Sign In

By signing in or creating an account, you agree with Associated Broadcasting Company's Terms & Conditions and Privacy Policy.

Daily Horoscope: ಮಕ್ಕಳಲ್ಲಿ ಬದಲಾವಣೆಯನ್ನು ಕಾಣಬಹುದು

2 ಫೆಬ್ರವರಿ​ 2025: ಭಾನುವಾರದಂದು ಮೇಷ, ವೃಷಭ, ಮಿಥುನ, ಕರ್ಕಾಟಕ, ಸಿಂಹ, ಕನ್ಯಾ ರಾಶಿಯವರ ರಾಶಿ ಭವಿಷ್ಯ ಹೇಗಿದೆ? ವೃತ್ತಿಯ ವಿಚಾರದಲ್ಲಿ ಬಹಳ ಕಠೋರವಾಗಿ ವರ್ತಿಸುವಿರಿ. ನಿಮ್ಮ ಬಯಕೆಗಳನ್ನು ಬೇರೆಯವರ ಮೂಲಕ‌ ಪೂರ್ಣ ಮಾಡಿಕೊಳ್ಳುವಿರಿ. ಹಾಗಾದರೆ ಫೆಬ್ರವರಿ 2 ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಮಕ್ಕಳಲ್ಲಿ ಬದಲಾವಣೆಯನ್ನು ಕಾಣಬಹುದು
ಮಕ್ಕಳಲ್ಲಿ ಬದಲಾವಣೆಯನ್ನು ಕಾಣಬಹುದು
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Feb 02, 2025 | 12:10 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ ೧೯೪೭ರ ಕ್ರೋಧೀ ಸಂವತ್ಸರದ ಉತ್ತರಾಯನ, ಋತು : ಶಿಶಿರ, ಸೌರ ಮಾಸ : ಮಕರ ಮಾಸ, ಮಹಾನಕ್ಷತ್ರ : ಶ್ರವಣಾ, ಮಾಸ : ಮಾಘ, ಪಕ್ಷ : ಶುಕ್ಲ, ವಾರ : ಭಾನು, ತಿಥಿ : ಪಂಚಮೀ ನಿತ್ಯನಕ್ಷತ್ರ : ರೇವತೀ, ಯೋಗ : ಶಿವ, ಕರಣ : ಭದ್ರ, ಸೂರ್ಯೋದಯ – 07 – 01 am, ಸೂರ್ಯಾಸ್ತ – 06 – 31 pm, ಇಂದಿನ ಶುಭಾಶುಭಕಾಲ : ರಾಹು ಕಾಲ 17:05 – 18:31, ಯಮಘಂಡ ಕಾಲ 12:47 – 14:13, ಗುಳಿಕ ಕಾಲ 15:39 – 17:05.

ಮೇಷ ರಾಶಿ; ಇಂದೇ ಎಲ್ಲವೂ ಆಗಬೇಕು ಎಂಬ ಹಠವು ಮೂರ್ಖತನವಾದೀತು. ನಿಮ್ಮ ಪ್ರಯತ್ನದ ದಿಕ್ಕು ಸರಿಯಾಗಿದೆಯೇ ಎಂದು ನೋಡಿ. ನಿಮಗೆ ಸಿಗುವ ಫಲವನ್ನು ಕೊಡುವವನು ಕೊಟ್ಟೇಕೊಡುತ್ತಾನೆ. ತಾಯಿ ಮಾತಿನಿಂದ ನಿಮಗೆ ಹೊಸ ಸ್ಪೂರ್ತಿಯು ಸಿಗಬಹುದು. ಸಹೋದರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಪ್ರಭಾವಶಾಲಿಗಳ ಸಹವಾಸವು ನಿಮ್ಮ ಮನಸ್ಸನ್ನು ಹಗುರಾಗಿಸುವುದು. ಕೆಲಸದಲ್ಲಿ ಇರುವಷ್ಟು ಶ್ರದ್ಧೆ ಓದಿನ ಕಡೆಗೆ ಬರದೇ ಇರಬಹುದು. ಕೆಲವನ್ನು ಮರೆತು ಮುಂದೆ ಸಾಗುವುದು ನಿಮಗೇ ಉತ್ತಮ. ನಿಮ್ಮ ಮಾತು ಇನ್ನೊಬ್ಬರಿಗೆ ನೋವನ್ನು ಕೊಡುಬಹುದು ಎಂಬ ತಿಳಿವಳಿಕೆ ಇರಲಿ. ದೂರದ ಪೋಷಕರ ಜೊತೆ ಆಪ್ತವಾಗಿ ಮಾತನಾಡುವುದು ಅವರಿಗೆ ನೆಮ್ಮದಿಯನ್ನು ಕೊಡುವುದು ಎನ್ನುವ ಅರಿವು ಇರಲಿ. ನಿಮ್ಮ ಬಳಿಯ ಹಣವನ್ನು ಕೇಳಿಕೊಂಡು ಬರಬಹುದು. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ನಿಮ್ಮ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸಿ ಸಂತೋಷಿಸುವಿರಿ.

ವೃಷಭ ರಾಶಿ: ಧಾರ್ಮಿಕ ಆಚರಣೆಗಳಲ್ಲಿ ಅತಿಯಾದ ಆಸಕ್ತಿಯು ಇರದು. ವೃತ್ತಿಯ ಅನ್ವೇಷಣೆಗೆ ಸರಿಯಾದ ಸಮಯವಲ್ಲ. ನಿಮ್ಮ ಮಾತಿಗೆ ಮೆಚ್ಚುಗೆ ಸಿಕ್ಕರೂ ಕೆಲಸ‌ ಮಾತ್ರ ಆಗದು. ಆಸ್ತಿಯ ಹಂಚಿಕೆಯಲ್ಲಿ ನಿಮಗೆ ಸಮಾಧಾನ ಇರದು. ಹಲವು ದಿನಗಳಿಂದ ಉಳಿಸಿಕೊಂಡ ವೈಯಕ್ತಿಕ ಕೆಲಸವೇ ಉಳಿಯಲಿದೆ. ಯಾರನ್ನೋ ಶಪಿಸುತ್ತ ಇರುವುದು ಮನಸ್ಸನ್ನು ಹಾಳುಮಾಡಿಕೊಳ್ಳುವಿರಿ. ಬೇಸರವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ಸಮಾರಂಭಗಳಿಗೆ ಭೇಟಿಕೊಡುವುದು, ಅಲ್ಲಿ ನಿಮ್ಮ ಸಮಯವನ್ನು ವ್ಯರ್ಥಮಾಡಿಕೊಳ್ಳುವಿರಿ. ಏನನ್ನಾದರೂ ಬಳಸುವ ಮೊದಲು ಪರೀಕ್ಷಿಸಿಕೊಳ್ಳಿ. ಮಕ್ಕಳಲ್ಲಿ ಬದಲಾವಣೆಯನ್ನು ನೀವು ಕಾಣಬಹುದು. ಮೃದುವಾದ ಮಾತನ್ನು ನೀವು ಅಭ್ಯಾಸ ಮಾಡಿಕೊಳ್ಳಬೇಕಾದೀತು. ನಿಮ್ಮ ಕಾರ್ಯದಲ್ಲಿ ಮಗ್ನರಾಗಿ ಎಲ್ಲರನ್ನೂ ಮರೆಯುವಿರಿ. ಬಂಧುಗಳ ಜೊತೆ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಇಂದು ಹೊರಗಿನ ಆಹಾರವನ್ನು ತಿನ್ನುವ ಸ್ಥಿತಿ ಬರಬಹುದು. ಅಸ್ಥಿರತೆಯು ನಮಗೆ ಗೊಂದಲವನ್ನು ಸೃಷ್ಟಿಸುವುದು.

ಮಿಥುನ ರಾಶಿ: ಆಡಳಿತ ಚುಕ್ಕಾಣಿ ನಿಮ್ಮ ಕೈಗೆ ಸಿಗುವ ಸಾಧ್ಯತೆ ಇದೆ. ಕಛೇರಿಯಲ್ಲಿ ನಿಮಗೆ ತಪ್ಪಿತಸ್ಥ ಭಾವವು ಬರಬಹುದು. ಸರ್ಕಾರಿ ಕೆಲಸಕ್ಕಾಗಿ ಹಣವನ್ನು ಕೊಡುವಿರಿ. ಯಾರಿಗೂ ಎತ್ತರದ ದನಿಯನ್ನು ಮಾಡುವುದು ಬೇಡ. ನಿಮ್ಮ ಬಗ್ಗೆ ತಪ್ಪು ಕಲ್ಪನೆಯು ಬರಬಹುದು. ಮಕ್ಕಳ ವಿಚಾರದಲ್ಲಿ ತಾರತಮ್ಯವನ್ನು ಮಾಡುವಿರಿ. ಅಧಿಕೃತ ಮುದ್ರೆ ಇಲ್ಲದೇ ಯಾವುದನ್ನೂ ಒಪ್ಪುವುದು ಬೇಡ. ಇನ್ಮೊಬ್ಬರ ಜೊತೆ ಕೂಡಲೆ ಭಾವನಾತ್ಮಕವಾಗಿ ಇಂದು ಸೇರಿಕೊಳ್ಳಲಾಗದು. ನಿಮ್ಮ ಅನಾರೋಗ್ಯವನ್ನು ಬಹಳವಾಗಿ ನಿರ್ಲಕ್ಷಿಸುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು, ಆದರೂ ಮಾತಿಗೆ ತಪ್ಪಲಾರಿರಿ. ಅಸಾಧ್ಯವಾದ ಕಾರ್ಯದ ಬಗ್ಗೆ ಅತಿಯಾದ ಒಲವು ಬೇಡ. ನಿಮ್ಮಷ್ಟಕ್ಕೆ ನೀವಿರುವುದು ಸುಖ. ಬಡ್ಡಿಯ ಹಣದಿಂದ ನಿಮಗೆ ವಂಚನೆ ಸಾಧ್ಯವಾಗುವುದು. ಉನ್ನತ ಹುದ್ದೆಗೆ ಹೋಗಲು ಅವಕಾಶವಿದ್ದರೂ ನಿಮಗೆ ನಾನಾ ಕಾರಣಗಳಿಂದ ಬೇಡವೆನಿಸುವುದು. ಇಂದು ಯಾರ ಬಗ್ಗೆಯೂ ಸರಿ ಹಾಗೂ ತಪ್ಪುಗಳನ್ನು ಹೇಳುವುದು ಕಷ್ಟವಾದೀತು.

ಕರ್ಕಾಟಕ ರಾಶಿ: ನಿಮ್ಮ ಕಾರ್ಯದಲ್ಲಿ ವೇಗ ಹೆಚ್ಚಾಗುವುದು. ಇದರಿಂದ ಕೆಲಸ ಹಾಳಾಗುವ ಸಾಧ್ಯತೆಯೂ ಇದೆ. ಕಛೇರಿ ಹಾಗೂ ಕುಟುಂಬ ಎರಡೂ ನಿಮಗೆ ಒತ್ತಡವನ್ನು ತಂದೀತು. ನೂತನ ವಸ್ತುಗಳನ್ನು ಕಡಿಮೆ ಬೆಲೆಗೆ ಪಡೆದುಕೊಳ್ಳುವಿರಿ. ನಿಮ್ಮ ಕಲೆಗೆ ಸರಿಯಾದ ಪ್ರೋತ್ಸಾಹವು ಸಿಗಲಿದೆ. ವೃತ್ತಿಯಲ್ಲಿ ನೀವು ತುಂಬಾ ನಿಧಾನದಿಂದ ಕೆಲಸ ಮಾಡುವಿರಿ. ದೂರ ಬಂಧುಗಳಿಂದ ನಿಮ್ಮ ವಿವಾಹ ನಿಶ್ಚಯವಾಗಬಹುದು. ಮನಸ್ಸು ಕೆಡಿಸಿಕೊಂಡು ಏನೂ ಮಾಡಲಾಗದು. ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಬರಲಿದೆ. ಮಕ್ಕಳ ವಿಚಾರಕ್ಕೆ ಗೊಂದಲ. ಶಾಂತವಾಗಿ, ಸಮಾಧಾನ ಚಿತ್ತದಿಂದ ಮುಂದುವರಿಯಿರಿ. ಕಳೆದುಕೊಂಡ ವಸ್ತುಗಳು ವಿಳಂಬವಾಗಿ ಬೆಳಕಿಗೆ ಬಂದೀತು. ಹಿರಿಯ ಮಾತನ್ನು ತಿರಸ್ಕರಿಸುವ ಸ್ವಭಾವವಿರುವುದು. ಸಂಗಾತಿಯ ನಿಲುವನ್ನು ನೀವು ಒಪ್ಪದೇ ಕಲಹ. ನಿಮ್ಮ ನಿರ್ಧಾರವು ಸರಿಯಾಗಿದೆಯೇ ಎಂದು ಅವಲೋಕನ ಮಾಡಿಕೊಳ್ಳಿ. ಅಪರಿಚಿತರ ಜೊತೆ ಅವಶ್ಯಕತೆಯಷ್ಟೇ ವ್ಯವಹರಿಸಿ. ಭವಿಷ್ಯದ ಅನೇಕ ದ್ವಂದ್ವಗಳು ಇರಬಹುದು.

ಸಿಂಹ ರಾಶಿ: ತಾಳ್ಮೆಯ ಕಟ್ಟೆಯನ್ನು ಮತ್ತಷ್ಟು ಗಟ್ಟಿಮಾಡಿಕೊಳ್ಳಬೇಕು. ಅಕಾರಣವಾಗಿ ಮನಸ್ಸು ಸಂತೋಷದಿಂದ ಇರಲಿದೆ. ಕುಟುಂಬವು ನಿಮ್ಮ ಬಗ್ಗೆ ಹಲವು ಕನಸುಗಳನ್ನು ಇಟ್ಟುಕೊಂಡಿದೆ. ದೊಡ್ಡ ವ್ಯಾಪಾರದಲ್ಲಿ ಉತ್ತಮ ಲಾಭವನ್ನು ಇಂದು ನಿರೀಕ್ಷಿಸುಬುದು ಬೇಡ. ಅಪರಿಚಿತರ ಜೊತೆ ಸಲುಗೆ ಬೆಳೆಯಬಹುದು. ನಿಮ್ಮ ಪ್ರಬುದ್ಧತೆಯ ಮಾತುಗಳಿಂದ ಎಲ್ಲರಿಗೂ ಅಚ್ಚರಿಯಾಗಬಹುದು. ಯಾರ ಬಗ್ಗೆಯೂ ಹಗುರಾದ ಮಾತುಗಳನ್ನು ಆಡುವುದು ಬೇಡ. ಹಣಕಾಸಿನ ಉಳಿತಾಯದ ಬಗ್ಗೆ ತಜ್ಞರ ಜೊತೆ ಮಾತನಾಡುವಿರಿ, ನಿರ್ಧಾರಕ್ಕೆ ಬರುವಿರಿ. ನಿಮ್ಮದಲ್ಲದ ವಸ್ತುವನ್ನು ಬಳಸಿಕೊಂಡು ಹಾಳು ಮಾಡುವಿರಿ. ಹಳೆಯ ಪ್ರೇಮವು ಬೆಳಕಿಗೆ ಬಂದು ಮುಜುಗರ ಉಂಟಾದೀತು. ವಾಹನದ ಉದ್ಯೋಗ ನಡೆಸುವವರಿಗೆ ಲಾಭ. ದುರಭ್ಯಾಸವು ಸಹವಾಸದಿಂದ ಬಿಟ್ಟುಹೋಗಲಿದೆ. ಯಾವುದೇ ಪ್ರಭಾವಕ್ಕೆ ಸಿಕ್ಕಿ ನಿಮ್ಮನ್ನು ಬದಲಿಸಿಕೊಳ್ಳಬೇಕಾಗಬಹುದು.

ಕನ್ಯಾ ರಾಶಿ: ವೃತ್ತಿಯ ವಿಚಾರದಲ್ಲಿ ಬಹಳ ಕಠೋರವಾಗಿ ವರ್ತಿಸುವಿರಿ. ನಿಮ್ಮ ಬಯಕೆಗಳನ್ನು ಬೇರೆಯವರ ಮೂಲಕ‌ ಪೂರ್ಣ ಮಾಡಿಕೊಳ್ಳುವಿರಿ. ಆಡಳಿತಕ್ಕೆ ಸಂಬಂಧಿಸಿದ ಕಾರ್ಯವು ಸುಗಮವಾಗಿರುವುದು. ವ್ಯಾಪಾರ ಚಟುವಟಿಕೆಗಳು ನಿಮ್ಮ‌ ಮನೋವೇಗಕ್ಕೆ ಸಿಗದು. ಒಳ್ಳೆಯ ಜನರ ಸಹವಾಸವನ್ನು ಬಯಸುವಿರಿ. ಸ್ವಪ್ರತಿಷ್ಠೆ ಹೆಚ್ಚಾಗುತ್ತದೆ. ಪರರ ಬಾಧ್ಯತೆಗಳಿಗೆ ಸ್ಪಂದಿಸುವಿರಿ. ಪೂರ್ವಾಪರ ಯೋಚನೆ ಇಲ್ಲದೇ ಒಂದು ಕೆಟ್ಟ ನಿರ್ಧಾರವನ್ನು ತೆಗೆಸುಕೊಳ್ಳುವಿರಿ. ಸಹೋದರರು ನಿಮ್ಮ ಬಗ್ಗೆ ಹಗುರಾಗಿ ಮಾತನಾಡಿದ್ದು ನಿಮ್ಮ ಕಿವಿಗೆ ಮೂರನೇ ವ್ಯಕ್ತಿಗಳಿಂದ ಗೊತ್ತಾಗಲಿದೆ. ಅಧ್ಯಯನಾಕಾಂಕ್ಷಿಗಳಿಗೆ ಉತ್ತಮ ಅವಕಾಶ ಸಿಗಲಿದೆ. ಸ್ಥಿರಾಸ್ತಿಯ ಬಗ್ಗೆ ಸರಿಯಾದ ಕಣ್ಣಿಡುವ ಅಗತ್ಯವಿದೆ. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಅಧಿಕ ಶ್ರಮಿಸುವಿರಿ. ನಿಮಗೆ ಕೊಟ್ಟ ಜವಾಬ್ದಾರಿಯು ಹಸ್ತಾಂತರ ಆಗಬಹುದು. ಅಸ್ಥಿರವೆನಿಸು ವಸ್ತು ಹಾಗೂ ವ್ಯಕ್ತಿಗಳ ಮೇಲೆ ಹಣವನ್ನು ಹಾಕಲಾರಿರಿ.

ಸಿಎಂ ಸಿದ್ದರಾಮಯ್ಯ 2016ರಲ್ಲೇ ನಿರ್ಧಾರ ಪ್ರಕಟಿಸಿದ್ದರು: ಗೋವಿಂದು
ಸಿಎಂ ಸಿದ್ದರಾಮಯ್ಯ 2016ರಲ್ಲೇ ನಿರ್ಧಾರ ಪ್ರಕಟಿಸಿದ್ದರು: ಗೋವಿಂದು
ಬಜೆಟ್ ರೂಪಿಸುವಾಗ ಉತ್ತರ-ದಕ್ಷಿಣ ತಾರತಮ್ಮ ಬೇಡ: ಮಲ್ಲಿಕಾರ್ಜುನ ಖರ್ಗೆ
ಬಜೆಟ್ ರೂಪಿಸುವಾಗ ಉತ್ತರ-ದಕ್ಷಿಣ ತಾರತಮ್ಮ ಬೇಡ: ಮಲ್ಲಿಕಾರ್ಜುನ ಖರ್ಗೆ
ಶಾಪಿಂಗ್ ಮಾಲ್ ಉದ್ಘಾಟಿಸಲು ಬಂದಿದ್ದ ಜನಪ್ರಿಯ ನಟಿ ಕೀರ್ತಿ ಸುರೇಶ್
ಶಾಪಿಂಗ್ ಮಾಲ್ ಉದ್ಘಾಟಿಸಲು ಬಂದಿದ್ದ ಜನಪ್ರಿಯ ನಟಿ ಕೀರ್ತಿ ಸುರೇಶ್
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದು 19ನೇ ಬಜೆಟ್ ಮಂಡಿಸಲಿದ್ದಾರೆ: ಯತೀಂದ್ರ
ಸಿದ್ದರಾಮಯ್ಯ ಸಿಎಂ ಆಗಿ ಮುಂದುವರಿದು 19ನೇ ಬಜೆಟ್ ಮಂಡಿಸಲಿದ್ದಾರೆ: ಯತೀಂದ್ರ
ಕೃಷಿಕ, ಮಹಿಳೆ, ಯುವಕರನ್ನು ಸಿದ್ದರಾಮಯ್ಯ ಕೈ ಬಿಟ್ಟಿದ್ದಾರೆ: ವಿಜಯೇಂದ್ರ
ಕೃಷಿಕ, ಮಹಿಳೆ, ಯುವಕರನ್ನು ಸಿದ್ದರಾಮಯ್ಯ ಕೈ ಬಿಟ್ಟಿದ್ದಾರೆ: ವಿಜಯೇಂದ್ರ
ಮುಸಲ್ಮಾನರಿಗೆ ಬಿರಿಯಾನಿ ಉಳಿದವರಿಗೆ ನೆಕ್ಕಲು ಉಪ್ಪಿನಕಾಯಿ: ನಿಖಿಲ್
ಮುಸಲ್ಮಾನರಿಗೆ ಬಿರಿಯಾನಿ ಉಳಿದವರಿಗೆ ನೆಕ್ಕಲು ಉಪ್ಪಿನಕಾಯಿ: ನಿಖಿಲ್
ದೇವೇಗೌಡರಿಗೆ ಸಿದ್ದರಾಮಯ್ಯ ಒಮ್ಮೆಯಾದರೂ ಕೃತಜ್ಞತೆ ಸಲ್ಲಿಸಿದರೆ? ವಿಶ್ವನಾಥ
ದೇವೇಗೌಡರಿಗೆ ಸಿದ್ದರಾಮಯ್ಯ ಒಮ್ಮೆಯಾದರೂ ಕೃತಜ್ಞತೆ ಸಲ್ಲಿಸಿದರೆ? ವಿಶ್ವನಾಥ
ಪುಂಡ ವಿದ್ಯಾರ್ಥಿಗಳ ಅಟ್ಟಾಡಿಸಿ ಲಾಠಿ ಬೀಸಿದ ಪೊಲೀಸರು, ವಿಡಿಯೋ ನೋಡಿ
ಪುಂಡ ವಿದ್ಯಾರ್ಥಿಗಳ ಅಟ್ಟಾಡಿಸಿ ಲಾಠಿ ಬೀಸಿದ ಪೊಲೀಸರು, ವಿಡಿಯೋ ನೋಡಿ
ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ಏಕಾಏಕಿ 8 ನಾಯಿಗಳಿಂದ ದಾಳಿ
ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆ ಮೇಲೆ ಏಕಾಏಕಿ 8 ನಾಯಿಗಳಿಂದ ದಾಳಿ
ಪಕ್ಷದ ನಾಯಕರು ಮೂಲತಃ ಕಾರ್ಯಕರ್ತರು ಅಂತ ಮರೆಯಬಾರದು: ರವಿ
ಪಕ್ಷದ ನಾಯಕರು ಮೂಲತಃ ಕಾರ್ಯಕರ್ತರು ಅಂತ ಮರೆಯಬಾರದು: ರವಿ