayak Manchi

Updated on: Nov 20, 2023 | 12:15 AM

ಇಂದಿನ ರಾಶಿ ಭವಿಷ್ಯ (Horoscope) ಹೇಗಿದೆ? ಹಾಗೂ ಯಾವ ಸಮಯಕ್ಕೆ ಏನು ಮಾಡಬೇಕು ಮತ್ತು ಏನು ಮಾಡಬಾರದು? ಇದರ ಜೊತೆಗೆ ಪಂಚಾಂಗ ಹೇಗಿದೆ? ಎಂಬುದನ್ನು ಒಂದಷ್ಟು ಮಂದಿ ನೋಡುತ್ತಾರೆ. ಹಾಗಾದರೆ ಇಂದಿನ (2023 ನವೆಂಬರ್​ 20) ರಾಶಿ ಭವಿಷ್ಯದಲ್ಲಿ ಯಾರ ರಾಶಿ ಫಲ ಹೇಗಿದೆ, ಯಾರಿಗೆ ಲಾಭ ಕಾದಿದೆ, ಯಾರಿಗೆ ನಷ್ಟ ಕಾದಿದೆ ಹಾಗೂ ಯಾರಿಗೆ ಶುಭ, ಅಶುಭ? ಮಾಹಿತಿ ಇಲ್ಲಿದೆ.

ನಿತ್ಯಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ವಿಶಾಖಾ, ಮಾಸ: ಕಾರ್ತಿಕ, ಪಕ್ಷ: ಶುಕ್ಲ, ವಾರ: ಸೋಮ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಧನಿಷ್ಠಾ, ಯೋಗ: ಧ್ರುವ, ಕರಣ: ಭದ್ರ, ಸೂರ್ಯೋದಯ ಬೆಳಗ್ಗೆ 06 ಗಂಟೆ 36 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 05 ಗಂಟೆ 59 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 08:02 ರಿಂದ 09:27ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 10:53 ರಿಂದ ಮಧ್ಯಾಹ್ನ 12:18ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 01:43 ರಿಂದ 03:09ರ ವರೆಗೆ.

ಮೇಷ ರಾಶಿ: ಕಾರ್ಮಿಕರ‌ ಮೇಲೆ‌ ನಂಬಿಕೆ ಕಡಿಮೆ‌ ಆದೀತು. ಪಾಲುದಾರಿಕೆಯಲ್ಲಿ ಐಕಮತ್ಯದ ಕೊರತೆ ಕಾಣಿಸುವುದು. ನಿಮಗೆ ಸಂಬಂಧಿಸದ ವಿಚಾರಕ್ಕೆ ನೀವು ಮಧ್ಯ ಪ್ರವೇಶ ಮಾಡುವಿರಿ. ಪ್ರೀತಿಯಲ್ಲಿ ಅಂತರವು ಬಂದಂತೆ ತೋರಿದ್ದು ಮಾತುಕತೆಯಿಂದ ಅದನ್ನು ಸರಿ ಮಾಡಿಕೊಳ್ಳುವಿರಿ. ನಿಮ್ಮ ರಹಸ್ಯವು ಬೆಳಕಿಗೆ ಬರಬಬಹುದು ಎಂಬ ಭೀತಿಯು ಇರಲಿದೆ. ಇಂದಿನ ಕೆಲವು ಸಮಯವನ್ನು ಇನ್ನೊಬ್ಬರಿಗೆ ಮೀಸಲಿಡಬೇಕಾದೀತು. ಸಂಗಾತಿಯ ನೋವಿಗೂ ಸ್ಪಂದಿಸಲು ಕಷ್ಟವಾದೀತು. ಬರಬೇಕಾದ ಹಣವು ಮಧ್ಯದಲ್ಲಿ ನಿಂತಿದ್ದು ನಿಮಗೆ ಆತಂಕವಾಗಬಹುದು. ಮಕ್ಕಳ ತಿರುಗಾಟವನ್ನು ಕಡಿಮೆ ಮಾಡಲು ಹೇಳುವಿರಿ. ಸರಿಯಾದ ಸಮಯಕ್ಕೆ ಆಹಾರವನ್ನು ಸ್ವೀಕರಿಸಿ. ಪ್ರಯಾಣದ ಆಯಾಸವು ವಿಶ್ರಾಂತಿಯಿಂದ ದೂರಾಗುವುದು.

ವೃಷಭ ರಾಶಿ: ಹೊಸ ಮನೆಯ ಪ್ರವೇಶದಲ್ಲಿ‌ ನೀವು ಭಾಗಿಯಾಗುವಿರಿ. ಕೆಲವು ಸಮಸ್ಯೆಗಳನ್ನು ನೀವು ಪರಿಹಾರ ಮಾಡಿಕೊಳ್ಳುವಿರಿ. ರಾಜಕಾರಣಿಗಳು ಅಸ್ಥಿರ ಮನಸ್ಸಿನಲ್ಲಿ ಇರುವರು. ಅಧಿಕವಾಗಿರುವುದು. ಇಂದಿನ ಸೋಲು ನಿಮಗೆ ಪಾಠವಾಗುವುದು. ಪ್ರಪಂಚಜ್ಞಾನದ ಅಗತ್ಯತೆ ಹೆಚ್ಚಿವಿರುವಂತೆ ತೋರುತ್ತದೆ. ಮುನ್ನುಗ್ಗಲು ನಿಮಗೆ ಸ್ಥೈರ್ಯ ಸಾಲದು. ಮಂಗಲ ಕಾರ್ಯಗಳಿಗೆ ಸಂಪತ್ತನ್ನು ವಿನಿಯೋಗ ಮಾಡುವಿರಿ. ಹೊಸತನ ಹುಡುಕಾಟದಲ್ಲಿ ನೀವು ಇರುವಿರಿ. ಕುಟುಂಬದ ನೇರ ಮಾತುಗಳು ನಿಮಗೆ ಸಹಿಸಲು ಶಕ್ಯವಾಗದೇ ಬೇಸರಿಸುವಿರಿ. ಊಹಿಸಿದಷ್ಟು ಮಾರ್ದವವು ಸಂಗಾತಿಯ ಸ್ವಭಾವದಲ್ಲಿ ಇರದು. ಕುಟುಂಬದ ವಿಚಾರದಲ್ಲಿ ಏಕಪಕ್ಷೀಯವಾಗಿ ನಿರ್ಧಾರವನ್ನು ತೆಗೆದುಕೊಳ್ಳದೇ ಎಲ್ಲರ ಅಭಿಪ್ರಾಯವನ್ನು ಪಡೆದು ಮುಂದುವರಿಯಿರಿ.

ಮಿಥುನ ರಾಶಿ: ಅಧಿಕಾರದ ಬಗ್ಗೆ ಹೆಚ್ಚು ಆಸೆ ಇರುವುದು. ಶತ್ರುಗಳ ಬಗ್ಗೆ ಗಮನವಿರಲಿ. ನಿಮಗೆ ಗೊತ್ತಿಲ್ಲದೇ ನಿಮ್ಮ ಕಾರ್ಯವನ್ನು ನಾಶ ಮಾಡಬಹುದು. ನಿಮ್ಮ ವ್ಯವಹಾರದಲ್ಲಿ ಪೈಪೋಟಿಯು ಅಧಿಕವಾಗಿ ಇರಲಿದ್ದು ತಂತ್ರಗಳನ್ನು ರೂಪಿಸಬೇಕಾದೀತು. ಹಣಕಾಸಿನ ವ್ಯವಹಾರದಲ್ಲಿ ಇಂದು ಎಲ್ಲರಿಂದ ಗೌಪ್ಯತೆಯನ್ನು ಕಾಪಾಡಿಕೊಳ್ಳುವಿರಿ. ಸಂಗಾತಿಯ ಜೊತೆ ಒಡನಾಟವು ಹೆಚ್ಚಿರಲಿದೆ. ತಂದೆಯ ಶ್ರಮವನ್ನು ಕಂಡು ಮಕ್ಕಳಿಗೆ ನೋವಾಗಬಹುದು. ನಿಮ್ಮವರ ಪ್ರೀತಿಯಿಂದ ನೀವು ಮನಸೋಲುವಿರಿ. ನೀವು ಎಲ್ಲರ‌ ನಡುವೆ ಅಂತರವನ್ನು ಕಾಯ್ದುಕೊಂಡು ವ್ಯವಹಾರ ಮಾಡುವಿರಿ. ಬಂಧುಗಳ ಭೇಟಿಯಿಂದ ಸಂತೋಷ ಸಿಗಲಿದೆ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರದಿದ್ದರೆ ಚಿಕಿತ್ಸೆಯವರೆಗೂ ಹೋಗಬಹುದು. ಆಪ್ತರನ್ನು ಕಳೆದುಕೊಳ್ಳುವ ಸಾಧ್ಯತೆ ಇದೆ.

ಕಟಕ ರಾಶಿ: ಖಾಸಗೀ ಉದ್ಯೋಗದಲ್ಲಿ ಹೆಚ್ಚು ಒತ್ತಡವು ಬರುವುದು. ನಿಮ್ಮ ವರ್ತನೆಯು ಇತರರಿಗೆ ಇಷ್ಟವಾಗದು. ಅಪ್ರಾಮಾಣಿಕತೆಯು ಮೇಲಧಿಕಾರಿಗಳಿಗೆ ಗೊತ್ತಾಗುವುದು. ಇಂದು ನಿಮ್ಮ ಸಂಗಾತಿಗೆ ಅಪರೂಪದ ಉಡುಗೊರೆಯನ್ನು ಕೊಡಿಸುವಿರಿ. ಇಂದು ನಿಮ್ಮ ಮನೆಗೆ ಅತಿಥಿ ಆಗಮಿಸುವ ಸಾಧ್ಯತೆ ಇದೆ. ನೀವು ವಿದೇಶದಲ್ಲಿರುವ ಕುಟುಂಬದ ಸದಸ್ಯರಿಂದ ಕೆಲವು ಮಾಹಿತಿಯನ್ನು ಪಡೆದುಕೊಳ್ಳುವಿರಿ.‌ ಏನನ್ನಾದರೂ ಸಾಧಿಸಬೇಕು ಎಂಬ ಹಂಬಲವು ಹುಟ್ಟಿಕೊಂಡೀತು. ಇನ್ನೊಬ್ಬರ ಜೊತೆ ಸಂಬಂಧವನ್ನು ಬಯಸಿ, ಬೆಳೆಸುವಿರಿ. ನಿಮ್ಮ ವೃತ್ತಿಯು ನಿಮಗೆ ಸಂತೋಷವನ್ನು ಕೊಡದೇ ಇರುವುದು. ಕೆಲವನ್ನು ನೀವು ಸರಳವಾಗಿ ಮಾಡಿಕೊಳ್ಳುವುದು ಉತ್ತಮ. ನಿಮ್ಮ ಮಾತು ಅಹಂಕಾರದಂತೆ ಕೇಳಿಸುವುದು. ಸಂಯಮವನ್ನು ಬೆಳೆಸಿಕೊಳ್ಳುವ ಅಗತ್ಯ.

ಮತ್ತಷ್ಟು ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ
ಸದನದಲ್ಲಿ ರೇವಣ್ಣ ಕಾರ್ನರ್ ಆದಾಗ ಅಣ್ಣನ ನೆರವಿಗೆ ಧಾವಿಸಿದ ಕುಮಾರಣ್ಣ
ಸದನದಲ್ಲಿ ರೇವಣ್ಣ ಕಾರ್ನರ್ ಆದಾಗ ಅಣ್ಣನ ನೆರವಿಗೆ ಧಾವಿಸಿದ ಕುಮಾರಣ್ಣ
‘ರಾಕ್ಷಸ’ ವಿನಯ್ ಅಟ್ಟಹಾಸ, ತಲೆ ತಗ್ಗಿಸಿದ ಕಾರ್ತಿಕ್
‘ರಾಕ್ಷಸ’ ವಿನಯ್ ಅಟ್ಟಹಾಸ, ತಲೆ ತಗ್ಗಿಸಿದ ಕಾರ್ತಿಕ್
ರಾಜಕೀಯ ಭವಿಷ್ಯ ಕುರಿತು ವಿ ಸೋಮಣ್ಣ ಗೊಂದಲದಲ್ಲಿರುವುದು ಮಾತುಗಳಿಂದ ಸ್ಪಷ್ಟ
ರಾಜಕೀಯ ಭವಿಷ್ಯ ಕುರಿತು ವಿ ಸೋಮಣ್ಣ ಗೊಂದಲದಲ್ಲಿರುವುದು ಮಾತುಗಳಿಂದ ಸ್ಪಷ್ಟ
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ಐಸಿಸ್ ಸಂಪರ್ಕ ಹೊಂದಿರುವ ವ್ಯಕ್ತಿ ವಿಜಯಪುರದಲ್ಲಿದ್ದಾನೆ: ಬಸನಗೌಡ ಯತ್ನಾಳ್
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ವಿಪಕ್ಷ ಸದಸ್ಯರಿಂದ ಸದನದ ಸಮಯ ಹಾಳು ಮತ್ತು ಜನಕ್ಕೆ ವಂಚನೆ: ಸಿದ್ದರಾಮಯ್ಯ
ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ
ಸೋಮಣ್ಣ ಎಲ್ಲೂ ಹೋಗಲ್ಲ, ಅವರೊಂದಿಗೆ ಮಾತಾಡುತ್ತೇನೆ: ಬಿಎಸ್ ಯಡಿಯೂರಪ್ಪ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ನಾನು ಮೊದಲು ಸ್ಟ್ರಾಂಗ್ ಆಗಿದ್ದನ್ನು ಬಿಜೆಪಿ ಒಪ್ಪಿಕೊಂಡಿದೆ: ಸಿದ್ದರಾಮಯ್ಯ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಬೆಳಗಾವಿ ಅಧಿವೇಶನ: ಉತ್ತರ ಕರ್ನಾಟಕದ ಕಡೆಗಣನೆಯಿಂದ ರೊಚ್ಚಿಗೆದ್ದ ಸವದಿ
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಿಸೆಂಬರ್ 6ರಂದು ನಿರ್ಧಾರ ಪ್ರಕಟಿಸುವುದಾಗಿ ಹೇಳಿದ್ದ ಸೋಮಣ್ಣ ಮಾತು ಬದಲು!
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ
ಡಾ ಬಿಆರ್ ಅಂಬೇಡ್ಕರ್ ಪುಣ್ಯಸ್ಮರಣೆ: ಸಿಎಂ ಸಿದ್ದರಾಮಯ್ಯರಿಂದ ಗೌರವ ನಮನ