Horoscope Today- ದಿನ ಭವಿಷ್ಯ; ಈ ರಾಶಿಯ ಲೇವಾದೇವಿ ಹಣಕಾಸು ವ್ಯವಹಾರಸ್ಥರಿಗೆ ಅಧಿಕ ಲಾಭ

Horoscope ಮಾರ್ಚ್ 04, 2022ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹುಕಾಲ: ಬೆಳಿಗ್ಗೆ 10.58ರಿಂದ ಇಂದು ಬೆಳಿಗ್ಗೆ 12.26ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.32. ಸೂರ್ಯಾಸ್ತ: ಸಂಜೆ 6.23

Horoscope Today- ದಿನ ಭವಿಷ್ಯ; ಈ ರಾಶಿಯ ಲೇವಾದೇವಿ ಹಣಕಾಸು ವ್ಯವಹಾರಸ್ಥರಿಗೆ ಅಧಿಕ ಲಾಭ
ದಿನ ಭವಿಷ್ಯ
Follow us
TV9 Web
| Updated By: ಆಯೇಷಾ ಬಾನು

Updated on: Mar 04, 2022 | 6:00 AM

ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ, ಬಿದಿಗೆ ತಿಥಿ, ಶುಕ್ರವಾರ, ಮಾರ್ಚ್ 04, 2022. ಉತ್ತರಾಭಾದ್ರೆ ನಕ್ಷತ್ರ, ರಾಹುಕಾಲ: ಬೆಳಿಗ್ಗೆ 10.58ರಿಂದ ಇಂದು ಬೆಳಿಗ್ಗೆ 12.26ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.32. ಸೂರ್ಯಾಸ್ತ: ಸಂಜೆ 6.23

ತಾ.04-03-2022 ರ ಶುಕ್ರವಾರದ ರಾಶಿಭವಿಷ್ಯ.

  1.  ಮೇಷ: ಆಕಸ್ಮಿಕ ಧನಲಾಭವಾಗಲಿದೆ. ಕೆಲಸ ಕಾರ್ಯಗಳು ಸುಲಭವಾಗಿ ನಿಮ್ಮಿಚ್ಛೆಯಂತೆ ಕೈಗೂಡುವವು. ಆತ್ಮೀಯರ ಭೇಟಿ ಮತ್ತು ಸಂತೋಷದ ಸುದ್ದಿ ಕೇಳುವ ಸಾಧ್ಯತೆ. ವಿದ್ಯಾರ್ಥಿಗಳಿಗೆ ಆಟಪಾಠಗಳಲ್ಲಿ ಹಿನ್ನಡೆ. ವ್ಯಾಪಾರದಲ್ಲಿ ಸ್ವಲ್ಪಮಟ್ಟಿನ ನಷ್ಟ. ಶುಭ ಸಂಖ್ಯೆ: 6
  2. ವೃಷಭ: ಊಹಾಪೋಹಗಳು ಬೇಡ ಕೌಟುಂಬಿಕ ಸುಖ, ಶಾಂತಿಗಳು ನೆಲೆಸಿ ಮಾನಸಿಕ ನೆಮ್ಮದಿ. ಕಾರ್ಯ–ಕಲಾಪಗಳಲ್ಲಿ ಪ್ರಗತಿ. ಕೊಡುಕೊಳ್ಳುವ ವ್ಯವಹಾರಗಳಲ್ಲಿ ಲಾಭ ನಿರೀಕ್ಷಿಸಬಹುದು. ದೂರ ಪ್ರಯಾಣದ ಯೋಜನೆ ರೂಪುಗೊಳ್ಳುವ ಸಾಧ್ಯತೆ. ಶುಭ ಸಂಖ್ಯೆ: 9
  3. ಮಿಥುನ: ಮಾನಸಿಕ ಚಂಚಲದಿಂದ ಭಯದ ವಾತಾವರಣ. ವ್ಯಾಪಾರ ವ್ಯವಹಾರಗಳಲ್ಲಿ ಲಾಭದ ಇಳಿಮುಖ. ಉದ್ಯೋಗಸ್ಥರಿಗೆ ವಿಶ್ವಾಸದ ನಿರ್ಧಾರಗಳಿಂದಾಗಿ ಮುನ್ನಡೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಪ್ರಗತಿ. ಶುಭ ಸಂಖ್ಯೆ: 2
  4. ಕಟಕ: ಕಾರ್ಯಬಾಹುಳ್ಯದಿಂದಾಗಿ ಒತ್ತಡ ಹೆಚ್ಚಾಗಿ ಕೆಲಸ–ಕಾರ್ಯಗಳಲ್ಲಿ ಮಂದಗತಿ. ದಾಯಾದಿ ಕಲಹ ಸಂಭವ. ವಾಹನ ಪ್ರಯಾಣದ ಬಗ್ಗೆ ಎಚ್ಚರಿಕೆ ವಹಿಸುವುದು ಸೂಕ್ತ. ಗುರು ಹಿರಿಯರೊಡನೆ ಸಮಾಲೋಚನೆ ಸಾಧ್ಯತೆ. ಶುಭ ಸಂಖ್ಯೆ: 6
  5. ಸಿಂಹ: ಪ್ರೀತಿ ಪಾತ್ರರೊಂದಿಗೆ ಚರ್ಚೆ. ಆರೋಗ್ಯದಲ್ಲಿ ಸುಧಾರಣೆ.y ಉದ್ಯೋಗದಲ್ಲಿ ಪ್ರಗತಿ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಭಾಗವಹಿಸುವ ಸಾಧ್ಯತೆ. ಕುಟುಂಬ ಸದಸ್ಯರೊಂದಿಗೆ ದೇವತಾ ದರ್ಶನ. ಶುಭ ಸಂಖ್ಯೆ: 4
  6. ಕನ್ಯಾ: ಕೆಲಸ ಕಾರ್ಯಗಳು ಸುಲಭವಾಗಿ ನೆರವೇರಿ ಸಂತಸ. ಲೇವಾದೇವಿ ಹಣಕಾಸು ವ್ಯವಹಾರಸ್ಥರಿಗೆ ಅಧಿಕ ಲಾಭ. ಉದ್ಯೋಗ ನಿಮಿತ್ತ ವಿದೇಶ ಯಾನದ ಸಾಧ್ಯತೆ. ಹಿರಿಯರ ಆರೋಗ್ಯದ ಬಗ್ಗೆ ಗಮನ ಅಗತ್ಯ. ಶುಭ ಸಂಖ್ಯೆ: 1
  7. ತುಲಾ: ವ್ಯಾಪಾರ, ವ್ಯವಹಾರಗಳಲ್ಲಿ ಯಶಸ್ಸು. ಸಕಾಲದಲ್ಲಿ ಕೆಲಸ ಕಾರ್ಯಗಳು ಪೂರೈಸಿದ ಸಂತಸ. ಸಂಘ ಸಂಸ್ಥೆಗಳಿಂದ ಸಹಾಯ ಸಹಕಾರ ದೊರಕಲಿದೆ. ಹೊಸ ಹೊಸ ವ್ಯವಹಾರಗಳ ಬಗ್ಗೆ ಚಿಂತನೆ. ಶುಭ ಸಂಖ್ಯೆ: 7
  8. ವೃಶ್ಚಿಕ: ನಿರೀಕ್ಷಿತ ಕೆಲಸ ಕಾರ್ಯಗಳು ನಡೆಯದೇ ವ್ಯತಿರಿಕ್ತ ಪರಿಣಾಮಗಳುಂಟಾಗಬಹುದು. ಅಹಿತಕರ ಘಟನೆಗಳಿಂದಾಗಿ ವೃಥಾ ದಂಡ ತೆರಬೇಕಾದೀತು. ಲೇವಾದೇವಿ ವ್ಯವಹಾರವನ್ನು ದಿನದ ಮಟ್ಟಿಗೆ ಮುಂದೂಡಿ. ಶುಭ ಸಂಖ್ಯೆ: 8
  9. ಧನು: ನಿರೀಕ್ಷಿತ ಕೆಲಸ ಕಾರ್ಯಗಳು ಫಲ ನೀಡಿ ಸಂತಸ. ವ್ಯಾಪಾರದಲ್ಲಿ ಲಾಭ. ಆತ್ಮೀಯ ವ್ಯಕ್ತಿಗಳ ಸಂದರ್ಶನ ಸಾಧ್ಯತೆ. ದೂರದಲ್ಲಿರುವ ಮಕ್ಕಳಿಂದ ಸಹಾಯ ಹರಿದು ಬರುವ ಸಾಧ್ಯತೆ. ಉದ್ಯೋಗಸ್ಥರಿಗೆ ಮೇಲಧಿಕಾರಿಗಳಿಂದ ಪ್ರಶಂಸೆ. ಶುಭ ಸಂಖ್ಯೆ: 6
  10. ಮಕರ: ವ್ಯಾಪಾರ ವ್ಯವಹಾರಗಳಲ್ಲಿ ನಿರೀಕ್ಷೆ ಮೀರಿದ ಲಾಭ. ಆಪ್ತೇಷ್ಟರ ಆಗಮನ ಸಾಧ್ಯತೆ. ಬಹುದಿನಗಳಿಂದ ನಿರೀಕ್ಷೆಯಲ್ಲಿದ್ದ ಸಮಾಚಾರ ಕೇಳಿ ದುಗುಡ ನಿವಾರಣೆ. ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ಅಗತ್ಯ. ಶುಭ ಸಂಖ್ಯೆ: 3
  11. ಕುಂಭ: ಉದ್ಯೋಗ ಕ್ಷೇತ್ರದಲ್ಲಿ ಸಮಾಧಾನ. ಕುಟುಂಬದಲ್ಲಿ ಶಾಂತ ವಾತಾವರಣ. ವಿದ್ಯಾರ್ಥಿಗಳಿಗೆ ಆಟ–ಪಾಠಗಳಲ್ಲಿ ಹೆಚ್ಚಿನ ಪ್ರಗತಿ. ಉದ್ಯೋಗಸ್ಥರಿಗೆ ಕಚೇರಿ ಲೆಕ್ಕಪತ್ರಗಳಲ್ಲಿನ ತೊಡಕುಗಳು ನಿವಾರಣೆಯಾಗಿ ನಿರಾಳತೆ. ಶುಭ ಸಂಖ್ಯೆ: 5
  12. ಮೀನ: ಅನಿರೀಕ್ಷಿತ ಪ್ರಯಾಣ ಸಂಭವಿಸಿ ವೃಥಾ ಖರ್ಚಿಗೆ ನಾಂದಿಯಾಗುವ ಸಾಧ್ಯತೆ. ಆತ್ಮೀಯರ ಆರೋಗ್ಯದಲ್ಲಿ ವ್ಯತ್ಯಯ. ವ್ಯಾಪಾರ ವ್ಯವಹಾರಗಳಲ್ಲಿ ಪ್ರಗತಿ. ಹಿರಿಯರ ಮಾತುಗಳನ್ನು ಕಡೆಗಣಿಸದಿರಿ. ಹಿತಶತ್ರುಗಳ ಭಯ. ಶುಭ ಸಂಖ್ಯೆ: 8.. ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937

ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಪಕ್ಷವೆಂದ ಮೇಲೆ ಒಂದಷ್ಟು ಭಿನ್ನಾಭಿಪ್ರಾಯಗಳು ಇದ್ದೇ ಇರುತ್ತವೆ: ವಿಜಯೇಂದ್ರ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಗೌತಮಿ ಸಹವಾಸ ಮಾಡಿದ ಉಗ್ರಂ ಮಂಜು ಜೈಲು ಪಾಲು; ಫಿನಾಲೆಗೂ ಮುನ್ನ ಕಳಪೆ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
ಪ್ರಕೃತಿ ಹಾಳು ಮಾಡುವುದು ವಿನಾಶ ಮೈಮೇಲೆ ಎಳೆದುಕೊಂಡಂತೆ: ವಿನಯ್ ಗುರೂಜಿ
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
‘ಗೇಮ್ ಚೇಂಜರ್’ ಸಿನಿಮಾ ಬಿಡುಗಡೆ, ಬೆಂಗಳೂರಿನಲ್ಲಿ ಸ್ವಾಗತ ಹೀಗಿತ್ತು
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸಲು ಗಡ್ಕರಿಗೆ ಮನವಿ ಮಾಡಿರುವೆ: ಹೆಚ್​ಡಿಕೆ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಕೆರೆಗಳ ಸೌಂದರ್ಯೀಕರಣಕ್ಕೆ ಸಚಿವ ಸೋಮಣ್ಣ ₹ 50 ಕೋಟಿ ನೀಡಿದ್ದಾರೆ: ಶಾಸಕ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಈ ಸರ್ಕಾರದ ಹಾಗೆ ನಾನು ಸಹಿಯನ್ನು ಮಾರಾಟಕ್ಕಿಟ್ಟಿಲ್ಲ: ಕುಮಾರಸ್ವಾಮಿ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಲಾಸ್​ ಏಂಜಲೀಸ್​ನಲ್ಲಿ ಕಾಡ್ಗಿಚ್ಚು, ಸಾವಿರಾರು ಮನೆಗಳು ಸುಟ್ಟು ಭಸ್ಮ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ಪದ್ಮಾವತಿ ಮತ್ತು ವೆಂಕಟರಮಣನನ್ನು ರಥದಲ್ಲಿ ಜೊತೆಯಾಗಿ ನೋಡುವುದೇ ಹಬ್ಬ
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!
ವೈಕುಂಠ ಏಕಾದಶಿ ಶುಕ್ರವಾರದಂದು ಬಂದಿರೋದು ಮತ್ತೂ ವಿಶೇಷ!