Horoscope Today 28 January : ಇಂದು ಈ ರಾಶಿಯವರಿಗೆ ಆರ್ಥಿಕ ವಂಚನೆ ಸಂಭವ

ಶಾಲಿವಾಹನ ಶಕವರ್ಷ 1948ರ ದಕ್ಷಿಣಾಯನ, ಶಿಶಿರ ಋತುವಿನ ಮಾಘ ಮಾಸ ಶುಕ್ಲ ಪಕ್ಷದ ದಶಮೀ ತಿಥಿ ಬುಧವಾರ ಕಿರಿಯರಿಂದ ಗೌರವ, ಅಪೂರ್ಣಕಾರ್ಯ, ಪರಾವಲಂಬನೆ, ಆರ್ಥಿಕ ದುರ್ಬಲತೆ, ಪ್ರಚಾರದ ಆಸೆ ಪ್ರಯಾಣದಿಂದ ಅನಾರೋಗ್ಯ ಇವೆಲ್ಲ ಇಂದಿನ ವಿಶೇಷ.

Horoscope Today 28 January : ಇಂದು ಈ ರಾಶಿಯವರಿಗೆ ಆರ್ಥಿಕ ವಂಚನೆ ಸಂಭವ
ದಿನ ಭವಿಷ್ಯ
Edited By:

Updated on: Jan 28, 2026 | 12:15 AM

ಮೇಷ ರಾಶಿ:

ನಿಮ್ಮ ಸಾಧನೆಗೆ ಸಣ್ಣ ಪ್ರೋತ್ಸಾಹವೂ ದೊಡ್ಡದೇ. ಕಳೆದುಕೊಂಡಿದ್ದು ನಿಮ್ಮ ಕೈಸೇರಬಹುದು. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಬಾಗುವಿಕೆಯಿಂದ ಏನನ್ನೂ ಕಳೆದುಕೊಳ್ಳುವುದಿಲ್ಲ. ಆ ಭಾವ ನಿಮ್ಮಲ್ಲಿದ್ದರೆ ತೆಗೆದುಹಾಕಿ. ಕ್ಷುಲ್ಲಕ ಕಾರಣಕ್ಕೆ ಸ್ನೇಹವನ್ನು ಮುರಿದುಕೊಳ್ಳುವಿರಿ.‌ ಯಾರಿಗೂ ಒತ್ತಾಯ ಪೂರ್ವಕ ಇಟ್ಟುಕೊಳ್ಳುವುದು ಬೇಡ. ಸಂಗಾತಿಯು ನಿಮ್ಮ ಹಳೆಯ ವಿಚಾರವನ್ನು ನೆನಪಿಸಿ ಜಗಳವಾಡಬಹುದು. ಅಪರಿಚಿತರಿಗೆ ನಿಮ್ಮ ಬಗ್ಗೆ ತಿಳಿದುಕೊಳ್ಳುವ ಕುತೂಹಲವು ಬರಬಹುದು.

ವೃಷಭ ರಾಶಿ:

ಯಾರ ಸಹಕಾರವನ್ನೂ ಪಡೆಯದೇ ನಿಮ್ಮ ಕಾರ್ಯಗಳನ್ನು ಮಾಡಿಕೊಳ್ಳುವಿರಿ. ಇಷ್ಟವಾಗದವರ ಜೊತೆ ವೃಥಾ ಕಾಲಹರಣ ಮಾಡುವುದು ಬೇಡ. ನಿಮ್ಮಷ್ಟಕ್ಕೆ ನೀವು ಇದ್ದುಬಿಡಿ. ಹಣಕಾಸಿನ ತೊಂದರೆಯನ್ನು ಸರಿ ಮಾಡಿಕೊಳ್ಳುವ ಮಾರ್ಗದ ಅನ್ವೇಷಣೆ ಮಾಡುವಿರಿ. ಪುಣ್ಯ ಸ್ಥಳದ ದರ್ಶನದಿಂದ ಶಕ್ತಿಸಂಚಯವಾಗಲಿದೆ. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ. ಮಕ್ಕಳ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಷ್ಟವಾಗುವುದು. ನೀವು ಇಂದು ಮೌನವನ್ನೇ ಹೆಚ್ಚು ಇಷ್ಟಪಡುವಿರಿ.‌

ಮಿಥುನ ರಾಶಿ:

ಪ್ರೀತಿ ಕೊಟ್ಟವರ ನೋವಿಗೆ ಸ್ಪಂದಿಸುವಿರಿ. ಕೈಲಾಗದ ಕಾರ್ಯಕ್ಕೆ ಸೈ ಎನಿಸಿಕೊಳ್ಳುವ ಅಸೆ ನಿಮ್ಮದು. ಆರ್ಥಿಕ ಪರಿಸ್ಥಿತಿ ಸುಧಾರಿಸಿ ನೆಮ್ಮದಿ ಸಿಗುವುದು. ಪ್ರೇಮವು ಸ್ಥಾಯಿಯಾಗಿರಲು ಒಂದಿಷ್ಟು ಪೌಷ್ಟಿಕಾಂಶ ಬೇಕು. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು. ಮಾತುಗಳಲ್ಲಿ ವಕ್ರತೆಯನ್ನು ಕಡಿಮೆ ಮಾಡಿ. ಪ್ರಾಪಂಚಿಕ ಸುಖದಲ್ಲಿ ಆಸಕ್ತಿಯು ಕಡಿಮೆಯಾಗುವುದು. ಅಧ್ಯಾತ್ಮದ ವಿಚಾರವು ಹೆಚ್ಚು ಇಷ್ಟವಾಗುವುದು. ಇನ್ನೊಬ್ಬರ ದುಃಖಕ್ಕೆ ಸ್ಪಂದಿಸುವಿರಿ. ಎಲ್ಲರ ಜೊತೆ ಉತ್ಸಾಹದಿಂದ ಮಾತನಾಡುವಿರಿ.

ಕರ್ಕಾಟಕ ರಾಶಿ:

ಕುಟುಂಬದಲ್ಲಿ ಜವಾಬ್ದಾರಿಯ ಸ್ಥಾನವನ್ನು ಪಡೆಯಬೇಕಾಗುವುದು. ಆತ್ಮೀಯರನ್ನು ನೀವು ಕಳೆದುಕೊಳ್ಳಬೇಕಾಗುವುದು. ಮೇಲಧಿಕಾರಿಗಳ ಮನವೊಲಿಸಿ ನಿಮ್ಮ ಭಡ್ತಿಯನ್ನು ಮಾಡಿಸಿಕೊಳ್ಳುವಿರಿ. ಪ್ರಯತ್ನಕ್ಕೆ ಸರಿಯಾಗಿ ಫಲವು ಸಿಗದು. ಯಂತ್ರಗಳ ಜೊತೆ ಕೆಲಸ ಮಾಡುವುದು ನಿಮಗೆ ಸಾಕೆನಿಸಬಹುದು. ಆಸ್ತಿಯ ವಿಚಾರದಲ್ಲಿ ಆಕಸ್ಮಿಕ ತಿರುವು ಬರಬಹುದು. ಸಂಗಾತಿಯ ಮಾತಿನಿಂದ‌ ಕೆಲವು ಮಾರ್ಪಾಡು ಮಾಡಿಕೊಳ್ಳುವಿರಿ. ನಿಮ್ಮದೇ ಆದ ಕಾರ್ಯದಲ್ಲಿ ಮಗ್ನರಾಗಿ ಯಶಸ್ಸು ಸಾಧಿಸುವಿರಿ.

ಸಿಂಹ ರಾಶಿ:

ಕುಟುಂಬಕ್ಕೆ ನಿಮ್ಮಿಂದ ಧನಸಹಾಯದ ಅಪೇಕ್ಷೆ ಇರುವುದು. ಪ್ರೇಮಪಾಶದಿಂದ ಬಿಡಿಸಿಕೊಳ್ಳುವ ಪ್ರಯತ್ನ ಇರಲಿದೆ. ಉನ್ನತ ವಿದ್ಯಾಭ್ಯಾಸದ ಕನಸು‌‌ ಬಂಧುಗಳ ಸಹಕಾರದಿಂದ ಆಗಲಿದೆ. ನಿಮ್ಮ ಕೈ ಮೀರಿದ ಕೆಲಸದಲ್ಲಿ ನಿಮಗೆ ಆತಂಕ ಬೇಡ. ಪ್ರೇಮವು ನಿಮಗೆ ಬಂಧನದಂತೆ ಕಾಣಿಸುವುದು. ಅವಸರವಸರವಾಗಿ ಇಂದಿನ ಕಾರ್ಯಗಳನ್ನು ಮಾಡುವಿರಿ. ಆದರೂ ನಿಮ್ಮ ಎಲ್ಲ ಕೆಲಸಗಳನ್ನು ಸಮಯಕ್ಕೆ ಸರಿಯಾಗಿ ಮುಗಿಸಿಕೊಳ್ಳಲು ಆಗದು.

ಕನ್ಯಾ ರಾಶಿ:

ನಿಮ್ಮ ವ್ಯಕ್ತಿತ್ವವು ಸಕಾರಾತ್ಮಕವಾಗಿ ಬೆಳೆಯುತ್ತಿರುವುದು ನಿಮಗೂ ಇತರರಿಗೂ ಸಂತೋಷದ ಸಂಗತಿಯಾಗಿದೆ. ಇಂದು ಆರಂಭಿಸಿದ ಕೆಲಸಗಳನ್ನು ಇಂದೇ ಮುಗಿಸುವಂತೆ ನೋಡಿಕೊಳ್ಳಿ. ಕಳೆದುಕೊಳ್ಳಬೇಕಿದ್ದ ಭೂಭಾಗವನ್ನು ನೀವು ಪಡೆಯುವಿರಿ. ನೀವು ಕಷ್ಟವನ್ನು ಆನಂದದಿಂದ ಕಳೆಯುವಿರಿ. ಸಿಗಬೇಕಾದ ವಸ್ತುವನ್ನು ನೀವು ಬಹಳ ಪ್ರಯತ್ನದಿಂದ ಪಡೆದುಕೊಂಡರೂ ಉಳಿಸಿಕೊಳ್ಳುವುದು ಕಷ್ಟವಾದೀತು. ಮನೆಯ ಬಗ್ಗೆ ನಿಮಗೆ ಕಾಳಜಿ ಹೆಚ್ಚು.

ತುಲಾ ರಾಶಿ:

ಆಧ್ಯಾತ್ಮಿಕ ಚಿಂತನೆಯನ್ನು ಹೆಚ್ಚು ಮಾಡುವಿರಿ. ಪ್ರಾಯೋಗಿಕ ವಿಭಾಗದಲ್ಲಿ ಹೆಚ್ಚಿನ ಪ್ರಯೋಜನವನ್ನು ಪಡೆಯುವಿರಿ. ಹಳೆಯ ಮನೆಯಲ್ಲಿ ವಾಸ ಮಾಡುವಿರಿ. ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತಾಗಬಹುದು. ನೇರ ನುಡಿಯಿಂದ ಆಪ್ತರು ದೂರ ಸರಿಯಬಹುದು. ಕೆಟ್ಟವರ ಸಹವಾಸದಿಂದ ಅಪಕೀರ್ತಿ ಬರಬಹುದು. ಕಟು ವಚನದಿಂದ ಬೇಸರವಾಗಲಿದೆ. ಅವಕಾಶಗಳನ್ನು ಕಳೆದುಕೊಂಡು ಮನಸ್ಸಿನಲ್ಲಿಯೇ ದುಃಖಿಸುವಿರಿ. ಕೋಪವನ್ನು ತಾನಾಗಿಯೇ ಕಡಿಮೆ ಆಗಿದ್ದು ನಿಮಗೆ ಆಶ್ಚರ್ಯವಾಗಬಹುದು.

ವೃಶ್ಚಿಕ ರಾಶಿ:

ಪರದೇಶದಲ್ಲಿ ಇರುವವರಿಗೆ ಅರಾಜಕತೆ ಬರುವ ಸಾಧ್ಯತೆ ಇದೆ. ಕಾರ್ಯಗಳಿಂದ ಹೆಚ್ಚಿನ ಯಶಸ್ಸನ್ನು ಪಡೆಯುವ ಸಾಧ್ಯತೆಯಿದೆ. ಉದ್ಯಮದಲ್ಲಿ ಜನರ ವಿಶ್ವಾಸವನ್ನು ಗಳಿಸುವುದು ಮುಖ್ಯವಾಗಿರುವುದು. ಸಣ್ಣ ಕಾರಣಕ್ಕೆ ಮನೆಯಲ್ಲಿ ದೊಡ್ಡ ಕಲಹವಾಗುವುದು. ನೀವು ನಿರೀಕ್ಷಿಸಿದ ಸ್ಥಳದಲ್ಲಿ ಉದ್ಯೋಗವು ಸಿಗದು. ಮಕ್ಕಳ ತಪ್ಪನ್ನು ನೀವು ಸಮರ್ಥಿಸಿಕೊಳ್ಳಬೇಕಾದೀತು. ನಿಮ್ಮ ಇಚ್ಛೆಯನ್ನು ಪೂರೈಸಿಕೊಳ್ಳಲು ಇಂದು ಸಾಧ್ಯವಾಗದು.

ಧನು ರಾಶಿ:

ಅನವಶ್ಯಕ ಕರೆಗಳು ನಿಮ್ಮ ಏಕಾಗ್ರತೆಯ ಕಾರ್ಯಕ್ಕೆ ಭಂಗ ತರುವುವು. ವಿದ್ಯಾಭ್ಯಾಸಕ್ಕೆ ಅತಿಯಾದ ಹಣಕಾಸಿನ ಖರ್ಚು ಬರಲಿದ್ದು, ನಿಮಗೆ ಕಷ್ಟವಾಗುವುದು. ನಿರೀಕ್ಷಿತ ಸಂದರ್ಭವು ಇಂದು ಬರಲಿದ್ದು ಅದನ್ನು ಬಳಸಿಕೊಳ್ಳುವಿರಿ. ಅಸೂಯೆಯಿಂದಾಗಿ ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ. ಜಾಣ್ಮಯಿಂದ ನಿಮ್ಮ ಕಾರ್ಯವನ್ನು ಸಾಧಿಸಿ. ಇಂದು ಖುಷಿಯಿಂದ ಹಣವನ್ನು ಖರ್ಚು ಮಾಡುವಿರಿ. ಇಂದು ನೀವಾಡವ ಮಾತು ತೂಕದ್ದಾಗಿರಲಿದೆ.

ಮಕರ ರಾಶಿ:

ನಿಮ್ಮ ಸಾರ್ವಜನಿಕ ಸಂಪರ್ಕದ ವ್ಯಾಪ್ತಿಯೂ ವಿಶಾಲವಾಗುವುದು. ಮಾರುಕಟ್ಟೆಗೆ ಸಂಬಂಧಿತ ಕಾರ್ಯಗಳನ್ನು ಮಾಡಲು ಸರಿಯಾದ ಸಮಯ. ಕೆಲವು ಕಠಿಣ ನಿರ್ಧಾರಗಳನ್ನೂ ತೆಗೆದುಕೊಳ್ಳುವುದು ಪ್ರಯೋಜನವಾದೀತು. ಅಪರಿಚಿತರ ಸಹಾಯದಿಂದ ಪೂರ್ಣ ನಂಬಿಕೆ ಬರದು. ನಿಮ್ಮ ನೆಮ್ಮದಿಯು ಇತರರ ಮಾತಿನಿಂದ ವಿಚಲಿತವಾಗುವುದು. ನಿಮ್ಮವರೇ ಆದರೂ ನಿಯಮ‌ ಮೀರದಂತೆ ನೋಡಿಕೊಳ್ಳಬೇಕು. ಮಾಡಬೇಕೆಂದುಕೊಂಡ ಕಾರ್ಯನ್ನು ತೊಂದರೆ ಬಂದರೂ ಬಿಡದೇ ಮುಂದುವರಿಯಿರಿ.

ಕುಂಭ ರಾಶಿ:

ವೈವಾಹಿಕ ಸಂಬಂಧಗಳಲ್ಲಿ ಮಾಧುರ್ಯವು ಇರಲಿದೆ. ಮಕ್ಕಳ‌ ವಿದ್ಯಾಭ್ಯಾಸದ ಚಿಂತೆಯು ದೂರಾಗುವುದು. ಪ್ರಯೋಗಾತ್ಮಕ ವಿಚಾರಕಗಕೆ ನಿಮ್ಮ ಆಸಕ್ತಿ ಹೆಚ್ಚು. ಕಾರ್ಯದ ಒತ್ತಡವನ್ನು ಕಡಿಮೆ ಮಾಡಿಕೊಳ್ಳುವ ಬಗ್ಗೆ ಯೋಚಿಸಿ. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ.‌ ಇಂದು ಕೋಪಿಸಿಕೊಂಡು ಎಲ್ಲವನ್ನೂ ಶಪಿಸಬಹುದು. ಅತಿಯಾದ ಉತ್ಸಾಹದಲ್ಲಿರುವ ನಿಮಗೆ ಸಂಗಾತಿಯ ಮಾತು ಉತ್ಸಾಹಕ್ಕೆ ಭಂಗವನ್ನು ತಂದೀತು.

ಮೀನ ರಾಶಿ:

ನಿಮ್ಮ ಮೇಲೆ ನಂಬಿಕೆ ಇಟ್ಟು ಮುಂದುವರಿಯಿರಿ. ವೃತ್ತಿಗೆ ಸಂಬಂಧಿಸಿದಂತೆ ಒಳ್ಳೆಯ ಸುದ್ದಿ ಸಿಗುವ ಸಾಧ್ಯತೆ ಇದೆ ಕಛೇರಿಯಲ್ಲಿ ಹೆಚ್ಚಿನ ಕೆಲಸದ ಕಾರಣ ಹೆಚ್ಚುವರಿ ಸಮಯವನ್ನು ನೀಡಬೇಕಾಗಬಹುದು. ದಾಂಪತ್ಯದಲ್ಲಿ ನೆಮ್ಮದಿ ಇಲ್ಲದೇ ಪರಸ್ಪರ ಕಲಹವಾಗಬಹುದು. ಸರ್ಕಾರದ ಉದ್ಯೋಗಿಗಳಿಗೆ ಇಷ್ಟವಿಲ್ಲದ ಕಡೆ ವರ್ಗಾವಣೆ ಸಂಭವ. ನಿಮ್ಮ ಮೇಲೆ‌ ಹಿತಶತ್ರುಗಳು‌ ಇಲ್ಲದ ಆರೋಪವನ್ನು ಮಾಡಬಹುದು. ನಿಮ್ಮ ತಿಳಿವಳಿಕೆಯನ್ನು ಇನ್ನೊಬ್ಬರ‌ ಮುಂದೆ ತೋರಿಸಿಕೊಳ್ಳಲಾರಿರಿ.

ಜನವರಿ 28,​​ 2026ರ ಪಂಚಾಂಗ:

ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು : ಶಿಶಿರ, ಚಾಂದ್ರಮಾಸ : ಮಾಘ, ಸೌರ ಮಾಸ : ಮಕರ, ಮಹಾನಕ್ಷತ್ರ : ಶ್ರವಣಾ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ದಶಮೀ, ನಿತ್ಯನಕ್ಷತ್ರ : ರೋಹಿಣೀ, ಯೋಗ : ಶುಕ್ಲ, ಕರಣ : ಗರಜ, ಸೂರ್ಯೋದಯ – 06 – 53 am, ಸೂರ್ಯಾಸ್ತ – 06 – 20 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:37 – 14:03, ಯಮಗಂಡ ಕಾಲ 08:20 – 09:46, ಗುಳಿಕ ಕಾಲ 11:12 – 12:37

-ಲೋಹಿತ ಹೆಬ್ಬಾರ್ – 8762924271 (what’s app only)