Horoscope Today- ದಿನ ಭವಿಷ್ಯ; ಈ ರಾಶಿಯವರು ತಮ್ಮ ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರ ವಹಿಸಿ
Horoscope ಮಾರ್ಚ್ 05, 2022ರ ನಿತ್ಯ ಪಂಚಾಂಗ ಮತ್ತು ದ್ವಾದಶ ರಾಶಿಗಳ ದಿನ ಭವಿಷ್ಯ. ರಾಹುಕಾಲ: ಬೆಳಿಗ್ಗೆ 09.29ರಿಂದ ಇಂದು ಬೆಳಿಗ್ಗೆ 10.57ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.32. ಸೂರ್ಯಾಸ್ತ: ಸಂಜೆ 6.23
ನಿತ್ಯ ಪಂಚಾಂಗ: ಪ್ಲವನಾಮ ಸಂವತ್ಸರ, ಉತ್ತರಾಯಣ, ಫಾಲ್ಗುಣ ಮಾಸ, ಶಿಶಿರ ಋತು, ಶುಕ್ಲಪಕ್ಷ, ತದಿಗೆ ತಿಥಿ, ಶನಿವಾರ, ಮಾರ್ಚ್ 05, 2022. ರೇವತಿ ನಕ್ಷತ್ರ, ರಾಹುಕಾಲ: ಬೆಳಿಗ್ಗೆ 09.29ರಿಂದ ಇಂದು ಬೆಳಿಗ್ಗೆ 10.57ರ ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 6.32. ಸೂರ್ಯಾಸ್ತ: ಸಂಜೆ 6.23
ತಾ.05-03-2022 ರ ಶನಿವಾರದ ರಾಶಿಭವಿಷ್ಯ.
- ಮೇಷ: ನಿರ್ಲಕ್ಷ್ಯತನ ಬೇಡ. ಬದುಕನ್ನು ವಿಲಾಸಿಯಾಗಿ ಕಳೆಯುವ ಹೊರತಾಗಿ ಅನೇಕ ಜವಾಬ್ದಾರಿಗಳಿವೆ ಎಂಬುದನ್ನು ಮರೆಯದಿರಿ. ಖರ್ಚು ವೆಚ್ಚಗಳು ಅಧಿಕವಾಗಬಹುದು. ದುಸ್ಸಹವಾಸ, ದುರಭ್ಯಾಸದಿಂದ ಹೊರಬರುವ ಯೋಚನೆಯನ್ನು ಮಾಡಿರಿ. ಶುಭ ಸಂಖ್ಯೆ: 5
- ವೃಷಭ: ಇಂದಿನ ನಿಮ್ಮ ಮನಸ್ಥಿತಿ ಯಾರೊಂದಿಗೂ ಹೆಚ್ಚಾಗಿ ಬೆರೆಯದೆ, ಕೆಲಸ ಕಾರ್ಯಗಳತ್ತಲೇ ಇರುವುದು. ವಿಶೇಷ ತೀರ್ಮಾನಗಳನ್ನು ಮಡದಿಯಲ್ಲಿ ಕೇಳಿ. ನಿಮ್ಮೊಡನೆ ಹರಿದು ಬರುವ ಅವಕಾಶಗಳನ್ನು ಮುಕ್ತ ಮನಸ್ಸಿನಿಂದ ಸ್ವೀಕರಿಸಿ. ಶುಭ ಸಂಖ್ಯೆ: 1
- ಮಿಥುನ: ಹೊರಗುತ್ತಿಗೆ ವ್ಯವಹಾರಗಳಲ್ಲಿ ಶ್ರಮ, ಒತ್ತಡ ಹೆಚ್ಚಲಿದೆ ಹಾಗೂ ಅವುಗಳಿಂದ ವರಮಾನ ಹೆಚ್ಚಲಿದೆ. ತಂದೆಯವರ ವ್ಯವಹಾರದ ವಿಷಯಗಳನ್ನು ತಿಳಿದುಕೊಂಡು ಮುಂದುವರಿಯುವಿರಿ. ಶುಭ ಸಂಖ್ಯೆ: 9
- ಕಟಕ: ವೃತ್ತಿಪರ ಜಾಣ್ಮೆ ತೋರಿದಲ್ಲಿ ಅದೃಷ್ಟ ನಿಮ್ಮದಾಗಲಿದೆ. ನಿಮ್ಮ ಅತಿಯಾದ ಆತ್ಮವಿಶ್ವಾಸ, ಧನಾತ್ಮಕ ಮನೋಭಾವವೇ ಸೋಲಿಗೆ ಕಾರಣ. ಕೃಷಿಯಲ್ಲಿ ಜೀವನಕ್ಕೆ ಸಾಕಾಗುವಷ್ಟು ಉಳಿತಾಯ ಮಾಡುವಿರಿ. ಶುಭ ಸಂಖ್ಯೆ: 2
- ಸಿಂಹ: ನಿಮ್ಮ ಒಳ್ಳೆಯತನ ದುರುಪಯೋಗವಾಗದಂತೆ ಎಚ್ಚರ ವಹಿಸಿ. ಅವಶ್ಯಕತೆಗಿಂತ ಹೆಚ್ಚಾಗಿ ಹಣ ಬರಲಿದೆ. ವಿದ್ಯಾರ್ಥಿಗಳು ಸ್ವಲ್ಪ ಶ್ರಮ ವಹಿಸಿ ಓದಿದರೆ ನಿರೀಕ್ಷೆಗಿಂತ ಹೆಚ್ಚಿನ ಯಶಸ್ಸು ಲಭ್ಯವಾಗುವುದು. ಕೆಂಪು ಬಣ್ಣ ಶುಭ ತರಲಿದೆ. ಶುಭ ಸಂಖ್ಯೆ: 7
- ಕನ್ಯಾ: ಸ್ವಂತ ಮನೆ ನಿರ್ಮಾಣ ಮಾಡಲು, ಕೊಳ್ಳಲು ಸುಸಮಯ. ಕುಲದೇವತೆಯ ಪ್ರಾರ್ಥನೆಯಿಂದ ಆರೋಗ್ಯದ ಸ್ಥಿತಿ ಉತ್ತಮವಾಗುವುದು. ರಾಜಕೀಯ ವ್ಯಕ್ತಿಗಳಿಗೆ ಅನಿವಾರ್ಯವಾಗಿ ಓಡಾಟ ಹೆಚ್ಚಲಿದೆ. ಶುಭ ಸಂಖ್ಯೆ: 4
- ತುಲಾ: ನಿಮ್ಮನ್ನು ದೂಷಿಸಿದ ವ್ಯಕ್ತಿಗಳಿಗೆ ನಿಮ್ಮ ಅಭಿವೃದ್ಧಿಯನ್ನು ನೋಡಿ ಸಹಿಸಲಾಗದಂತಾಗುವುದು. ತಂದೆ ತಾಯಿಯ ಆರೋಗ್ಯದಲ್ಲಿ ಸಣ್ಣ-ಪುಟ್ಟ ಬದಲಾವಣೆ. ನವದಂಪತಿಗಳಿಗೆ ಸಂತಾನ ಭಾಗ್ಯ ದೊರೆತ ಸಂತಸ. ಶುಭ ಸಂಖ್ಯೆ: 3
- ವೃಶ್ಚಿಕ: ತಾಂತ್ರಿಕ ವರ್ಗದಲ್ಲಿ ಕರ್ತವ್ಯ ನಿರ್ವಹಿಸುವವರಿಗೆ ಅಧಿಕವಾದ ಆಲಸ್ಯತನ ಉಂಟಾಗಿ ಕೆಲಸ ಬಾಕಿಯಾಗುವುದು. ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಅಗತ್ಯ. ಕಬ್ಬಿಣ ವ್ಯಾಪಾರಿಗಳಿಗೆ ಉತ್ತಮ ದಿನ. ಶುಭ ಸಂಖ್ಯೆ: 8
- ಧನು: ಯೋಜನಾ ಬದ್ಧ ಕೆಲಸಗಳಿಂದ ಹೆಚ್ಚಿನ ಅನುಕೂಲ. ತಿಳಿಯಾದ ಮನಸ್ಸಿನಿಂದ ಆಲೋಚಿಸಿ ಅಥವಾ ಅನುಭವಸ್ಥರ ಅಭಿಪ್ರಾಯ ತಿಳಿದು ಸೂಕ್ತ ನಿರ್ಧಾರ ಕೈಗೊಳ್ಳಿರಿ. ಚಾಲಕ ವರ್ಗದವರಿಗೆ ಉತ್ತಮ ಆದಾಯವಿರುವುದು. ಶುಭ ಸಂಖ್ಯೆ: 5
- ಮಕರ: ಸ್ವಂತವಾಗಿ ವ್ಯಾಪಾರ ಆರಂಭ ಮಾಡುವ ಯೋಚನೆಯು ಸದ್ಯಕ್ಕೆ ಸರಿಯಲ್ಲ. ಕುಟುಂಬದಲ್ಲಿ ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಲಿವೆ. ಮನೆಯಲ್ಲಿ ಮಂಗಳ ಕಾರ್ಯದ ತಯಾರಿ ನಡೆಯುವುದು. ಶುಭ ಸಂಖ್ಯೆ: 9
- ಕುಂಭ: ಯಾವುದೇ ವಿಷಯದಲ್ಲಿ ಮುಂದುವರಿಯುವ ಮೊದಲು ಅದರ ಲಾಭ-ನಷ್ಟ, ಸತ್ಯಾಸತ್ಯತೆಗಳನ್ನು ಅರಿಯುವ ಬಗ್ಗೆ ಗಮನವಿರಲಿ. ತಾಯಿಯ ಆರೋಗ್ಯ ಸುಧಾರಣೆ ಹಂತ ತಲುಪುವುದು. ದೇವತಾ ಆರಾಧನೆ ನಡೆಸಿ. ಶುಭ ಸಂಖ್ಯೆ: 2
- ಮೀನ: ಜೀವನದಲ್ಲಿ ನಿಮ್ಮದ್ದೇ ಆದ ನಿಯಮ ರೂಢಿಸಿಕೊಳ್ಳಿ. ಉದ್ಯೋಗದಲ್ಲಿ ಅನಿರೀಕ್ಷಿತ ಲಾಭ. ಮಾನಸಿಕ ಸಮತೋಲನದಿಂದ ಈ ದಿನ ಶುಭ ಮತ್ತು ನಿಮ್ಮ ಪಾಲಿಗೆ ಉತ್ತಮ ಅಭಿವೃದ್ಧಿದಾಯಕವಾಗಲಿದೆ. ಶುಭ ಸಂಖ್ಯೆ: 3. ಡಾ.ಬಸವರಾಜ ಗುರೂಜಿ ವೈದಿಕ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞ ಸಂಪರ್ಕ ಸಂಖ್ಯೆ: 9972848937