Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಕೆಲಸ ಕಾರ್ಯಗಳು ಸುಲಭವಾಗಿ ನಿಮ್ಮಿಚ್ಛೆಯಂತೆ ಕೈಗೂಡುವವು

TV9 Digital Desk

| Edited By: Vinay Bhat

Updated on: Dec 04, 2021 | 6:35 AM

Horoscope ಡಿಸೆಂಬರ್ 04, 2021ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ.

Horoscope Today- ದಿನ ಭವಿಷ್ಯ; ಈ ರಾಶಿಯವರಿಗೆ ಕೆಲಸ ಕಾರ್ಯಗಳು ಸುಲಭವಾಗಿ ನಿಮ್ಮಿಚ್ಛೆಯಂತೆ ಕೈಗೂಡುವವು
ದಿನ ಭವಿಷ್ಯ

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ದಕ್ಷಿಣಾಯನ, ಕಾರ್ತಿಕ ಮಾಸ, ಶರದೃತು, ಕೃಷ್ಣಪಕ್ಷ, ಅಮಾವಾಸ್ಯೆ ತಿಥಿ, ಶನಿವಾರ, ಡಿಸೆಂಬರ್ 04, 2021. ಅನೂರಾಧ ನಕ್ಷತ್ರ, ರಾಹುಕಾಲ: ಇಂದು ಬೆಳಿಗ್ಗೆ 09.18 ರಿಂದ ಇಂದು ಬೆಳಿಗ್ಗೆ 10.41 ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.31. ಸೂರ್ಯಾಸ್ತ: ಸಂಜೆ 5.40

ತಾ.04-12-2021 ರ ಶನಿವಾರದ ರಾಶಿಭವಿಷ್ಯ. ಮೇಷ: ಆಕಸ್ಮಿಕ ಧನಲಾಭವಾಗಲಿದೆ. ಕೆಲಸ ಕಾರ್ಯಗಳು ಸುಲಭವಾಗಿ ನಿಮ್ಮಿಚ್ಛೆಯಂತೆ ಕೈಗೂಡುವವು. ಆತ್ಮೀಯರ ಭೇಟಿ ಮತ್ತು ಸಂತೋಷದ ಸುದ್ದಿ ಕೇಳುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಆಟಪಾಠಗಳಲ್ಲಿ ಹಿನ್ನಡೆ. ವ್ಯಾಪಾರದಲ್ಲಿ ಸ್ವಲ್ಪಮಟ್ಟಿನ ನಷ್ಟ. ಶುಭ ಸಂಖ್ಯೆ: 6

ವೃಷಭ: ಊಹಾಪೋಹಗಳು ಬೇಡ. ಕೌಟುಂಬಿಕ ಸುಖ, ಶಾಂತಿಗಳು ನೆಲೆಸಿ ಮಾನಸಿಕ ನೆಮ್ಮದಿ. ಕಾರ್ಯ–ಕಲಾಪಗಳಲ್ಲಿ ಪ್ರಗತಿ. ಕೊಡುಕೊಳ್ಳುವ ವ್ಯವಹಾರಗಳಲ್ಲಿ ಲಾಭ ನಿರೀಕ್ಷಿಸಬಹುದು. ದೂರ ಪ್ರಯಾಣದ ಯೋಜನೆ ರೂಪುಗೊಳ್ಳುವ ಸಾಧ್ಯತೆ. ಶುಭ ಸಂಖ್ಯೆ: 9

ಮಿಥುನ: ಮಾನಸಿಕ ಚಂಚಲದಿಂದ ಭಯದ ವಾತಾವರಣ. ವ್ಯಾಪಾರ ವ್ಯವಹಾರಗಳಲ್ಲಿ ಲಾಭದ ಇಳಿಮುಖ. ಉದ್ಯೋಗಸ್ಥರಿಗೆ ವಿಶ್ವಾಸದ ನಿರ್ಧಾರಗಳಿಂದಾಗಿ ಮುನ್ನಡೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಪ್ರಗತಿ. ಶುಭ ಸಂಖ್ಯೆ: 2

ಕಟಕ: ಕಾರ್ಯಬಾಹುಳ್ಯದಿಂದಾಗಿ ಒತ್ತಡ ಹೆಚ್ಚಾಗಿ ಕೆಲಸ ಕಾರ್ಯಗಳಲ್ಲಿ ಮಂದಗತಿ. ದಾಯಾದಿ ಕಲಹ ಸಂಭವ. ವಾಹನ ಪ್ರಯಾಣದ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ. ಗುರು ಹಿರಿಯರೊಡನೆ ಸಮಾಲೋಚನೆ ಸಾಧ್ಯತೆ. ಶುಭ ಸಂಖ್ಯೆ: 6

ಸಿಂಹ: ಪ್ರೀತಿ ಪಾತ್ರರೊಂದಿಗೆ ಚರ್ಚೆ. ಆರೋಗ್ಯದಲ್ಲಿ ಸುಧಾರಣೆ.y ಉದ್ಯೋಗದಲ್ಲಿ ಪ್ರಗತಿ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಕುಟುಂಬ ಸದಸ್ಯರೊಂದಿಗೆ ದೇವತಾ ದರ್ಶನ. ಶುಭ ಸಂಖ್ಯೆ: 4

ಕನ್ಯಾ: ಕೆಲಸ ಕಾರ್ಯಗಳು ಸುಲಭವಾಗಿ ನೆರವೇರಿ ಸಂತಸ. ಲೇವಾದೇವಿ ಹಣಕಾಸು ವ್ಯವಹಾರಸ್ಥರಿಗೆ ಅಧಿಕ ಲಾಭ. ಉದ್ಯೋಗ ನಿಮಿತ್ತ ವಿದೇಶ ಯಾನದ ಸಾಧ್ಯತೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ಅಗತ್ಯ. ಶುಭ ಸಂಖ್ಯೆ: 1

ತುಲಾ: ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು. ಸಕಾಲದಲ್ಲಿ ಕೆಲಸ ಕಾರ್ಯಗಳು ಪೂರೈಸಿದ ಸಂತಸ. ಸಂಘ ಸಂಸ್ಥೆಗಳಿಂದ ಸಹಾಯ ಸಹಕಾರ ದೊರಕಲಿದೆ. ಹೊಸ ಹೊಸ ವ್ಯವಹಾರಗಳ ಬಗ್ಗೆ ಚಿಂತನೆ. ಶುಭ ಸಂಖ್ಯೆ: 7

ವೃಶ್ಚಿಕ: ನಿರೀಕ್ಷಿತ ಕೆಲಸ ಕಾರ್ಯಗಳು ನಡೆಯದೇ ವ್ಯತಿರಿಕ್ತ ಪರಿಣಾಮಗಳುಂಟಾಗಬಹುದು. ಅಹಿತಕರ ಘಟನೆಗಳಿಂದಾಗಿ ವೃಥಾ ದಂಡ ತೆರಬೇಕಾದೀತು. ಲೇವಾದೇವಿ ವ್ಯವಹಾರವನ್ನು ದಿನದ ಮಟ್ಟಿಗೆ ಮುಂದೂಡಿ. ಶುಭ ಸಂಖ್ಯೆ: 8

ಧನು: ನಿರೀಕ್ಷಿತ ಕೆಲಸ ಕಾರ್ಯಗಳು ಫಲ ನೀಡಿ ಸಂತಸ. ವ್ಯಾಪಾರದಲ್ಲಿ ಲಾಭ. ಆತ್ಮೀಯ ವ್ಯಕ್ತಿಗಳ ಸಂದರ್ಶನ ಸಾಧ್ಯತೆ. ದೂರದಲ್ಲಿರುವ ಮಕ್ಕಳಿಂದ ಸಹಾಯ ಹರಿದು ಬರುವ ಸಾಧ್ಯತೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಶುಭ ಸಂಖ್ಯೆ: 6

ಮಕರ: ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆ ಮೀರಿದ ಲಾಭ. ಆಪ್ತೇಷ್ಟರ ಆಗಮನ ಸಾಧ್ಯತೆ. ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಸಮಾಚಾರ ಕೇಳಿ ದುಗುಡ ನಿವಾರಣೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ. ಶುಭ ಸಂಖ್ಯೆ: 3

ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನ. ಕುಟುಂಬದಲ್ಲಿ ಶಾಂತ ವಾತಾವರಣ. ವಿದ್ಯಾರ್ಥಿಗಳಿಗೆ ಆಟ–ಪಾಠಗಳಲ್ಲಿ ಹೆಚ್ಚಿನ ಪ್ರಗತಿ. ಉದ್ಯೋಗಸ್ಥರಿಗೆ ಕಚೇರಿ ಲೆಕ್ಕಪತ್ರಗಳಲ್ಲಿನ ತೊಡಕುಗಳು ನಿವಾರಣೆಯಾಗಿ ನಿರಾಳತೆ. ಶುಭ ಸಂಖ್ಯೆ: 5

ಮೀನ: ಅನಿರೀಕ್ಷಿತ ಪ್ರಯಾಣ ಸಂಭವಿಸಿ ವೃಥಾ ಖರ್ಚಿಗೆ ನಾಂದಿಯಾಗುವ ಸಾಧ್ಯತೆ. ಆತ್ಮೀಯರ ಆರೋಗ್ಯದಲ್ಲಿ ವ್ಯತ್ಯಯ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಹಿರಿಯರ ಮಾತುಗಳನ್ನು ಕಡೆಗಣಿಸದಿರಿ. ಹಿತಶತ್ರುಗಳ ಭಯ. ಶುಭ ಸಂಖ್ಯೆ: 8

Dina Bhavishya

ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada