AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 18ರ ದಿನಭವಿಷ್ಯ

Daily Numerology February 18: ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಫೆಬ್ರವರಿ 18ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಸಂಖ್ಯಾಶಾಸ್ತ್ರ ಭವಿಷ್ಯ: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಫೆಬ್ರವರಿ 18ರ ದಿನಭವಿಷ್ಯ
ದಿನ ಭವಿಷ್ಯ
ಸ್ವಾತಿ ಎನ್​ಕೆ
| Edited By: |

Updated on: Feb 18, 2026 | 12:30 AM

Share

ಮುಕುಂದ ಮಾಲಾ ಸ್ತೋತ್ರದ ಶ್ರವಣ ಅಥವಾ ಪಠಣವನ್ನು ಮಾಡಿ. ದೂರವಾದ ಸ್ನೇಹ- ಸಂಬಂಧ ಮತ್ತೆ ಸರಿಹೋಗುವುದಕ್ಕೆ ಹಾಗೂ ಉದ್ಯೋಗ, ವ್ಯಾಪಾರ- ವ್ಯವಹಾರಗಳಲ್ಲಿ ಯಶಸ್ಸು ಕಾಣುವುದಕ್ಕೆ ಸಹಕಾರಿ ಆಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ಪ್ರಾಪಂಚಿಕ ವಿಚಾರಗಳ ಬಗ್ಗೆ ಒಂದು ರೀತಿಯ ನಿರಾಸಕ್ತಿ ನಿಮ್ಮನ್ನು ಕಾಡಬಹುದು. ಯಾರಿಗೋ ಮುಖ್ಯ ಎಂದೆನಿಸಿದ್ದು ನನಗೂ ಮುಖ್ಯ ವಿಷಯ ಏಕಾಗಿರಬೇಕು ಎಂಬಂಥ ಧೋರಣೆ ಈ ದಿನ ಇರುತ್ತದೆ. ವೃತ್ತಿಯೋ ಅಥವಾ ಉದ್ಯೋಗಕ್ಕೆ ಸಂಬಂಧಿಸಿದ ಸಂಗತಿಗಳ ಚರ್ಚೆಯೋ ಇದ್ದಲ್ಲಿ ಅನಿಸಿದ್ದನ್ನೆಲ್ಲ ಹೇಳಿಬಿಡುತ್ತೇನೆ ಎಂಬ ಮನಸ್ಥಿತಿಯಿಂದ ಆಚೆ ಬನ್ನಿ. ಈಗ ನಿಮಗೆ ಅನಿಸುತ್ತಿರುವುದು ತಾತ್ಕಾಲಿಕ ಮಾತ್ರ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ನಿಮ್ಮಲ್ಲಿ ಕೆಲವರು ಡಿಷ್ ವಾಷರ್, ಮನೆಯನ್ನು ಕಸ ಗುಡಿಸುವಂಥ ರೋಬೋಟ್ ಅಥವಾ ಹೀಗೆ ಮನೆಯ ಸ್ವಚ್ಛತೆಗಾಗಿಯೇ ಯಂತ್ರಗಳನ್ನು ಖರೀದಿಸುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಇನ್ನೂ ಕೆಲವರು ಇಎಂಐ ಮಾಡಿಸಿ, ಖರೀದಿಸಿಯೇ ಬಿಡುವ ಸಾಧ್ಯತೆ ಸಹ ಇದೆ. ಸ್ನೇಹಿತರು ಯಾವುದಾದರೂ ಆಫರ್ ಗಳನ್ನು ತಂದರೆ ಏಕಾಏಕಿ ಒಪ್ಪಿಕೊಂಡು ಬಿಡಬೇಡಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮಗೆ ಬಂದಿದ್ದ ಅವಕಾಶವೊಂದು ಅಥವಾ ಈಗಾಗಲೇ ಕೆಲಸ ಅರಂಭಿಸಿಯಾಗಿದೆ ಎಂಬುದೊಂದನ್ನು ಮಧ್ಯದಲ್ಲಿ ನಿಲ್ಲಿಸಬೇಕಾದ ಸನ್ನಿವೇಶ ಎದುರಾಗಲಿದೆ. ಒಂದು ವೇಳೆ ಹಣಕಾಸಿನ ವಿಚಾರದಲ್ಲಿ ಕಮಿಟ್ ಆಗಿದ್ದಲ್ಲಿ, ಅಂದರೆ ಮಾತು ನೀಡಿದ್ದಲ್ಲಿ ಗಾಂಭೀರ್ಯ ಕಾಪಾಡಿಕೊಳ್ಳಿ. ಹೇಗೋ ಸಂಭಾಳಿಸುತ್ತೀನಿ ಎಂಬ ಧೋರಣೆ ಬೇಡ. ವಿದ್ಯಾರ್ಥಿಗಳಿಗೆ ಬಹಳ ಮುಖ್ಯವಾದ ದಿನ ಇದಾಗಿರುತ್ತದೆ.

ಲೇಖನ- ಸ್ವಾತಿ ಎನ್.ಕೆ.