ರಿಯಲ್ ಎಸ್ಟೇಟ್ ಉದ್ಯಮಿಗಳ ಪಾರ್ಟಿಗೆ ಕಾಡು ಪ್ರಾಣಿಗಳು ಸಪ್ಲೈ: ಬೇಟೆಯಾಡುತ್ತಿದ್ದ ಮೂವರ ಬಂಧನ
ನೆಲಮಂಗಲದಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗಳ ಪಾರ್ಟಿಗೆ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಮೂವರನ್ನು ಬಂಧಿಸಲಾಗಿದೆ. ಅವರಿಂದ ಎರಡು ಜಿಂಕೆ, ಎರಡು ಕಾಡು ಹಂದಿಗಳು, ಮತ್ತು ಬೇಟೆಯಾಡಲು ಬಳಸಿದ ಆಯುಧಗಳನ್ನು ವಶಪಡಿಸಿಕೊಳ್ಳಲಾಗಿದೆ. ಮತ್ತೊಂದು ಪ್ರಕರಣದಲ್ಲಿ ನಾಯಿಯೊಂದು ನಾಲ್ಕು ವರ್ಷದ ಮಗುವಿನ ಮೇಲೆ ದಾಳಿ ಮಾಡಿ ಗಾಯಗೊಳಿಸಿದೆ. ಮನೆಮಾಲೀಕರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ನೆಲಮಂಗಲ, ಜನವರಿ 10: ರಿಯಲ್ ಎಸ್ಟೇಟ್ ಉದ್ಯಮಿಗಳ ಪಾರ್ಟಿಗೆ ಕಾಡು ಪ್ರಾಣಿಗಳನ್ನು (Wild animals) ಬೇಟೆಯಾಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಬೆಂಗಳೂರು ಸಂಚಾರಿ ಅರಣ್ಯಾಧಿಕಾರಿಗಳ ವಿಶೇಷ ಕಾರ್ಯಚರಣೆ ಮಾಡಿ ನೆಲಮಂಗಲದ ಶಾರ್ಪ್ ಶೂಟರ್ ಶ್ರೀನಿವಾಸ್(46), ಹನುಮಂತರಾಜು (44), ಮತ್ತು ರಾಮನಗರದ ಮುನಿರಾಜು(38) ಬಂಧಿತರು.
ಅರಣ್ಯಾಧಿಕಾರಿಗಳನ್ನು ಕಂಡು ಥಾರ್ ಜೀಪ್ನಲ್ಲಿ ಆರೋಪಿಗಳು ಪರಾರಿಯಾಗುತ್ತಿದ್ದರು. 6 ಕಿ. ಮೀ ಸಿನಿಮಾ ಶೈಲಿಯಲ್ಲಿ ಚೇಸಿಂಗ್ ಮಾಡಿ ಆರೋಪಿಗಳನ್ನು ರಾಮನಗರ ಜಿಲ್ಲೆಯ ಚಿಕ್ಕಕುಂಟನಹಳ್ಳಿ ಕ್ರಾಸ್ ಬಳಿ ಬಂಧಿಸಲಾಗಿದೆ.
ಇದನ್ನೂ ಓದಿ: ಬೆಂಗಳೂರು: ಕಾಣೆಯಾದ ಬೀದಿ ನಾಯಿಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ ಮಹಿಳೆ
ಸದ್ಯ ಬಂಧಿತರಿಂದ 2 ಜಿಂಕೆ, 2 ಕಾಡು ಹಂದಿ, 1 ಗನ್, ಏರ್ ಗನ್, 11 ಜೀವಂತ ಗುಂಡು, 2 ಚಾಕು, ಕೊಡಲಿ, ಮಚ್ಚು, 3 ಮೊಬೈಲ್ ಜಪ್ತಿ ಮಾಡಲಾಗಿದೆ. ಹೈ ಫ್ಲ್ಯಾಶ್ ಲೈಟ್‍ಗಳನ್ನ ಬಳಸಿ ಆರೋಪಿಗಳು ಬೇಟೆಯಾಡುತ್ತಿದ್ದರು. ಎರಡು ತಿಂಗಳ ಸತತ ಪ್ರಯತ್ನದಿಂದ ಆರೋಪಿಗಳು ಬಲೆಗೆ ಬಿದಿದ್ದಾರೆ.
ಬೆಂಗಳೂರು ಅರಣ್ಯ ಸಂಚಾರಿ ದಳದ ಡಿಸಿಎಫ್ ಸುನಿತಾ ಬಾಯಿ, ಎಸಿಎಫ್ ಸರಿತಾ ಮಾರ್ಗದರ್ಶನ, ಆರ್ಎಫ್ಒ ರಮೇಶ್, ಸಿದ್ದರಾಜು, ಅಮೃತ್ ದೇಸಾಯಿ, ರಾಜು, ಆಶಾ, ಚೇಸಿಂಗ್ ಮಾಡಿದ ಚಾಲಕ ಸುರೇಶ್ ನೇತೃತ್ವದ ತಂಡದ ವಿಶೇಷ ಕಾರ್ಯಚರಣೆ ಮೂಲಕ ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ.
ನಾಲ್ಕು ವರ್ಷದ ಕಂದನ ಮೇಲೆ ನಾಯಿ ಡೆಡ್ಲಿ ಅಟ್ಯಾಕ್
ನಾಲ್ಕು ವರ್ಷದ ಕಂದನ ಮೇಲೆ ರಾಟ್ ವಿಲ್ಲರ್ ತಳಿಯ ನಾಯಿ ಡೆಡ್ಲಿ ಅಟ್ಯಾಕ್ ಮಾಡಿದ್ದು, ಮಗುವನ್ನು ರಕ್ಷಿಸಲು ಹೋದ ಅಪ್ಪನಿಗೂ ಕಚ್ಚಿರುವಂತಹ ಘಟನೆ ಇಂದಿರಾನಗರ ಪೊಲೀಸ್ ಠಾಣವ್ಯಾಪ್ತಿಯ ಗಣೇಶ ಟೆಂಪಲ್ ಬಳಿ ದಿನಾಂಕ 5ರ ರಾತ್ರಿ 8 ಗಂಟೆ ಸುಮಾರಿಗೆ ನಡೆದಿದೆ.
ಮನೆ ಮುಂದೆ ಆಟ ಆಡುತ್ತಿದ್ದ ನಾಲ್ಕು ವರ್ಷದ ಕಂದನ ಮೇಲೆ ನಾಯಿ ಮೃಗದಂತೆ ಎಗರಿದೆ. ಮೆಟ್ಟಿಲುಗಳ ಮೇಲೆ ಮಗುವನ್ನ ಎಳೆದೋಯ್ದು ಮನೋಸೋಇಚ್ಚೆ ಕಚ್ಚಿದೆ. ಮಗು ಚಿರಾಟಕ್ಕೆ ಮನೆಯಲ್ಲಿದ್ದ ತಂದೆ ಓಡಿ ಹೋಗಿ ನಾಯಿ ಬಾಯಿಯಿಂದ ಮಗು ರಕ್ಷಿಸಿದ್ದಾರೆ. ಈ ವೇಳೆ ಮಗು ತಂದೆಗೂ ನಾಯಿ ಕಚ್ಚಿ ಗಾಯಗೊಳಿಸಿದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಡೀಪ್ಫೇಕ್ ವಂಚನೆ ಹೆಚ್ಚಳ: ಇದನ್ನು ಹೇಗೆ ಮಾಡ್ತಾರೆ ಗೊತ್ತಾ?
ಕೇರಳ ಮೂಲದ ಕುಟುಂಬ ಕಳೆದು ಒಂದುವರೇ ವರ್ಷದಿಂದ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು. ಮನೆಯ ಮಾಲಿಕರು ತಮ್ಮ ಮನೆಯಲ್ಲಿ ರಾಟ್ ವಿಲ್ಲರ್ ತಳಿಯ ನಾಯಿ ಸಾಕಿದ್ದರು. ಸಾಕಷ್ಟು ಕೋಪಗೊಂಡಿದ್ದ ನಾಯಿ ಈ ಹಿಂದೆ ಕೂಡ ಕೆಲವರಿಗೆ ಕಚ್ಚಿದೆಯಂತೆ. ಆದರೂ ನಾಯಿ ಬಗ್ಗೆ ಕೇರ್ ಮಾಡದೇ ಮಾಲೀಕರು ನಾಯಿಯನ್ನ ಕಟ್ಟಿ ಹಾಕದೆ ಹಾಗೆ ಬಿಡುತ್ತಿದ್ದರಂತೆ ಮನೆ ಮುಂದಿನ ಸಣ್ಣ ಗೇಟ್ ಲಾಕ್ ಮಾಡಿದರೂ ನಾಯಿ ಗೇಟ್ ಎಗರಿ ಬಂದು ಮಗುಗೆ ಕಚ್ಚಿದೆ. ಮನೆ ಮಾಲೀಕರ ವಿರುದ್ಧ ಇಂದಿರಾನಗರದಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:15 pm, Fri, 10 January 25