Horoscope Today 02 Feb 2025: ಮಾತಿಗೆ ತಪ್ಪಿ ತಲೆಮರೆಸಿಕೊಳ್ಳುವ ಸಂಭವ
ಶಾಲಿವಾಹನ ಶಕವರ್ಷ 1947ರ ಉತ್ತರಾಯಣ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ಪಂಚಮೀ ತಿಥಿ, ಭಾನುವಾರ ಒಂದು ರೀತಿಯಲ್ಲಿ ವಿಶ್ರಾಂತಿಯ ದಿನವೂ ಆಗಿದ್ದು, ಇದು ಮುಂದಿನ ಪ್ರಯಾಣಕ್ಕೆ ಸಿದ್ಧತೆಯೂ ಆಗಿದೆ. ಉದ್ಯೋಗ, ಕುಟುಂಬ, ಸ್ನೇಹಿತರ ಜೊತೆಗಿನ ಬಾಂಧವ್ಯವನ್ನು ಸರಿಮಾಡಿಕೊಳ್ಳುವ ಬಗ್ಗೆ ಇರಲಿ. ಶುಭ ಭವತು ಸರ್ವದಾ.

ನಿತ್ಯಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ಪಂಚಮೀ ನಿತ್ಯನಕ್ಷತ್ರ : ರೇವತೀ, ಯೋಗ : ಶಿವ, ಕರಣ : ಭದ್ರ, ಸೂರ್ಯೋದಯ – 07 – 01 am, ಸೂರ್ಯಾಸ್ತ – 06 – 31 pm, ಇಂದಿನ ಶುಭಾಶುಭಕಾಲ : ರಾಹು ಕಾಲ 17:05 – 18:31, ಯಮಘಂಡ ಕಾಲ 12:47 – 14:13, ಗುಳಿಕ ಕಾಲ 15:39 – 17:05.
ಮೇಷ ರಾಶಿ; ಇಂದೇ ಎಲ್ಲವೂ ಆಗಬೇಕು ಎಂಬ ಹಠವು ಮೂರ್ಖತನವಾದೀತು. ನಿಮ್ಮ ಪ್ರಯತ್ನದ ದಿಕ್ಕು ಸರಿಯಾಗಿದೆಯೇ ಎಂದು ನೋಡಿ. ನಿಮಗೆ ಸಿಗುವ ಫಲವನ್ನು ಕೊಡುವವನು ಕೊಟ್ಟೇಕೊಡುತ್ತಾನೆ. ತಾಯಿ ಮಾತಿನಿಂದ ನಿಮಗೆ ಹೊಸ ಸ್ಪೂರ್ತಿಯು ಸಿಗಬಹುದು. ಸಹೋದರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಪ್ರಭಾವಶಾಲಿಗಳ ಸಹವಾಸವು ನಿಮ್ಮ ಮನಸ್ಸನ್ನು ಹಗುರಾಗಿಸುವುದು. ಕೆಲಸದಲ್ಲಿ ಇರುವಷ್ಟು ಶ್ರದ್ಧೆ ಓದಿನ ಕಡೆಗೆ ಬರದೇ ಇರಬಹುದು. ಕೆಲವನ್ನು ಮರೆತು ಮುಂದೆ ಸಾಗುವುದು ನಿಮಗೇ ಉತ್ತಮ. ನಿಮ್ಮ ಮಾತು ಇನ್ನೊಬ್ಬರಿಗೆ ನೋವನ್ನು ಕೊಡುಬಹುದು ಎಂಬ ತಿಳಿವಳಿಕೆ ಇರಲಿ. ದೂರದ ಪೋಷಕರ ಜೊತೆ ಆಪ್ತವಾಗಿ ಮಾತನಾಡುವುದು ಅವರಿಗೆ ನೆಮ್ಮದಿಯನ್ನು ಕೊಡುವುದು ಎನ್ನುವ ಅರಿವು ಇರಲಿ. ನಿಮ್ಮ ಬಳಿಯ ಹಣವನ್ನು ಕೇಳಿಕೊಂಡು ಬರಬಹುದು. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ನಿಮ್ಮ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸಿ ಸಂತೋಷಿಸುವಿರಿ.
ವೃಷಭ ರಾಶಿ: ಧಾರ್ಮಿಕ ಆಚರಣೆಗಳಲ್ಲಿ ಅತಿಯಾದ ಆಸಕ್ತಿಯು ಇರದು. ವೃತ್ತಿಯ ಅನ್ವೇಷಣೆಗೆ ಸರಿಯಾದ ಸಮಯವಲ್ಲ. ನಿಮ್ಮ ಮಾತಿಗೆ ಮೆಚ್ಚುಗೆ ಸಿಕ್ಕರೂ ಕೆಲಸ ಮಾತ್ರ ಆಗದು. ಆಸ್ತಿಯ ಹಂಚಿಕೆಯಲ್ಲಿ ನಿಮಗೆ ಸಮಾಧಾನ ಇರದು. ಹಲವು ದಿನಗಳಿಂದ ಉಳಿಸಿಕೊಂಡ ವೈಯಕ್ತಿಕ ಕೆಲಸವೇ ಉಳಿಯಲಿದೆ. ಯಾರನ್ನೋ ಶಪಿಸುತ್ತ ಇರುವುದು ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಬೇಸರವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ಸಮಾರಂಭಗಳಿಗೆ ಭೇಟಿಕೊಡುವುದು, ಅಲ್ಲಿ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳುವಿರಿ. ಏನನ್ನಾದರೂ ಬಳಸುವ ಮೊದಲು ಪರೀಕ್ಷಿಸಿಕೊಳ್ಳಿ. ಮಕ್ಕಳಲ್ಲಿ ಬದಲಾವಣೆಯನ್ನು ನೀವು ಕಾಣಬಹುದು. ಮೃದುವಾದ ಮಾತನ್ನು ನೀವು ಅಭ್ಯಾಸ ಮಾಡಿಕೊಳ್ಳಬೇಕಾದೀತು. ನಿಮ್ಮ ಕಾರ್ಯದಲ್ಲಿ ಮಗ್ನರಾಗಿ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಜೊತೆ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಇಂದು ಹೊರಗಿನ ಆಹಾರವನ್ನು ತಿನ್ನುವ ಸ್ಥಿತಿ ಬರಬಹುದು. ಅಸ್ಥಿರತೆಯು ನಮಗೆ ಗೊಂದಲವನ್ನು ಸೃಷ್ಟಿಸುವುದು.
ಮಿಥುನ ರಾಶಿ: ಆಡಳಿತ ಚುಕ್ಕಾಣಿ ನಿಮ್ಮ ಕೈಗೆ ಸಿಗುವ ಸಾಧ್ಯತೆ ಇದೆ. ಕಛೇರಿಯಲ್ಲಿ ನಿಮಗೆ ತಪ್ಪಿತಸ್ಥ ಭಾವವು ಬರಬಹುದು. ಸರ್ಕಾರಿ ಕೆಲಸಕ್ಕಾಗಿ ಹಣವನ್ನು ಕೊಡುವಿರಿ. ಯಾರಿಗೂ ಎತ್ತರದ ದನಿಯನ್ನು ಮಾಡುವುದು ಬೇಡ. ನಿಮ್ಮ ಬಗ್ಗೆ ತಪ್ಪು ಕಲ್ಪನೆಯು ಬರಬಹುದು. ಮಕ್ಕಳ ವಿಚಾರದಲ್ಲಿ ತಾರತಮ್ಯವನ್ನು ಮಾಡುವಿರಿ. ಅಧಿಕೃತ ಮುದ್ರೆ ಇಲ್ಲದೇ ಯಾವುದನ್ನೂ ಒಪ್ಪುವುದು ಬೇಡ. ಇನ್ಮೊಬ್ಬರ ಜೊತೆ ಕೂಡಲೆ ಭಾವನಾತ್ಮಕವಾಗಿ ಇಂದು ಸೇರಿಕೊಳ್ಳಲಾಗದು. ನಿಮ್ಮ ಅನಾರೋಗ್ಯವನ್ನು ಬಹಳವಾಗಿ ನಿರ್ಲಕ್ಷಿಸುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು, ಆದರೂ ಮಾತಿಗೆ ತಪ್ಪಲಾರಿರಿ. ಅಸಾಧ್ಯವಾದ ಕಾರ್ಯದ ಬಗ್ಗೆ ಅತಿಯಾದ ಒಲವು ಬೇಡ. ನಿಮ್ಮಷ್ಟಕ್ಕೆ ನೀವಿರುವುದು ಸುಖ. ಬಡ್ಡಿಯ ಹಣದಿಂದ ನಿಮಗೆ ವಂಚನೆ ಸಾಧ್ಯವಾಗುವುದು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನಿಮಗೆ ನಾನಾ ಕಾರಣಗಳಿಂದ ಬೇಡವೆನಿಸುವುದು. ಇಂದು ಯಾರ ಬಗ್ಗೆಯೂ ಸರಿ ಹಾಗೂ ತಪ್ಪುಗಳನ್ನು ಹೇಳುವುದು ಕಷ್ಟವಾದೀತು.
ಕರ್ಕಾಟಕ ರಾಶಿ: ನಿಮ್ಮ ಕಾರ್ಯದಲ್ಲಿ ವೇಗ ಹೆಚ್ಚಾಗುವುದು. ಇದರಿಂದ ಕೆಲಸ ಹಾಳಾಗುವ ಸಾಧ್ಯತೆಯೂ ಇದೆ. ಕಛೇರಿ ಹಾಗೂ ಕುಟುಂಬ ಎರಡೂ ನಿಮಗೆ ಒತ್ತಡವನ್ನು ತಂದೀತು. ನೂತನ ವಸ್ತುಗಳನ್ನು ಕಡಿಮೆ ಬೆಲೆಗೆ ಪಡೆದುಕೊಳ್ಳುವಿರಿ. ನಿಮ್ಮ ಕಲೆಗೆ ಸರಿಯಾದ ಪ್ರೋತ್ಸಾಹವು ಸಿಗಲಿದೆ. ವೃತ್ತಿಯಲ್ಲಿ ನೀವು ತುಂಬಾ ನಿಧಾನದಿಂದ ಕೆಲಸ ಮಾಡುವಿರಿ. ದೂರ ಬಂಧುಗಳಿಂದ ನಿಮ್ಮ ವಿವಾಹ ನಿಶ್ಚಯವಾಗಬಹುದು. ಮನಸ್ಸು ಕೆಡಿಸಿಕೊಂಡು ಏನೂ ಮಾಡಲಾಗದು. ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಬರಲಿದೆ. ಮಕ್ಕಳ ವಿಚಾರಕ್ಕೆ ಗೊಂದಲ. ಶಾಂತವಾಗಿ, ಸಮಾಧಾನ ಚಿತ್ತದಿಂದ ಮುಂದುವರಿಯಿರಿ. ಕಳೆದುಕೊಂಡ ವಸ್ತುಗಳು ವಿಳಂಬವಾಗಿ ಬೆಳಕಿಗೆ ಬಂದೀತು. ಹಿರಿಯ ಮಾತನ್ನು ತಿರಸ್ಕರಿಸುವ ಸ್ವಭಾವವಿರುವುದು. ಸಂಗಾತಿಯ ನಿಲುವನ್ನು ನೀವು ಒಪ್ಪದೇ ಕಲಹ. ನಿಮ್ಮ ನಿರ್ಧಾರವು ಸರಿಯಾಗಿದೆಯೇ ಎಂದು ಅವಲೋಕನ ಮಾಡಿಕೊಳ್ಳಿ. ಅಪರಿಚಿತರ ಜೊತೆ ಅವಶ್ಯಕತೆಯಷ್ಟೇ ವ್ಯವಹರಿಸಿ. ಭವಿಷ್ಯದ ಅನೇಕ ದ್ವಂದ್ವಗಳು ಇರಬಹುದು.
ಸಿಂಹ ರಾಶಿ: ತಾಳ್ಮೆಯ ಕಟ್ಟೆಯನ್ನು ಮತ್ತಷ್ಟು ಗಟ್ಟಿಮಾಡಿಕೊಳ್ಳಬೇಕು. ಅಕಾರಣವಾಗಿ ಮನಸ್ಸು ಸಂತೋಷದಿಂದ ಇರಲಿದೆ. ಕುಟುಂಬವು ನಿಮ್ಮ ಬಗ್ಗೆ ಹಲವು ಕನಸುಗಳನ್ನು ಇಟ್ಟುಕೊಂಡಿದೆ. ದೊಡ್ಡ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಇಂದು ನಿರೀಕ್ಷಿಸುಬುದು ಬೇಡ. ಅಪರಿಚಿತರ ಜೊತೆ ಸಲುಗೆ ಬೆಳೆಯಬಹುದು. ನಿಮ್ಮ ಪ್ರಬುದ್ಧತೆಯ ಮಾತುಗಳಿಂದ ಎಲ್ಲರಿಗೂ ಅಚ್ಚರಿಯಾಗಬಹುದು. ಯಾರ ಬಗ್ಗೆಯೂ ಹಗುರಾದ ಮಾತುಗಳನ್ನು ಆಡುವುದು ಬೇಡ. ಹಣಕಾಸಿನ ಉಳಿತಾಯದ ಬಗ್ಗೆ ತಜ್ಞರ ಜೊತೆ ಮಾತನಾಡುವಿರಿ, ನಿರ್ಧಾರಕ್ಕೆ ಬರುವಿರಿ. ನಿಮ್ಮದಲ್ಲದ ವಸ್ತುವನ್ನು ಬಳಸಿಕೊಂಡು ಹಾಳು ಮಾಡುವಿರಿ. ಹಳೆಯ ಪ್ರೇಮವು ಬೆಳಕಿಗೆ ಬಂದು ಮುಜುಗರ ಉಂಟಾದೀತು. ವಾಹನದ ಉದ್ಯೋಗ ನಡೆಸುವವರಿಗೆ ಲಾಭ. ದುರಭ್ಯಾಸವು ಸಹವಾಸದಿಂದ ಬಿಟ್ಟುಹೋಗಲಿದೆ. ಯಾವುದೇ ಪ್ರಭಾವಕ್ಕೆ ಸಿಕ್ಕಿ ನಿಮ್ಮನ್ನು ಬದಲಿಸಿಕೊಳ್ಳಬೇಕಾಗಬಹುದು.
ಕನ್ಯಾ ರಾಶಿ: ವೃತ್ತಿಯ ವಿಚಾರದಲ್ಲಿ ಬಹಳ ಕಠೋರವಾಗಿ ವರ್ತಿಸುವಿರಿ. ನಿಮ್ಮ ಬಯಕೆಗಳನ್ನು ಬೇರೆಯವರ ಮೂಲಕ ಪೂರ್ಣ ಮಾಡಿಕೊಳ್ಳುವಿರಿ. ಆಡಳಿತಕ್ಕೆ ಸಂಬಂಧಿಸಿದ ಕಾರ್ಯವು ಸುಗಮವಾಗಿರುವುದು. ವ್ಯಾಪಾರ ಚಟುವಟಿಕೆಗಳು ನಿಮ್ಮ ಮನೋವೇಗಕ್ಕೆ ಸಿಗದು. ಒಳ್ಳೆಯ ಜನರ ಸಹವಾಸವನ್ನು ಬಯಸುವಿರಿ. ಸ್ವಪ್ರತಿಷ್ಠೆ ಹೆಚ್ಚಾಗುತ್ತದೆ. ಪರರ ಬಾಧ್ಯತೆಗಳಿಗೆ ಸ್ಪಂದಿಸುವಿರಿ. ಪೂರ್ವಾಪರ ಯೋಚನೆ ಇಲ್ಲದೇ ಒಂದು ಕೆಟ್ಟ ನಿರ್ಧಾರವನ್ನು ತೆಗೆಸುಕೊಳ್ಳುವಿರಿ. ಸಹೋದರರು ನಿಮ್ಮ ಬಗ್ಗೆ ಹಗುರಾಗಿ ಮಾತನಾಡಿದ್ದು ನಿಮ್ಮ ಕಿವಿಗೆ ಮೂರನೇ ವ್ಯಕ್ತಿಗಳಿಂದ ಗೊತ್ತಾಗಲಿದೆ. ಅಧ್ಯಯನಾಕಾಂಕ್ಷಿಗಳಿಗೆ ಉತ್ತಮ ಅವಕಾಶ ಸಿಗಲಿದೆ. ಸ್ಥಿರಾಸ್ತಿಯ ಬಗ್ಗೆ ಸರಿಯಾದ ಕಣ್ಣಿಡುವ ಅಗತ್ಯವಿದೆ. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಅಧಿಕ ಶ್ರಮಿಸುವಿರಿ. ನಿಮಗೆ ಕೊಟ್ಟ ಜವಾಬ್ದಾರಿಯು ಹಸ್ತಾಂತರ ಆಗಬಹುದು. ಅಸ್ಥಿರವೆನಿಸು ವಸ್ತು ಹಾಗೂ ವ್ಯಕ್ತಿಗಳ ಮೇಲೆ ಹಣವನ್ನು ಹಾಕಲಾರಿರಿ.
ತುಲಾ ರಾಶಿ: ಉದ್ಯಮದಲ್ಲಿ ಆದ ನಷ್ಟವನ್ನು ತುಂಬಲಾಗದೇ ಕಣ್ಣಿಗೆ ಕಾಣದಂತೆ ಇರುವರು. ಸಮಯ ಹಾಗೂ ವ್ಯಕ್ತಿಗಳನ್ನು ಅರಿತು ಮುನ್ನುಗ್ಗುವುದು ಉಚಿತ. ನಿಮ್ಮ ನೈಪುಣ್ಯತೆಯನ್ನು ಯಾರೂ ಊಹಿಸಲಾರರು. ನಿಮ್ಮನ್ನು ಎದುರಗೆ ಹೊಗಳಿ, ನಿಮ್ಮಿಂದ ಆಗಬೇಕಾದುದನ್ನು ಮಾಡಿಸಿಕೊಂಡಾರು. ಅಪರಿಚಿತರು ನಿಮ್ಮನ್ನು ಬೇಗ ವಿಶ್ವಾಸಕ್ಕೆ ತೆಗೆದುಕೊಳ್ಳುವರು. ಅಜಾಗರೂಕತೆಯಿಂದ ಬಿದ್ದು ಗಾಯ ಮಾಡಿಕೊಳ್ಳಬಹುದು. ಕೈಗೊಂಡ ಕಾರ್ಯಗಳಲ್ಲಿ ಪೂರ್ಣ ಜಯವು ಪ್ರಾಪ್ತವಾಗುವುದು. ನಟನೆಯನ್ನು ಇಷ್ಟಪಡುವವರಿಗೆ ಅವಕಾಶಗಳು ಸಿಗುವುದು. ಪ್ರಾಮಾಣಿಕತೆಗೆ ಸಿಕ್ಕ ಪ್ರಶಂಸೆಯಿಂದ ಇನ್ನಷ್ಟು ಉತ್ಸಾಹ ಇರುವುದು. ಯಾರದೋ ಕಾರ್ಯಕ್ಕೆ ನೀವು ದಂಡಿಸಿ ಕೆಲಸ ಮಾಡಬೇಕಾದೀತು. ಸ್ನೇಹಿತರಿಗೆ ಔತಣವನ್ನು ಕೊಡಿಸುವಿರಿ. ನಿಮ್ಮ ಮಾತುಗಳು ಹಾಸ್ಯದಿಂದ ಕೂಡಿರಲಿದೆ. ಹಠದ ಸ್ವಭಾವದಿಂದ ಸುಲಭವಾಗಿ ಸಿಗುವುದನ್ನು ಕಳೆದುಕೊಳ್ಳಬೇಕಾದೀತು.
ವೃಶ್ಚಿಕ ರಾಶಿ: ಇಂದು ಬೇರೆ ಕಾರ್ಯಗಳು ಇರುವ ಕಾರಣ ಕೊಟ್ಟ ಕೆಲಸವನ್ನು ಬೇಗನೆ ಮಾಡುವಿರಿ. ಆರಂಭದಿಂದಲೇ ನಿಮ್ಮೊಳಗೆ ಆತ್ಮವಿಶ್ವಾಸ ಇರಲಿದ್ದು ಅತ್ಯುತ್ಸಾಹದಿಂದ ದಿನವಿಡೀ ಕೆಲಸವನ್ನು ಮಾಡುವಿರಿ. ಆಸ್ತಿ ವ್ಯವಹಾರದ ನಿರ್ಧಾರಗಳು ನಿಮ್ಮ ಪರವಾಗಿರಬಹುದು. ಆದಾಯದ ವಿಚಾರದಲ್ಲಿ ಮನೆಯಿಂದ ಮೆಚ್ಚುಗೆ ಸಿಗಲಿದೆ. ಅನಿವಾರ್ಯವಿದ್ದರೂ ಧನವ್ಯಯದ ಕಾರಣ ಖರೀದಿಯನ್ನು ಮುಂದೂಡುವಿರಿ. ಸಂಗಾತಿಯ ಜೊತೆ ಬಂಧುಗಳ ಮನೆಗೆ ಹೋಗುವಿರಿ. ಇಂದು ನೀವು ತಾಯಿಯ ಪ್ರೀತಿಯಿಂದ ವಂಚಿತರಾಗಬಹುದು. ನಿಮ್ಮ ಮೌನವೇ ಹಲವಾರು ವಿಚಾರಕ್ಕೆ ಕಾರಣವಾಗಲಿದೆ. ಉದ್ಯೋಗದ ಕಾರಣಕ್ಕೆ ದೂರದ ಊರಿಗೆ ಹೋಗಬೇಕಾಗುವುದು. ಪ್ರಯಾಣದ ಮುಂಜಾಗ್ರತೆಯ ಕ್ರಮವಿರಲಿ. ಗೊತ್ತಿಲ್ಲದ ಪ್ರದೇಶಕ್ಕೆ ಒಂಟಿಯಾಗಿ ಹೋಗಬೇಕಾಗಬಹುದು. ಹೊಸ ಉದ್ಯಮವನ್ನು ಮಾಡಲು ಆಪ್ತರ ಅಥವಾ ಅನುಭವಿಗಳ ಸಲಹೆ ಬೇಕಾದೀತು. ದಾಂಪತ್ಯದಲ್ಲಿ ಬಂದ ಒಡಕು ಎಲ್ಲರಿಗೂ ಗೊತ್ತಾಗುವ ಮೊದಲೇ ಸರಿ ಮಾಡಿಕೊಳ್ಳಿ.
ಧನು ರಾಶಿ: ನಿಮ್ಮ ಉತ್ಸಾಹ ಯಾರನ್ನು ಬೆರಗುಗೊಳಿಸುವುದು, ಆದರೆ ಅದು ವಿವೇಕದಿಂದ ಇರಲಿ. ನಿಮ್ಮ ಮನಸ್ಸನ್ನು ಒಂದೆಡೆ ಏಕಾಗ್ರವಾಗಿಸಲು ಪ್ರಯತ್ನಿಸಿ. ನಿತ್ಯ ಬಳಸುವ ವಸ್ತುಗಳ ಮಾರಾಟದಿಂದ ಲಾಭವಿದೆ. ಯುವಕರು ವೃತ್ತಿ ಜೀವನದಲ್ಲಿ ಉತ್ತಮ ಯಶಸ್ಸನ್ನು ಪಡೆಯು ಅವಕಾಶಗಳಿದ್ದರೂ ಅದನ್ನು ಬಳಸಿಕೊಳ್ಳಲು ಮಾರ್ಗದರ್ಶನದ ಅವಶ್ಯಕತೆ ಇದೆ. ಕಛೇರಿಯಲ್ಲಿ ಯಾರದೋ ತಪ್ಪಿಗೆ ನೀವು ತಲೆ ತಗ್ಗಿಸಬೇಕಾಗಬಹುದು. ಪ್ರಾಣಿಗಳ ಮೇಲೆ ಪ್ರೀತಿ ತೋರಿಸುವಿರಿ. ಮಾತ್ಸರ್ಯವನ್ನು ನಿಮ್ಮ ವ್ಯಕ್ತಿತ್ವಕ್ಕೆ ಅಲ್ಲ. ಎಲ್ಲರನ್ನೂ ಸಮಾಮವಾಗಿ ಕಾಣಬೇಕಾಗುವುದು. ನಿಮ್ಮ ಕಾರ್ಯದಲ್ಲಿ ನಿಮಗೆ ತಪ್ಪು ಕಾಣಿಸಿ, ತಿದ್ದಿಕೊಳ್ಳುವಿರಿ. ಹೊಗಳಿಕೆಯಿಂದ ನಿಮಗೆ ಸಂಕೋಚ ಉಂಟಾಗಬಹುದು. ಮಿತಿಮೀರಿದ ಓಡಾಟವು ನಿಮ್ಮ ಬಲವನ್ನು ಚೆನ್ನಾಗಿ ಇರಿಸುವುದು. ನಿಮ್ಮ ಬಯಕೆಗಳಿಗೆ ಇನ್ಮೊಬ್ಬರು ಪ್ರೇರಣೆ ಆಗಬಹುದು. ಪ್ರೀತಿಯ ಕಾರಣಕ್ಕೆ ಮನಸ್ಸಿನ ಚಾಂಚಲ್ಯವನ್ನು ನಿಯಂತ್ರಿಸುವುದು ಕಷ್ಟವಾದೀತು.
ಮಕರ ರಾಶಿ: ಅದೃಷ್ಟವನ್ನು ನಂಬಿ ಕೆಲಸ ಮಾಡುವುದಕ್ಕಿಂತ ನಿಮ್ಮ ಪ್ರತಿಭೆ, ವಿದ್ಯೆಯ ಮೇಲೆ ಇದ್ದರೆ ಕಾರ್ಯ ಪೂರ್ಣವಾಗಲಿದೆ. ನಿಮ್ಮ ಜಾಣ್ಮೆಯ ಕೆಲಸಕ್ಕೆ ಅಧಿಕಾರಿಗಳಿಂದ ಮೆಚ್ಚುಗೆ ಸಿಗಲಿದೆ. ಮಹಿಳೆಯರು ಸ್ವ ಉದ್ಯೋಗದ ಕಡೆ ಗಮನಹರಿಸುವರು. ನೂತನ ವಸ್ತುಗಳ ಮೇಲೆ ನಿಮಗೆ ಪ್ರೀತಿ ಹೆಚ್ಚಿರುವುದು. ವಿದೇಶದಲ್ಲಿ ಓದುವ ಆಸೆಯು ನಿಮ್ಮೊಳಗೆ ಆರಂಭವಾಗುವುದು. ನಿಮ್ಮ ಮಾತಿನ ಕೌಶಲಕ್ಕೆ ಸಂವಹನದ ಉದ್ಯೋಗ ಸಿಗುವ ಸಾಧ್ಯತೆ ಇದೆ. ಭೂಮಿಯ ವ್ಯವಹಾರದಲ್ಲಿ ಪಾಲುದಾರರಾಗಿ ಸೇರಿಕೊಳ್ಳುವ ಮನಸ್ಸು ಮಾಡುವಿರಿ. ಸಂಗಾತಿಯ ಜೊತೆ ಬಹಳ ಸಂತೋಷದ ಕ್ಷಣವನ್ನು ಕಳೆಯುವಿರಿ. ಉದ್ಯೋಗದ ಸ್ಥಳದಲ್ಲಿ ಉಂಟಾದ ಪಕ್ಷಪಾತದಿಂದ ದ್ವೇಷಭಾವವು ಉಂಟಾಗಬಹುದು. ವಿದೇಶದ ವಾಸದಿಂದ ಆರೋಗ್ಯದಲ್ಲಿ ವ್ಯತ್ಯಾಸ, ಸೂಕ್ತ ಚಿಕಿತ್ಸೆ ಪಡೆಯುವಿರಿ. ಸಾಲದ ವಿಚಾರವಾಗಿ ಕುಟುಂಬದ ಜೊತೆ ಬಿಸಿ ಚರ್ಚೆಯಾಗಬಹುದು.
ಕುಂಭ ರಾಶಿ: ವೃತ್ತಿಯಲ್ಲಿ ಮುಂದುವರಿಯಲು ಕೆಲವು ಸವಾಲನ್ನು ತೆಗೆದುಕೊಳ್ಳಲೇಬೇಕು. ಇಂದು ನಿಮ್ಮ ಬಗ್ಗೆ ಆಡುವ ಮಾತಿನಿಂದ ಉತ್ಸಾಹವು ಅಧಿಕವಾಗಿ ಇರುವುದು. ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಶ್ರಮದ ಫಲವೇ ಕಾಣುವರು. ನಿಮ್ಮ ಆಪ್ತ ಸ್ನೇಹಿತರ ಅನಿರೀಕ್ಷಿತ ಭೇಟಿಯಾಗುವುದು. ವಾಹನ ಖರೀದಿಗೆ ಬಂಧುಗಳಿಂದ ಒತ್ತಡವು ಬರಬಹುದು. ಬಹಳ ಶ್ರಮದಿಂದ ಭೂಮಿಯ ಮಾರಟವನ್ನು ಮಾಡುವಿರಿ. ನಿಮ್ಮ ಪ್ರಭಾವವನ್ನು ಬೇರೆಯವರ ಮೇಲೆ ಬೀಳಿಸುವಿರಿ. ನಿಮ್ಮ ಪೂರ್ವಯೋಜಿತ ಕಾರ್ಯಗಳನ್ನು ನೀವು ಬದಲಾಯಿಸುವಿರಿ. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಲು ಮನೆಯಿಂದ ಒಪ್ಪಿಗೆಯನ್ನು ನಿರಾಕರಿಸಬಹುದು. ಇಂದು ನೀವು ಕೋಪವನ್ನು ಮಾಡಿಕೊಳ್ಳಲು ಕಾರಣವೇ ಬೇಕಾಗದು. ಪ್ರಯಾಣದ ವಿಚಾರದಲ್ಲಿ ಕೋಪಗೊಳ್ಳುವಿರಿ. ನೌಕರರಿಂದ ನಿಮಗೆ ಸರಿಯಾದ ಪ್ರತಿಕ್ರಿಯೆ ಸಿಗದು. ವಿವೇಚನೆ ಇಲ್ಲದ ಮಾತುಗಳಿಂದ ಕಲಹ.
ಮೀನ ರಾಶಿ: ನಿಮ್ಮ ಗುರಿಯನ್ನು ಮುಟ್ಟಲು ಶತ್ರುಗಳೇ ಪರೋಕ್ಷವಾಗಿ ಕಾರಣ. ಅವರಿಂದ ಆದ ಅಪಮಾನವೇ ನಿಮ್ಮ ಸಾಧನೆಗೆ ಅಧಿಕ ಬಲವನ್ನು ಕೊಡುವುದು. ಇಂದು ನಿಮ್ಮ ಕಾರ್ಯಕ್ಷಮತೂ ಉತ್ತಮವಾಗಿರುವುದು. ನಿಮಗೆ ಮಾತನಾಡುವ ಕಲೆಯು ಕರಗತವಾಗಲಿದೆ. ನಿಮ್ಮನ್ನು ಇಂದು ಮಾತಿನಿಂದ ಸೋಲಿಸುವುದು ಕಷ್ಟವಾದೀತು. ನಿಮ್ಮ ಪ್ರತಿಭೆಗೆ ಸೂಕ್ತ ಸ್ಥಾನ ಸಿಗಲಿದೆ. ಮಕ್ಕಳ ವಿವಾಹದ ಬಗ್ಗೆ ಒಂದೊಂದೇ ಚಿಂತೆ ಆರಂಭವಾಗುವುದು. ಅನಿವಾರ್ಯ ಕಾರಣದಿಂದ ನೀವು ಅಧಿಕಾರವನ್ನು ವಹಿಸಿಕೊಳ್ಳಬೇಕಾಗಬಹುದು. ಉದ್ಯೋಗದಲ್ಲಿನ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಪರಿಣಾಮವನ್ನು ಉಂಟುಮಾಡಬಹುದು. ವಿವಾಹಕ್ಕೆ ಸಂಬಂಧಿಸಿದಂತೆ ಬಂಧುಗಳ ಜೊತೆ ಚರ್ಚಿಸುವಿರಿ. ನಿಮ್ಮ ವ್ಯಾಪ್ತಿಯನ್ನು ಮೀರಿದ ಕೆಲಸವನ್ನು ನೀವು ಮಾಡಬೇಕಾದೀತು. ಆಸಕ್ತಿಯು ಇಲ್ಲದಿದ್ದರೂ ಒತ್ತಾಯಕ್ಕೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ. ಆಪತ್ತಿನಲ್ಲಿರುವ ನಿಮಗೆ ಸ್ನೇಹಿತರ ಸಣ್ಣ ಸಹಾಯವೂ ಧೈರ್ಯ ಕೊಡುವುದು.
ಲೋಹಿತ ಹೆಬ್ಬಾರ್ – 8762924271 (what’s app only)