AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Cough Syrup: ಇನ್ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್ ಸಿಗಲ್ಲ, ಕೇಂದ್ರ ಸರ್ಕಾರದಿಂದ ಹೊಸ ನಿಯಮ

ಕೇಂದ್ರ ಸರ್ಕಾರ ಕೆಮ್ಮು, ನೆಗಡಿ, ಜ್ವರದ ಸಿರಪ್‌ಗಳಿಗೆ ಹೊಸ ನಿಯಮ ಜಾರಿಗೊಳಿಸಿದೆ. ಜೂನ್ 9 ರಿಂದ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದೇ ಔಷಧ ಅಂಗಡಿಯಲ್ಲಿ ಸಿರಪ್ ಸಿಗುವುದಿಲ್ಲ. ಸಿರಪ್‌ಗಳ ದುರುಪಯೋಗ ತಡೆದು ಸಾರ್ವಜನಿಕ ಆರೋಗ್ಯ ಬಲಪಡಿಸುವುದು ಇದರ ಉದ್ದೇಶ. ಸಣ್ಣ ಹಳ್ಳಿಗಳಲ್ಲಿನ ಹಳೆಯ ವಿನಾಯಿತಿ ರದ್ದುಪಡಿಸಿದ್ದು, ಇನ್ನು ಪರವಾನಗಿ ಪಡೆದ ಔಷಧಾಲಯಗಳಲ್ಲಿ ಮಾತ್ರ ಸಿರಪ್ ಮಾರಾಟ ಸಾಧ್ಯ.

Cough Syrup: ಇನ್ಮುಂದೆ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್ ಸಿಗಲ್ಲ, ಕೇಂದ್ರ ಸರ್ಕಾರದಿಂದ ಹೊಸ ನಿಯಮ
ಸಿರಪ್-ಸಾಂದರ್ಭಿಕ ಚಿತ್ರImage Credit source: Vecteezy
ನಯನಾ ರಾಜೀವ್
|

Updated on:Jun 16, 2026 | 2:15 PM

Share

ನವದೆಹಲಿ, ಜೂನ್ 16: ಇನ್ನುಮುಂದೆ ಮೆಡಿಕಲ್ ಶಾಪ್​ನಲ್ಲಿ ವೈದ್ಯರ ಪ್ರಿಸ್ಕ್ರಿಪ್ಷನ್ ಇಲ್ಲದೆ ಕೆಮ್ಮಿನ ಸಿರಪ್(Cough Syrup) ಕೊಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಹೊಸ ನಿಯಮವನ್ನು ಜಾರಿ ಮಾಡಿದೆ. ಸಾರ್ವಜನಿಕ ಆರೋಗ್ಯ ರಕ್ಷಣೆಯನ್ನು ಬಲಪಡಿಸಲು ಮತ್ತು ಕೆಮ್ಮಿನ ಸಿರಪ್​ಗಳ ಅತಿಯಾದ ದುರುಪಯೋಗವನ್ನು ತಡೆಗಟ್ಟಲು ಕೇಂದ್ರ ಸರ್ಕಾರವು ಅತ್ಯಂತ ಮಹತ್ವದ ಆದೇಶವೊಂದನ್ನು ಹೊರಡಿಸಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಜೂನ್ 9ರಂದು ಹೊರಡಿಸಿರುವ ಅಧಿಸೂಚನೆ ಪ್ರಕಾರ, ಇನ್ನುಮುಂದೆ ವೈದ್ಯರ ಅಧಿಕೃತ ಪ್ರಿಸ್ಕ್ರಿಪ್ಷನ್ ಇಲ್ಲದೆ ಯಾವುದೇ ಕೆಮ್ಮು, ಶೀತ ಹಾಗೂ ಜ್ವರಕ್ಕೆ ಸಿರಪ್ ಪಡೆದುಕೊಳ್ಳಲು ಸಾಧ್ಯವಿಲ್ಲ.

ಕೇಂದ್ರ ಸರ್ಕಾರವು 1945ರ ಹಳೆಯ ಔಷಧ ನಿಯಮಗಳ ವೇಳಾಪಟ್ಟಿ ಕೆ ಸಿರಪ್ ಪದವನ್ನು ಅಧಿಕೃತವಾಗಿ ತೆಗೆದುಹಾಕಿದೆ. ಈ ಹಿಂದೆ 1,000 ಕ್ಕಿಂತ ಕಡಿಮೆ ಜನಸಂಖ್ಯೆ ಹೊಂದಿರುವ ಸಣ್ಣ ಹಳ್ಳಿಗಳಲ್ಲಿ ಕೆಮ್ಮಿನ ಸಿರಪ್‌ಗಳನ್ನು ಮಾರಾಟ ಮಾಡಲು ಕೆಲವು ಪರವಾನಗಿ ನಿಯಮಗಳಿಂದ ವಿನಾಯಿತಿ ನೀಡಲಾಗಿತ್ತು. ಆದರೆ ಇನ್ನು ಮುಂದೆ ಸಣ್ಣ ಹಳ್ಳಿಗಳಲ್ಲೂ ಪರವಾನಗಿ ಇಲ್ಲದೆ ಸಿರಪ್ ಮಾರಾಟ ಮಾಡುವಂತಿಲ್ಲ.

ಹೊಸ ಬದಲಾವಣೆಯ ನಂತರ, ಎಲ್ಲಾ ರೀತಿಯ ಕೆಮ್ಮಿನ ಸಿರಪ್‌ಗಳನ್ನು 1940 ರ ಔಷಧಗಳು ಮತ್ತು ಸೌಂದರ್ಯವರ್ಧಕ ಕಾಯ್ದೆಯಡಿ ಪರವಾನಗಿ ಪಡೆದ ಔಷಧಾಲಯಗಳ ಮೂಲಕ ಮಾತ್ರ ಮಾರಾಟ ಮಾಡಬೇಕಾಗುತ್ತದೆ. ಗ್ರಾಹಕರು ವೈದ್ಯರ ಚೀಟಿಯನ್ನು ತೋರಿಸುವುದು ಈಗ ಕಡ್ಡಾಯವಾಗಿದೆ.

ಮತ್ತಷ್ಟು ಓದಿ: 2 ವರ್ಷದೊಳಗಿನ ಮಕ್ಕಳಿಗೆ ಶೀತ, ಕೆಮ್ಮಿನ ಸಿರಪ್ ನೀಡಬೇಡಿ; 11 ಮಕ್ಕಳ ಸಾವಿನ ಬಳಿಕ ಕೇಂದ್ರ ಸರ್ಕಾರ ಎಚ್ಚರಿಕೆ

ಔಷಧ ಅಂಗಡಿಗಳು  ದುರುಪಯೋಗಪಡಿಸಿಕೊಳ್ಳುತ್ತಿರುವುದು ಹೆಚ್ಚಾಗಿದೆ. ಇದನ್ನು ತಡೆಯಲು ಮತ್ತು ದೇಶಾದ್ಯಂತ ಜವಾಬ್ದಾರಿಯುತ ಔಷಧ ಮಾರಾಟವನ್ನು ಖಚಿತಪಡಿಸಿಕೊಳ್ಳಲು ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ. ನಿಯಮ ಉಲ್ಲಂಘಿಸುವ ತಯಾರಕರು ಹಾಗೂ ವಿತರಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಸರ್ಕಾರ ಎಚ್ಚರಿಸಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:19 pm, Tue, 16 June 26

Follow Us
ನಯನಾ ರಾಜೀವ್
ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
ತಾಯಿ ಪಾರ್ಥೀವ ಶರೀರದ ಎದುರು ಕಣ್ಣೀರು ಹಾಕಿದ ಶ್ರೀಮುರಳಿ
ತಾಯಿ ಪಾರ್ಥೀವ ಶರೀರದ ಎದುರು ಕಣ್ಣೀರು ಹಾಕಿದ ಶ್ರೀಮುರಳಿ
ಸಿಎಂ ಡಿಕೆಶಿಗೆ ಮೋಹನ್ ದಾಸ್ ಪೈ ಸಲಹೆ: ಉದ್ಯಮಿ ಹೇಳಿದ್ದೇನು?
ಸಿಎಂ ಡಿಕೆಶಿಗೆ ಮೋಹನ್ ದಾಸ್ ಪೈ ಸಲಹೆ: ಉದ್ಯಮಿ ಹೇಳಿದ್ದೇನು?
ಕೊನೆಗೂ ಖಾತೆ ವಹಿಸಿಕೊಂಡ ಸಚಿವ ಕೃಷ್ಣ ಭೈರೇಗೌಡ: ಜಿಬಿಎ ಕಚೇರಿಯಲ್ಲಿ ಸಭೆ
ಕೊನೆಗೂ ಖಾತೆ ವಹಿಸಿಕೊಂಡ ಸಚಿವ ಕೃಷ್ಣ ಭೈರೇಗೌಡ: ಜಿಬಿಎ ಕಚೇರಿಯಲ್ಲಿ ಸಭೆ
ಹುಬ್ಬಳ್ಳಿ ಭಂಡಿವಾಡದಲ್ಲಿ ಹತ್ತೇ ನಿಮಿಷದಲ್ಲಿ ಉಳೀತು ಇನ್ನೂರು ಮಕ್ಕಳ ಜೀವ
ಹುಬ್ಬಳ್ಳಿ ಭಂಡಿವಾಡದಲ್ಲಿ ಹತ್ತೇ ನಿಮಿಷದಲ್ಲಿ ಉಳೀತು ಇನ್ನೂರು ಮಕ್ಕಳ ಜೀವ
ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ?
ಒಬ್ಬೊಬ್ರಿಗೆ ಕೊಡ್ತೀನಿ ನೋಡಿ; ಸಮಂತಾ ಎಚ್ಚರಿಕೆ ನೀಡಿದ್ದು ಯಾರಿಗೆ?
ಎಸಿಎಫ್​​ ಮನೆಯಲ್ಲಿ ಖಜಾನೆ ಕಂಡು ಲೋಕಾಯಕ್ತ ಅಧಿಕಾರಿಗಳೇ ಶಾಕ್​​
ಎಸಿಎಫ್​​ ಮನೆಯಲ್ಲಿ ಖಜಾನೆ ಕಂಡು ಲೋಕಾಯಕ್ತ ಅಧಿಕಾರಿಗಳೇ ಶಾಕ್​​
ಮೈಸೂರು ಪಬ್​​ ದುರಂತ ಕೇಸ್​​ಗೆ ಟ್ವಿಸ್ಟ್​​: ಕೇಳಿಬಂತು ಸ್ಫೋಟಕ ಆರೋಪ
ಮೈಸೂರು ಪಬ್​​ ದುರಂತ ಕೇಸ್​​ಗೆ ಟ್ವಿಸ್ಟ್​​: ಕೇಳಿಬಂತು ಸ್ಫೋಟಕ ಆರೋಪ
ಮೇಲ್ಛಾವಣಿ ಕುಸಿತದಿಂದ ಜೀವ ಭಯದಲ್ಲೇ ಸರ್ಕಾರಿ ಶಾಲೆಗೆ ಬರುತ್ತಿರುವ ಮಕ್ಕಳು
ಮೇಲ್ಛಾವಣಿ ಕುಸಿತದಿಂದ ಜೀವ ಭಯದಲ್ಲೇ ಸರ್ಕಾರಿ ಶಾಲೆಗೆ ಬರುತ್ತಿರುವ ಮಕ್ಕಳು
ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ
ಸೋಲುವ ಪಂದ್ಯವನ್ನು ಟೈ ಮಾಡಿ, ಆಮೇಲೆ ಸೋತ ಟೀಮ್ ಇಂಡಿಯಾ
ಈ ರಾಶಿಯವರಿಗಿಂದು ಹಣದ ವಿಷಯದಲ್ಲಿ ಆತುರದ ನಿರ್ಧಾರ ಬೇಡ
ಈ ರಾಶಿಯವರಿಗಿಂದು ಹಣದ ವಿಷಯದಲ್ಲಿ ಆತುರದ ನಿರ್ಧಾರ ಬೇಡ