Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ವಾರ ಭವಿಷ್ಯ: ಫೆ 02 ರಿಂದ ಫೆ 08 ರವರೆಗೆ ವಾರ ಭವಿಷ್ಯ ಇಲ್ಲಿದೆ

ಇದು ಫೆಬ್ರವರಿ ತಿಂಗಳ ಮೊದಲನೇ ವಾರವಿದಾಗಿದೆ. ೦೨-೦೨-೨೦೨೫ರಿಂದ ೦೮-೦೨-೨೦೨೫ರವರೆಗೆ ಇರಲಿದೆ. ಶುಕ್ರನು ತನ್ನ ಉಚ್ಚರಾಶಿಗೆ ಬಂದಿದ್ದು ಪೂರ್ಣ ಫಲವನ್ನು ಕೊಡಲಿದ್ದಾನೆ. ಶುಕ್ರ ದಶೆಯವರಿಗೆ ಅರ್ಥಪೂರ್ಣ ಶುಕ್ರದಶೆಯೇ ಆಗುವುದು. ಆದರೆ ನಿಮ್ಮ ಮನಸ್ಸು, ಬುದ್ಧಿಗಳು ನಿಮ್ಮ ಸ್ವತಂತ್ರದಲ್ಲಿ ಇರಲಿ. ನಿಮ್ಮ ಕೆಲಸ ಕಾರ್ಯಗಳು ಆಗಲೇಬೇಕಾಗಿದ್ದು ಅದಕ್ಕೋಸ್ಕರ ಅಲೆದಾಟವನ್ನು ಮಾಡಲಿದ್ದೀರಿ.

Weekly Horoscope: ವಾರ ಭವಿಷ್ಯ: ಫೆ 02 ರಿಂದ ಫೆ 08 ರವರೆಗೆ ವಾರ ಭವಿಷ್ಯ ಇಲ್ಲಿದೆ
ವಾರ ಭವಿಷ್ಯ: ಫೆ 02 ರಿಂದ ಫೆ 08 ರವರೆಗೆ ವಾರ ಭವಿಷ್ಯ ಇಲ್ಲಿದೆ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಗಂಗಾಧರ​ ಬ. ಸಾಬೋಜಿ

Updated on: Feb 02, 2025 | 1:02 AM

ಇದು ಫೆಬ್ರವರಿ ತಿಂಗಳ ಮೊದಲನೇ ವಾರವಿದಾಗಿದೆ. ೦೨-೦೨-೨೦೨೫ರಿಂದ ೦೮-೦೨-೨೦೨೫ರವರೆಗೆ ಇರಲಿದೆ. ಶುಕ್ರನು ತನ್ನ ಉಚ್ಚರಾಶಿಗೆ ಬಂದಿದ್ದು ಪೂರ್ಣ ಫಲವನ್ನು ಕೊಡಲಿದ್ದಾನೆ. ಶುಕ್ರ ದಶೆಯವರಿಗೆ ಅರ್ಥಪೂರ್ಣ ಶುಕ್ರದಶೆಯೇ ಆಗುವುದು. ಆದರೆ ನಿಮ್ಮ ಮನಸ್ಸು, ಬುದ್ಧಿಗಳು ನಿಮ್ಮ ಸ್ವತಂತ್ರದಲ್ಲಿ ಇರಲಿ.

ಮೇಷ ರಾಶಿ: ಇದು ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ಮೊದಲ ರಾಶಿಯ ಅಧಿಪತಿ‌ ಕುಜನು ತೃತೀಯದಲ್ಲಿ. ದುರಾಲೋಚನೆಗಳು ನಿಮ್ಮನ್ನು ಆವರಿಸಬಹುದು. ನಿಮ್ಮ ಕೆಲಸ ಕಾರ್ಯಗಳು ಆಗಲೇಬೇಕಾಗಿದ್ದು ಅದಕ್ಕೋಸ್ಕರ ಅಲೆದಾಟವನ್ನು ಮಾಡಲಿದ್ದೀರಿ. ಯಾರ ಜೊತೆಗೂ ವಿವಾದವನ್ನು ಮಾಡಲು ಹೋಗಬೇಡಿ. ಸೋಲನ್ನು ಅನುಭವಿಸಬೇಕಾಗಬಹುದು. ಭ್ರಾತೃತ್ವದಿಂದ ನೀವು ಎಲ್ಲ ಜವಾಬ್ದಾರಿಗಳು ನಿರ್ವಹಿಸಬೇಕಾಗುವುದು. ನಿಮ್ಮ ಬುದ್ಧಿಯಿಂದ ನಿಮಗೆ ಆಗಬೇಕಾದ ಕೆಲಸಗಳನ್ನು ಮಾಡಿಕೊಳ್ಳುವಿರಿ. ಹಿರಿಯರನ್ನು ಗೌರವಿಸುವುದು ನಿಮ್ಮ ಸ್ವಭಾವವಾಗಿರುತ್ತದೆ. ಅನಿರೀಕ್ಷಿತ ಸುದ್ದಿಗಳನ್ನು ನೀವು ಕೇಳುವಿರಿ. ಆಪ್ತರ ಭೇಟಿಯು ನಿಮಗೆ ನೆಮ್ಮದಿಯನ್ನು ನೀಡುವುದು. ಕಾರ್ತಿಕೇಯನೇ ನಿಮಗೆ ಬಲ.

ವೃಷಭ ರಾಶಿ: ಈ ರಾಶಿಯ ಅಧಿಪತಿ ಶುಕ್ರನು ಏಕಾದಶದಲ್ಲಿ ರಾಹುವಿನ ಜೊತೆ ಇದ್ದಾನೆ. ಹೂಡಕೆ ಮಾಡುವ ಅವಕಾಶ ಬಂದರೆ ಈಗಲೇ ಮಾಡಿ.ಉತ್ತಮ ಆದಾಯಕ್ಕೆ ಯೋಗ್ಯ. ಬಹುದಿನಗಳಿಂದ ಇರುವ ಸಾಲದಿಂದ ನಿಮಗೆ ಮುಕ್ತಿಯು ಸಿಗಲಿದೆ. ಉದ್ಯೋಗಕ್ಕೆ ಸಂಬಂಧಿಸಿದಂತೆ ಕೆಲವು ಅಡಚಣೆಗಳು ಇರಲಿವೆ. ವಾಹನದಲ್ಲಿ ಸಂಚಾರವನ್ನು ಮಾಡುವುದರಿಂದ ನಿಮಗೆ ಕೆಲವು ಅನಾನುಕೂಲತೆಗಳು ಆಗಬಹುದು. ಶುಕ್ರದಶೆಯವರಿಗೆ ಹಣಹೊಳೆಯನ್ನು ನಾನಾ ಭಾಗಗಳಿಂದ ಪಡೆಯಬಹುದು. ನಿಮ್ಮ ಅಜ್ಞಾನದಿಂದ ಆದ ಕೆಲಸಕ್ಕೆ ನೀವೇ ಹೊಣೆಗಾರರಾಗುವಿರಿ. ಮನಸ್ಸಿನಲ್ಲಿಯೇ ಸಂಕಟಪಟ್ಟುಕೊಳ್ಳುವಿರಿ. ಆಪ್ತರೊಂದಿಗೆ ಹಂಚಿಕೊಳ್ಳಿ, ಸಮಾಧಾನ ಸಿಗಲಿದೆ. ನೂತನ ವಸ್ತ್ರವನ್ನು ಧರಿಸುವಿರಿ. ಸುಂದರವಾಗಿ ಕಾಣುವಿರಿ. ಫಲಾಪೇಕ್ಷೆಯಿಂದ ಧಾರ್ಮಿಕ ಆಚರಣೆ ಮಾಡುವಿರಿ.

ಮಿಥುನ ರಾಶಿ: ಫೆಬ್ರವರಿಯ ಮೊದಲ ವಾರದಲ್ಲಿ ರಾಶಿಯ ಅಧಿಪತಿ ಬುಧನು ಅಷ್ಟಮದಲ್ಲಿ ಸೂರ್ಯನ ಜೊತೆ ಇದ್ದಾನೆ. ನಿಮ್ಮ ಆಪ್ತರೇ ನಿಮಗೆ ಶತ್ರುಗಳಾಗಬಹುದು. ನಿಮಗೆ ಬರಬೇಕಾದ ಹಣವು ಬರಲಿದೆ. ಮನಸ್ಸಿನಲ್ಲಿ ತುಂಬಾ ಗೊಂದಲವು ಇರಲಿದೆ. ಹಿರಿಯರ ಸಲಹೆಯನ್ನು ಪಡೆಯಿರಿ. ಕುಟುಂಬದವರ ಆರೋಗ್ಯದಲ್ಲಿ ತೊಂದರೆ. ಸುಮ್ಮನೆ ಸ್ವಲ್ಪ ಹೊತ್ತು ಕುಳಿತುಕೊಳ್ಳಿ. ಮನಸ್ಸು ಶಾಂತವಾಗುವುದು. ಒತ್ತಡದಲ್ಲಿ ಸಿಲುಕಿಕೊಳ್ಳಬೇಡಿ. ಸಾರ್ವಜನಿಕಾಗಿ ಗೌರವಗಳು ಸಿಗಲಿವೆ. ನಿಮ್ಮ ಮಾತನ್ನು ಮನೆಯವರು ಒಪ್ಪುವರು. ತಂದೆಯ ಬಗ್ಗೆ ಚಿಂತೆಯಾಗುವುದು. ಸಂತಸ ವಾತಾವರಣವು ಮನೆಯಲ್ಲಿ ಇರುವುದು. ಯಾರ ಮೇಲೂ ಅನುಮಾನವನ್ನು ಪಡಬೇಡಿ. ಎಲ್ಲಿಗಾದರೂ ದೂರ ಪ್ರಯಾಣವನ್ನು ಮಾಡುವ ಆಸೆ ಬರಲಿದೆ. ತೊಂದರೆಗಳನ್ನು ಅಲ್ಪವಾಗಿಯೇ ಕಡಿಮೆ ಮಾಡಿಕೊಳ್ಳಲು ರಾಮರಕ್ಷಾಸ್ತೋತ್ರವನ್ನು ಮಾಡಿ.

ಕರ್ಕಾಟಕ ರಾಶಿ: ರಾಶಿ ಚಕ್ರದ ನಾಲ್ಕನೇ ರಾಶಿಯವರಿಗೆ ಈ ವಾರದಲ್ಲಿ ರಾಶಿಯ ಅಧಿಪತಿ ಶುಭಗ್ರಹರ ಜೊತೆ ಇರುವ ಕಾರಣ ಅಂದುಕೊಂಡ ಕಾರ್ಯವನ್ನು ಸಾಧಿಸುವಿರಿ. ವಾರದ ಮಧ್ಯದಲ್ಲಿ ಮನಸ್ತಾಪ ಅಥವಾ ಮಾನಸಿಕ ಒತ್ತಡದಿಂದ ಖಿನ್ನತೆ ಎದುರಾದೀತು. ನಿಮ್ಮವರಿಗೆ ಅಥವಾ ಅಪರಿಚಿತರಿಗೆ ಧನಸಹಾಯವನ್ನು ಮಾಡಲಿದ್ದೀರಿ. ವಿವಾಹಕ್ಕೆ ವರನ ಕಡೆಯಿಂದ ವಿಘ್ನಗಳು ಬರಬಹುದು. ಅಧರ್ಮ ಮಾರ್ಗದಲ್ಲಿ ನಡೆಯುವ ಮನಸ್ಸು ಮಾಡುವಿರಿ. ಖರ್ಚು ಹೆಚ್ಚಾಗಬಹುದು. ವಿಷಮಶೀತಜ್ವರವು ಕಾಣಿಸಿಕೊಳ್ಳಬಹುದು‌. ಯಾರನ್ನಾದರೂ ನಿಂದಿಸುವ ಕೆಲಸವನ್ನು ಮಾಡುವಿರಿ. ನಿಮ್ಮ ಅಂತರಂಗವು ಸರಿಯಾಗಿ ಇನ್ನೊಬ್ಬರಿಗೆ ತಿಳಿಯುವುದು. ನಿಮ್ಮ ಸ್ವಭಾವವು ಇತರರಿಗೆ ಇಷ್ಟವಾಗದೇ ಹೋಗಬಹುದು. ವಿವಾಹಕ್ಕೆ ಅಡಚಣೆ ಆದರೆ ಸ್ವಯಂವರ ಪಾರ್ವತಿ ಮಂತ್ರ ಮಠಿಸಿ.

ಸಿಂಹ ರಾಶಿ: ಇದು ಸೂರ್ಯನ ರಾಶಿಯಾಗಿದ್ದು, ಈ ವಾರ ರಾಶಿಯ ಅಧಿಪತಿ ಷಷ್ಠದಲ್ಲಿ ಇರುವನು‌ ಮಕ್ಕಳ ನಡುವೆ ಕಲಹ ಹಾಗೂ ನಿಮಗೆ ಜಯ ಪ್ರಾಪ್ತವಾಗಲಿದೆ. ನಂಬಿ ಮೋಸ ಹೋಗುವ ಸಾಧ್ಯತೆ ಇದೆ. ಧನದ ವ್ಯವಹಾರದಲ್ಲಿ ನೀವು ಇಂದು ತುಂಬಾ ನಿಪುಣತೆಯನ್ನು ತೋರಿಸುವಿರಿ. ವ್ಯಕ್ತಿಗಳ ನಿಂದನೆಯನ್ನು ಮಾಡುವ ಕೆಲಸಕ್ಕೆ ವಿರಾಮವನ್ನು ಹೇಳಿ. ಯುಕ್ತಿಯಿಂದ ಸೋಲಿಸುವಲ್ಲಿ ನಿಮ್ಮ ಪಾತ್ರ ದೊಡ್ಡದು. ಇಲ್ಲವಾದರೆ ನಿಮಗೇ ಕಂಟಕವಾದೀತು. ನಿರಂತರವಾದ ಶ್ರಮದಿಂದ ಬಳಲಲಿದ್ದೀರಿ. ಪಿತ್ರಾರ್ಜಿತ ಆಸ್ತಿಯ ಅನುಭವಿಸುವ ಆಸೆಯನ್ನು ಇಟ್ಟಿಕೊಂಡಿದ್ದೀರಿ. ಸಮಯವನ್ನು ಸದುಪಯೋಗ ಮಾಡಿಕೊಳ್ಳುವ ಕಲೆಯನ್ನು ಕರಗತ ಮಾಡಿಕೊಳ್ಳಿ. ನಿಮ್ಮ ಸುತ್ತಲಿನ ವಾತಾವರಣವನ್ನು ನೋಡಿಕೊಂಡು ಮಾತನಾಡಿ. ಆರೋಗ್ಯದ ಬಗ್ಗೆ ಚಿಂತೆ ಹೆಚ್ಚು. ಆದಿತ್ಯ ಹೃದಯವನ್ನು ಪಠಿಸಿ.

ಕನ್ಯಾ ರಾಶಿ; ಇದು ರಾಶಿ ಚಕ್ರದ ಆರನೇ ರಾಶಿಯಾಗಿದ್ದು, ರಾಶಿಯ ಅಧಿಪತಿ ಬುಧನು ಪಂಚಮದಲ್ಲಿ ಇರುವನು. ಪುಣ್ಯವನ್ನು ಸಂಪಾದಿಸುವ ಕೆಲಸವನ್ನು ಮಾಡುವಿರಿ. ಅತಿಯಾದ ಆತ್ಮವಿಶ್ವಾಸವು ನಿಮ್ಮನ್ನು ತಗ್ಗಿಸೀತು. ವಿದ್ಯಾಭ್ಯಾಸಕ್ಕೆ ಉತ್ತಮ ಅವಕಾಶ, ಸ್ಥಾನಗಳು ಪ್ರಾಪ್ತವಾಗಲಿವೆ. ಮಹತ್ತ್ವಪೂರ್ಣಗ್ರಂಥವನ್ನು ರಚಿಸಲು ಇಂದು ಮುಂದಾಗಬಹುದು‌. ನಿಮ್ಮನ್ನು ಇಷ್ಟಪಡುವವರ ಜೊತೆ ನೀವು ಕೆಲವು ಸಮಯವಿರಬೇಕಾಗುತ್ತದೆ. ರಾಜಕೀಯ ವ್ಯಕ್ತಿಗಳಿಂದ ಪ್ರೇರಿತರಾಗಿ ಕಾರ್ಯವನ್ನು ಮಾಡುವಿರಿ. ಸರಳ ಸಮಾರಂಭದಲ್ಲಿ ಭಾಗಿಯಾಗಬಹುದು. ನಿಮ್ಮನ್ನು ಬೇರೆ ರೀತಿಯಲ್ಲಿ ಬಿಂಬಿಸಿಕೊಳ್ಳುವಿರಿ. ಬುಧ‌ನ ದಶೆಯಿದ್ದವರಿಗೆ ಕೌಶಲದಲ್ಲಿ ಪ್ರಗತಿ. ಸಮಯವನ್ನು ಕಳೆಯಲು ಬಹಳ ಪ್ರಯಾಸಪಡಲಿದ್ದೀರಿ. ಕರ್ತವ್ಯಗಳನ್ನು ಮಾಡಿ ಮುಗಿಸಿ. ರಾಮನ ಸನ್ನಿಧಿಯಲ್ಲಿ ಸೇವೆಯನ್ನು ಮಾಡುವಿರಿ.

ತುಲಾ ರಾಶಿ: ರಾಶಿ ಚಕ್ರದ ಏಳನೇ ರಾಶಿಯವರಿಗೆ ರಾಶಿಯ ಅಧಿಪತಿ ಷಷ್ಠಕ್ಕೆ ಹೋಗಲಿದ್ದು, ಶತ್ರುಗಳಿಗೆ ಬೇಡದ ಸಹಕಾರವನ್ನು ಒದಗಿಸುವನು. ಕ್ರೀಡಾಸಕ್ತರಾದ ನೀವು ಸ್ಪರ್ಧೆಯಲ್ಲಿ ಭಾಗವಹಿಸುವಿರಿ. ಶುಕ್ರ ದಶೆ ಕಷ್ಟಕರವಾದುದು. ಆಪ್ಪರೆಲ್ಲ ದೂರವಾಗುವರು. ಬಂಧುಗಳಿಂದ ನಿಮಗೆ ಧನಸಹಾಯವು ಸಿಗಲಿದೆ. ಪ್ರೀತಿಪಾತ್ರರ ಭೇಟಿಯಾಗಲಿದೆ. ವಿನಾಕಾರಣ ವಾಗ್ವಾದಗಳು ನಡೆಯಬಹುದು. ನ್ಯಾಯಾಲಯದಲ್ಲಿ ನಿಮಗೆ ಜಯವು ಸಿಗಲಿದೆ. ಭೂಮಿಯ ವ್ಯವಹಾರದಲ್ಲಿ ನೀವು ಹಣವನ್ನು ಸಂಪಾದಿಸಲಿದ್ದೀರಿ. ನಿಮಗೆ ಇಷ್ಟಾವದ ನಗರಕ್ಕೆ ಹೋಗಲು ತಯಾರಿ ನಡೆಸುವಿರಿ. ಹಿರಿಯರೇ ನಿಮ್ಮ ಬಗ್ಗೆ ಸಲ್ಲದ ಮಾತುಗಳನ್ನು ಆಡುವರು. ವ್ಯಾಪಾರವನ್ನು ಬಹಳ ಜಾಣ್ಮೆಯಿಂದ ಮಾಡುವಿರಿ. ಕೈಯ್ಯಲ್ಲಿರುವ ಹಣವನ್ನು ಪೂರ್ತಿಯಾಗಿ ಖಾಲಿ ಮಾಡಿಕೊಳ್ಳುವಿರಿ. ಮಹಾಗೌರಿಯನ್ನು ಅನನ್ಯ ಭಕ್ತಿಯಿಂದ ಧ್ಯಾನಿಸಿ.

ವೃಶ್ಚಿಕ ರಾಶಿ: ಈ ರಾಶಿಯವರಿಗೆ ಮೊದಲ ವಾರದಲ್ಲಿ ರಾಶಿಯ ಅಧಿಪತಿ ಅಷ್ಟಮದಲ್ಲಿ ಇದ್ದು ಪ್ರೇಮಭಂಗವನ್ನು ಮಾಡಿಸುವನು. ಭೂಮಿಯ ವಿಚಾರದಲ್ಲಿ ನಿಮಗೆ ಅಕ್ಕ ಪಕ್ಕದವರು ತೊಂದರೆ ಕೊಡಬಹುದು. ವಾಹನಚಾಲನೆ ಮಾಡುವಾಗ ಜಾಗರೂಕರಾಗಿರಿ. ನಕಾರಾತ್ಮಕ ಚಿಂತನೆಗಳೇ ನಿಮ್ಮ ತಲೆಯಲ್ಲಿ ಓಡಾಡಬಹುದು. ಇನ್ನೊಬ್ಬರಿಂದ ಅಪಘಾತವಾಗುವ ಸಾಧ್ಯತೆ. ಭಯದ ವಾತಾವರಣದಲ್ಲಿ ಇರುವಿರಿ. ವೈದ್ಯಕೀಯ ಕ್ಷೇತ್ರಕ್ಕೆ ಹೋಗಲು ಬಯಸುವವರು ತಮ್ಮ ನಿರ್ಧಾರವನ್ನು ಗಟ್ಟಿ ಮಾಡಳ್ಳಬೇಕಿದೆ. ವಿನಾಕಾರಣ ನಿಮ್ಮನ್ನು ರೇಗಿಸುವರು. ಕೆಲಸವು ನಿಧಾನವಾದುದರಿಂದ ನಿಮಗೆ ನಿರಾಸೆಯಾಗಬಹುದು. ಆಧಿಕಾರಿಗಳಾಗಿದ್ದರೆ ನಿಮ್ಮ ಉದ್ಯೋಗಗಿಗಳ ಜೊತೆ ಕೆಲಸದ ನಿಮಿತ್ತ ಕಲಹವಾಡುವಿರಿ. ದುರ್ಗಾಮಾತೆಗೆ ಶರಣಾಗಿ.

ಧನು ರಾಶಿ: ರಾಶಿ ಚಕ್ರದ ಒಂಭತ್ತನೇ ರಾಶಿಯವರಿಗೆ ರಾಶಿಯ ಅಧಿಪತಿ ಷಷ್ಠದಲ್ಲಿ ಇರುವುದರಿಂದ ಬಂಧುಗಳ ಬಗ್ಗೆ ಅಸಮಾಧಾನ, ತಂದೆಯಿಂದ ಅಗೌರವ. ಗೃಹಬಳಕೆಯ ವಸ್ತುಗಳನ್ನು ಖರೀದಿ‌ ಮಾಡಲಿದ್ದೀರಿ. ನಿಮ್ಮ ಆಪ್ತರಿಗೆ ಅಮೂಲ್ಯವಾದ ಉಡುಗೊರೆಯನ್ನು ನೀಡುವಿರಿ. ವಾಹನದಿಂದ ನಿಮಗೆ ಖರ್ಚು ಹೆಚ್ಚಾಗಬಹುದು. ಮಾತನ್ನು ಆಡುವಾಗ ಪದಗಳ ಮೇಲೆ ಗಮನವಿರಲಿ. ಕೆಲವು ಪದಗಳೂ ನಿಮ್ಮ ಜೊತೆ ವೈಮನಸ್ಯವನ್ನು ತರುವುದು. ಆಪ್ತರ ಅಗಲಿಕೆಯ ವಾರ್ತೆಯು ನಿಮಗೆ ಬೇಸರವನ್ನು ತರಿಸಬಹುದು. ಸಂಗಾತಿಯು ನಿಮ್ಮ ಬಗ್ಗೆ ಮನಸ್ತಾಪವನ್ನು ತೋರಿಸುವರು. ಭವಿಷ್ಯದ ಕುರಿತು ಆಲೋಚನೆಯಲ್ಲಿ ಮಗ್ನರಾಗಿರುತ್ತೀರಿ. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟಂತೆ ನಿಮ್ಮಲ್ಲಿ ಒಂದಿಷ್ಟು ಗೊಂದಲಗಳು ಇರಬಹುದು. ಬೇಗ ಪರಿಹರಿಸಿಕೊಂಡು ಮುನ್ನಡೆಯುವುದು ಉತ್ತಮ. ಪ್ರಾಜ್ಞರ ಮಾರ್ಗದರ್ಶನ ಅವಶ್ಯಕ. ಆಶೀರ್ವಾದ ಪಡೆಯಿರಿ.

ಮಕರ ರಾಶಿ: ಫೆಬ್ರರಿಯ ಮೊದಲ ವಾರದಲ್ಲಿ ರಾಶಿಯ ಅಧಿಪತಿ ದ್ವಿತೀಯದಲ್ಲಿ ಇದ್ದು ಸಂಪತ್ತಿನ ಬಗ್ಗೆ ಮೋಹ ಕಡಿಮೆಯಾಗುವುದು. ತಾಯಿಯ ಕಾರಣಕ್ಕೆ ದುಃಖಿಸಬೇಕಾಗುವುದು. ಆಲೋಚನೆಗಳು ಬುಡಮೇಲಾಗಿ ಹತಾಶೆಯ ಭಾವವು ಮೂಡುವುದು. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯಲಿವೆ. ಇಂದು ವಾಹನದ ಸಮಯವು ವ್ಯತ್ಯಾಸವಾದ್ದರಿಂದ ನಡೆಯಬೇಕಾಗ ಸ್ಥಿತಿ ಬರಬಹುದು. ಹದಗೆಟ್ಟ ಆರೋಗ್ಯದಲ್ಲಿ ಅಲ್ಪ ಮಟ್ಟಿನ ಚೇತರಿಗೆ ಇರಲಿದೆ. ಕುಟುಂಬದಲ್ಲಿ ನಿಮ್ಮ ತೊಡಗಿಕೊಳ್ಳುವಿಕೆ ಕಡಿಮೆಯಾಗುವುದು. ಮಾತುಗಾರರಾಗಿದ್ದರೆ ಒಳ್ಳೆಯ ಅವಕಾಶಗಳು ಸಿಗಲಿವೆ. ಮೋಸದಿಂದ ನಿಮ್ಮ ಹಣವು ಕಳೆದುಹೋಗುವುದು. ರಾಜಕೀಯ ಕ್ಷೇತ್ರದಲ್ಲಿ ನಿಮಗೆ ಗೌರವಗಳು ಸಿಗಲಿವೆ. ನಿಮ್ಮ ಯೋಜನೆಗಳನ್ನು ಮೆಚ್ಚಲಿದ್ದಾರೆ. ಸಮಯಕ್ಕೆ ಬೆಲೆ ಕೊಡುವುದು ಉತ್ತಮ. ಯಾರಿಂದಲೂ ಅಪಮಾನವನ್ನು ಸಹಿಸಲಾರಿರಿ.

ಕುಂಭ ರಾಶಿ: ಇದು ಎರಡನೇ ವಾರವಾಗಿದ್ದು ರಾಶಿಯ ಅಧಿಪತಿ ಬಲ ಪೂರ್ವಾಗಿದೆ. ಸಾಡೇಸಾಥ್ ಇದ್ದರೂ ಜಾತಕದಲ್ಲಿ ಉತ್ತಮಸ್ಥಾನದಲ್ಲಿ ಇದ್ದು, ಅವನ ದಶೆ ಇದ್ದರೆ ಸಕಾಲದಲ್ಲಿ ಸಂಪತ್ತು, ಮಾನ್ಯತೆಗಳು ಸಿಗಲಿವೆ. ಎಲ್ಲವನ್ನೂ ಶಕ್ತಿಯಿಂದ ಸಾಧ್ಯ ಎನ್ನುವುದನ್ನು ಮರೆತು ಯುಕ್ತಿಯಿಂದ ಎಂಬುದನ್ನು ಅರಿತುಕೊಳ್ಳುವಿರಿ. ಹತ್ತಾರು ವಿಚಾರಗಳಲ್ಲಿ ಆಸಕ್ತಿಯನ್ನು ಇಟ್ಟುಕೊಂಡರೆ, ಎಲ್ಲರ ಜೊತೆ ಬೆರೆಯಲು ಸಾಧ್ಯ. ಮಹಿಳೆಯರಿಂದ ನಿಮಗೆ ವಿರೋಧವು ಬರಬಹುದು. ಯಾರನ್ನೂ ಅತಿಯಾಗಿ ಇಷ್ಟಪಡಲಾರಿರಿ. ಸಂಪನ್ಮೂಲಗಳನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾಡುವಿರಿ. ಹಿರಿಯರ ವಿರೋಧದ ನಡುವೆಯೂ ನೀವು ನಿಮ್ಮ‌ ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಬಹು ಬೇಗನೆ ಉದ್ವೇಗಕ್ಕೆ ಒಳಗಾಗಲಾರಿರಿ. ಶನೈಶ್ಚರನಿಗೆ ನಿಮ್ಮ ಸೇವೆಯನ್ನು ಸಲ್ಲಿಸಿ.

ಮೀನ ರಾಶಿ: ಫೆಬ್ರವರಿ ತಿಂಗಳ ಮೊದಲ ವಾರದಲ್ಲಿ ರಾಶಿಯ ಅಧಿಪತಿ ಶುಕ್ರನ ರಾಶಿಯಲ್ಲಿ ಇರುವನು. ಶುಕ್ರದಶೆಯ ನಡೆಯುತ್ತಿದ್ದವರಿಗೆ ಉತ್ತಮ ಸಮಯ ಇದು. ಕೆಲವು ಸಮಯ ಆಶಾಗೋಪುರವು ಕಳಚಿ ಬೀಳುವಂತೆ ನಿಮಗೆ ಅನ್ನಿಸಬಹುದು.‌ ವಾಸ್ತವವಾಗಿ ನಿಮಗೆ ಅನುಕೂಲವೇ ಆಗಿರಲಿದೆ. ನೀವು ಅಂದುಕೊಂಡ ರೀತಿಯಲ್ಲಿ ನಡೆಯದೇ ವಿರುದ್ಧವಾಗಿ ನಡೆಯುವುದನ್ನು ಕಂಡು ನಿರಾಸೆಗೊಳ್ಳುವಿರಿ. ಧನಪ್ರಾಪ್ತಿಯು ಆಗುವಂತೆ ಇದ್ದರೂ ಆಗದೇ ಕೈತಪ್ಪಿ ಹೋಗಬಹುದು. ವಿವಾಹ ಸಮಾರಂಭದಲ್ಲಿ ನಿಮ್ಮ ಉಪಸ್ಥಿತಿಯು ಇರಲಿದೆ. ನಿಮ್ಮ ಆಶೀರ್ವಾದವನ್ನು ಪಡೆಯಲು ಮೊಮ್ಮಕ್ಕಳು ಬರಬಹುದು. ಮಕ್ಕಳಿಂದ ಪ್ರಶಂಸೆಯು ಸಿಗಲಿದೆ. ಎಂತಹ ಸಂದರ್ಭದಲ್ಲಿಯೂ ನೀವು ನಿಮ್ಮ ಮಾರ್ಗವನ್ನು ಬಿಡಲಾರಿರಿ. ಧನಪ್ರಾಪ್ತಿಗೆ ಕುಬೇರನ ಮಂತ್ರವನ್ನು ಪಠಿಸಿ.

ಲೋಹಿತ ಹೆಬ್ಬಾರ್ – 8762924271 (what’s app only)

ದಿಗಂತ್ ಫೋನ್ ಬಂದಾಗ ಸುಜಾತಾಗೆ ಏನು ಮಾತಾಡುವುದೆಂದು ಗೊತ್ತಾಗಿಲ್ಲ!
ದಿಗಂತ್ ಫೋನ್ ಬಂದಾಗ ಸುಜಾತಾಗೆ ಏನು ಮಾತಾಡುವುದೆಂದು ಗೊತ್ತಾಗಿಲ್ಲ!
ಸಿಎಂ ಸಿದ್ದರಾಮಯ್ಯ 2016ರಲ್ಲೇ ನಿರ್ಧಾರ ಪ್ರಕಟಿಸಿದ್ದರು: ಗೋವಿಂದು
ಸಿಎಂ ಸಿದ್ದರಾಮಯ್ಯ 2016ರಲ್ಲೇ ನಿರ್ಧಾರ ಪ್ರಕಟಿಸಿದ್ದರು: ಗೋವಿಂದು
ಬಜೆಟ್ ರೂಪಿಸುವಾಗ ಉತ್ತರ-ದಕ್ಷಿಣ ತಾರತಮ್ಮ ಬೇಡ: ಮಲ್ಲಿಕಾರ್ಜುನ ಖರ್ಗೆ
ಬಜೆಟ್ ರೂಪಿಸುವಾಗ ಉತ್ತರ-ದಕ್ಷಿಣ ತಾರತಮ್ಮ ಬೇಡ: ಮಲ್ಲಿಕಾರ್ಜುನ ಖರ್ಗೆ
ಶಾಪಿಂಗ್ ಮಾಲ್ ಉದ್ಘಾಟಿಸಲು ಬಂದಿದ್ದ ಜನಪ್ರಿಯ ನಟಿ ಕೀರ್ತಿ ಸುರೇಶ್
ಶಾಪಿಂಗ್ ಮಾಲ್ ಉದ್ಘಾಟಿಸಲು ಬಂದಿದ್ದ ಜನಪ್ರಿಯ ನಟಿ ಕೀರ್ತಿ ಸುರೇಶ್
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದು 19ನೇ ಬಜೆಟ್ ಮಂಡಿಸಲಿದ್ದಾರೆ: ಯತೀಂದ್ರ
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದು 19ನೇ ಬಜೆಟ್ ಮಂಡಿಸಲಿದ್ದಾರೆ: ಯತೀಂದ್ರ
ಕೃಷಿಕ, ಮಹಿಳೆ, ಯುವಕರನ್ನು ಸಿದ್ದರಾಮಯ್ಯ ಕೈ ಬಿಟ್ಟಿದ್ದಾರೆ: ವಿಜಯೇಂದ್ರ
ಕೃಷಿಕ, ಮಹಿಳೆ, ಯುವಕರನ್ನು ಸಿದ್ದರಾಮಯ್ಯ ಕೈ ಬಿಟ್ಟಿದ್ದಾರೆ: ವಿಜಯೇಂದ್ರ
ಮುಸಲ್ಮಾನರಿಗೆ ಬಿರಿಯಾನಿ ಉಳಿದವರಿಗೆ ನೆಕ್ಕಲು ಉಪ್ಪಿನಕಾಯಿ: ನಿಖಿಲ್
ಮುಸಲ್ಮಾನರಿಗೆ ಬಿರಿಯಾನಿ ಉಳಿದವರಿಗೆ ನೆಕ್ಕಲು ಉಪ್ಪಿನಕಾಯಿ: ನಿಖಿಲ್
ದೇವೇಗೌಡರಿಗೆ ಸಿದ್ದರಾಮಯ್ಯ ಒಮ್ಮೆಯಾದರೂ ಕೃತಜ್ಞತೆ ಸಲ್ಲಿಸಿದರೆ? ವಿಶ್ವನಾಥ
ದೇವೇಗೌಡರಿಗೆ ಸಿದ್ದರಾಮಯ್ಯ ಒಮ್ಮೆಯಾದರೂ ಕೃತಜ್ಞತೆ ಸಲ್ಲಿಸಿದರೆ? ವಿಶ್ವನಾಥ
ಪುಂಡ ವಿದ್ಯಾರ್ಥಿಗಳ ಅಟ್ಟಾಡಿಸಿ ಲಾಠಿ ಬೀಸಿದ ಪೊಲೀಸರು, ವಿಡಿಯೋ ನೋಡಿ
ಪುಂಡ ವಿದ್ಯಾರ್ಥಿಗಳ ಅಟ್ಟಾಡಿಸಿ ಲಾಠಿ ಬೀಸಿದ ಪೊಲೀಸರು, ವಿಡಿಯೋ ನೋಡಿ
ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ಏಕಾಏಕಿ 8 ನಾಯಿಗಳಿಂದ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ಏಕಾಏಕಿ 8 ನಾಯಿಗಳಿಂದ ದಾಳಿ