AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Horoscope ದಿನ ಭವಿಷ್ಯ ಈ ರಾಶಿಯವರಿಗೆ ಭಾಗ್ಯವೃದ್ಧಿಯಾಗುವ ಯೋಗವಿದೆ

Today Horoscope ಏಪ್ರಿಲ್ 16, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope ದಿನ ಭವಿಷ್ಯ ಈ ರಾಶಿಯವರಿಗೆ ಭಾಗ್ಯವೃದ್ಧಿಯಾಗುವ ಯೋಗವಿದೆ
ದಿನ ಭವಿಷ್ಯ
ಆಯೇಷಾ ಬಾನು
|

Updated on: Apr 16, 2021 | 6:14 AM

Share

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ಚೈತ್ರ ಮಾಸ, ವಸಂತ ಋತು, ಶುಕ್ಲಪಕ್ಷ, ಚೌತಿ ತಿಥಿ, ಶುಕ್ರವಾರ, ಏಪ್ರಿಲ್ 16, 2021. ರೋಹಿಣಿ ನಕ್ಷತ್ರ, ರಾಹುಕಾಲ :ಇಂದು ಬೆಳಿಗ್ಗೆ 10.41 ರಿಂದ ಇಂದು ಬೆಳಿಗ್ಗೆ 12.15ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 5.59. ಸೂರ್ಯಾಸ್ತ: ಸಂಜೆ 6.32.

ತಾ.16-04-2021 ರ ಶುಕ್ರವಾರದ ರಾಶಿಭವಿಷ್ಯ

ಮೇಷ: ಆರೋಗ್ಯಕ್ಕೆ ಸಂಬಂಧಿಸಿದ ವಿಪತ್ತಿನಿಂದ ಪಾರಾಗುವಿರಿ. ಕಷ್ಟದ ಸಮಯದಲ್ಲಿಯೂ ಸಂಯಮ ಕಳೆದುಕೊಳ್ಳದೇ ಮುಂದುವರೆಯುವಿರಿ. ಉದ್ಯೋಗದಲ್ಲಿ ವರ್ಗಾವಣೆಯ ಯೋಗವಿದೆ. ಆರ್ಥಿಕಬಲ ಕುಗ್ಗುವ ಸಂಭವವಿದೆ. ಶುಭ ಸಂಖ್ಯೆ: 5

ವೃಷಭ: ಮದುವೆಯ ಮಾತುಕತೆಗಳಲ್ಲಿ ಸಫಲತೆ ಇದೆ. ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ಉದ್ಯೋಗದ ಸ್ಥಾನ ಬದಲಾವಣೆಯ ವಿಚಾರವಾಗಿ ಚಿಂತೆ ಇರುವುದು. ಶುಭ ಸಂಖ್ಯೆ: 9

ಮಿಥುನ: ಅನಿಸಿಕೆಗಿಂತ ವಾಸ್ತವ ಬೇರೆ ಇರುವುದರಿಂದ ತಕ್ಕ ಬದಲಾವಣೆ ಮಾಡಿಕೊಳ್ಳುವಿರಿ. ನಡತೆಯಲ್ಲಿ ಸೂಕ್ಷ್ಮತೆ ಇರಲಿ. ವ್ಯವಹಾರವನ್ನು ಪೂರ್ಣವಾಗಿ ಆಲೋಚಿಸಿ ಮಾಡುವುದು ಒಳ್ಳೆಯದು. ಧನಹಾನಿಯ ಸಂಭವವಿದೆ. ಶುಭ ಸಂಖ್ಯೆ: 1

ಕಟಕ: ಹಿರಿಯರಿಗೆ ಅನಾರೋಗ್ಯ ಸಂಭವ. ಉದ್ಯೋಗ ಸಂಬಂಧಿತ ಸಮಸ್ಯೆಗಳು ಎದುರಾಗುವವು. ಉದ್ಯೋಗ ಬದಲಿ ಮಾಡುವುದು ಸದ್ಯಕ್ಕೆ ಬೇಡ. ಹಣಕಾಸಿನ ವಿಷಯದಲ್ಲಿ ಬಂಧುಗಳು ಸಹಕಾರ ತೋರುವರು. ಶುಭ ಸಂಖ್ಯೆ: 7

ಸಿಂಹ: ಕೆಲಸದಲ್ಲಿ ಅಭಿವೃದ್ಧಿ ಇದೆ. ಹಣಕಾಸಿನ ವ್ಯವಹಾರವನ್ನು ತಾಳ್ಮೆಯಿಂದ ನಿಭಾಯಿಸಿ. ಮನೆಯಲ್ಲಿ ಸಂಭ್ರಮದ ವಾತಾವರಣ ಇರುವುದು. ಮಂಗಳ ಕಾರ್ಯ ಜರುಗುವುದು. ಶುಭ ಸಂಖ್ಯೆ: 4

ಕನ್ಯಾ: ಭಾಗ್ಯವೃದ್ಧಿಯಾಗುವ ಯೋಗವಿದೆ. ವ್ಯವಹಾರದಲ್ಲಿಯ ಅಡಚಣೆಗಳು ದೂರಾಗುವವು. ಮನೆಯ ಜವಾಬ್ದಾರಿಗಳು ಹೆಚ್ಚುವ ಸಂಭವವಿದೆ. ಬರುವ ಸಂಕಷ್ಟಗಳನ್ನು ಎದುರಿಸಿ ಕಾರ್ಯ ಸಾಧಿಸುವಿರಿ. ಶುಭ ಸಂಖ್ಯೆ: 6

ತುಲಾ: ಸಾಮಾಜಿಕ ಕ್ಷೇತ್ರದಲ್ಲಿ ಮಾನ ಸಮ್ಮಾನಗಳು ದೊರೆಯುವವು. ನೌಕರರ ತೊಂದರೆಗಳು ನಿವಾರಣೆಯಾಗುವವು. ಔದ್ಯೋಗಿಕ ಪ್ರವಾಸಯೋಗವಿದೆ. ಕೊಟ್ಟಸಾಲ ಮರುಪಾವತಿಯಾಗುವುದು. ಶುಭ ಸಂಖ್ಯೆ: 8

ವೃಶ್ಚಿಕ: ಆರ್ಥಿಕ ಸ್ಥಿತಿ ಸುಧಾರಿಸುವುದು. ಮಕ್ಕಳ ಉದ್ಯೋಗದ ಸಮಸ್ಯೆಗೆ ಪರಿಹಾರ ದೊರೆಯುವುದು. ಜೀವನದ ಹೊಸ ಆಯಾಮದೆಡೆಗೆ ಸಾಗುವ ಸೂಚನೆ ಇದೆ. ಶುಭ ಸಂಖ್ಯೆ: 3

ಧನು: ಅನಾವಶ್ಯಕ ತಿರುಗಾಟ, ನೌಕರಿಯಲ್ಲಿ ಕಿರಿಕಿರಿ, ಸ್ಥಾನಪಲ್ಲಟ ಸಾಧ್ಯತೆ, ಬಡ್ತಿಯೋಗ, ವ್ಯಾಪಾರಿಗಳಿಗೆ ಸ್ಥಳದ ವಿಚಾರವಾಗಿ ಚಿಂತೆ ಇರುವುದು. ಮಹಿಳೆಯರು, ವಿದ್ಯಾರ್ಥಿಗಳಿಗೆ ಸಂತೋಷ ಇರುವುದು. ತರಕಾರಿ ದಾನ ಮಾಡಿರಿ. ಶುಭ ಸಂಖ್ಯೆ: 7

ಮಕರ: ಕೆಲಸ ಹೆಚ್ಚಿನ ಬದ್ಧತೆ ತೋರಿಸುವ ಅವಶ್ಯಕತೆ ಕಂಡುಬರುವುದು. ಕಾಯಕದಲ್ಲಿ ಯಶಸ್ಸು, ಕೀರ್ತಿ, ಧನಲಾಭ, ಉದ್ಯೋಗ ಪ್ರಾಪ್ತಿಯ ಯೋಗವಿದೆ. ವೈವಾಹಿಕ ಮಾತುಕತೆಗೆ ಕಾಲಕೂಡಿ ಬರುವುದು. ವಾದ-ವಿವಾದ, ಹಠಸಾಧನೆ ಬೇಡ. ಶುಭ ಸಂಖ್ಯೆ: 1

ಕುಂಭ: ವಾಸಸ್ಥಾನ, ಉದ್ಯೋಗಸ್ಥಾನ ಬದಲಾವಣೆಯ ಯೋಗವಿದೆ. ಕೌಟುಂಬಿಕ ಸಮಸ್ಯೆಗಳು ದೂರಾಗುವವು. ವ್ಯವಹಾರಿಕ ಸೂಕ್ಷ್ಮತೆಯಿಂದ ಹಾನಿ ತಪ್ಪಿಸಿರಿ. ವೃಥಾಚಿಂತೆ ಇರುವುದು. ಹೊಸ ವ್ಯವಹಾರಗಳು ಬೇಡ. ಶುಭ ಸಂಖ್ಯೆ: 5

ಮೀನ: ಏಕಾಂಗಿತನದ ಬೇಸರ ಪರಿಸರದಿಂದ ಹೊರಬಂದು ಹೊಸಬರೊಂದಿಗೆ ಬಾಳುವ ಸಂಕಲ್ಪ. ನಿರಾಕರಿಸಿದ್ದ ಜವಾಬ್ದಾರಿ ಪುನ: ಸುಪರ್ದಿಗೆ ಬಂದು ಮೆಚ್ಚುಗೆಯಾಗಿ ನಿಭಾವಣೆ. ಬಾಳ ಸಂಗಾತಿ ಜತೆಗಿನ ಚಿಕ್ಕ ಪುಟ್ಟ ಚರ್ಚೆಗಳೇ ಮುಂದೆ ವಿರಸಕ್ಕೆ ದಾರಿಯಾದೀತು. ಶುಭ ಸಂಖ್ಯೆ: 3

Dina Bhavishya

ದಿನ ಭವಿಷ್ಯ

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ. ಸಂಪರ್ಕ ಸಂಖ್ಯೆ: 9972848937

ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಗೋಪಾಲ್‌ಗಂಜ್‌ನ ದೇವಸ್ಥಾನದಿಂದ 50 ಲಕ್ಷ ಮೌಲ್ಯದ ಚಿನ್ನದ ಕಿರೀಟ, ಆಭರಣ ಕಳವು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಕಾಳಹಸ್ತಿ ದೇವಸ್ಥಾನದಲ್ಲಿ ನೆಲದ ಮೇಲೆ ಕುಳಿತು ಪ್ರಸಾದ ಸೇವಿಸಿದ ರಷ್ಯನ್ನರು
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಗಂಡನ ಬಗ್ಗೆ ಬಿಗ್ ಬಾಸ್​ನಲ್ಲಿ ಚೈತ್ರಾ ಕುಂದಾಪುರ ಹೇಳಿದ್ದು ಸುಳ್ಳು: ತಂದೆ
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಪ್ರೇಮ್ ಕಹಾನಿ: 19 ವರ್ಷದ ಯುವತಿ ಹಿಂದೆ ಬಿದ್ದು ದುರಂತ ಅಂತ್ಯಕಂಡ 40 ಅಂಕಲ್
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಬೇರೆ ಮಹಿಳೆ ಜತೆ ಲವ್ವಿಡವ್ವಿ: ಹೆಂಡ್ತಿ ಹತ್ಯೆಗೆ ಸುಪಾರಿ ಕೊಟ್ಟ ಪತಿ
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಡಿಕೆಶಿ ಪ್ರಾರ್ಥನೆಗೆ ಅಸ್ತು ಎಂದಳಾ ಶಕ್ತಿದೇವಿ? ಅರ್ಚಕರು ಹೇಳಿದ್ದಿಷ್ಟು
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಚೈತ್ರಾ ಕುಂದಾಪುರ ಡಿಬಾರ್ ಆಗಿದ್ದಳು: ಎಲ್ಲ ವಿಷಯ ಹೇಳಿದ ತಂದೆ ಬಾಲಕೃಷ್ಣ
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ಸಂಜು ಹೊಡೆತಕ್ಕೆ ಸಿಲುಕಿ ನೋವಿನಿಂದ ನರಳಾಡಿದ ಅಂಪೈರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ರೈಲಿನಿಂದ ಬೀಳುತ್ತಿದ್ದ ಪ್ರಯಾಣಿಕನನ್ನು ಕಾಪಾಡಿದ ಸ್ಟೇಷನ್ ಮಾಸ್ಟರ್
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ
ಗೃಹಲಕ್ಷ್ಮೀ ಹಣದ ಬಗ್ಗೆ ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಿಎಂ ಆರ್ಥಿಕ ಸಲಹೆಗಾರ