ಬೋರ್​ವೆಲ್ ಅಕ್ರಮ ಆರೋಪ: ಬಿಬಿಎಂಪಿ 43 ಮಾಜಿ ಕಾರ್ಪೊರೇಟರ್​ಗಳ ಮೇಲೆ ಇಡಿ ಕಣ್ಣು

ಬೆಂಗಳೂರಿನಲ್ಲಿ 2016-2019ರ ಅವಧಿಯಲ್ಲಿ ನಡೆದಿತ್ತು ಎನ್ನಲಾದ 970 ಕೋಟಿ ರೂಪಾಯಿಗಳ ಅಕ್ರಮ ಬೋರ್‌ವೆಲ್ ಕಾಮಗಾರಿ ಸಂಬಂಧ ತನಿಖೆ ನಡೆಸುತ್ತಿರುವ ಇಡಿ, 43 ಮಂದಿ ಬಿಬಿಎಂಪಿ ಮಾಜಿ ಕಾರ್ಪೊರೇಟರ್‌ಗಳ ವಿಳಾಸ, ಪ್ಯಾನ್, ಆಧಾರ್, ಇಮೇಲ್, ಸಂಪರ್ಕ ಸಂಖ್ಯೆ ಮುಂತಾದ ವಿವರಗಳನ್ನುಕೋರಿದೆ. ಮಾಜಿ ಕಾರ್ಪೊರೇಟರ್‌ಗಳ ಪಾತ್ರದ ಬಗ್ಗೆ ಇಡಿ ತನಿಖೆಗೆ ಮುಂದಾಗಿದೆ.

ಬೋರ್​ವೆಲ್ ಅಕ್ರಮ ಆರೋಪ: ಬಿಬಿಎಂಪಿ 43 ಮಾಜಿ ಕಾರ್ಪೊರೇಟರ್​ಗಳ ಮೇಲೆ ಇಡಿ ಕಣ್ಣು
ಬಿಬಿಎಂಪಿ
Follow us
Ganapathi Sharma
|

Updated on: Jan 10, 2025 | 2:30 PM

ಬೆಂಗಳೂರು, ಜನವರಿ 10: ಬೆಂಗಳೂರಿನಲ್ಲಿ ಕೊಳವೆಬಾವಿ ಕೊರೆಸುವ ಸಂಬಂಧ 2016 ರಿಂದ 2019ರ ಅವಧಿಯಲ್ಲಿ ಸುಮಾರು 970 ಕೋಟಿ ರೂಪಾಯಿ ಅಕ್ರಮ ನಡೆದಿದೆ ಎಂಬ ಆರೋಪಗಳ ಸಂಬಂಧ ಇದೀಗ ಜಾರಿ ನಿರ್ದೇಶನಾಲಯ (ಇ.ಡಿ) ಬಿಬಿಎಂಪಿಯ 43 ಮಂದಿ ಮಾಜಿ ಕಾರ್ಪೊರೇಟರ್‌ಗಳ ವಿವರಗಳನ್ನು ಕೇಳಿದೆ.

ಯೋಜನೆ ಅನುಷ್ಠಾನಗೊಂಡ ವಾರ್ಡ್‌ಗಳು, ವಲಯಗಳು, ಕಾರ್ಪೊರೇಟರ್‌ಗಳ ವಿಳಾಸಗಳು, ಪ್ಯಾನ್ ಮತ್ತು ಆಧಾರ್ ಕಾರ್ಡ್ ವಿವರಗಳು, ಇಮೇಲ್ ಐಡಿಗಳು ಮತ್ತು ಸಂಪರ್ಕ ಸಂಖ್ಯೆಗಳನ್ನು ಜಾರಿ ನಿರ್ದೇಶನಾಲಯ ಕೇಳಿದೆ ಎಂಬುದನ್ನು ಆಂತರಿಕ ದಾಖಲೆಗಳನ್ನು ಉಲ್ಲೇಖಿಸಿ ‘ಡೆಕ್ಕನ್ ಹೆರಾಲ್ಡ್’ ವರದಿ ಮಾಡಿದೆ.

ನಗರದ ಹೊರವಲಯದ ನೀರಿನ ಬಿಕ್ಕಟ್ಟನ್ನು ಪರಿಹರಿಸುವುದಕ್ಕೆಂದು ಬೋರ್‌ವೆಲ್‌ಗಳನ್ನು ಕೊರೆಯುವುದಕ್ಕಾಗಿಯೇ ಹೆಚ್ಚಿನ ಹಣ ವಿನಿಯೋಗಿಸಲಾಗಿದೆ. 43 ಮಾಜಿ ಕೌನ್ಸಿಲರ್‌ಗಳು ಹಣ ಬಿಡುಗಡೆಗೆ ಪತ್ರ ಬರೆದಿರುವುದು ಬೆಳಕಿಗೆ ಬಂದಿರುವುದರಿಂದ ಅವರ ಪಾತ್ರದ ಬಗ್ಗೆ ಈಗ ಇ.ಡಿ ಕಣ್ಣಿಟ್ಟಿದೆ ಎಂದು ವರದಿ ಉಲ್ಲೇಖಿಸಿದೆ.

ಯಾವ ಕ್ಷೇತ್ರಗಳಲ್ಲಿ ಹೆಚ್ಚು ಅಕ್ರಮ?

ಯಶವಂತಪುರ, ಕೆಆರ್ ಪುರಂ, ಬ್ಯಾಟರಾಯನಪುರ, ಆರ್​​ಆರ್ ನಗರ, ಬೊಮ್ಮನಹಳ್ಳಿ ಕ್ಷೇತ್ರಗಳಲ್ಲಿ ಹೆಚ್ಚು ಅಕ್ರಮ ನಡೆದಿರುವುದು ಕಂಡು ಬಂದಿರುವುದಾಗಿ ವರದಿಯಾಗಿದೆ.

9 ಸಾವಿರಕ್ಕೂ ಹೆಚ್ಚು ಬೋರ್​ವೆಲ್ ಕೊರೆಸಲು ಹಣ ಬಿಡುಗಡೆ: ಕೊರೆಸಿದ್ದು 1000!

2016-17 ಮತ್ತು 2017-18ರಲ್ಲಿ 9,558 ಬೋರ್‌ವೆಲ್‌ಗಳನ್ನು ಕೊರೆಸಲು ಹಣ ಬಿಡುಗಡೆ ಮಾಡಲಾಗಿತ್ತು. ಈ ಪೈಕಿ 1,000 ಬೋರ್‌ವೆಲ್‌ಗಳನ್ನು ಮಾತ್ರ ಕೊರೆಸಲಾಗಿದೆ ಎಂದು ದೂರುಗಳಲ್ಲಿ ಉಲ್ಲೇಖವಾಗಿದೆ. ಇತರ ಎಲ್ಲ ಸಂದರ್ಭಗಳಲ್ಲಿ, ಪಾವತಿಗಳನ್ನು ಸ್ವೀಕರಿಸಲು ನಕಲಿ ಬಿಲ್‌ಗಳನ್ನು ಸಂಗ್ರಹಿಸಲಾಗಿದೆ ಎಂದು ಆರೋಪಿಸಲಾಗಿದೆ. 600 ಅಡಿ ಆಳದ ಬೋರ್‌ವೆಲ್‌ಗಳನ್ನು ಕೊರೆಸಿದರೂ 1,500 ಅಡಿ ಆಳಕ್ಕೆ ಬಿಲ್‌ ಪಡೆದಿರುವ ಉದಾಹರಣೆಗಳಿವೆ ಎಂದು ವರದಿ ತಿಳಿಸಿದೆ.

ಇಡಿ ಕೇಳಿದ ವಿವರಗಳೇನು?

43 ಮಾಜಿ ಕಾರ್ಪೊರೇಟರ್​ಗಳ ವಿವರ ಮಾತ್ರವಲ್ಲದೆ, ಗುತ್ತಿಗೆದಾರರು ಮತ್ತು ಬಿಬಿಎಂಪಿ ನಡುವಿನ ಒಪ್ಪಂದ, ಬೋರ್‌ವೆಲ್‌ಗಳ ವಿವರಗಳು, ಸ್ಥಾಪಿಸಲಾದ ಆರ್‌ಒ ಘಟಕಗಳು ಮತ್ತು ಸಲ್ಲಿಸಿದ ದಾಖಲೆಗಳು (ಇನ್‌ವಾಯ್ಸ್‌ಗಳು ಮತ್ತು ಬಿಲ್‌ಗಳು) ಮತ್ತು ಹಣವನ್ನು ಬಿಡುಗಡೆ ಮಾಡಲು ಬಳಸಿದ ಖಾತೆಗಳು ಅಥವಾ ಹಣಕಾಸುಗಳಲ್ಲಿನ ಅಧಿಕಾರಿಗಳ ಹೆಸರುಗಳ ಬಗ್ಗೆ ಇಡಿ ಮತ್ತಷ್ಟು ವಿವರಗಳನ್ನು ಕೋರಿದೆ.

ಇದನ್ನೂ ಓದಿ: ಬಿಬಿಎಂಪಿ ಮುಖ್ಯ ಕಚೇರಿ ಮೇಲೆ ಇಡಿ ದಾಳಿ, ಪ್ರಮುಖ ಎರಡು ಪ್ರಾಜೆಕ್ಟ್​​ಗಳ ದಾಖಲೆ ಪರಿಶೀಲನೆ

ಅಕ್ರಮದ ಆರೋಪ ಸಂಬಂಧ ಎರಡು ದಿನಗಳ ಹಿಂದಷ್ಟೇ ಬಿಬಿಎಂಪಿ ಮುಖ್ಯ ಇಂಜಿನಿಯರ್​ ಕಚೇರಿ ಮೇಲೆ ಇಡಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದರು. ಅದರ ಬೆನ್ನಲ್ಲೇ ಇದೀಗ ಇಡಿ ಮತ್ತಷ್ಟು ವಿವರ ಕೋರಿರುವ ಬಗ್ಗೆ ವರದಿಯಾಗಿದೆ.

ಕರ್ನಾಟಕದ  ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ದರ್ಶನ್, ಶಿವಣ್ಣ ಬಳಿಕ ಧ್ರುವ ಸರ್ಜಾಗೆ ಮಚ್ಚು ನೀಡಿದ ಜೋಗಿ ಪ್ರೇಮ್
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ತ್ರಿವೇಣಿ ಸಂಗಮ ರಸ್ತೆಯಲ್ಲಿ ನಂದಿನಿ ಹಾಲಿಂದ ತಯಾರಾಗುವ ಬಿಸಿಬಿಸಿ ಚಹಾ ಲಭ್ಯ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಅಹಮದಾಬಾದ್‌ನಲ್ಲಿ ಮಕರ ಸಂಕ್ರಾಂತಿ ಹಬ್ಬಕ್ಕೆ ಗಾಳಿಪಟ ಹಾರಿಸಿದ ಅಮಿತ್ ಶಾ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ಹಿಂದಿನ ಸರ್ಕಾರ ಸಾಲಗಳನ್ನು ನಮ್ಮ ಸರ್ಕಾರ ತೀರಿಸುತ್ತಿದೆ: ಪ್ರಿಯಾಂಕ್ ಖರ್ಗೆ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ನಾಳೆ ದೆಹಲಿಗೆ ತೆರಳುವ ಮೊದಲು ಎಲ್ಲವನ್ನೂ ಮಾತಾಡುವೆ: ಕುಮಾರಸ್ವಾಮಿ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಹಾಕುಂಭದಲ್ಲಿ ಸಂಕ್ರಾಂತಿಯ ದಿನವಾದ ಇಂದು 2.5 ಕೋಟಿ ಭಕ್ತರಿಂದ ತೀರ್ಥ ಸ್ನಾನ
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ಮಿಡ್ ವೀಕ್ ಎಲಿನಿಮೇಷನ್ ಟಾಸ್ಕ್, ಗೆದ್ದವರ್ಯಾರು? ಸೋತವರ್ಯಾರು?
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ವೇದಿಕೆ ಮೇಲೆ ಚರ್ಚೆಯಲ್ಲಿ ಮಗ್ನರಾದ ಕುಮಾರಸ್ವಾಮಿ ಮತ್ತು ವಿಜಯೇಂದ್ರ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಚಿವೆ ಚೇತರಿಸಿಕೊಳ್ಳುತ್ತಿದ್ದಾರೆ, ಅವರಿಗೆ ವಿಶ್ರಾಂತಿಯ ಅಗತ್ಯವಿದೆ:ಶಶಿಕಲಾ
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್
ಸಾರ್ವಜನಿಕವಾಗಿ ಹೆಚ್ಚು ಕಾಣಿಸಿಕೊಳ್ಳದ ಸಚಿವೆಯ ಪತಿ ರವೀಂದ್ರ ಹೆಬ್ಬಾಳ್ಕರ್