Horoscope Today 13 December: ಇಂದು ಈ ರಾಶಿಯವರು ವಾಹನ ಚಲಾಯಿಸುವಾಗ ಅಪಘಾತವಾಗುವ ಸಾಧ್ಯತೆಯಿದೆ!
ದಿನ ಭವಿಷ್ಯ, 13, ಡಿಸೆಂಬರ್ 2025: ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಹೇಮಂತ ಋತುವಿನ ಮಾರ್ಗಶೀರ್ಷ ಮಾಸ ಕೃಷ್ಣ ಪಕ್ಷದ ನವಮೀ ತಿಥಿ ಶನಿವಾರ ದುರಭ್ಯಾಸ, ಮೋಜಿನ ಪ್ರಯಾಣ, ಅಧಿಕಾರದಿಂದ ಮುಕ್ತಿ, ಪ್ರೀತಿಗೆ ಒತ್ತಾಯ, ಹಳೆಯ ವಾಹನ ಖರೀದಿ, ಸಾಲಕ್ಕೆ ಒಪ್ಪಿಗೆ, ಕಲಾವಿದರಿಗೆ ಅವಕಾಶ ಇವೆಲ್ಲ ಇಂದಿನ ವಿಶೇಷ.

ಮೇಷ ರಾಶಿ : ನಿಮ್ಮ ಮನಸ್ಸನ್ನು ಅತ್ಯಂತ ಶಾಂತವಾಗಿಸುತ್ತದೆ. ನಿಮ್ಮೊಳಗಿನ ಕಲಾತ್ಮಕತೆ ಉಕ್ಕಿ ಬರುತ್ತದೆ. ಕಾರ್ಯವನ್ನು ಚೆನ್ನಾಗಿ ನಿರ್ವಹಿಸಿದರೂ ಕೊನೆಯಲ್ಲಿ ಏನಾದರೂ ಮಾಡಿಕೊಳ್ಳುವಿರಿ. ಓಡಾಡಕ್ಕೆ ನಿಮಗೆ ವಾಹನದ ಅನುಕೂಲತೆಯೂ ಆಗುವುದು. ಸ್ವಂತ ಉದ್ಯಮದಲ್ಲಿ ನಿರೀಕ್ಷಿತ ಲಾಭವನ್ನು ಕಾಣುವಿರಿ. ಪ್ರೇಮವು ನಿಮಗೆ ನಿಮ್ಮನ್ನು ಉತ್ಸಾಹದಿಂದ ಇಡುವುದು. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ. ಸಮಯಕ್ಕೆ ಸರಿಯಾಗಿ ಕೆಲಸ ಮಾಡದೇ ಮೇಲಧಿಕಾರಿಗಳು ಏನಾದರೂ ಹೇಳಿಯಾರು. ಸಂಬಂಧದಲ್ಲಿ ದಯೆ, ಮೃದುತನ ತೋರಬೇಕಾಗುವುದು. ಹಳೆಯ ನೆನಪುಗಳಿಂದ ಬೇಸರವಾಗ ಆಗಬಹುದು. ವಾಹನವನ್ನು ಚಲಾಯಿಸುವಾಗ ಎಚ್ಚರ. ಅಪಘಾತವಾಗುವ ಸಾಧ್ಯತೆ ಇದೆ. ನೀವು ಅತಿಯಾದ ಆತ್ಮವಿಶ್ವಾಸದಲ್ಲಿ ಕೆಲವೊಂದನ್ನು ಕಳೆದುಕೊಳ್ಳುವಿರಿ. ಮುನ್ನುಗ್ಗುವ ಮನಃಸ್ಥಿತಿಯು ಇಲ್ಲವಾದೀತು. ನಿಮ್ಮ ನಿರೀಕ್ಷೆಗೆ ಕೆಲವು ನಕಾರಾತ್ಮಕ ಮಾತುಗಳನ್ನು ಕೇಳಿಸಿಕೊಳ್ಳುವಿರಿ. ಬೇಡ ಅಭ್ಯಾಸವು ರೂಡಿಯಾಗುವ ಸಂಭವವಿದೆ.
ವೃಷಭ ರಾಶಿ : ನಿಮ್ಮ ಕಲ್ಪನೆಗೆ ವಿಚಿತ್ರ, ಆದರೆ ಪರಿಣಾಮಕಾರಿ ಹೊಸ ದಾರಿ ತರುತ್ತದೆ. ಕೆಲಸದಲ್ಲಿ ಅತ್ಯಂತ ಚತುರ ತೀರ್ಮಾನ. ಹಳೆಯ ಮನೆಯ ದುರಸ್ತಿಗೆ ಹಣವನ್ನು ಖರ್ಚು ಮಾಡುವಿರಿ. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ. ಇನ್ನೊಬ್ಬರು ತೋರುವ ನಿರ್ಲಕ್ಷ್ಯದಿಂದ ನೀವು ಬಹಳ ದುಃಖಿಸುವಿರಿ. ಉದ್ಯೋಗಕ್ಕೆ ಸಂಬಂಧಿಸಿದಂತೆ ಬಂಧುಗಳ ಸಹಕಾರ ಇಂದು ಲಭ್ಯವಾಗುವುದು. ಯಾರಾದರೂ ನಿಮ್ಮ ಭವಿಷ್ಯದ ಬಗ್ಗೆ ಹೇಳಿ ಅವಮಾನಿಸಬಹುದು. ಕೆಲಸದಲ್ಲಿ ಮತ್ತೆ ಮತ್ತೆ ತೊಂದರೆ ಎದುರಾದರೆ ಅದನ್ನು ಕೈ ಬಿಡುವುದು ಸೂಕ್ತ. ಮನೆಯ ಕಾರ್ಯದಲ್ಲಿ ಮಂದಗತಿ, ಆಮೇಲೆ ಮಾಡಿದರಾಯಿತು ಎಂಬ ಭಾವ ಇರಲಿದೆ. ರಾಜಕೀಯ ನಾಯಕರಿಂದ ಒತ್ತಾಯ ಪೂರ್ವಕ ಬೆಂಬಲವನ್ನು ಪಡೆಯುವಿರಿ. ಹೊಸ ವಸ್ತುವು ನಿಮಗೆ ಸಂತೋಷವನ್ನು ಕೊಡುವುದು. ನಿಮ್ಮ ಸಣ್ಣ ನಿರ್ಲಕ್ಷ್ಯವು ದೊಡ್ಡ ಅನಾಹುತಕ್ಕೆ ಕಾರಣವಾಗಬಹುದು. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು.
ಮಿಥುನ ರಾಶಿ : ನಿಮ್ಮ ಶಿಸ್ತಿನ ಕಾರ್ಯಕ್ಕೆ ಬಹುಮಾನ ನೀಡಬಹುದು. ಕೆಲಸದಲ್ಲಿ ಮೌನವಾಗಿ ಕಾರ್ಯ ಮಾಡಿ ಮುಗಿಸುವಿರಿ. ಹಣಕಾಸಿನಲ್ಲಿ ಹಿತಕರ ಲಾಭ. ನೀವು ಯಾರನ್ನೂ ನಿರ್ಲಕ್ಷ್ಯದಿಂದ ನೋಡುವುದು ಬೇಡ. ಸಾಲ ಕೊಟ್ಟವರು ನಿಮ್ಮನ್ನು ಶತ್ರುಗಳಂತೆ ಕಾಡುವರು. ನಿಮ್ಮನ್ನು ಕೆಲವು ಸಹೋದ್ಯೋಗಿಗಳು ಟೀಕಿಸಬಹುದು. ಕುಹಕ ಮಾತುಗಳನ್ನೂ ಆಡಬಹುದು. ಸಂಗಾತಿಯು ನಿಮ್ಮ ಮಾತನ್ನು ಅಲ್ಲಗಳೆಯಬಹುದು. ಸ್ವಪ್ರತಿಷ್ಠೆಯನ್ನು ಎಲ್ಲರೆದುರು ತೋರಿಸಿದರೆ ಪ್ರಯೋಜನವಾಗದು. ನಿಮ್ಮ ವ್ಯವಹಾರದಲ್ಲಿ ಯಾರ ಹಸ್ತಕ್ಷೇಪವೂ ಇಷ್ಟವಾಗದು. ತಂದೆಯ ಕೆಲವು ವ್ಯವಹಾರವು ನಿಮಗೆ ಇಷ್ಟವಾಗದೇ ಅವರ ಮೇಲೆ ಮುನಿಸಿಕೊಳ್ಳುವಿರಿ. ರಾಜಕೀಯದಲ್ಲಿ ನಿಮ್ಮ ವರ್ಚಸ್ಸನ್ನು ಜೊತೆಗಿರುವವರು ಹೆಚ್ಚಿಸುವರು. ಕೆಲಸದ ಒತ್ತಡವು ಇಂದು ಅಧಿಕವಾಗಿ ಇರಲಿದೆ. ಭೂಮಿಯ ವ್ಯವಹಾರದಲ್ಲಿ ಸ್ವಲ್ಪ ನಷ್ಟವಾಗುವುದು. ತಂತ್ರಜ್ಞರು ಲಾಭವನ್ನು ಗಳಿಸುವರು. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ.
ಕರ್ಕಾಟಕ ರಾಶಿ : ಬುದ್ಧಿಶಕ್ತಿ ನಿಮಗೆ ಹೊಸ ಅವಕಾಶಗಳನ್ನು ತರಬಹುದು. ಅಧ್ಯಯನ, ಕಲಿಕೆಗೆ ಆಸಕ್ತಿ ಹೆಚ್ಚಾಗುತ್ತದೆ. ಮಕ್ಕಳ ಭವಿಷ್ಯಕ್ಕೆ ಹಣವನ್ನು ಕೂಡಿ ಇಡುವಿರಿ. ಸಾಲ ಕೊಟ್ಟವರು ನಿಮ್ಮನ್ನು ಇಂದು ಏನೂ ಕೇಳುವುದಿಲ್ಲ. ಹಾಗಾಗಿ ನಿಶ್ಚಿಂತೆಯಿಂದ ಇದ್ದುಬಿಡುವಿರಿ. ಸಿಕ್ಕಿದ್ದರಲ್ಲಿ ಸಂತೋಷ ಪಡುವುದನ್ನ ನೀವು ಬೆಳೆಸಿಕೊಳ್ಳಬೇಕಾಗುವುದು. ಮಕ್ಕಳು ನಿಮಗೆ ಬೇಕಾದ ಆರ್ಥಿಕ ನೆರವನ್ನು ಕೊಡುವರು. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ಕಛೇರಿಯಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ಕುಟುಂಬಕ್ಕೆ ಸಮಯವನ್ನು ಕೊಡುವಿರಿ. ಇಷ್ಟವಿಲ್ಲದ ಕಡೆ ನೀವು ಎಂದೂ ಹೋಗಲಾರಿರಿ. ನಿಮ್ಮ ಉತ್ಸಾಹದ ಕೆಲಸವು ಇನ್ನೊಬ್ಬರಿಗೆ ಮಾದರಿಯಾದೀತು. ನಿಮ್ಮ ನಿರ್ಲಕ್ಷ್ಯದ ಸ್ವಭಾವದಿಂದ ಉತ್ತಮ ಅವಕಾಶಗಳನ್ನು ಕಳೆದುಕೊಳ್ಳುವಿರಿ. ಬೇಸರದ ಸನ್ನಿವೇಶದಲ್ಲಿ ಕುಟುಂಬದ ಬಗ್ಗೆ ಗೊತ್ತಾಗುವುದು. ಆತ್ಮಾಭಿಮಾನ ಹೆಚ್ಚಿರುವಂತೆ ತೋರುತ್ತದೆ. ಮಕ್ಕಳಿಂದ ನಿಮಗೆ ಸಂತೃಪ್ತಿಯು ಸಿಗಲಿದೆ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು. ಹೊಸ ಯೋಜನೆಯು ನಿಮಗೆ ಬರಲಿದೆ.
ಸಿಂಹ ರಾಶಿ : ನಿಮ್ಮ ಅಂತರ್ದೃಷ್ಟಿ ತೀಕ್ಷ್ಣಗೊಳ್ಳುತ್ತದೆ. ಹಣಕಾಸಿನಲ್ಲಿ ಗುಪ್ತ ಲಾಭವಾಗುವುದು. ವ್ಯಾಪಾರದಲ್ಲಿ ಸ್ಪರ್ಧೆ ಹೆಚ್ಚಾಗುವ ಸಾಧ್ಯತೆ. ದೈಹಿಕ ಕಾರ್ಯದಲ್ಲಿ ತೊಡಗಿದವರಿಗೆ ಹೆಚ್ಚು ಆದಾಯವು ಇರುವುದು. ಕಾರ್ಯಕ್ಕಾಗಿ ಹೆಚ್ಚು ಓಡಾಡಬೇಕಾಗುವುದು. ಧಾರ್ಮಿಕ ಸೇವೆಯಲ್ಲಿ ನೀವು ಭಾಗಿಗಳಾಗುವಿರಿ. ನಿದ್ರಾಹೀನತೆಯಿಂದ ಕಿರಿಕಿರಿ ಉಂಟಾಗುವುದು. ಮಕ್ಕಳ ವರ್ತನೆಯು ಹಿಡಸದೇ ಇರುವುದು. ಆದರೂ ಏನನ್ನೂ ಹೇಳದೇ ಇರುವಿರಿ. ಹಿತಶತ್ರುಗಳನ್ನು ಸರಿಯಾಗಿ ಗಮನಿಸುತ್ತಿರಿ. ಕಾರ್ಯದ ಬಗ್ಗೆ ಅತಿಯಾದ ಆಲೋಚನೆಯಿಂದ ತಲೆನೋವು ಬರಬಹುದು. ಪ್ರೀತಿಗಾಗಿ ಇಂದು ಹೆಚ್ಚು ಸಮಯವನ್ನು ಕೊಡುವಿರಿ. ಹೊಸ ಆದಾಯದ ದಾರಿ ಸಿಕ್ಕಿ ಅಲ್ಪ ನೆಮ್ಮದಿ ಕಾಣುವಿರಿ. ರಾಜಕಾರಣಿಗಳು ಸಮಾಜದಿಂದ ಗೌರವವನ್ನು ಪಡೆಯುವರು. ಬಂಧುಗಳ ಜೊತೆ ವಿನಾಕಾರಣ ಮನಸ್ತಾಪ ಆಗಬಹುದು. ಇನ್ನೊಬ್ಬರನ್ನು ಪ್ರಶಂಸಿಸುವ ಮನೋಭಾವ ನಿಮ್ಮಲ್ಲಿ ಇರದು.
ಕನ್ಯಾ ರಾಶಿ : ನಿಮ್ಮ ಮನಸ್ಸಿನ ತೂಕ ಸಮಬಲದಲ್ಲಿ ಇರಿಸಿಕೊಳ್ಳಿ. ಕಲಾತ್ಮಕ ಕಾರ್ಯಗಳಲ್ಲಿ ವಿಶೇಷ ಯಶಸ್ಸು. ಹಣಕಾಸಿನಲ್ಲಿ ಹೊಸ ಯೋಜನೆಗೆ ಉತ್ತಮ ದಿನ. ಇಂದು ನಿಮ್ಮ ಮೇಲೆ ಎಲ್ಲರಿಂದ ಆಕ್ರಮಣವಾಗಬಹುದು. ವಿಷಯ, ಸಮಯ ಎಲ್ಲವನ್ನೂ ನೋಡಿ ವ್ಯವಹರಿಸಿ. ದುಡುಕಿ ಯಾವುದನ್ನೂ ಮಾಡುವುದು ಬೇಡ. ನಿಮಗಮ ಸ್ಥಿರಾಸ್ತಿಯ ಮಾರಾಟದಲ್ಲಿ ಏಕಮುಖವಾದ ಅಭಿಪ್ರಾಯ ಬೇಡ. ನಿಮ್ಮ ಕೆಲವು ಆಸೆಗಳನ್ನು ಪೂರೈಸಿಕೊಳ್ಳುವಿರಿ. ಸಮಾಜವು ನಿಮ್ಮ ಸಾಧನೆಯನ್ನು ಗುರುತಿಸೀತು. ನಿಮ್ಮ ಬಗ್ಗೆ ಬಂದ ಆರೋಪವನ್ನು ಜಾಣ್ಮೆಯಿಂದ ಪರಿಹಿರಿಸಿಕೊಳ್ಳುವಿರಿ. ನಿಮ್ಮ ಉದ್ಯಮಕ್ಕೆ ಹೆಚ್ಚಿನ ಸಮಯವನ್ನು ಕೊಡುವುದು ಅಗತ್ಯ. ಪ್ರಭಾವೀ ಜನರ ನಡುವೆ ಅಂತರವನ್ನು ಕಾಯ್ದುಕೊಳ್ಳಿ. ನಿಮ್ಮ ಬಗ್ಗೆಯೇ ನೀವು ಅತಿಯಾಗಿ ಹೇಳಿಕೊಳ್ಳುವುದು ಸರಿ ಕಾಣದು. ನಿಮ್ಮ ಯೋಜನೆಯನ್ನು ಪ್ರಯೋಗಕ್ಕೆ ತರಲು ಪೂರ್ಣ ಯಶಸ್ಸನ್ನು ಪಡೆಯಲಾರಿರಿ.
ತುಲಾ ರಾಶಿ : ಕಚೇರಿಯಲ್ಲಿ ನಿಮ್ಮ ಕಲ್ಪನೆಗೆ ಅಂಗೀಕಾರ. ಹಣಕಾಸಿನಲ್ಲಿ ಸಂಗ್ರಹ ಬಲವಾಗುವುದು. ಮನೆಯಲ್ಲಿಂದು ಶಾಂತತೆಯ ವಾತಾವರಣ ಇರಲಿದೆ. ಲಿಖಿತ ಕಾರ್ಯಗಳು ಸರಿ ದಾರಿಗೆ ಬರುತ್ತದೆ. ನಿಮ್ಮದಾದ ಕೆಲವು ಅಸಂಬದ್ಧ ವ್ಯವಸ್ಥೆಯನ್ನು ನೀವು ಸರಿ ಮಾಡಿಕೊಳ್ಳಬೇಕು. ಹೊಸ ವಸ್ತುವಿನ ಖರೀದಿಯಲ್ಲಿ ನಿಮಗೆ ಮೋಸ ಆಗುವ ಸಾಧ್ಯತೆ ಇದೆ. ಪ್ರೀತಿಪಾತ್ರರ ಜೊತೆ ಇಂದು ಸಲುಗೆಯಿಂದ ಇರುವಿರಿ. ಮನಸ್ಸಿಗೆ ಇಷ್ಟವಾಗದ ಕಾರ್ಯವನ್ನು ನೀವು ಮಾಡಬೇಕಾದೀತು. ಕುಟುಂಬದ ಜೊತೆ ಧಾರ್ಮಿಕ ಸ್ಥಳಗಳಿಗೆ ಹೋಗುವಿರಿ. ಮನಸ್ಸಿನಿಂದ ನೀವು ಕೆಲವು ವಿಚಾರವನ್ನು ತೆಗೆದುಹಾಕುವುದು ಉತ್ತಮ. ಅಪನಂಬಿಕೆಯಿಂದ ನಿಮಗೆ ತೊಂದರೆ ಆಗಬಹುದು. ವಸತಿ ಸ್ಥಾನವನ್ನು ಬದಲಿಸಬೇಕಾದೀತು. ಯಾರನ್ನೋ ನೋಡಿ ಹೊಟ್ಟಿ ಉರಿ ಮಾಡಿಕೊಳ್ಳುವುದು ಬೇಡ. ಸಮಯೋಚಿತ ಕಾರ್ಯದಿಂದ ಲಾಭ ಸಿಗಲಿದೆ. ಅರ್ಥಿಕತೆಗೆ ಸಂಬಂಧಿಸಿದಂತೆ ಯಾರಾದರೂ ಆಡಿಕೊಂಡಾರು. ವಿರುದ್ಧ ವಂಚನೆಯ ಆರೋಪವು ಬರಬಹುದು. ನಿಮಗೆ ಬರುವ ಯಾವುದನ್ನೂ ನಿಯಂತ್ರಣ ಮಾಡಲಾಗದು.
ವೃಶ್ಚಿಕ ರಾಶಿ : ತಪ್ಪಿಗೆ ಪರಿಹಾರ ದೊರೆತು ಮನಸ್ಸು ಹಗುರವಾಗುತ್ತದೆ. ಒಳ್ಳೆಯ ಆಚಾರದಿಂದ ನಿಮಗೇ ಸಂತೃಪ್ತಿ ಸಿಗುವುದು. ನಿಮ್ಮ ತಪ್ಪಿನ ನಿರ್ಧಾರದಿಂದ ಪಶ್ಚಾತ್ತಾಪ ಪಡಬೇಕಾಗುವುದು. ಬಹಳ ದಿನಗಳ ಅನಂತರ ನ್ಯಾಯಾಲಯದಿಂದ ಸಿಕ್ಕ ಜಯವು ಸಂತಸವನ್ನು ಉಂಟುಮಾಡುವುದು. ಇನ್ನೊಬ್ಬರನ್ನು ಪ್ರಶಂಸಿಸುವ ಮನೋಭಾವ ನಿಮ್ಮಲ್ಲಿ ಇರದು. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಅಗತ್ಯ. ಇಂದು ತುರ್ತಾಗಿ ಬೇಕಾಗಿರುವ ಹಣವನ್ನು ಹೊಂದಿಸಲು ನಿಮಗೆ ಕಷ್ಟವಾಗುವುದು. ಕೃಷಿಗೆ ಸಂಬಂಧಿಸಿದಂತೆ ಹೊಸ ಕಲ್ಪನೆಯನ್ನು ಇಟ್ಟುಕೊಳ್ಳುವಿರಿ. ಕಛೇರಿಯ ಕಾರ್ಯದಿಂದ ಆಯಾಸವಾಗಬಹುದು. ಬಹಳ ವರ್ಷಗಳಿಂದ ಒಂದೇ ಉದ್ಯೋಗದಲ್ಲಿ ಇದ್ದವರಿಗೆ ಸಂತೋಷದ ಸುದ್ದಿ ಸಿಗಲಿದೆ. ನಿಮ್ಮಿಂದ ಕಾರ್ಯವಾಗಲು ಯಾರಾದರೂ ನಿಮ್ಮನ್ನು ಹೊಗಳಬಹುದು. ಕೆಲಸದ ಕ್ಷೇತ್ರದಲ್ಲಿ ಒಬ್ಬ ಹಿರಿಯನಿಂದ ಬೆಂಬಲ. ಕುಟುಂಬದಲ್ಲಿ ನಾಯಕತ್ವ ತೋರಬೇಕಾದ ಸಂದರ್ಭ. ಅನಿವಾರ್ಯವಾಗಿ ಮನೆಯಿಂದ ದೂರ ಹೋಗುವಿರಿ. ಕೇವಲ ನಗುವಿನಿಂದ ಇನ್ಮೊಬ್ಬರನ್ನು ನೀವು ಸೋಲಿಸಬಹುದು.
ಧನು ರಾಶಿ : ನಿಜಸ್ವರೂಪ ಪೂರಕವಾಗಿ ತೆರೆದಿಡುವ ದಿನ. ಇಂದು ಹಳೆಯ ಸಂಬಂಧದಿಂದ ಉತ್ತಮ ಸುದ್ದಿ. ಖುಷಿಯಾಗಿರಲು ಹಲವು ಸಂಗತಿಗಳಿದ್ದರೂ ಅದನ್ನು ನಿರ್ಲಕ್ಷಿಸುವಿರಿ. ನಿರುದ್ಯೋಗವು ಚಿಂತೆಯಾಗಿ ನಿಮ್ಮ ಬಗ್ಗೆಯೇ ನಿಮಗೆ ಹಗುರಾದ ಭಾವ ಬರಬಹುದು. ಯಾವುದೋ ಆಲೋಚನೆಯಲ್ಲಿ ಮುಳುಗಿರುವಿರಿ. ಬಂಧುಗಳ ಭೇಟಿಯು ನಿಮಗೆ ಅಷ್ಟಾಗಿ ಇಷ್ಟವಾಗದು. ಸರಳವಾದ ಕೆಲಸವನ್ನು ಮನಶ್ಚಾಂಚಲ್ಯದಿಂದ ಸಂಕೀರ್ಣ ಮಾಡಿಕೊಳ್ಳುವಿರಿ. ನಿಮ್ಮ ಸ್ವಾಭಿಮಾನಕ್ಕೆ ತೊಂದರೆ ಉಂಟಾಗಬಹುದು. ನಿಮ್ಮ ಹಾಸ್ಯಪ್ರಜ್ಞೆ ಕೆಲವರಿಗೆ ಇಷ್ಟವಾಗದು. ದೇಹವು ಅಧಿಕ ಶ್ರಮದಿಂದ ಆಯಾಸಗೊಳ್ಳುವುದು. ಸಾರ್ವಜನಿಕವಾಗಿ ಗುರುತಿಸಿಕೊಳ್ಳಬೇಕು ಎನಿಸುವುದು. ವಹಿಸಿದ ಕಾರ್ಯದಿಂದ ನಿಮ್ಮ ಬುದ್ಧಿಶಕ್ತಿ ತೀಕ್ಷ್ಣಗೊಳಿಸುತ್ತದೆ. ಇದು ಹೊಸ ಯೋಜನೆಗಳು ಯಶಸ್ವಿಯಾಗಲು ಸಹಕಾರಿ. ವಿದ್ಯಾಭ್ಯಾಸಕ್ಕೆಂದು ಹೊರಗೆ ಇರುವವರಿಗೆ ಮನೆಯ ಬಗ್ಗೆಯೇ ನೆನಪಾಗುವುದು. ಹಿರಿಯರ ವಿಚಾರದಲ್ಲಿ ಅನಾದರ ಬೇಡ. ಇಷ್ಟವಿಲ್ಲದ ವಿಚಾರದ ಬಗ್ಗೆ ಮೌನ ವಹಿಸುವಿರಿ. ನಿಮ್ಮ ದುರಭ್ಯಾಸವು ಅತಿಯಾಗಲಿದೆ. ವಸ್ತುಗಳನ್ನು ಸದುಪಯೋಗ ಮಾಡಲು ಕಲಿಯಬೇಕಾಗುವುದು.
ಮಕರ ರಾಶಿ : ಹಣಕಾಸಿನಲ್ಲಿ ಒಂದು ಹಳೆಯ ಬಾಕಿ ಹಣ ಮರಳಿ ಬರುವ ಸೂಚನೆ. ದೇಹದಲ್ಲಿ ಉತ್ಸಾಹ ಹೆಚ್ಚಾಗುತ್ತದೆ. ಕೆಲಸದ ಸ್ಥಳದಲ್ಲಿ ನಿಮ್ಮ ಮಾತಿಗೆ ವಿಶೇಷ ಆದರ. ನಿಮಗೆ ಅನ್ಯತರ ಮಾತು ಬಹಳ ಹಿತವೆನಿಸವುದು. ಅಭಿವೃದ್ಧಿಗೆ ಅವಕಾಶವಿದ್ದರೂ ನಿಮಗೆ ಹಿನ್ನಡೆಯಂತೆ ಎಲ್ಲವೂ ಭಾಸವಾಗುವುದು. ಶ್ರಮಕ್ಕೆ ತಕ್ಕ ಫಲವು ಲಭಿಸಿಲ್ಲ ಎಂದು ನಿಮ್ಮ ಮನಸ್ಸಿಗೆ ಗಾಢವಾಗಿ ತಿಳಿಯುವುದು. ಹೊಸ ಕಲಿಕೆಗೆ ಉತ್ಸಾಹ ಇರಲಿದ್ದು ಶ್ರದ್ಧೆಯಿಂದ ಅದನ್ನು ಅಭ್ಯಾಸ ಮಾಡುವಿರಿ. ಸಂಗಾತಿಯ ಮನೋಭಾವವು ನಿಮಗೆ ಇಂದು ಸರಿ ಹೊಂದದು. ವ್ಯವಹಾರದಲ್ಲಿ ನೀವು ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದೀರಿ ಎಂಬ ಭಾವವು ಆಗಾಗ ಬರುವುದು. ಸಂಗಾತಿಯ ಜೊತೆ ವಾಯುವಿಹಾರಕ್ಕೆ ಹೋಗಿ ಖುಷಿಪಡುವಿರಿ. ಕೋಪ ನಿಯಂತ್ರಿಸಿದರೆ ದೊಡ್ಡ ಲಾಭ. ಮಕ್ಕಳಿಗೆ ನಿಮ್ಮ ಮೇಲೆ ಇದ್ದಕ್ಕಿದ್ದಂತೆ ಪ್ರೀತಿಯು ಅಧಿಕವಾಗಬಹುದು. ಸ್ನೇಹಿತರ ವಿಚಾರದಲ್ಲಿ ದೃಷ್ಟಿಕೋನ ಬದಲಾದೀತು. ನಿಮ್ಮ ಬಗ್ಗೆ ಕುಟುಂಬದಲ್ಲಿ ಒಳ್ಳೆಯ ಅಭಿಪ್ರಾಯವು ಇರುವುದು.
ಕುಂಭ ರಾಶಿ : ಕೆಲಸದಲ್ಲಿ ಸ್ಥಿರ ಪ್ರಗತಿ, ಆದರೆ ವಿಳಂಬ ಸಾಧ್ಯ. ಮನೆಯವರ ಮಾತು ಕೇಳುವುದು ಒಳ್ಳೆಯದು. ಹಣ ಉಳಿಸುವ ಯೋಚನೆ ಬಲವಾಗುತ್ತದೆ. ಮನಸ್ಸಿನಲ್ಲಿಯೇ ಎಲ್ಲ ಸಂಕಟವನ್ನೂ ನೀವು ಅನುಭವಿಸುವಿರಿ. ಆಪ್ತರಿಗೆ ನಿಮ್ಮ ಬದಲಾದ ನಡವಳಿಕೆಯು ಇಷ್ಟವಾಗದು. ಸಮಯದ ಹೊಂದಾಣಿಕೆಯು ನಿಮಗೆ ಕಷ್ಟವಾಗುವುದು. ಬಂಧುವನ್ನೇ ಪಾಲುದಾರರನ್ನಾಗಿ ಆಯ್ಕೆ ಮಾಡಿಕೊಳ್ಳುವಿರಿ. ನಿಮ್ಮವರ ಬಗ್ಗೆ ನಿಮಗೆ ನಂಬಿಕೆ ಕಡಮೆ ಆಗುವುದು. ಸಂಬಂಧದಲ್ಲಿ ಹಣಕಾಸಿನ ವ್ಯವಹಾರವನ್ನು ಇಟ್ಟುಕೊಳ್ಳಬೇಡಿ. ಯಾರಾದರೂ ಧನಸಹಾಯವನ್ನು ನಿಮ್ಮ ಬಳಿ ಕೇಳಬಹುದು. ಸಂಬಂಧಗಳ ನಿಜವಾದ ಮಾತು ಚೈತನ್ಯ ತರುತ್ತದೆ. ಭೂತಕಾಲದ ವಿಷಯಗಳು ಪರಿಹಾರಕ್ಕೆ ಬರುತ್ತವೆ. ಶತ್ರುಗಳ ಕುತಂತ್ರವು ನಿಮಗೆ ಲಾಭವೇ ಆಗುವುದು. ಯಾರ ವಿರೋಧವನ್ನೂ ಕಿವಿಗೆ ಹಾಕಿಕೊಳ್ಳದೇ ನಿಮ್ಮದೇ ಮನಸ್ಸಿನಂತೆ ನಡೆಯುವಿರಿ. ರಾಜಕೀಯ ವ್ಯಕ್ತಿಗಳಿಗೆ ಬೆಂಬಲವಿರುವುದನ್ನು ಕಾಣಬಹುದು. ಆತುರಾತುರವಾಗಿ ಯಾವುದನ್ನೂ ಮಾಡಲು ಹೋಗುವುದು ಬೇಡ.
ಮೀನ ರಾಶಿ : ಆತ್ಮವಿಶ್ವಾಸ ಹೆಚ್ಚಾಗುತ್ತದೆ, ಆದರೆ ಅಹಂಕಾರ ತಪ್ಪಿಸಿರಿ. ಮನೆಯ ಧಾರ್ಮಿಕ ಕಾರ್ಯಗಳನ್ನು ಕಡಿಮೆ ಖರ್ಚಿನಲ್ಲಿ ಮಾಡಬೇಕು ಎಂದುಕೊಂಡರೂ ಅದು ಅಸಾಧ್ಯ ಎನಿಸಬಹುದು. ಕಛೇರಿಯಲ್ಲಿ ಉಂಟಾದ ಕೆಲವು ಗೊಂದಲವು ನಿಮ್ಮ ಮನಸ್ಸನ್ನು ಹಾಳು ಮಾಡುವುದು. ದೌರ್ಬಲ್ಯವನ್ನು ಹೇಳಿಕೊಂಡು ಪರಿಹಾರ ಕಂಡುಕೊಳ್ಳುವುದು ಉತ್ತಮ. ವಿಳಂಬವಾಗಿ ಬರುತ್ತದೆ ಎಂದುಕೊಂಡ ನಿಮ್ಮ ಹಣವು ಬೇಗ ಬರಬಹುದು. ನಿಮ್ಮ ನಿರ್ಧಾರವು ತೂಗುಕತ್ತಿಯಂತೆ ಇರಲಿದೆ. ವಿವಾಹಜೀವನವು ಅತ್ಯಂತ ಸುಖದಂತೆ ತೋರುವುದು. ಕುಟುಂಬದಲ್ಲಿ ಸಣ್ಣ ನಿರ್ಧಾರಗಳು ದೊಡ್ಡ ಫಲ ತರುತ್ತವೆ. ಹಣಕಾಸು ವ್ಯವಹಾರಗಳಲ್ಲಿ ಜಾಗ್ರತೆ ಅಗತ್ಯ. ಸ್ನೇಹಿತರ ಸಲಹೆ ಉಪಯುಕ್ತ. ಕೆಲವು ಅಭ್ಯಾಸವನ್ನು ನೀವು ಬಿಡಬೇಕೆಂದರೂ ಬಿಡಲಾಗದು. ನಿಮ್ಮ ದಿನಚರಿಯನ್ನು ಬದಲಿಸಿಕೊಂಡು ಬದುಕಿಗೆ ಹೊಸ ಆಯಾಮವನ್ನು ಕೊಡಬೇಕು ಎನಿಸುವುದು. ಇನ್ನೊಬ್ಬರಿಗೆ ನೀವು ಸಹಾಯವನ್ನು ಮಾಡಲು ಹೆಚ್ಚು ಇಷ್ಟಪಡುವಿರಿ. ಸಕಾರಾತ್ಮಕ ಯೋಚನೆಗಳೂ ನಿಮಗೆ ಬಾಧೆಯನ್ನು ತರುವುದುಂಟು.
-ಲೋಹಿತ ಹೆಬ್ಬಾರ್ – 8762924271 (what’s app only)




