ಮಕರ ರಾಶಿ
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 03 ಮಂಗಳವಾರದ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶುಭಕೃತ ನಾಮ ಸಂವತ್ಸರ, ದಕ್ಷಿಣಾಯನ, ಧನುರ್ಮಾಸ ಮಾಸ, ಹೇಮಂತ ಋತು, ಪುಷ್ಯ ಮಾಸ, ಶುಕ್ಲ ಪಕ್ಷ, ದ್ವಾದಶೀ ತಿಥಿ, ಪೂರ್ವಾಷಾಢ ಮಹಾನಕ್ಷತ್ರ, ಕೃತ್ತಿಕಾ ನಿತ್ಯನಕ್ಷತ್ರ , ಮಂಗಳವಾರ, ಜನವರಿ 03, 2023. ರಾಹುಕಾಲ: ಇಂದು ಬೆಳಿಗ್ಗೆ 08 ಗಂ॥ 24 ನಿ।। ರಿಂದ ಇಂದು ಬೆಳಿಗ್ಗೆ 09 ಗಂ॥ 48 ನಿ।। ತನಕ. ಬೆಂಗಳೂರು ಸೂರ್ಯೋದಯ: ಬೆಳಿಗ್ಗೆ 06 ಗಂಟೆ 59 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 14 ನಿಮಿಷಕ್ಕೆ.
ತಾ. 03-01-2023 ರ ಮಂಗಳವಾರ ರಾಶಿ ಭವಿಷ್ಯ ಹೀಗಿದೆ:
- ಮೇಷ: ಓಡಾಟದ ದಣಿವು ಕಾರ್ಯಗಳಲ್ಲಿ ಆಲಸ್ಯವನ್ನು ತರಲಿದೆ. ಅಮೂಲ್ಯವಸ್ತುಗಳು ಕೈ ತಪ್ಪುವ ಸಾಧ್ಯತೆ ಇದೆ. ಆಲೋಚಿಸದೇ ಯಾವುದೇ ಸಾಹಸದ ಕಾರ್ಯವನ್ನು, ಕೆಲಸವನ್ನು ಮಾಡಬೇಡಿ. ಅನಾರೋಗ್ಯವು ನಿಮ್ಮನ್ನು ಕಾಡಲಿದೆ. ಪಿತ್ರಾರ್ಜಿತ ಭೂಮಿಯ ವ್ಯವಹಾರದಲ್ಲಿ ಹೆಚ್ಚಿನ ಲಾಭವಾಗಲಿದೆ. ವೃತ್ತಿಯಲ್ಲಿ ಅನಿರೀಕ್ಷಿತ ಬೆಳವಣಿಗೆಯಿಂದ ಬೇಸರವಾಗಬಹುದು. ಯಾರನ್ನಾದರೂ ನಂಬುವಾಗ ಎಚ್ಚರಿಕೆಯಿರಲಿ. ಹಣದ ವಿಷಯದಲ್ಲಿ ಮೋಸ ಹೋಗುವ ಸಂದರ್ಭವಿದೆ.
- ವೃಷಭ: ಹೂಡಿಕೆಯನ್ನು ಹಿಂದೆ ಮಾಡಿದ್ದರೆ ಈಗ ಅದರ ಫಲವನ್ನು ಕಾಣಬಹುದಾಗಿದೆ. ಆರ್ಥಿಕವಾದ ಅಭಿವೃದ್ಧಿಯು ಆಗಲಿದೆ. ಯಾರೊಂದಿಗೂ ಸಂಪೂರ್ಣ ನಿಜವನ್ನು ಹೇಳಿಬಿಡಬೇಡಿ. ಅಪರೂಪದ ವ್ಯಕ್ತಿಗಳ ಭೇಟಿಯಾಗುವ ಸಾಧ್ಯತೆ ಇದೆ. ವೃತ್ತಿಗೆ ಸಂಬಂಧಿಸಿದಂತೆ ಶುಭದಿನವಾಗಿದೆ. ಇನ್ನೊಬ್ಬರನ್ನು ನೋಡಿ ನಿಮ್ಮ ಅಸೂಯೆಪಡಬೇಡಿ. ದೂರದ ಪ್ರಯಾಣವನ್ನು ಮಾಡಲಿದ್ದೀರಿ. ಒಂಟಿತನವು ಕಾಡಬಹುದು.
- ಮಿಥುನ: ನಿಮ್ಮ ಅನುಭವವು ಅನೇಕ ಕೆಲಸಗಳಿಗೆ ಉಪಕಾರಿಯಾಗಲಿದೆ. ಸಂಗಾತಿಗೆ ಸಂತೋಷವನ್ನು ನೀಡಲು ಪ್ರಯತ್ನಿಸುವಿರಿ. ಮನಸ್ಸಿದ್ದತೆ ಮಾರ್ಗವೆನ್ನುವ ಸತ್ಯವು ಮನವರಿಕೆಯಾದೀತು. ಸರ್ಕಾರಿ ಕೆಲಸಗಳು ನಿಧಾನವಾಗಿ ಮುಂದುವರಿಯುವುದು. ಮಾತಿನಿಂದ ಮಾತ್ರ ಎಲ್ಲವೂ ಸರಿಯಾಗುವುದು ಎನ್ನುವ ಭ್ರಮೆಯಿಂದ ಹೊರಬನ್ನಿ. ಭವಿಷ್ಯದ ಯೋಚನೆಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಉತ್ತಮ ಆಹಾರವನ್ನು ನೀವಿಂದು ಸೇವಿಸುವಿರಿ. ಸಮಾರಂಭಗಳಿಗೆ ಭೇಟಿಕೊಡಬಹುದು.
- ಕರ್ಕ: ನಿಮ್ಮನ್ನು ಕಂಡು ಅಸೂಯೆ ಪಡುವ ಜನರಿರುತ್ತಾರೆ ನಿಮ್ಮ ಸುತ್ತ. ಅವರನ್ನು ನಗಣ್ಯ ಮಾಡಬೇಡಿ. ನಿಮ್ಮ ಮೇಲೆ ಸಲ್ಲದ ಪಿತೂರಿಗಳನ್ನು ಮಾಡಿಯಾರು.ಅವರ ಮೇಲೆ ಒಂದು ಕಣ್ಣಿರಲಿ. ಸ್ನೇಹಿತರೊಂದಿಗೆ ಮನಸ್ಸು ಬಿಚ್ಚಿ ಮಾತನಾಡಿ. ಸಿಕ್ಕಿರುವ ಉದ್ಯೋಗಾವಕಾಶವನ್ನು ಸರಿಯಾಗಿ ಬಳಸಿ, ಬೆಳೆಸಿಕೊಳ್ಳಿ. ನಿಮ್ಮ ಮುಂದಿನ ಮಾರ್ಗವು ನಿರ್ವಿಘ್ನವಾಗುವುದು. ಸಸ್ಯಗಳನ್ನು ನೆಡುವ, ಪೋಷಿಸುವ ಕೆಲಸದಲ್ಲಿ ಆಸಕ್ತಿಯನ್ನು ಹೊಂದಿರುವಿರಿ. ಶುಭಸಮಾಚಾರ ನಿಮಗೆ ಗೊತ್ತಾಗಲಿದೆ.
- ಸಿಂಹ: ನಿಮ್ಮ ಮನಸ್ಸನ್ನು ಕಲಕಲೆಂದೇ ಕೆಲವರು ಹೊಂಚುಹಾಕುವ ಸಾಧ್ಯತೆ ಇದೆ. ಅವುಗಳಿಗೆ ಕಿವಿಗೊಡಬೇಡಿ. ಆರ್ಥಿಕವಾಗಿ ಇಂದು ಸಬಲರಾಗುವಿರಿ. ಪ್ರೀತಿಪಾತ್ರರಾದವರ ಭೇಟಿಯು ಸಂತೋಷವನ್ನು ಹೆಚ್ಚಿಸೀತು. ಹಿರಿಯರ ಮಾತುಗಳು ನಿಮ್ಮ ಮನಸ್ಸಿಗೆ ನಾಟಿ ಇಲ್ಲಿಯವರೆಗಿನ ಕಾರ್ಯಕ್ಕೆ ಪಾಶ್ಚಾತ್ತಾಪವನ್ನು ಅನುಭವಿಸುವಿರಿ. ತಾಯಿಯಿಂದ ನಿಮ್ಮ ಕಾರ್ಯಕ್ಕೆ ಅನುಕೂಲವು ಒದಗಿಬರುವುದು. ಚಾಲಕರು ಸ್ವಲ್ಪ ಎಚ್ಚರಿಕೆಯಿಂದ ಚಲಾಯಿಸಿ.
- ಕನ್ಯಾ: ಅನಿರೀಕ್ಷಿತವಾಗಿ ಹಣದ ಮುಗ್ಗಟ್ಟು ಮುಂದಾಗಿ ಬರಬಹುದು. ಮನೆಯವರೊಂದಿಗೆ ಆದ ಮನಸ್ತಾಪವನ್ನು ದೀರ್ಘಗೊಳಿಸಬೇಡಿ. ನಿಮ್ಮಿಂದ ನಿಮ್ಮ ತಂದೆ, ತಾಯಿಯರು ಸಂಕಟಪಡಬಹುದು. ವಿವಾಹಯೋಗವು ನಿಮಗಿದೆ. ಯಾವುದಾದರೂ ಉಪಯೋಗಕ್ಕೆ ಬರುವ ಕೆಲಸಕ್ಕೆ ಕೈ ಹಾಕಿ. ನಿಮ್ಮ ಮುಂದಿನ ಮಾರ್ಗಕ್ಕೆ ಉತ್ತಮ ಸಹಾಯಕನಾದೀತು. ಮೊಬೈಲ್ ನಿಮ್ಮ ಸಂಪೂರ್ಣವಾದ ಸಮಯವನ್ನು ಬಳಸಿಕೊಂಡು ನಿಮ್ಮನ್ನು ನಿಷ್ಕ್ರಿಯರನ್ನಾಗಿ ಮಾಡಲಿದೆ.
- ತುಲಾ: ಮನೆಗೆ ಯಾರನ್ನಾದರೂ ಕರೆದು ಸುಗ್ರಾಸ ಭೋಜನವನ್ನು ನೀಡಿ. ನಿಮ್ಮ ಕಾರ್ಯಕ್ಷೇತ್ರದಲ್ಲಿ ಉತ್ತಮವಾದ ವಾರ್ತರಯನ್ನು ಕೇಳಬಹುದು. ಉನ್ನತಸ್ಥಾನದ ಪ್ರಸ್ತಾಪವೂ ಆಗಬಹುದು. ನಿಮ್ಮ ಜೀವನದಲ್ಲಿ ಪ್ರಮುಖರು ಯಾರೆಂಬ ಸರಿಯಾದ ಚಿತ್ರಣವು ನಿಮಗೆ ಸಿಗಲಿದೆ. ವಾತರೋಗದಿಂದ ಬಳಲುವ ಸಾಧ್ಯತಯಿದೆ. ದಂಪತಿಗಳ ನಡುವೆ ನಡೆದ ಕಲಹವು ಕೋರ್ಟ್ ಮೆಟ್ಟಲನ್ನೂ ಏರಬಹುದು. ಮನೆಯಲ್ಲಿಯೇ ಉಂಟಾದ ಜಗಳವನ್ನು ಅಲ್ಲಿಯೇ ಪರಿಹರಿಸಿಕೊಳ್ಳಿ.
- ವೃಶ್ಚಿಕ: ವಿವಾಹಕ್ಕೆ ಸಂಬಂಧಿಸಿದ ಮಾತುಕತೆಗಳು ನಡೆದರೂ ಪ್ರಯೋಜನವಾಗದು. ಇಂದು ದಿನವಿಡೀ ದೇಹದ ಆಲಸ್ಯ, ಮನಸ್ಸಿನಲ್ಲಿ ಇರುವ ಜಾಡ್ಯದಿಂದ ಯಾವ ಕಾರ್ಯಗಳೂ ಆಗದು. ದಿವಸ ಚಟುವಟಿಕೆಗಳಿಗಿಂತ ಭಿನ್ನವಾದ ಯಾವುದಾದರೂ ಆಸಕ್ತಿಯಿರುವ ಕೆಲಸಗಳ ಬಗ್ಗೆ ಗಮನಹರಿಸಿ. ಸಾಲವನ್ನು ಕೊಟ್ಟರೆ ವಾಪಸು ಬರುತ್ತದೆ ಎಂಬ ನಿರೀಕ್ಷೆ ಬೇಡ. ಬಂದರೂ ಬರಬಹುದು. ಇಂದು ನಿಮ್ಮ ಸರ್ವಬಲವನ್ನೂ ಹಾಕಿ ಕೆಲಸ ಮಾಡಿದರೆ ಸಫಲತೆಯಾಗುವ ಸಾಧ್ಯತೆ ಇದೆ.
- ಧನುಸ್ಸು: ಪ್ರಭವೀ ವ್ಯಕ್ತಿಗಳ ಸಹವಾಸ, ಗೆಳೆತನವಿಂದು ಆಗಲಿದೆ. ಪುಣ್ಯಸ್ಥಳದ ದರ್ಶನಕ್ಕೆಂದು ಪ್ರಯಾಣ ಮಾಡುವಿರಿ. ವಾಹನದಿಂದ ಬಿದ್ದು ಪೆಟ್ಟು ಮಾಡಿಕೊಳ್ಳಬೇಡಿ. ಮಾತನ್ನು ಸರಿಯಾಗಿ ಆಡಿ. ಇಲ್ಲವಾದರೆ ಅನೇಕ ಶುಭಕಾರ್ಯಗಳಿಂದ, ಉತ್ತಮ ಕಾರ್ಯಗಳಿಂದ ವಂಚಿತರಾಗುವಿರಿ. ಮಕ್ಕಳ ವಿಚಾರವಾಗಿ ದಂಪತಿಗಳ ಮಧ್ಯದಲ್ಲಿ ವೈಮನಸ್ಯವು ಉಂಟಾಗಬಹುದು. ನಿಮ್ಮಿಬ್ಬರ ಮಾತಿನಚಕಮಕಿಯಲ್ಲಿ ಕೂಸು ಬಡವಾದೀತು. ಅನಾರೋಗ್ಯದಲ್ಲಿ ವ್ಯತ್ಯಾಸವು ಕಂಡುಬರಲಿದೆ.
- ಮಕರ: ಚಿಂತೆಯಿಂದ ಯಾವ ಪ್ರಯೋಜನವಾಗದು. ಚಿಂತನೆಯಿಂದ ಮಾತ್ರ ಬಂದಿರುವ ಸಮಸ್ಯೆಗಳನ್ನು ಪರಿಹರಿಸಿಕೊಳ್ಳಬಹುದಾಗಿದೆ. ವಿವಾಹದ ಮಾತುಕತೆಗಳು ಆರಂಭವಾಗಿವೆ. ಅಪರೂಪದ ಸ್ನೇಹಿತನ ಜೊತೆ ಸುತ್ತಾಟ. ವ್ಯರ್ಥವೆನಿಸಿದರೂ ನಿಮಗೆ ಬೇಕಾದ ಅಂಶಗಳು ಅವನಿಂದ ಸಿಗಲಿದೆ. ನಿಮ್ಮ ಗೊಂದಲಗಳಿಗೆ ತೆರೆ ಬೀಳಲಿದೆ. ಸುಂದರವಾದ ಯೋಜನೆಗಳನ್ನು ರೂಪಿಸಿಕೊಂಡು ಮುನ್ನಡೆಯಿರಿ. ವೈದ್ಯರಿಗೆ ಇಂದು ಉತ್ತಮದಿನವಾಗಿಲ್ಲ. ನೀವೂ ದೈವಕ್ಕೆ ಶರಣಾಗಲೇ ಬೇಕು.
- ಕುಂಭ: ಹಣವನ್ನು ಉಳಿಸಿಕೊಳ್ಳಬೇಕು ಎಂದು ಪ್ರಯತ್ನಿಸಿದರೂ ನಿಮ್ಮ ಕೈಮೀರಿ ಹೊಗುವ ಸಂದರ್ಭವೇ ಇರುವುದರಿಂದ ಹಣವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ. ಪ್ರಯಾಣವನ್ನು ಅತಿಯಾಗಿ ಮಾಡಬೇಡಿ. ಆರೋಗ್ಯದ ಮೇಲೆ ಸ್ವಲ್ಪ ಜಾಗರೂಕರಾಗಿರಿ. ಬಂಧುಗಳ ಜೊತೆ ವಾದ-ವಿವಾದಗಳು ಉಂಟಾಗಬಹುದು. ಹಣದ ವಿಚಾರವಾಗಿ ಮನೆಯಲ್ಲಿ ಜಗಳವಾಹಬಹುದು. ಹೊಸ ಜವಾಬ್ದಾರಿಗಳನ್ನು ಒಪ್ಪಿಕೊಳ್ಳಲು ಹೋಗಬೇಡಿ. ಸಮಯ ವ್ಯರ್ಥವಾಗುತ್ತಿದೆ ಎಂದು ತಿಳಿದಿದ್ದರೂ ಅನ್ಯ ಮಾರ್ಗವಿಲ್ಲದೇ ಇರಬೇಕಾದೀತು.
- ಮೀನ: ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗವಹಿಸುವಿರಿ. ಸಾಲವನ್ನು ಮರುಪಾವತಿಸಲು ಮುಂದಾಗುವಿರಿ. ದೀರ್ಘಕಾಲದಿಂದ ಮಾಡುತ್ತಿದ್ದ ಕೆಲಸಗಳು ಮುಕ್ತಾಯವಾಗುವುವು. ಸಂಬಂಧಿಕರ ಸಹವಾಸ, ಸಹಾಯಗಳು ಸಿಗಲಿವೆ. ನಿಮ್ಮ ಅಂತಸ್ಸತ್ತ್ವ ಗಟ್ಟಿ ಇರುವುರಿಂದ ಯಾರ ಮಾತಿಗೂ ಕಿವಿಗೊಡದೆ ನೀವು ನಿರ್ಧರಿಸಿದ ಕೆಲಸದಲ್ಲಿ ಮುಂದುವರಿಯುತ್ತೀರಿ. ಅಪರೂಪದ ಹಳೆಯ ಮೌಲ್ಯಯುತವಾದ ಪಿತ್ರಾರ್ಜಿತ ವಸ್ತುವೊಂದು ಸಿಗಲಿದೆ. ಒಂಟಿಯಾಗಿ ಬಾಳಬೇಕೆನ್ನುವ ಮನಸ್ಸಿದ್ದರೂ ನಿಮಗೆ ಅದು ಅಸಾಧ್ಯವಾಗಿರುತ್ತದೆ.
-ಲೋಹಿತಶರ್ಮಾ, ಇಡುವಾಣಿ