AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈ ರಾಶಿಯವರು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಾಧ್ಯತೆ ಇದೆ

ಶಾಲಿವಾಹನ ಶಕವರ್ಷ 1948ರ ಉತ್ತರಾಯಣ, ಗ್ರೀಷ್ಮ ಋತುವಿನ ಜ್ಯೇಷ್ಠ ಮಾಸ ಕೃಷ್ಣ ಪಕ್ಷದ ದ್ವಿತೀಯಾ ತಿಥಿ ಗುರುವಾರ ಪರರ ಶಂಕೆ ದೂರ, ನೋವಿನಿಂದ ಪಾಠ, ಕೋಪದ ಉಪಶಮನ, ಅದೃಷ್ಟದ ನಿರೀಕ್ಷೆ, ಸಾಹಸದಿಂದ ನೋವು ಇವೆಲ್ಲ ಈ ದಿನದ ವಿಶೇಷ. ಇಂದಿನ ದಿನ ಭವಿಷ್ಯದಲ್ಲಿ ಯಾವ ರಾಶಿಗೆ ಯಾವ ಫಲ ಎನ್ನುವುದನ್ನು ತಿಳಿದುಕೊಳ್ಳಿ.

ಈ ರಾಶಿಯವರು ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಾಧ್ಯತೆ ಇದೆ
ಜ್ಯೋತಿಷ್ಯ
ಲೋಹಿತ ಹೆಬ್ಬಾರ್​, ಇಡುವಾಣಿ
| Edited By: |

Updated on: Jun 12, 2025 | 1:54 AM

Share

ನಿತ್ಯ ಪಂಚಾಂಗ: ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ಉತ್ತರಾಯಣ, ಋತು: ಗ್ರೀಷ್ಮ, ಸೌರ ಮಾಸ: ವೃಷಭ, ಮಹಾನಕ್ಷತ್ರ: ಮೃಗಶಿರಾ, ಮಾಸ: ಜ್ಯೇಷ್ಠ, ಪಕ್ಷ: ಕೃಷ್ಣ, ವಾರ : ಗುರು, ತಿಥಿ: ದ್ವಿತೀಯಾ, ನಿತ್ಯನಕ್ಷತ್ರ: ಪೂರ್ವಾಷಾಢ, ಯೋಗ: ವರೀಯಾನ್, ಕರಣ: ಬಾಲವ ಸೂರ್ಯೋದಯ – 06 : 04 am, ಸೂರ್ಯಾಸ್ತ – 07 : 00 pm, ಇಂದಿನ ಶುಭಾಶುಭ ಕಾಲ: ರಾಹು ಕಾಲ 14:10 – 15:47, ಯಮಘಂಡ ಕಾಲ 06:05 – 07:42, ಗುಳಿಕ ಕಾಲ 09:19 – 10:56

ತುಲಾ ರಾಶಿ: ಶೈಕ್ಷಣಿಕ ವೆಚ್ಚವನ್ನು ಭರಿಸಲು ಕಷ್ಟವಾದೀತು. ಇಂದು ಬಹಳ ದಿನಗಳ ಅನಂತರ ಶತ್ರುವಿನ ಮುಖಾಮುಖಿಯಾಗಲಿದೆ. ನೀವು ಏನೂ ಗೊತ್ತಿಲ್ಲದವರಂತೆ ವರ್ತಿಸಿ, ಮುಂಬರುವ ಸಂಕಟದಿಂದ ಬಚಾವಾಗುವಿರಿ. ನಿರ್ಧಾರಗಳ ಮೇಲೆ ಸ್ಥಿರವಾಗಿರುವುದು ಯಶಸ್ಸು ತರುತ್ತದೆ. ಹಣಕಾಸಿನಲ್ಲಿ ಸುಧಾರಣೆಯಾಗುವ ಸಾಧ್ಯತೆ ಇದೆ. ಪರರ ಸಂಪತ್ತಿನ ಬಗ್ಗೆ ಆಸೆ ಬೇಡ. ಕುಟುಂಬದ ಸದಸ್ಯರೊಂದಿಗೆ ಆಸ್ತಿಯ ವಿಚಾರವಾಗಿ ಸುದೀರ್ಘ ಚರ್ಚೆ. ಕೊಡಬೇಕಾದುದನ್ನು ಪ್ರೀತಿಯಿಂದ ಕೊಡಿ. ಸೃಷ್ಟಿಯಲ್ಲಿ ಎಲ್ಲವೂ ಸಹಜವೇ ಎಂಬ ಸಂಗತಿಯನ್ನು ತಿಳಿಯಿರಿ. ವಾಹನವನ್ನು ಖರೀದಿಸಲಿದ್ದು ತಂದೆಯಿಂದ ಸಾಲವನ್ನು ಪಡೆಯುವಿರಿ. ಯಾರನ್ನಾದರೂ ಪ್ರೀತಿಸಬೇಕಿತ್ತು ಎಂಬ ಭಾವ ನಿಮಗೆ ಬರಲಿದೆ. ಯಾರಮೇಲಾದರೂ ಪ್ರೀತಿಯು ಉಂಟಾಗಬಹುದು. ಸುಮ್ಮನೇ ಕುಳಿತು ಸಮಯವನ್ನು ವ್ಯರ್ಥಮಾಡಬೇಡಿ. ಆರ್ಥಿಕ ವಿಚಾರಕ್ಕೆ ಯಾರಾದರೂ ಮಧ್ಯ ಪ್ರವೇಶಿಸುವುದರಿಂದ ಸಿಟ್ಟಾಗುವಿರಿ.

ವೃಶ್ಚಿಕ ರಾಶಿ: ಸಾಹಸಾದಿಗಳನ್ನು ಮಾಡುವಾಗ ಪ್ರಜ್ಞೆ ಇರಲಿ. ಇಂದು ಸಹನಯೇ ನಿಮ್ಮ ಎಲ್ಲ ಕಾರ್ಯಗಳನ್ನು ಸಕ್ಷಮವಾಗಿ ಕರೆದೊಯ್ಯುವುದು. ಸ್ನೇಹಿತರು ನಿಮಗೆ ಉತ್ತಮ ಕೆಲಸ ಹಾಗು ಸಂಬಳದ ಸ್ಥಳವನ್ನು ತಿಳಿಸಬಹುದು. ನಿರೀಕ್ಷೆ ಇಟ್ಟುಕೊಳ್ಳುವುದರಿಂದ ನಿರಾಶೆ. ನಿರ್ಧಾರಗಳನ್ನು ತಾಳ್ಮೆಯಿಂದ ತೆಗೆದುಕೊಳ್ಳಿ. ಯಾರದೋ ಸಂತೋಷಕ್ಕೆ ನೀವು ಬಲಿಯಾಗುವ ಸಂದರ್ಭ ಬರಬಹುದು. ಹಣಕಾಸಿನ ವಿಚಾರದಲ್ಲಿ ಉತ್ತಮ ಅವಕಾಶ ಸಿಗಬಹುದು. ಹಳೆಯ ವಿವಾದವೊಂದು ಬಗೆಹರಿಯುತ್ತದೆ. ಅದು ಸಂಬಂಧಗಳಲ್ಲಿ ಮಾಧುರ್ಯವನ್ನು ತರುತ್ತದೆ. ಹಣದ ವಿಷಯಗಳಲ್ಲಿ ಜಾಗರೂಕರಾಗಿರಬೇಕು. ಅವರೇ ನಿಮ್ಮನ್ನು ಸಮಾಧಾನ ಮಾಡಬೇಕಾದೀತು. ನಿಮ್ಮ ಮಾತನ್ನು ಎಲ್ಲರೂ ಕೇಳರು. ಕೇಳುವ ಹಾಗೆ ನಿಮ್ಮ ಮಾತಿರಲಿ. ಓಡಾಟ ಬೇಡವೆಂದು ಕುಳಿತ ನಿಮಗೆ ಅನಿವಾರ್ಯದ ಪ್ರಯಾಣವು ಬರಲಿದೆ. ಅಪರಿಚಿತರ ವ್ಯವಹಾರದಲ್ಲಿ ಎಷ್ಟೇ ಜಾಣ್ಮೆಯಿದ್ದರೂ ಸಾಲದು.‌ ಅದು ನಿಮ್ಮನ್ನು ಹೈರಾಣ ಮಾಡುವುದು.

ಧನು ರಾಶಿ: ನಿಮ್ಮ ಶಕ್ತಿ ಪ್ರದರ್ಶನದಿಂದ ನಿಮ್ಮ ಬಗ್ಗೆ ತಿಳಿವಳಿಕೆ ಬರುವುದು. ಇಂದು ನಿಮ್ಮ ಬಗ್ಗೆ ಸಕಾರಾತ್ಮವಾಗಿ ಹೇಳಿದರೂ ಯಾರೂ ನಂಬಲಾರರು. ಕುಟುಂಬದ ಕಾಳಜಿಯೇ ನಿಮ್ಮೆದುರು ಮತ್ತೆ ಮತ್ತೆ ಬರಬಹುದು. ಸಜ್ಜನರ ಸಹವಾಸ ಸಿಗಲಿದೆ. ಕುಟುಂಬದವರ ಜೊತೆ ಭಾವನಾತ್ಮಕ ಮಾತುಕತೆ ನಡೆಯಬಹುದು. ಯಾವುದೇ ಕಠಿಣ ಪರಿಸ್ಥಿತಿಯಲ್ಲಿ ಶಾಂತಿ ಮತ್ತು ತಾಳ್ಮೆಯನ್ನು ಕಾಪಾಡಿಕೊಳ್ಳಿ, ಹಣಕಾಸು ಸ್ಥಿತಿ ಸ್ಥಿರವಾಗಿರುತ್ತದೆ. ಸ್ನೇಹಿತರಿಂದ ಸಹಾಯ ನಿರೀಕ್ಷಿಸಬಹುದು. ಉದ್ವೇಗದ ಮಾತುಗಳು ನಿಮ್ಮ ಮಾನಸಿಕ ಸ್ಥಿತಿಯನ್ನು ತೋರಿಸುತ್ತದೆ. ಆರ್ಥಿಕವಾದ ದುರ್ಬಲತೆ ನಿಮ್ಮನ್ನು ಕಾಡಬಹುದು. ಗೊತ್ತಿಲ್ಲದ ವಿಚಾರವನ್ನು ತಿಳಿಯಲು ಪ್ರಯತ್ನಿಸಿ. ಪ್ರಪಂಚದ ಬೇರೆ ಬೇರೆ ಸ್ಥಳಗಳಿಗೆ ಹೋಗುವ ಆಸೆಯುಳ್ಳವರಾಗಿರುವಿರಿ. ಧಾರ್ಮಿಕ ಕಾರ್ಯಗಳನ್ನು ಮಾಡಲು ಒಲವು ಬರಲಿದೆ. ಕುಟುಂಬದವರು ನಿಮ್ಮನ್ನು ಬಹಳ ಪ್ರೀತಿಸುವರು. ಅವರಿಗೆ ಸ್ವಲ್ಪ ಸಮಯ ಕೊಡಿ. ಹಣವನ್ನು ಉಳಿಸಲು ಪ್ರಯತ್ನಶೀಲರಾಗುವಿರಿ.

ಮಕರ ರಾಶಿ: ರಾಜಕೀಯ ಕ್ಷೇತ್ರದಲ್ಲಿ ಸಾಧನೆ ಮಾಡುವ ಸಾಧ್ಯತೆ ಇದೆ. ಇಂದು ನಿಮ್ಮ ಹೂಡಿಕೆ ವಿಚಾರವನ್ನು ರಹಸ್ಯವಾಗಿ ಇಡುವಿರಿ. ಇದನ್ನು ಯಾರಿಗೂ ತಿಳಿಸಲು ಇಷ್ಟಪಡುವುದಿಲ್ಲ. ನಿಮ್ಮನ್ನು ಇಷ್ಟಪಟ್ಟವರಿಗೆ ಇಂದು ನಿಮ್ಮಿಂದ‌ ಅಸಮಾಧಾನವಾಗುವ ಸಾಧ್ಯತೆ ಇದೆ. ಬೇರೆ ಬೇರೆ ಕ್ಷೇತ್ರಗಳಲ್ಲಿ ಶೋಧನೆ ಮಾಡುವ ಸಂಭವ ಬರಲಿದೆ. ನಿಮ್ಮ ಮಾತುಗಳೇ ನಿಮ್ಮ ಶಕ್ತಿ ಸಾಮಾಜಿಕ ವಲಯದಲ್ಲಿ ಮೆರೆಯುವ ಅವಕಾಶ ಇದೆ. ಉದ್ಯೋಗದಲ್ಲಿ ಉನ್ನತಿ ಸೂಚನೆಗಳು ಸಿಗಬಹುದು. ಅತಿಯಾದ ಭಾವನೆಗಳಿಂದ ದೂರವಿರಿ. ಹಣದ ವಿಚಾರದಲ್ಲಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವುದು ಒಳಿತು. ಅನಾಯಸದಿಂದ ಬಂದ ಹಣವು ನಿಮಗೆ ದಕ್ಕದು. ಬೇಡದ ಕಾರ್ಯಕ್ಕೆ ವಿನಿಯೋಗವಾಗಲಿದೆ. ಮಾತನ್ನು ಯೋಗ್ಯವಾಗಿ, ಯೋಗ್ಯಸ್ಥಾನದಲ್ಲಿ ಆಡಿರಿ. ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಹೋರಾಡುವಿರಿ. ಯಾರನ್ನೂ ಒತ್ತಾಯಿಸದೇ ಕೆಲಸವನ್ನು ಮಾಡಿಸಿಕೊಳ್ಳಿ. ಕೃಷಿಯಲ್ಲಿ ಲಾಭ ಗಳಿಸಬೇಕೆಂದು ನಾನಾ ಪ್ರಯತ್ನವನ್ನು ಮಾಡುವಿರಿ. ಇಂದಿನ ಆದಾಯಕ್ಕೆ ತಕ್ಕಂತೆ ಖರ್ಚೂ ಇರಲಿದೆ. ವೃತ್ತಿಯ ಕುರಿತು ಯಾರಾದರೂ ಕೇಳಿಯಾರು.

ಕುಂಭ ರಾಶಿ: ಜೀವನ ಚಕ್ರವು ಯಾವುದಾದರೊಂದು ರೀತಿಯಲ್ಲಿ ಬದಲಾಗುವ ಆಶಯದಲ್ಲಿ ಇರುವಿರಿ. ಇಂದು ನಿಮ್ಮನ್ನು ನಂಬಿದವರಿಗೆ ದ್ರೋಹವಾಗದಂತೆ ಕೆಲಸವನ್ನು ಮಾಡಿ. ಹಣದ ತೊಂದರೆ ಎದ್ದು ಕಾಣಿಸುತ್ತದೆ. ಇದರಿಂದ ಚಿಂತೆಯೂ ಆಗಬಹುದು. ಮನೆಯವರ ಸಹಾಯವು ಅನಿವಾರ್ಯವಾದರೆ ಸಿಗಲಿದೆ. ಅನಿರೀಕ್ಷಿತ ಲಾಭದಿಂದ ದಾರಿ ತಪ್ಪಬಹುದು. ಮನೆಯವರ ಜೊತೆ ಹೆಚ್ಚು ಸಮಯವನ್ನು ಕಳೆಯಲು ಇಚ್ಛಿಸುವಿರಿ. ಆತ್ಮೀಯರ ಸಹಾಯದಿಂದ ಸಮಸ್ಯೆಗಳ ಪರಿಹಾರ ಸಿಗುತ್ತದೆ. ಹಣದ ವ್ಯವಹಾರಗಳಲ್ಲಿ ಎಚ್ಚರಿಕೆ ಅಗತ್ಯ. ವಿದೇಶದಿಂದ ಉದ್ಯೋಗಕ್ಕೆ ಕರೆ ಬರಲಿದೆ. ಜೀವನ ಸಂಗಾತಿಯೊಂದಿಗೆ ಸಣ್ಣ ಮನಸ್ತಾಪ ಸಂಭವಿಸಬಹುದು. ಹಳೆಯ ಸ್ನೇಹಿತನು ಭೇಟಿಯಾಗಬಹುದು. ವಸ್ತುಗಳ ಖರೀದಿಯಿಂದ ಉಂಟಾದ ಧನದ ವ್ಯಯವು ನಿಮ್ಮಲ್ಲಿ ಆತಂಕವನ್ನು ಉಂಟುಮಾಡಲಿದೆ. ಕಥೆಯನ್ನು ಹೇಳವ ಆಸಕ್ತಿ ಹೆಚ್ಚಾಗಬಹುದು. ಬರವಣಿಗೆಯ ವಿಚಾರದಲ್ಲಿ ಹೆಚ್ಚು ಮನಸ್ಸನ್ನು ಕೊಡಿ. ಬೇಸರಿಸದೇ ಬಂದುದನ್ನು ಬಂದಂತೆ ಎದುರಿಸವುದು ನಿಮಗೆ ಸ್ವಭಾವಸಿದ್ಧ. ನೀವು ಬಯಸಿದ ಕೆಲಸವನ್ನು ಮಾಡುವಿರಿ. ನೀವು ಶುಭ ಕಾರ್ಯಗಳಿಗೆ ಹಣವನ್ನು ಖರ್ಚು ಮಾಡುತ್ತೀರಿ.

ಮೀನ ರಾಶಿ: ವೃತ್ತಿಯಲ್ಲಿ ಅಸ್ಥಿರತೆ ಕಾಡುವುದು. ಇಂದು ನಿಮ್ಮ ನಿರೀಕ್ಷಿತ ಸುದ್ದಿಯಿಂದ ಸಂತೋಷವಗಲಿದೆ. ಮನಸ್ಸು ಮತ್ತು ದೇಹಕ್ಕೂ ಶ್ರಮವಾಗಬಹುದು. ಯೋಗ ಹಾಗೂ ಧ್ಯಾನದಿಂದ ಶ್ರಮದ ಪರಿಹಾರವಾಗಲಿದೆ. ಆರ್ಥಿಕವಾಗಿ ನಷ್ಟ ಎದುರಾಗುವುದು. ಇಂದಿನ ನಿಮ್ಮ ಕರ್ಮಕ್ಕೆ ಅನ್ಯರ ಸಹಕಾರ ಇರದು. ಕುಟುಂಬದೊಂದಿಗೆ ಸಮಯ ಕಳೆಯುವುದರಿಂದ ಮನಸ್ಸಿಗೆ ಶಾಂತಿ ಸಿಗಬಹುದು. ದೂರದ ಗೆಳೆಯರಿಂದ ಶುಭ ಸುದ್ದಿ ಬರುತ್ತದೆ. ಧಾರ್ಮಿಕ ಕ್ಷೇತ್ರದವರಿಗೆ ಹೊಸ ಅವಕಾಶ. ಅವುಗಳ ಕುರಿತು ಅತಿಯಾಗಿ ಆಲೋಚಿಸಿದಷ್ಟೂ ಸಮಸ್ಯೆಗಳು ಹಾಗೇ ಇರುತ್ತವೆ. ಹೊಸ ಉದ್ಯೋಗದ ಸೃಷ್ಟಿಗೆ ಹೆಚ್ಚು ಮನಸ್ಸು ಮಾಡುವಿರಿ. ವಾಹನದಿಂದ ಅಪಘಾತವಾಗುವ ಸಾಧ್ಯತೆ. ವೃತ್ತಿಯ ಸ್ಥಳದಲ್ಲಿ ನೀವು ಸಂತೋಷವಾಗಿ ಕೆಲಸಮಾಡುವಿರಿ. ಸ್ನೇಹಿತರ ಮಾತಿನಿಂದ ವಿದೇಶಕ್ಕೆ ಹೋಗುವ ಆಸೆ ಅತಿಯಾಗುವುದು. ನ್ಯಾಯಾಲಯಕ್ಕೆ ಸಂಬಂಧಿಸಿದಂತೆ ಸಕಾರಾತ್ಮಕ ನಿಲುವು ಇರಲಿ. ಮಕ್ಕಳು ನಿಮ್ಮ ಜೊತೆ ವಾಗ್ವಾದ ಬರಬಹುದು.

‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
‘45’ ಸಿನಿಮಾ ಬಿಡುಗಡೆ ಇಷ್ಟು ತಡವಾಗಿದ್ದೇಕೆ? ವಿವರಿಸಿದ ಅರ್ಜುನ್ ಜನ್ಯ
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ವಿಶೇಷಚೇತನ ಮಕ್ಕಳ ಮೇಲೆ ಶಿಕ್ಷಕ ದಂಪತಿ ರಾಕ್ಷಸಿ ಕೃತ್ಯ: SP ಹೇಳಿದ್ದಿಷ್ಟು
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಗುವಾಹಟಿಯಲ್ಲಿ ಭಾರತದ ಮೊದಲ ಪ್ರಕೃತಿ ಥೀಮ್​ನ ಟರ್ಮಿನಲ್ ಉದ್ಘಾಟನೆ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ಅನಧಿಕೃತ‌ ಮನೆಗಳ ಮೇಲೆ ಜೆಸಿಬಿ ಘರ್ಜನೆ: 190ಕ್ಕೂ ಹೆಚ್ಚು ಮನೆಗಳು ನೆಲಸಮ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ನೀವೆಲ್ಲ ಏನು ಮಕ್ಕಳೆ? ಸ್ಪರ್ಧಿಗಳಿಗೆ ಕ್ಲಾಸ್ ತೆಗೆದುಕೊಂಡ ಕಿಚ್ಚ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ರೈಲ್ವೆ ಸೇತುವೆಯಲ್ಲಿ ಯುವಕನಿಂದ ಅಪಾಯಕಾರಿ ಸಾಹಸ
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಚಿತ್ರಕ್ಕೆ ನಾನು ಡೈರೆಕ್ಟರ್, ನೀವಲ್ಲ ಎಂದಿದ್ದ ಉಪ್ಪಿ; ಶಿವಣ್ಣನ ಏನಂದ್ರು?
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಹೈಕಮಾಂಡ್ ನಮಗಿಬ್ರಿಗೂ ಏನೋ ಹೇಳಿದೆ: ಡಿಕೆಶಿ ಅಚ್ಚರಿಯ ಹೇಳಿಕೆ
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
ಪಾವಗಡ ಕಡಮಲಕುಂಟೆ ಬಳಿ ಭೀಕರ ಅಪಘಾತ: ಕಾರು ಚಾಲಕ ಸಾವು
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್
‘45’ ಶೂಟ್​​ನಲ್ಲಿ ಸಾವಿನ ಬಗ್ಗೆ ಮಾತನಾಡಿದ್ದ ಶಿವಣ್ಣ; ಜನ್ಯ, ರಾಜ್