AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Weekly Horoscope: ಈ ವಾರ ಯಾವ ರಾಶಿಯವರಿಗೆ ಶುಭಕರ, ಯಾರಿಗೆ ಸಂಕಷ್ಟಕರ? ಇಲ್ಲಿದೆ ವಿವರ

ಈ ವಾರ ಶುಕ್ರ ಹಾಗೂ ಕುಜರು ಸ್ವಕ್ಷೇತ್ರದಲ್ಲಿ ಇರುವರು. ಸೂರ್ಯನು ನೀಚ ಹಾಗೂ ಶತ್ರುವಿನ ಸ್ಥಾನದಲ್ಲಿ ಇರುವನು. ಆರೋಗ್ಯದ ವೃದ್ಧಿ ವೇಗವಾಗಿ ಆಗದು. ನಿಮ್ಮ ಪ್ರೀತಿಯನ್ನು ಆನಂದಿಸುವಿರಿ. ನಿಮ್ಮ‌ ಕಾರ್ಯದಲ್ಲಿ ಮಗ್ನರಾಗಿ ಎಲ್ಲರನ್ನೂ ಮರೆಯುವಿರಿ. ಈ ವಾರದಲ್ಲಿ ಬಂಧುಗಳ ಜೊತೆ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಅಸ್ಥಿರತೆಯು ನಮಗೆ ಗೊಂದಲವನ್ನು ಸೃಷ್ಟಿಸುವುದು.

Weekly Horoscope: ಈ ವಾರ ಯಾವ ರಾಶಿಯವರಿಗೆ ಶುಭಕರ, ಯಾರಿಗೆ ಸಂಕಷ್ಟಕರ? ಇಲ್ಲಿದೆ ವಿವರ
Weekly Horoscope
ಲೋಹಿತ ಹೆಬ್ಬಾರ್​, ಇಡುವಾಣಿ
| Updated By: ಸುಷ್ಮಾ ಚಕ್ರೆ|

Updated on: Nov 02, 2025 | 3:03 AM

Share

ನವೆಂಬರ್ ತಿಂಗಳ ಮೊದಲ ವಾರ 02-18-2025 ರಿಂದ 08-11-2025 ರವರೆಗೆ ಇರಲಿದೆ. ಶುಕ್ರ ಹಾಗೂ ಕುಜರು ಸ್ವಕ್ಷೇತ್ರದಲ್ಲಿ ಇರುವರು. ಸೂರ್ಯನು ನೀಚ ಹಾಗೂ ಶತ್ರುವಿನ ಸ್ಥಾನದಲ್ಲಿ ಇರುವನು. ಆರೋಗ್ಯದ ವೃದ್ಧಿ ವೇಗವಾಗಿ ಆಗದು. ಪ್ರೇಮವನ್ನು ಆನಂದಿಸುವಿರಿ. ಕೆಲವು ವ್ಯವಹಾರಗಳನ್ನು ಬಿಡಬೇಕು ಎಂದರೂ ಬಿಡಲಾಗದು. ಮೂಗಿಗೆ ತುಪ್ಪ ಒರೆಸಿಕೊಂಡ ಸ್ಥಿತಿ. ಸಫಲವಾಗುತ್ತೇನೆ ಎಂಬ ಆತ್ಮವಿಶ್ವಾಸವೂ ಇರದು. ವ್ಯಾವಹಾರಿಕತೆಯನ್ನು ಎಲ್ಲ ಕಡೆ ಪ್ರದರ್ಶಿಸಲಾಗದು. ವಾರ ಏನೇ ಇದ್ದರೂ ಸಕಾರಾತ್ಮಕ ಯೋಚನೆ ಕಾರ್ಯಗಳು ನಿಮ್ಮದಾಗಲಿ. ಫಲವನ್ನು ಸಕಾಲಕ್ಕೆ ಕೊಡುವವನು ಕೊಡುತ್ತಾನೆ. ದೂರದ ಬಂಧುಗಳ‌ ಭೇಟಿಯಿಂದ ವಿವಾಹ ನಿಶ್ಚಯವಾಗಬಹುದು.

ಮೇಷ ರಾಶಿ :

ನವೆಂಬರ್ ತಿಂಗಳ ಮೊದಲ ವಾರ ತಾಯಿ ಮಾತಿನಿಂದ ನಿಮಗೆ ಮಹತ್ಸಾಧನೆಗೆ ಸ್ಫೂರ್ತಿ ಸಿಗಲಿದೆ. ಸಹೋದರರ ಜೊತೆ ಆಪ್ತ ಸಮಾಲೋಚನೆ ಮಾಡುವಿರಿ. ಕೆಲಸದಲ್ಲಿ ಇರುವಷ್ಟು ಶ್ರದ್ಧೆ ಓದಿನ ಕಡೆಗೆ ಬರದೇ ಇರದು.‌ ಕೆಲವನ್ನು ಮರೆತು ಮುಂದೆ ಸಾಗುವುದು ನಿಮಗೆ ಉತ್ತಮ. ನಿಮ್ಮ‌ ಬಳಿಯ‌ ಹಣವನ್ನು ಕೇಳಿಕೊಂಡು ಬರುಬರು. ಹೊಸ ಉದ್ಯೋಗಕ್ಕೆ ವಿವರಗಳನ್ನು ಕೇಳಿ ಪಡೆಯುವಿರಿ. ಈ ವಾರ ಮಕ್ಕಳಿಗೆ ಬೇಕಾದ ವಸ್ತುಗಳನ್ನು ಕೊಡಿಸಿ ಸಂತೋಷಿಸುವಿರಿ. ಸ್ನೇಹಿತರ ಸಹವಾಸದಿಂದ ದುರಭ್ಯಾಸವನ್ನು ರೂಢಿಸಿಕೊಳ್ಳುವ ಸಾಧ್ಯತೆ ಇದೆ. ಕೆಲವರ ನಂಬಿಕಗೆ ಘಾಸಿಯನ್ನು ಉಂಟುಮಾಡುವಿರಿ. ವಿದ್ವಾಂಸರ ಭೇಟಿಯು ಅಕಸ್ಮಾತ್ ಆಗುವುದು.

ವೃಷಭ ರಾಶಿ :

ಎರಡನೇ ರಾಶಿಯವರಿಗೆ ಈ ವಾರ ನಿಮ್ಮ ಯೋಜನೆಯು ಸಾಕಾರವಾಗದೇ ಇರುವುದು ನಿಮಗೆ ನೋವಾಗಲಿದೆ. ಬೇಸರವನ್ನು ಯಾರ ಬಳಿಯಾದರೂ ಹೇಳಿಕೊಳ್ಳಿ. ಏನನ್ನಾದರೂ ಹೊಸ ವಸ್ತುಗಳನ್ನು ಬಳಸುವ ಮೊದಲು ಪರೀಕ್ಷಿಸಿಕೊಳ್ಳಿ. ಈ ವಾರ ನಿಮ್ಮ ಮಕ್ಕಳಲ್ಲಿ ವರ್ತನೆಯಲ್ಲಿ ಬದಲಾವಣೆಯನ್ನು ಕಾಣಿಸುವುದು. ಮೃದುವಾದ ಮಾತನ್ನು ನೀವು ಅಭ್ಯಾಸ ಮಾಡಿಕೊಳ್ಳಬೇಕು. ನಿಮ್ಮ‌ ಕಾರ್ಯದಲ್ಲಿ ಮಗ್ನರಾಗಿ ಎಲ್ಲರನ್ನೂ ಮರೆಯುವಿರಿ. ಈ ವಾರದಲ್ಲಿ ಬಂಧುಗಳ ಜೊತೆ ದೂರ ಪ್ರಯಾಣವನ್ನು ಮಾಡಲಿದ್ದೀರಿ. ಅಸ್ಥಿರತೆಯು ನಮಗೆ ಗೊಂದಲವನ್ನು ಸೃಷ್ಟಿಸುವುದು. ಕೆಲವು ಸಂಬಂಧಗಳು‌ ಮತ್ತಷ್ಟು ಹತ್ತಿರವಾಗಬಹುದು. ಕುಲಕ್ಕೆ ಯೋಗ್ಯವಾದ ಕಾರ್ಯವನ್ನು ಮಾಡಿದ್ದಕ್ಕೆ ಪ್ರಶಂಸೆಯು ಸಿಗುವುದು.

ಮಿಥುನ ರಾಶಿ :

ಮೊದಲ ವಾರ ಮೂರನೇ ರಾಶಿಯವರಿಗೆ ಅಗ್ನಿಯ ಭೀತಿಯ ಕಾಡುವುದು. ಕಛೇರಿಯಲ್ಲಿ ನಿಮಗೆ ತಪ್ಪಿತಸ್ಥ ಭಾವದಿಂದ ಸುಮ್ಮನೆ ಕೆಲಸ ಮಾಡುವಿರಿ. ‌ಸರ್ಕಾರದಿಂದ ಆಗಬೇಕಾದ ಕೆಲಸಕ್ಕೆ ಹಣವನ್ನು ಕೊಡುವಿರಿ. ಯಾರ ಜೊತೆಯೂ ಎತ್ತರದ ದನಿಯನ್ನು ಮಾಡುವುದು ಬೇಡ. ನಿಮ್ಮ ಬಗ್ಗೆ ತಪ್ಪು ಕಲ್ಪನೆಯು ಬರಬಹುದು. ಈ ವಾರ ಅನಾರೋಗ್ಯವನ್ನು ಬಹಳವಾಗಿ ನಿರ್ಲಕ್ಷಿಸುವಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಕಷ್ಟವಾದೀತು. ಆದರೂ ಮಾತಿಗೆ ತಪ್ಪಲಾರಿರಿ.‌ ಈ ವಾರ ಉನ್ನತ ಹುದ್ದೆಗೆ ಹೋಗಲು ಅವಕಾಶ ಬಂದರೂ ನಿಮಗೆ ನಾನಾ ಕಾರಣಗಳಿಂದ ಬೇಡವೆನಿಸುವುದು. ಸರಿ ಹಾಗೂ ತಪ್ಪುಗಳ ತುಲನೆಯು ಕಷ್ಟವಾಗುವುದು.

ಕರ್ಕಾಟಕ ರಾಶಿ :

ಚಂದ್ರನ ಆಧಿಪತ್ಯದ ಈ ರಾಶಿಗೆ ಮೊದಲ ವಾರ ಕುಟುಂಬದ ಸಹಿತವಾಗಿ ನೀವು ಬಂಧುಗಳ‌ ಮನೆಗೆ ಹೋಗುವಿರಿ. ವೃತ್ತಿಯಲ್ಲಿ ತುಂಬಾ ನಿಧಾನದಿಂದ‌ ಕೆಲಸ ಸಾಗುವುದು. ದೂರದ ಬಂಧುಗಳ‌ ಭೇಟಿಯಿಂದ ವಿವಾಹ ನಿಶ್ಚಯವಾಗಬಹುದು. ಈ ವಾರ ವರ್ಷಗಳ ಹಿಂದಿನ ಪ್ರೇಮವು ಹೊಸ ತಿರುವನ್ನು ಪಡೆಯಬಹುದು. ಮನಸ್ಸು ಕೆಡಿಸಿಕೊಂಡು ಏನೂ ಮಾಡಲಾಗದು.‌ ಶಾಂತವಾಗಿ, ಸಮಾಧಾನ ಚಿತ್ತದಿಂದ ಮುಂದುವರಿಯಿರಿ. ವಸ್ತುಗಳನ್ನು ಕಳೆದುಹೋಗಿದ್ದು ವಿಳಂಬವಾಗಿ ಬೆಳಕಿಗೆ ಬಂದೀತು. ಹಿರಿಯ ಮಾತನ್ನು ಅಸಡ್ಡೆ ಮಾಡುವಿರಿ. ಈ ವಾರ ನಿಮ್ಮ ನಿರ್ಧಾರವು ಸರಿಯಾಗಿದೆಯೇ ಎಂದು ಅವಲೋಕನ‌ ಮಾಡಿಕೊಳ್ಳಿ. ಹಲವರೊಂದಿಗೆ ಚರ್ಚಿಸುವಿರಿ.

ಸಿಂಹ ರಾಶಿ :

ಈ ರಾಶಿಯವರಿಗೆ ನವೆಂಬರ್ ಮೊದಲ ವಾರ ಅಪರಿಚಿತರ ಜೊತೆ ಸಲುಗೆ ಬೆಳೆಯುವುದು. ಯಾರ ಬಗ್ಗೆಯೂ ಗೊತ್ತಿಲ್ಲದೇ ಮಾತುಗಳನ್ನು ಆಡುವುದು ಬೇಡ. ನಿಮ್ಮದಲ್ಲದ ವಸ್ತುವನ್ನು ಬಳಸಿ ಹಾಳು ಮಾಡುವಿರಿ.‌ ಹಳೆಯ ಪ್ರೇಮವು ಬೆಳಕಿಗೆ ಬಂದು ಮುಜುಗರ ಉಂಟಾದೀತು. ಈ ವಾರದಿಂದ ಉದ್ಯೋಗದಲ್ಲಿ ಒತ್ತಡ ಸ್ವೀಕರಿಸುವುದು ಅಭ್ಯಾಸವಾಗಲಿದೆ. ಯಾವುದೇ ಪ್ರಭಾವಕ್ಕೆ ಸಿಕ್ಕಿ ನೀವು ಬಲಿಯಾಗುವಿರಿ. ನಿಮ್ಮ ಮಾನಸಿಕ ಅಸಮಾಧಾನಕ್ಕೆ ದೈವದ ಮೊರೆ ಹೋಗುವುದು ಒಳಿತು. ಮನೆಯಿಂದ ದೂರವಿದ್ದವರು ಹತ್ತಿರವಾಗಬೇಕು ಎನಿಸಬಹುದು. ಕುಲದೇವರ ಆರಾಧನೆಯಲ್ಲಿ ತೊಡಗುವಿರಿ.

ಕನ್ಯಾ ರಾಶಿ :

ಆರನೇ ರಾಶಿಯವರಿಗೆ ಈ ವಾರ ಹಲವರ ಒತ್ತಡದ ಕಾರಣ ನೂತನ ಗೃಹನಿರ್ಮಾಣವನ್ನು ಆರಂಭಿಸಬೇಕಾಗುವುದು. ಪೂರ್ವಾಪರ ಯೋಚನೆ ಇಲ್ಲದೇ ಒಂದು ಅಪಾಯಕರ ನಿರ್ಧಾರವನ್ನು ಮಾಡುವಿರಿ. ಮಕ್ಕಳ ವಿಷಯದಲ್ಲಿ ನಿರ್ಲಕ್ಷ್ಯ ಬೇಡ. ತಾಯಿಯ ಆರೋಗ್ಯದ ಕಾರಣಕ್ಕೆ ಓಡಾಡ ಮಾಡುವಿರಿ. ನಿಮಗೆ ಇಷ್ಟವಾಗದ ಕಾರ್ಯವನ್ನು ಮಾಡಬೇಕಾಗಬಹುದು. ಉದ್ಯೋಗವನ್ನು ನಿರೀಕ್ಷಿತ ಹಂತಕ್ಕೆ ಕೊಂಡೊಯ್ಯಲು ಅಧಿಕ ಶ್ರಮಿಸುವಿರಿ. ವಾತ‌ದೋಷದಿಂದ ನಿಮಗೆ ಕಷ್ಟವಾಗುವುದು. ಈ ವಾರ ಕೊಟ್ಟ ಹೊಣೆಗಾರಿಕೆ ಹಸ್ತಾಂತರ ಆಗುವುದು. ಮಕ್ಕಳಿಂದ‌ ನಿಮಗೆ ಪ್ರೀತಿಯಿಂದ ಉಡುಗೊರೆ ಕೊಡುವರು. ಅಧ್ಯಾತ್ಮದಲ್ಲಿ ಮನಸ್ಸನ್ನು ತೊಡಗಿಸುವ ಪ್ರಯತ್ನ ಸಾಗಲಿದೆ.

ತುಲಾ ರಾಶಿ :

ಶುಕ್ರನ ಆಧಿಪತ್ಯದ ಈ ರಾಶಿಯವರಿಗೆ ಈ ವಾರ ಅಂದುಕೊಂಡ ಕಾರ್ಯವು ವೇಗವನ್ನು ಪಡೆಯದೇ ಇರಲು ಹಿತಶತ್ರುಗಳೇ ಕಾರಣರಾಗುವರು. ನಿಮ್ಮನ್ನು ಎದುರು ಮಾತ್ರ ಹೊಗಳುವರು. ಅಜಾಗರೂಕತೆಯಿಂದ‌ ಬಿದ್ದು ಗಾಯವು ಈ ವಾರ ಬೇರೆ ರೂಪವನ್ನೇ ಪಡೆಯುವುದು. ಕೈಗೊಂಡ ಕಾರ್ಯಗಳಲ್ಲಿ ಪೂರ್ಣ ಜಯವು ಪ್ರಾಪ್ತವಾಗುವುದು. ಪ್ರಾಮಾಣಿಕತೆಗೆ ಸಿಕ್ಕ ಪ್ರಶಂಸೆಯಿಂದ ಇನ್ನಷ್ಟು ಉತ್ಸಾಹದ ಆಗಮನ. ಯಾರದೋ ಉದ್ದೇಶಕ್ಕೆ ನೀವು ದಂಡಿಸಿ ಕೆಲಸ ಮಾಡಬೇಕಾದೀತು. ಆರ್ಥಿಕತೆಯನ್ನು ಬಲಗೊಳಿಸಲು ಅನ್ಯ ಉದ್ಯೋಗವನ್ನು ಮಾಡಬೇಕಾಗಬಹುದು. ಹಠದ ಸ್ವಭಾವದಿಂದ ಸುಲಭವಾಗಿ ಸಿಗುವುದನ್ನು ಕಳೆದುಕೊಳ್ಳುವಿರಿ. ಕಲಾವಿದರಿಗೆ ಉತ್ಸಾಹವು ಕಡಿಮೆ‌ಯಾಗಲಿದೆ.

ವೃಶ್ಚಿಕ ರಾಶಿ :

ನೆವೆಂಬರ್ ತಿಂಗಳ ಈ ವಾರ ಎಂಟನೇ ರಾಶಿಯವರಿಗೆ ಈ ವಾರ ಹಿರಿಯರ ಮಾತಿನಂತೆ ಮನೆಯಲ್ಲಿ ಮಂಗಲ ಕಾರ್ಯವನ್ನು ಮಾಡುವಿರಿ. ಅನಿವಾರ್ಯವಿದ್ದರೂ ಧನವ್ಯಯದ ಕಾರಣ ಖರೀದಿಯನ್ನು ಮುಂದೂಡಿ. ಸಾಮಾಜಿಕ‌ ಗೌರವವನ್ನು ಪಡೆಯುವ ಬಯಕೆ ವ್ಯಕ್ತವಾಗಲಿದೆ. ವಾರದ ಮಧ್ಯದಲ್ಲಿ ತಾಯಿಯ ಪ್ರೀತಿಯಿಂದ ವಂಚಿತರಾಗಬಹುದು. ವಾಹನದಿಂದ ನಿಮಗೆ ಆದಾಯ ಸಿಗುವುದು. ಉದ್ಯೋಗದ ಕಾರಣಕ್ಕೆ ದೂರದ ಊರಿಗೆ ಹೋಗುವಿರಿ. ಪ್ರಯಾಣದಲ್ಲಿ ಮುಂಜಾಗ್ರತೆಯ ಕ್ರಮವಿರಲಿ‌. ಗೊತ್ತಿಲ್ಲದ ಪ್ರದೇಶಕ್ಕೆ ಒಂಟಿಯಾಗಿ ಹೋಗಬೇಕಾಗಬಹುದು. ಈ ವಾರ ದಾಂಪತ್ಯದಲ್ಲಿ ಬರುವ ಒಡಕು ಎಲ್ಲರಿಗೂ ಗೊತ್ತಾಗುವುದಕ್ಕಿಂತ ಮೊದಲೇ ಸರಿ ಮಾಡಿಕೊಳ್ಳಿ. ಆಕಸ್ಮಿಕ ವಾರ್ತೆಯು ನಿಮ್ಮನ್ನು ಸ್ತಬ್ಧಗೊಳಿಸುವುದು.

ಧನು ರಾಶಿ :

ಮೊದಲ ಈ ವಾರದಲ್ಲಿ ನಿಮ್ಮ ಶ್ರಮಕ್ಕೆ ಯೋಗ್ಯವಾದ ಫಲದ ನಿರೀಕ್ಷೆಯಲ್ಲಿ ಇರಿ. ಹೂಡಿಕೆಯಿಂದ ಸ್ವಲ್ಪ ನಷ್ಟವಾದಂತೆ ಕಂಡು ಭಯವಾಗಲಿದೆ. ಕಛೇರಿಯಲ್ಲಿ ಯಾರದೋ ತಪ್ಪಿಗೆ ನೀವು ತಲೆ ಕೊಡಬೇಕಾಗುವುದು. ಪ್ರಾಣಿಗಳ ಮೇಲೆ ಪ್ರೀತಿಯಿಂದ ಸಾಕಿ, ಆರೈಕೆ ಮಾಡುವಿರಿ. ನಿಮ್ಮ ಕಾರ್ಯದಲ್ಲಿ ನಿಮಗೆ ಹಲವು ತಪ್ಪು ಕಾಣಿಸುವುದು. ನಿಮ್ಮ ಬಯಕೆಗಳಿಗೆ ಇನ್ನೊಬ್ಬರು ಪ್ರೇರಣೆಯಾಗುವುದು. ಪ್ರೀತಿಯ ಕಾರಣಕ್ಕೆ ಮನಸ್ಸಿನ ಚಾಂಚಲ್ಯವನ್ನು ನಿಯಂತ್ರಿಸುವುದು ಕಷ್ಟವಾದೀತು. ಬಹಳ ಕಾಲದಿಂದ ಮುಗಿಯದ ಕೆಲಸವನ್ನು ಈ ವಾರ ಒಂದು ಹಂತಕ್ಕೆ ತರುವಿರಿ. ನಿಮ್ಮ ಮಾತು ಪರೋಕ್ಷವಾಗಿ ಇನ್ನೊಬ್ಬರಿಗೆ ನೋವನ್ನು ಕೊಡವುದು.

ಮಕರ ರಾಶಿ :

ಹತ್ತನೇ ರಾಶಿಯವರಿಗೆ ಈ ವಾರ ನೂತನ ವಸ್ತುಗಳ ಮೇಲೆ‌ ನಿಮಗೆ ಪ್ರೀತಿ ಹೆಚ್ಚಾಗಿ, ಅದನ್ನು ಬಳಸುವಿರಿ. ವಿದೇಶದಲ್ಲಿ ಓದುವ ಆಸೆಗೆ ಸಹಕಾರ ಲಭ್ಯ. ಆರಂಭವಾಗುವುದು. ನಿಮಗೆ ಉದ್ಯೋಗದಲ್ಲಿ ಬಡ್ತಿ ಸಿಗುವ ಸಾಧ್ಯತೆ ಇದೆ. ಉತ್ತಮ ವಿಶ್ವಾಸಿಗಳನ್ನು ಕಳೆದುಕೊಳ್ಳುವಿರಿ. ಸಂಗಾತಿಯ ಜೊತೆ ಬಹಳ ಸಂಯೋಷದ ಕ್ಷಣವನ್ನು ಕಳೆಯುವಿರಿ. ಉದ್ಯೋಗದ‌ ಸ್ಥಳದಲ್ಲಿ ಉಂಟಾದ ಪಕ್ಷಪಾತದಿಂದ ದ್ವೇಷಭಾವವು ಉಂಟಾಗಬಹುದು. ಕಲಾವಿದರು ಅವಕಾಶವನ್ನು ಹುಡುಕಿಕೊಂಡು ಹೋಗಬೇಕಾಗಬಹುದು. ಸಾಲದ ವಿಚಾರವಾಗಿ ಕುಟುಂಬದ ಜೊತೆ ಬಿಸಿ ಚರ್ಚೆಯಾಗಬಹುದು. ಆಸ್ತಿಯ ಹಂಚಿಕೆಯಲ್ಲಿ ನಿಮಗೆ ಸಮಾಧಾನ ಇರದು. ಹಲವು ದಿನಗಳಿಂದ‌ ಉಳಿಸಿಕೊಂಡ ವೈಯಕ್ತಿಕ ಕೆಲಸವೇ ಉಳಿಯಲಿದೆ. ಶತ್ರುಗಳು ನಿಮ್ಮ ಸ್ಥಿತಿಯನ್ನು ಸಂತೋಷಿಸುವರು.

ಕುಂಭ ರಾಶಿ :

ಶನಿಯ ಆಧಿಪತ್ಯದ ಈ ರಾಶಿಯವರಿಗೆ ಈ ವಾರ ವಾಹನ ಖರೀದಿಗೆ ಮಿತ್ರರಿಂದ ಸೂಕ್ತ ಸಲಹೆ ಸಿಗಲಿದೆ. ಈ ವಾರ ತುರ್ತಾಗಿ ಆಗಬೇಕಾದ ಮನೆಯ ದುರಸ್ತಿಯ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಸುವಿರಿ. ಬಹಳ ಶ್ರಮದಿಂದ ನಿಮಗೆ ಬೇಡದ ಭೂಮಿಯ ಮಾರಟವನ್ನು ಮಾಡವಿರಿ. ವೃತ್ತಿಯಿಂದ ನೀವು ವಿದೇಶಪ್ರಯಾಣ ತಯಾರಿಯಾಗಲಿದೆ. ಬಂಧುಗಳು ನಿಮ್ಮ ಬಳಿ ಬಂದು ನೋವನ್ನು ಹೇಳಿಕೊಳ್ಳುವರು. ಸ್ನೇಹಿತರ ಜೊತೆ ಪ್ರವಾಸಕ್ಕೆ ಹೋಗಲು ಮನೆಯಿಂದ ಒಪ್ಪಿಗೆಯನ್ನು ನಿರಾಕರಿಸಬಹುದು. ನೀವು ಕೋಪವನ್ನು ಮಾಡಿಕೊಳ್ಳಲು ಕಾರಣವೇ ಬೇಕಾಗದು. ನೌಕರರಿಂದ ನಿಮಗೆ ಸರಿಯಾದ ಪ್ರತಿಕ್ರಿಯೆ ಸಿಗದು. ವಿವೇಚನೆ ಇಲ್ಲದೇ ಆಡಿದ ನಿಮ್ಮ ಮಾತುಗಳಿಂದ ಕಲಹವಾಗಬಹುದು. ನಿಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶವನ್ನು ಕೊಡಲಾರರು.

ಮೀನ ರಾಶಿ :

ರಾಶಿ ಚಕ್ರದ ಕೊನೆಯ ರಾಶಿಯವರಿಗೆ ಈ ವಾರ ಸ್ನೇಹಸಂಬಂಧವನ್ನು ಗಟ್ಟಿಮಾಡಿಕೊಳ್ಳಲು ಇಷ್ಟವಾಗದು. ಮಕ್ಕಳ ವಿವಾಹದ ಬಗ್ಗೆ ಒಂದೊಂದೇ ಚಿಂತೆ ಆರಂಭ. ವ್ಯಾಪಾರದಲ್ಲಿ ನಿಮ್ಮ ಅಜಾಗರೂಕತೆಯಿಂದ ಹಣವನ್ನು ಕಳೆದುಹೋಗಿದ್ದು ವಾರದ ಕೊನೆಗೆ ಗೊತ್ತಾಗುವುದು. ಅನಿವಾರ್ಯ ಕಾರಣದಿಂದ ನೀವು ಅಧಿಕಾರವನ್ನು ವಹಿಸಿಕೊಳ್ಳಬೇಕು. ಉದ್ಯೋಗದಲ್ಲಿನ ಒತ್ತಡವು ನಿಮ್ಮ ಆರೋಗ್ಯದ ಮೇಲೆ ಪರಿಣಾಮವು ಹೆಚ್ಚು ಪ್ರಕಟವಾಗಲಿದೆ. ಮೊದಲೇ ಸಮಯವನ್ನು ಸರಿಯಾಗಿ ನಿರ್ಧರಿಸಿಕೊಂಡು ಕಾರ್ಯವನ್ನು ಆರಂಭಿಸಿದರೆ ಸಕಾಲಕ್ಕೆ ಮುಗಿಯುವುದು. ಆಸಕ್ತಿಯು ಇಲ್ಲದಿದ್ದರೂ ಒತ್ತಾಯಕ್ಕೆ ಧಾರ್ಮಿಕ ಕಾರ್ಯಗಳಲ್ಲಿ ತೊಡಗುವಿರಿ. ಆಪತ್ತಿನಲ್ಲಿ ಇರುವ ನಿಮಗೆ ಸ್ನೇಹಿತರ ಸಣ್ಣ ಸಹಾಯವೂ ಧೈರ್ಯ ತಂದುಕೊಡುವುದು.

– ಲೋಹಿತ ಹೆಬ್ಬಾರ್ – 8762924271 (what’s app only)

ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಬರ್ತ್​ಡೇಗೆ ಕುಮಾರಸ್ವಾಮಿಗೆ ಅಭಿಮಾನಿ ಕೊಟ್ಟ ಚಿನ್ನದ ಚೈನ್ ಹೇಗಿದೆ ನೋಡಿ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಚಾಮರಾಜನಗರದಲ್ಲಿ ಬೃಹದಾಕಾರದ ಹುಲಿ ಪ್ರತ್ಯಕ್ಷ!
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಸದನದಲ್ಲಿ ಸಿಎಂ ಸಿದ್ದರಾಮಯ್ಯ ಕಾಲೆಳೆದ ಸುರೇಶ್ ಕುಮಾರ್: ಸ್ವಾರಸ್ಯಕರ ಚರ್ಚೆ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಮಾಗಡಿ ಯುವಕ- ಉಡುಪಿ ಯುವತಿ, ಆನ್​​ಲೈನ್​​ನಲ್ಲೇ ನಿಶ್ಚಿತಾರ್ಥ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಲೇಡಿ ಗೆಟಪ್ ವಿಷಯಕ್ಕೆ ಶಿವಣ್ಣನ ಕಾಲೆಳೆದ ಉಪೇಂದ್ರ; ಎಷ್ಟು ಕ್ಯೂಟ್ ನೋಡಿ
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಬಿಗ್​​ಬಾಸ್ ಫಿನಾಲೆಗೆ ಕನ್ನಡತಿಯರ ಎಂಟ್ರಿ: ಗೆದ್ದವರಿಗೆ ಸಿಗುವ ಹಣವೆಷ್ಟು?
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
ಮುಂದೆ ನಮ್ರತೆ ಕಲಿತುಕೊಳ್ಳೋಣ ಬಿಡಿ: ಮೋಹನ್ ದಾಸ್ ಪೈಗೆ ಡಿಕೆಶಿ ಟಾಂಗ್
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
8 ಮಂದಿ ಪೊಲೀಸ್ ಸಸ್ಪೆಂಡ್: ಅಧಿವೇಶನದಲ್ಲಿ ಸದ್ದು ಮಾಡಲಿದೆ ಖಾಕಿ ಕಳ್ಳಾಟ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
ಬೆಳಗಾವಿಯ ಚಳಿಗಾಲದ ಅಧಿವೇಶನದ ನೇರಪ್ರಸಾರ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ
Video: ಗಾಳಿಯ ರಭಸಕ್ಕೆ ಕುಸಿದು ಬಿತ್ತು ಬ್ರೆಜಿಲ್​ನ ಲಿಬರ್ಟಿ ಸ್ಟ್ಯಾಚ್ಯೂ