ಈ ನಕ್ಷತ್ರದಲ್ಲಿ‌ ಜನಿಸಿದವರು ಹೇಗಿರಬಹುದು? ಇವರಿಗೆ ಪರಸ್ತ್ರೀಯರ ಸಹವಾಸ ಹೆಚ್ಚು

ನಿಮ್ಮ ನಕ್ಷತ್ರದ ಹಸ್ತ ನಕ್ಷತ್ರ ಆಗಿದ್ದರೆ, ನೀವು ಈ ಗುಣಗಳನ್ನು ಹೊಂದಿರುತ್ತೀರಾ, ಸೂರ್ಯನು ಹೇಗೆ ನಿತ್ಯೋತ್ಸಾಹಿಯಾಗಿ ಪ್ರತಿದಿನ ಪ್ರತಿಕ್ಷಣ ಖಗೋಳದಲ್ಲಿ ನಿಗಿನಿಗಿಯುತ್ತಿರುವನೋ ಅದೇ ರೀತಿಯಲ್ಲಿ ಎಲ್ಲ ಕಾರ್ಯದಲ್ಲಿ ಉತ್ಸಾಹವನ್ನು ಕಾಣಬಹದು. ಇದು ಹಸ್ತದ ಆಕಾರದಲ್ಲಿ ಕಾಣುವ ಐದು ನಕ್ಷತ್ರಗಳ ಸಮೂಹ. ಇದರ ದೇವತೆ ಸಾಕ್ಷಾತ್ ಸೂರ್ಯ. ಈ ನಕ್ಷತ್ರವು ಕನ್ಯಾರಾಶಿಗೆ ಸೇರಿದುದಾಗಿದೆ. ಇದರ ಅಕ್ಷರಗಳು ಪು ಷ ಣ ಠ. ಇದು ಮಹಿಷ ಯೋನಿಗೆ ಸೇರಿದ ನಕ್ಷತ್ರ. ಹಾಗಾಗಿ ನೀವು ಈ ಗುಣಗಳನ್ನು ಹೊಂದಿರಬಹುದು, ಆ ಗುಣಗಳು ಯಾವುವು ಇಲ್ಲಿದೆ ನೋಡಿ.

ಈ ನಕ್ಷತ್ರದಲ್ಲಿ‌ ಜನಿಸಿದವರು ಹೇಗಿರಬಹುದು? ಇವರಿಗೆ ಪರಸ್ತ್ರೀಯರ ಸಹವಾಸ ಹೆಚ್ಚು
ಸಾಂದರ್ಭಿಕ ಚಿತ್ರ
Follow us
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಅಕ್ಷಯ್​ ಪಲ್ಲಮಜಲು​​

Updated on: Feb 01, 2025 | 4:37 PM

ಹಸ್ತ ನಕ್ಷತ್ರ ಹದಿಮೂರನೇ ನಕ್ಷತ್ರ. ಇದು ಹಸ್ತದ ಆಕಾರದಲ್ಲಿ ಕಾಣುವ ಐದು ನಕ್ಷತ್ರಗಳ ಸಮೂಹ. ಇದರ ದೇವತೆ ಸಾಕ್ಷಾತ್ ಸೂರ್ಯ. ಈ ನಕ್ಷತ್ರವು ಕನ್ಯಾರಾಶಿಗೆ ಸೇರಿದುದಾಗಿದೆ. ಇದರ ಅಕ್ಷರಗಳು ಪು ಷ ಣ ಠ. ಇದು ಮಹಿಷ ಯೋನಿಗೆ ಸೇರಿದ ನಕ್ಷತ್ರ. ದೇವಗಣಕ್ಕೆ ಸೇರಿದ್ದು, ಆದಿ ನಾಡಿಯಾಗಿರುವುದು. ಈ ನಕ್ಷತ್ರವು ಅನೇಕ ಸಂಸ್ಕಾರಕರ್ಮಗಳಿಗೆ ಯೋಗ್ಯವಾದುದೇ ಆಗಿದೆ. ಇಂತಹ ನಕ್ಷತ್ರದಲ್ಲಿ‌ ಜನಿಸಿಸವರು ಹೇಗಿರಬಹುದು.

ಉತ್ಸಾಹ :

ಇವರ ಗುಣದಲ್ಲಿ ಮೊದಲು ಕಾಣುವುದೇ ಉತ್ಸಾಹ. ಸೂರ್ಯನು ಹೇಗೆ ನಿತ್ಯೋತ್ಸಾಹಿಯಾಗಿ ಪ್ರತಿದಿನ ಪ್ರತಿಕ್ಷಣ ಖಗೋಳದಲ್ಲಿ ನಿಗಿನಿಗಿಯುತ್ತಿರುವನೋ ಅದೇ ರೀತಿಯಲ್ಲಿ ಎಲ್ಲ ಕಾರ್ಯದಲ್ಲಿ ಉತ್ಸಾಹವನ್ನು ಕಾಣಬಹದು.

ನಿರ್ಲಜ್ಜೆ :

ನಾಚಿಕೆಯ ಸ್ವಭಾವ ಇವರ ಬಳಿ ಸುಳಿಯದು. ಎಲ್ಲವನ್ನೂ ನಿರ್ಬಿಡೆಯಿಂದ ಪೂರೈಸುವರು. ಇದು ಧೈರ್ಯ ಎನಿಸಿಕೊಳ್ಳದು, ಮಾಡಬಾರದ್ದನ್ನು ಮಾಡಲು ಮನಸ್ಸಿಗೆ ಸಂಕೋಚವಿರದು ಎಂದರ್ಥ.

ಪಾನಮತ್ತ :

ಪಾನಮತ್ತತೆ ಅಧಿಕವಾಗಿರುವುದು ಅಥವಾ ಮತ್ತಿನ ಪದಾರ್ಥಗಳನ್ನು ಸೇವಿಸುವರು. ಧೈರ್ಯವನ್ನು ಅಥವಾ ಶಕ್ತಿಯನ್ನು ಕೊಡಲು ಯಾವುದಾದರೂ ಪದಾರ್ಥಗಳನ್ನು ಸೇವಿಸುವರು.

ಅಕಾರುಣ್ಯ :

ಯಾರ ಬಗ್ಗೆಯೂ ಕರುಣೆ ಇರದು. ಎಲ್ಲರ ಜೊತೆ ಬಹಳ ಕಠೋರವಾಗಿ ವರ್ತಿಸುವರು. ಮಾತುಗಳೂ ಕೂಡ ತೀಕ್ಷ್ಣವಾಗಿ ಇರುವುದು.

ಕಳ್ಳತನ :

ಪರರ ಒಳ್ಳೆ ಸ್ವತ್ತನ್ನು ಅಸೆಪಟ್ಟು, ಅದು ತಮ್ಮ ಸ್ವತ್ತಾಗಿ ಮಾಡಿಕೊಳ್ಳುವವರು ಇವರು. ಒಳ್ಳೆಯ ಮನಸ್ಸನ್ನೂ ಪರಿವರ್ತಿಸುವ ಕುಶಲಿಗಳು.

ಸುಳ್ಳಾಡುವುದು :

ಮಾತಿನಲ್ಲಿ ಸತ್ಯ ಕಾಣಿಸುವುದು ಬಹಳ ಕಡಿಮೆ. ಎಲ್ಲ ವಿಚಾರಕ್ಕೂ ಸುಳ್ಳು ಹೇಳಿ ಅವರಿಗೆ ಆಗಬೇಕಾದುದನ್ನು ಮಾಡಿಸಿಕೊಳ್ಳುವರು. ಇವರ ಮಾತು ನಂಬಿಕೆಗೆ ಅರ್ಹವಾದಂತೆ ಕಾಣಿಸುವುದು.

ಬಂಧುವರ್ಜಿತ :

ಇವರು ಬಂಧುಗಳಿಂದ ದೂರವಿರುವರು ಅಥವಾ ಇವರ ನಡತೆಯಿಂದ ಬಂಧುಗಳೇ ಇವರನ್ನು ದೂರವಿರಿಸಬಹುದು.

ಪರದಾರರತ :

ಪರಸ್ತ್ರೀಯರ ಸಹವಾಸವನ್ನು ಹೆಚ್ಚು ಮಾಡುವರು. ಬಹುಪತ್ನಿತ್ವಕ್ಕೆ ಈ ನಕ್ಷತ್ರವರು ಆಸಕ್ತಿಯುಳ್ಳವರಾಗುವರು. ಬಹುಪತ್ನೀತ್ವದ ಸಂದರ್ಭವೂ ಬರಬಹುದು.

ಗಾಂಧರ್ವರತ :

ವಿವಿಧ ಕಲೆಗಳಲ್ಲಿ ಆಸಕ್ತಿಯನ್ನು ಇಟ್ಡುಕೊಂಡವರು.‌ ಪ್ರಸಿದ್ಧಿಯನ್ನು ಪಡೆಯುವವರೂ ಆಗುವರು.

ಪೂಜೆಯಲ್ಲಿ ಆಸಕ್ತಿ :

ಇವರಿಗೆ ದೇವರ ಪೂಜೆಯಲ್ಲಿ ಹಾಗೂ ಅತಿಥಿಗಳ ಸತ್ಕಾರದಲ್ಲಿ ಆಸಕ್ತಿ ಇರುವುದು. ಧಾರ್ಮಿಕ ಆಚರಣೆ ಅಥವಾ ಪುಣ್ಯಸ್ಥಳಗಳಿಗೆ ಪ್ರವಾಸಗಳನ್ನೂ ಮಾಡುವರು.

ಕ್ರೀಡಾಸಕ್ತಿ :

ಹಸ್ತಾ ನಕ್ಷತ್ರವಾದ್ದರಿಂದ ಕೈಯಿಂದ ಆಡುವ ಆಟಗಳು ಇಷ್ಟವಾಗುವುದು ಮಾತ್ರವಲ್ಲ, ಉತ್ತಮ ಸ್ಥಾನವನ್ನೂ ಪಡೆಯಬಹುದು. ಉನ್ನತ ಸಾಧನೆಗೆ ಇವರು ಪ್ರಯತ್ನಮಾಡಬಹುದು.

ಗುಣ ಮತ್ತು ಅವಗುಣಗಳಿಂದ ಮಿಶ್ರಣಗೊಂಡ ಸ್ವಭಾವ ಇದಾಗಿದೆ.

– ಲೋಹಿತ ಹೆಬ್ಬಾರ್ – 8762924271

ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ಸೆಲೆಬ್ರಿಟಿಗಳಿಲ್ಲದೆ ಸರಳವಾಗಿ ಮದುವೆಯಾದ ಬಿಲಿಯನೇರ್ ಮಗ ಜೀತ್ ಅದಾನಿ
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ದೆಹಲಿ ನಾಯಕರ ಭೇಟಿ ಬಳಿಕ ಶಾಸಕ ಯತ್ನಾಳ್​ ಹೇಳಿದ್ದಿಷ್ಟು
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ರಕ್ಷಿತಾರನ್ನು ಮದುವೆಯಾದಾಗ ಅಂಬರೀಶ್ ಹೇಳಿದ್ದನ್ನು ಮೆಲಕು ಹಾಕಿದ ಪ್ರೇಮ್
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ಪಟಾಕಿ ಕಾರ್ಖಾನೆಯಲ್ಲಿ ಸ್ಫೋಟ; 4 ಜನ ಸಾವು
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಅಪ್ಪನನ್ನು ಇಷ್ಟಪಡುವ ಕಾರಣಕ್ಕೆ ಮಗನನ್ನೂ ಇಷ್ಟಪಡುವ ಅಗತ್ಯವಿಲ್ಲ: ನಿರಾಣಿ
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ಆಯತಪ್ಪಿ ಬಿದ್ದಿದ್ದ ಬೈಕ್​ ಸವಾರ: ಗಾಯಾಳುಗೆ ನೆರವಾದ ಸಂತೋಷ್ ಲಾಡ್
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ವಿರೋಧಪಕ್ಷಗಳ ಟೀಕೆಗೆ ಗುರಿಯಾಗದ ಬಜೆಟ್ ಮಂಡನೆ ಮುಖ್ಯಮಂತ್ರಿಗೆ ಸಾಧ್ಯವೇ?
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ದೇವೇಗೌಡ ತಮ್ಮ ಮಕ್ಕಳ ಬಗ್ಗೆ ಮಾತಾಡಿದ್ದೆಲ್ಲ ಗೊತ್ತಿದೆ: ಚಲುವರಾಯಸ್ಚಾಮಿ
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಜಯಮಾಲಾ ಪುತ್ರಿ ಸೌಂದರ್ಯಾ ಮದುವೆಗೆ ಆಗಮಿಸಿದ ಯಶ್, ರಾಧಿಕಾ ಪಂಡಿತ್
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ
ಇನ್ನೆರಡು ವಾರಗಳಲ್ಲಿ ವರಿಷ್ಠರು ಎಲ್ಲವನ್ನೂ ಸರಿಮಾಡಲಿದ್ದಾರೆ: ಆರ್ ಅಶೋಕ