ರಾಶಿ
ಕೈ ಉಜ್ಜಿಕೊಂಡು ಬೆಳಗ್ಗೆ ಏಳುವಾಗಲಿಂದ ಮತ್ತೆ ಹಾಸಿಗೆಗೆ ಹೋಗುವವರೆಗೂ ದಿನ ಚನ್ನಾಗಿರಬೇಕೆಂದರೆ ನಮ್ಮ ರಾಶಿ ಭವಿಷ್ಯ (Horoscope Today) ಚೆನ್ನಾಗಿರಬೇಕು. ಚಂದ್ರ, ಸೂರ್ಯನ ಸಂಚಾರ ಚನ್ನಾಗಿರಬೇಕು. ಹಾಗಾದ್ರೆ 2023 ಜನವರಿ 14 ಶನಿವಾರ ನಿಮ್ಮ ರಾಶಿ ಫಲ (Nitya Bhavishya) ಹೇಗಿದೆ? ಇಂದು ಯಾವ ರಾಶಿಯವರಿಗೆ ಶುಭ? ನಿಮ್ಮ ರಾಶಿಗೆ ಏನು ಫಲವಿದೆ? ಎಂಬ ನಿಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರ ತಿಳಿದುಕೊಳ್ಳಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1945, ಶುಭಕೃತ್ ಸಂವತ್ಸರ, ದಕ್ಷಿಣಾಯನ, ಹೇಮಂತ ಋತು, ಧನುರ್ಮಾಸ, ಮಹಾನಕ್ಷತ್ರ: ಉತ್ತರಾಷಾಢ, ಮಾಸ: ಪೌಷ, ಪಕ್ಷ: ಕೃಷ್ಣ, ಶನಿವಾರ, ತಿಥಿ: ಸಪ್ತಮೀ, ನಿತ್ಯನಕ್ಷತ್ರ: ಹಸ್ತಾ, ಯೋಗ: ಅತಿಗಂಡ, ಕರಣ: ಬವ, ರಾಹು ಕಾಲ ಬೆಳಗ್ಗೆ 09 ಗಂಟೆ 52 ನಿಮಿಷದಿಂದ ಬೆಳಗ್ಗೆ 11 ಗಂಟೆ 17 ನಿಮಿಷದವರೆಗೆ, ಸೂರ್ಯೋದಯ: ಬೆಳಗ್ಗೆ 07 ಗಂಟೆ 02 ನಿಮಿಷಕ್ಕೆ, ಸೂರ್ಯಾಸ್ತ: ಸಂಜೆ 06 ಗಂಟೆ 21 ನಿಮಿಷಕ್ಕೆ.
ತಾ. 14-01-2023 ರ ಶುಕ್ರವಾರ ರಾಶಿ ಭವಿಷ್ಯ ಹೀಗಿದೆ:
- ಮೇಷ: ಅಮೂಲ್ಯವಾದ ವಸ್ತುಗಳನ್ನು ಖರೀದಿಸುವ ಖುಷಿಯಲ್ಲಿ ಇರುವಿರಿ. ನಿಮ್ಮ ಉದ್ಯಮವು ನಿಮಗೆ ಲಾಭವನ್ನು ತರಲಿದೆ. ಹಲವು ದಿನಗಳಿಂದ ಅನಾರೋಗ್ಯದ ಕಾರಣ ಕಿರಿಕಿರಿಯನ್ನು ಅನುಭವಿಸುತ್ತಿರುವ ನೀವು ಇಂದು ಆರೋಗ್ಯದತ್ತ ಮುಖಮಾಡುವಿರಿ. ನಿಮ್ಮ ಕಾರ್ಯದಕ್ಷತೆಯನ್ನು ಕಂಡು ಉದ್ಯೋಗದಲ್ಲಿ ಉನ್ನತಸ್ಥಾನಕ್ಕೆ ಏರುವ ಸಾಧ್ಯತೆ ಇದೆ. ಕುಟುಂಬದಿಂದ ನಿರೀಕ್ಷಿಸುವ ವಸ್ತುವು ನಿಮಗೆ ಸಿಗಲಿದೆ. ಪ್ರೇಮನಿವೇದನೆಯನ್ನು ಮಾಡಿ ನಿಮ್ಮೊಳಗೆ ಇರುವ ಗೊಂದಲವನ್ನು ಪರಿಹರಿಸಿಕೊಳ್ಳುವಿರಿ.
- ವೃಷಭ: ನಿಮಗೆ ನೀವು ಮಾಡುವ ಕಾರ್ಯಗಳು ನಿಧಾನಗತಿಯಲ್ಲಿ ಸಾಗುತ್ತಿರುವಂತೆ ಕಾಣಬಹುದು. ಕೃಷಿಯನ್ನು ಅವಲಂಬಿಸಿ ಬದುಕುವವರಿಗೆ ಅಲ್ಪ ಲಾಭವೂ ಸಿಗಲಿದೆ. ವಿದ್ಯಾರ್ಥಿಗಳು ಹತ್ತಾರು ಗೊಂದಲಗಳನ್ನು ಇಟ್ಟುಕೊಳ್ಳಲಿದ್ದಾರೆ. ಎಂದೂ ಇರುವ ಶತ್ರುಗಳು ಇಂದು ನಿಮಗೆ ಏನನ್ನಾದರೂ ಮಾಡಬೇಕು ಎನ್ನುವ ಹೊಂಚನ್ನು ಹಾಕಬಹುದು. ಇನ್ನೊಬ್ಬರ ಸಹಾಯವನ್ನು ಪಡೆದು ಅಪಾಯದಿಂದ ಪಾರಾಗುವಿರಿ. ಅವಿಶ್ರಾಂತ ಕೆಲಸವು ನಿಮಗೆ ಆಯಾಸವನ್ನು ನೀಡುವುದು. ಧಾರ್ಮಿಕವಾಗಿ ಹಣವನ್ನು ವ್ಯಯಿಸಲಿದ್ದೀರಿ.
- ಮಿಥುನ: ನಿಮ್ಮ ಆಲೋಚನಗಳಿಗೆ ಅದ್ಭುತವಾದ ಪ್ರತಿಕ್ರಿಯೆ ಸಿಗಲಿದೆ. ದೇಶಗಳಿಗೆ ವಸ್ತುಗಳನ್ನು ಕಳುಹಿಸುವ ಉದ್ಯೋಗವನ್ನು ಮಾಡುತ್ತಿದ್ದರೆ ಅವರಿಗೆ ಲಾಭವಿದೆ. ಕಾರ್ಯದ ನಿಮಿತ್ತ ಅನ್ಯಸ್ಥಳಕ್ಕೆ ಹೋಗಬೇಕಾಗಿ ಬರಬಹುದು. ಅಲ್ಲಿಯೇ ಇಂದಿನ ನಿಮ್ಮ ವಾಸವಾಗಲಿದೆ. ಊಟ, ನಿದ್ರೆ, ಆರೋಗ್ಯದ ಬಗ್ಗೆ ನಿಮ್ಮ ಹೆಚ್ಚಿನ ಗಮನ ಅಗತ್ಯ. ದಾಂಪತ್ಯದ ಉತ್ತಮ ಹಾಗೂ ಖುಷಿಯ ದಿನವನ್ನು ಅನುಭವಿಸುವಿರಿ. ಅಪರಿತರು ನಿಮಗೆ ಸಹಾಯವನ್ನು ಮಾಡಲಿದ್ದಾರೆ.
- ಕರ್ಕ: ಉದ್ಯಮದಲ್ಲಿ ಉತ್ತಮ ಲಾಭವಾಗುವ ಸಾಧ್ಯತೆ ಇದೆ. ನೀವು ಹಾಕಿಕೊಂಡ ಯೋಜನೆಗಳಿಗೆ ಕುಟುಂಬದ ಸಹಾಯವು ಲಭ್ಯವಾಗಲಿದೆ. ಭೂಮಿಯ ಕ್ರಯ ಮತ್ತು ವಿಕ್ರಯಗಳ ವಿಷಯದಲ್ಲಿ ಲಾಭವನ್ನು ಕಾಣಬಹುದಾಗಿದೆ. ಸಹೋದರರ ನಡುವೆ ಭಿನ್ನಾಭಿಪ್ರಾಯಗಳು ನಡೆಯಬಹುದು. ಕಣ್ಣಿಗೆ ಸಂಬಂಧಿಸಿದ ರೋಗಗಳು ಬರಬಹುದು. ನೀವಿಂದು ಅನ್ಯಥಾ ಶರಣಂ ನಾಸ್ತಿ ಎಂದು ದೇವರ ಮೊರೆ ಹೋಗುವಿರಿ.
- ಸಿಂಹ: ಇಂದು ಮಾಡಬೇಕೆಂದು ಯೋಜಿಸಿಕೊಂಡಿರುವ ಕೆಲಸ ಪಟ್ಟಿಯು ಮುಗಿಯದಂತೆ ಕಾಣದು. ನಿಧಾನಗತಿಯ ಕೆಲಸವು ನಿಮ್ಮ ಮನಃಸ್ಥಿತಿಗೆ ಹೊಂದದಿರಬಹುದು. ಕಾರಣಾಂತರಗಳಿಂದ ಖರ್ಚು ಹೆಚ್ಚಾಗಬಹುದು. ಹಿತಶತ್ರುಗಳು ಕತ್ತಿಯನ್ನು ಮಸೆಯುತ್ತಲೇ ಇದ್ದಾರು. ಕುಟುಂಬದಲ್ಲಿ ಮಾತಿನ ಚಕಮಕಿ ನಡೆಯಬಹುದು. ಪತಿ-ಪತ್ನಿಯರ ನಡುವೆ ವಿರಸಭಾವವು ಏಳಬಹುದು. ಮನಸ್ಸು ಹೇಳಿದಂತೆ ಕೇಳದೇ ಸಮಾಧಾನದಿಂದ ಇರಿ. ಮನಸ್ತರಂಗ ನಿಸ್ತರಂಗವಾಗುವುದು.
- ಕನ್ಯಾ: ನಿಮಗೆ ನಿಮ್ಮವರು ಸಹಾಯ ಮಾಡುವವರಿದ್ದಾರೆ. ಕಚೇರಿಯ ಕಾರ್ಯಕ್ಕೆಂದು ದೂರದ ಊರಿಗೆ ಹೋಗುವವರಿದ್ದೀರಿ. ವಾಹನದಿಂದ ತೊಂದರೆ ಇರಲಿದೆ. ಸ್ನೇಹಿತರು ಮಾಡಿದ ಕೆಟ್ಟ ಕೆಲಸದಿಂದ ನಿಮಗೆ ಕಂಟಕವು ಬರಬಹುದು. ಲೇವಾದೇವಿಯ ವ್ಯವಹಾರದಲ್ಲಿ ತೊಡಗಿದ್ದರೆ ನಷ್ಟವನ್ನು ಅನುಭವಿಸುವಿರಿ. ವಿದ್ಯಾಭ್ಯಾಸಕ್ಕೆಂದು ಪರ ಊರಿಗೆ ಹೋಗುವವರಿದ್ದೀರಿ.
- ತುಲಾ: ಆಲಸ್ಯದಿಂದ ಇಂದು ನಿಮ್ಮ ದಿನವಿರಲಿದೆ. ನಿಮ್ಮ ಸಹಾಯಕರೇ ನಿಮಗೆ ತೊಂದರೆ ಕೊಟ್ಟಾರು. ಕಲಹವನ್ನು ಮಾಡಿಕೊಳ್ಳಲಿದ್ದೀರಿ. ಚೆನ್ನಾಗಿ ಮಾತನಾಡುತ್ತೇನೆಂದು ಏನನ್ನಾದರೂ ಹೇಳಿ ಬೇರೆಯವರಿಗೆ ನೋವನ್ನು ಕೊಡಬೇಡಿ. ಬಾಯ್ಚಪಲಕ್ಕೆ ಬೇರೆಯವರು ನೋವುಣ್ಣುವರು. ಸದಾ ನಗುಮುಖದಿಂದ ಇರಿ. ವ್ಯಾಪರ ಸುಗಮವಾಗಿ ಸಾಗುವುದು. ನಿಶ್ಚಿಂತೆಯಿಂದ ನಿದ್ರಿಸಬಹುದು. ನಾಳೆಯದನ್ನು ಹಂಬಲಿಸಿ ಇಂದು ಹಾಗೂ ನಾಳೆಯನ್ನು ಹಾಳು ಮಾಡಿಕೊಳ್ಳಬೇಡಿ. ಶ್ರಮದಷ್ಟು ಫಲ ಸಿಗುತ್ತದೆ.
- ವೃಶ್ಚಿಕ: ಅಪವಾದಗಳನ್ನು ಕೇಳುವ ಸ್ಥಿತಿ ಬರಬಹುದು. ಜಾಗರೂಕರಾಗಿ ಇರಿ. ಸಾಲವನ್ನು ಕೊಟ್ಟವರು ಇಂದು ಪೀಡಿಸಲಿದ್ದಾರೆ. ವ್ಯವಸ್ಥಾಪಕರಾಗಿದ್ದರೆ ನಿಮ್ಮ ಕೆಲಸವು ಮೇಲಧಿಕಾರಿಗಳಿಗೆ ಸಂತಸ ನೀಡುವುದು. ಹೊಸವಾಹನ ಖರೀದಿಗೆ ಮನಸ್ಸು ಮಾಡಿದರೆ ಸ್ವಲ್ಪ ಮುಂದೂಡಿ. ಸಮಯ ನೋಡಿ ಪ್ರೇಮವಿವಾಹದ ಪ್ರಸ್ತಾಪ ಮಾಡಿ. ಮನೆಯಲ್ಲಿ ಒಪ್ಪುತ್ತಾರೆ. ಇನ್ನೊಬ್ಬರಿಗೆ ತೊಂದರೆಯನ್ನು ಕೊಡುವ ವಿಧಾನವನ್ನು ಚಿಂತಿಸುವಿರಿ.
- ಧನು: ಮನೆಯಲ್ಲಿ ಕಲಹವೇರ್ಪಡಬಹುದು. ಸಮಾಜದಲ್ಲಿ ನಿಮ್ಮನ್ನು ಗುರುತಿಸಿ ಗೌರವವನ್ನು ಕೊಡುವರು. ಆಟ, ಓಟ, ಓದಿನಲ್ಲಿ ಆಸಕ್ತಿ ಇರಲಿದೆ. ಮಕ್ಕಳು ನಿಮ್ಮನ್ನು ಬಹಳ ಹಚ್ಚಿಕೊಳ್ಳುತ್ತಾರೆ. ಆತುರದ ನಿರ್ಧಾರಕ್ಕೆ ಹೋಗಬೇಡಿ. ಸಮಯಕ್ಕಾಗಿ ಕಾಯಿರಿ. ಎಲ್ಲವನ್ನೂ ಕಾಲವೇ ತಿಳಿಸುತ್ತದೆ. ಅದಕ್ಕೋಸ್ಕರ ನಿಮ್ಮ ಶ್ರಮವನ್ನು ವ್ಯರ್ಥಮಾಡಿಕೊಳ್ಳಬೇಡಿ. ಮಾಡುತ್ತಿರುವ ವ್ಯಾಪಾರದಲ್ಲಿ ಅಭಿವೃದ್ಧಿಯಾಗಲಿದೆ. ಓದಿನೊಂದಿಗೆ ಸ್ವಲ್ಪ ಸಮಯ ಕಳೆಯಿರಿ. ವಿದ್ಯಾರ್ಥಿಗಳು ಉತ್ತಮ ಫಲಿತಾಂಶದ ನಿರೀಕ್ಷೆಯಲ್ಲಿ ಇರಿ. ಹೊಸ ವಸ್ತ್ರಗಳನ್ನು ಖರೀದಿಸುವಿರಿ.
- ಮಕರ: ಭೂಮಿಯ ವ್ಯವಹಾರವನ್ನು ನೋಡಿಕೊಳ್ಳುವವರಿಗೆ ಅಧಿಕ ಲಾಭವಿದೆ. ಪುರಾತನ ದೇವಾಲಯದ ದರ್ಶನವನ್ನು ಮಾಡಲಿದ್ದೀರಿ. ನಿಮ್ಮಲ್ಲಿರವ ದುರ್ಗುಣಗಳು ನಿಮಗೆ ಅರ್ಥವಾಗಿ ಅವುಗಳನ್ನು ಬಿಡುವತ್ತ ಯೋಜನೆಗಳನ್ನು ರೂಪಿಸಿಕೊಳ್ಳುವಿರಿ. ಸಾಲ ಕೊಟ್ಟವರು ಕಟುವಾಗಿ ಮಾತನಾಡಬಹುದು. ಸಮಾಧಾನದಿಂದ ಅವರಿಗೆ ಉತ್ತರಕೊಟ್ಟು ಕೆಲವು ದಿನಗಳ ಅನಂತರ ಪಾವತಿಸುವೆನು ಎಂದು ಹೇಳಿ. ಆಮೆಯ ಗತಿ ಸಾಗುವ ಬದುಕನ್ನು ಕಂಡು ನಿರಾಶರಾಗುವುದು ಬೇಡ. ಮಂದಗತಿ, ಶೀಘ್ರಗತಿ ಬದುಕಿನಲ್ಲಿ ಸಾಮಾನ್ಯವೆಂದು ತಿಳಿಯಿರಿ.
- ಕುಂಭ: ಎಂದೋ ಆಲೋಚಿಸಿದ ಕೆಲಸಕ್ಕೆ ಇಂದು ಆರಂಭವು ಸಿಕ್ಕಿದೆ. ಸಾಲಗಾರರ ಕಾಟದಿಂದ ನೀವು ಮುಕ್ತರಾಗುವಿರಿ. ಅನಿರೀಕ್ಷಿತ ಧನಲಾಭವು ನಿಮ್ಮ ನಿಶ್ಚಿಂತೆಗೆ ಕಾರಣವಾಗಲಿದೆ. ದೀರ್ಘಪ್ರಯಾಣವನ್ನು ಇಚ್ಛಿಸುವ ನೀವು ಆರೋಗ್ಯದ ಮೇಲೂ ಗಮನವಿರಿಕೊಳ್ಳಿ. ಯಾರದ್ದೋ ಮಾತನ್ನು ಕೇಳಿ ಕೆಲಸಗಳನ್ನು ಮಾಡಬೇಡಿ. ನಿಮ್ಮ ಮನಸ್ಸಿಗೆ ಅದು ಒಪ್ಪಿಗೆಯಾಗಲಿ. ಹಿರಿಯರಿಂದ ಸಂಪತ್ತು ಸಿಗಬಹುದು ಅಥವಾ ಉತ್ತಮಮಾರ್ಗದಿಂದ ಬರುವ ಸಂಪತ್ತು ನಿಮ್ಮನ್ನು ಖುಷಿಯಾಗಿಡಲಿದೆ. ಹೊಸದಾಗಿ ವಾಹನವನ್ನು ಚಲಾಯಿಸುತ್ತಿದ್ದರೆ ಎಚ್ಚರವಿರಲಿ.
- ಮೀನ: ಶುಭಸಮಾರಂಭಗಳಿಗೆ ಭೇಟಿಯನ್ನು ಕೊಡಲಿದ್ದೀರಿ. ಸ್ತ್ರೀಯರಿಗೆ ಶುಭವಾರ್ತೆಯೊಂದು ಬರಲಿದೆ. ಅಂಜಿಕೆಯಿಲ್ಲದೇ ನೀವು ಮಾಡುವ ಕಾರ್ಯದಲ್ಲಿ ಮುನ್ನುಗ್ಗಿ. ಆರೋಗ್ಯವಾಗಿದ್ದರೆ ಎಂತಹ ಕಾರ್ಯವನ್ನೂ ಉತ್ತಮ ಆರೋಗ್ಯವಿದ್ದರೆ ಏನಾದರೂ ಸಾಧಿಸಬಹುದು. ಸಾಮಾಜಿಕವಾಗಿ ಮನ್ನಣೆ ಸಿಗುವ ದಿನ. ಶುಭಕಾರ್ಯಗಳಿಗೆ ಆಹ್ವಾನ ಬರಲಿದೆ. ಯಾರಾದರೂ ಹೊಗಳಿದರೆ ಹಿಗ್ಗಬೇಡಿ. ಶಿಕ್ಷಕರಾಗಿದ್ದರೆ ನಿಮಗೆ ನಿಮ್ಮ ವಿದ್ಯಾರ್ಥಿಗಳಿಂದ ಉಡುಗೊರೆ ಸಿಗಬಹುದು. -ಲೋಹಿತಶರ್ಮಾ ಇಡುವಾಣಿ