Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಜನವರಿ 14ರ ದಿನಭವಿಷ್ಯ
ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 14ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಜನವರಿ 14ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.
ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)
ಕ್ರೀಡಾಪಟುಗಳಿಗೆ ಬದಲಾವಣೆಯನ್ನು ನಿರೀಕ್ಷೆ ಮಾಡಬಹುದು. ಪ್ರಾಯೋಜಕರಿಗಾಗಿ ಹುಡುಕುತ್ತಿರುವವರಿಗೆ ಈ ದಿನ ಶುಭ ಸುದ್ದಿ ಇದೆ. ಇನ್ನು ಧರಿಸುವ ದಿರಿಸಿನ ಬಗ್ಗೆ ಗಮನ ಇರಲಿ. ಸ್ವಾದಿಷ್ಟವಾದ ಆಹಾರವನ್ನು ಸೇವಿಸುವ ಯೋಗ ಇದೆ. ಸಣ್ಣ ಸಣ್ಣ ಸಂಗತಿಗಳನ್ನು ಗುರುತಿಸುವ ನಿಮ್ಮ ಸಾಮರ್ಥ್ಯಕ್ಕೆ ತಕ್ಕ ಪ್ರತಿಫಲ ಸಿಗಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)
ನಿಮ್ಮ ಪ್ರೀತಿಪಾತ್ರರ ಜತೆಗೆ ಸಮಯ ಕಳೆಯಲಿದ್ದೀರಿ. ಅಥವಾ ಅವರ ಜತೆಗೆ ಮಾತುಕತೆ ನಡೆಸಲಿದ್ದೀರಿ. ಹಣಕಾಸಿನ ವಿಚಾರದಲ್ಲಿ ಗುರಿಯನ್ನು ತಲುಪುವುದಕ್ಕೆ ಸರಿಯಾದ ಯೋಜನೆಯನ್ನು ರೂಪಿಸಿಕೊಳ್ಳಲಿದ್ದೀರಿ. ಈಗಾಗಲೇ ಮನೆಯನ್ನು ಕಟ್ಟಲು ಶುರು ಮಾಡಿರುವವರಿಗೆ ಸ್ವಲ್ಪ ಮಟ್ಟಿಗೆ ಹಣಕಾಸಿಗೆ ಸಮಸ್ಯೆ ಆಗಬಹುದು.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)
ಎಲ್ಲರೂ ಒಪ್ಪುವಂಥ ನಿರ್ಧಾರವನ್ನೇ ತೆಗೆದುಕೊಳ್ಳಬೇಕು ಅಂದುಕೊಳ್ಳದಿರಿ. ಇದರಿಂದ ನೀವು ಮಾನಸಿಕವಾಗಿ ಒತ್ತಡಕ್ಕೆ ಗುರಿ ಆಗುತ್ತೀರಿ. ವಿದೇಶಗಳಿಗೆ ಪ್ರಯಾಣ ಮಾಡಬೇಕು ಎಂದಿರುವವರಿಗೆ ಕಾಗದ- ಪತ್ರ ವಿಚಾರಗಳು ಅಡೆತಡೆಯಾಗಿ ಪರಿಣಮಿಸಬಹುದು. ಹಿರಿಯ ಅಧಿಕಾರಿಗಳ ನೆರವು ತೆಗೆದುಕೊಳ್ಳುವ ಮೂಲಕ ಬಗೆಹರಿಸಿಕೊಳ್ಳುವ ಅವಕಾಶ ಇದೆ.
ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)
ಗುಣಕ್ಕೆ ಮತ್ಸರ ಬೇಡ, ನಿಮಗಿಂತ ತುಂಬ ಚೆನ್ನಾಗಿ ಕೆಲಸ ಮಾಡಬಲ್ಲ, ಅದ್ಭುತವಾಗಿ ಆಲೋಚಿಸಬಲ್ಲ ವ್ಯಕ್ತಿ ಎದುರಿಗಿದ್ದಲ್ಲಿ ಹೊಗಳಿಬಿಡಿ. ಅನಗತ್ಯವಾಗಿ ಚುಚ್ಚಿ ಮಾತನಾಡುವುದು, ಅವರ ಆತ್ಮವಿಶ್ವಾಸ ಕಡಿಮೆ ಮಾಡುವ ಕೆಲಸಕ್ಕೆ ಇಳಿಯಬೇಡಿ. ನಿಮ್ಮ ವ್ಯಕ್ತಿತ್ವ ತುಂಬ ಎತ್ತರಕ್ಕೆ ಸಾಗುತ್ತಿದೆ, ಅತ್ತ ಗಮನ ನೀಡಿದರೆ ಸಾಕು.
ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)
ನಿಮ್ಮ ಪ್ರಾಶಸ್ತ್ಯ ಕಡಿಮೆ ಆಗುತ್ತಿದೆಯೇನೋ ಎಂಬಂತೆ ಅನಿಸುತ್ತದೆ. ಅದು ಮನೆ ಇರಲಿ ಅಥವಾ ಹೊರಗಿರಲಿ. ಹೀಗೆ ಅನಿಸಿದ ತಕ್ಷಣ ಎಲ್ಲರ ಗಮನ ಸೆಳೆಯುವ ಸಲುವಾಗಿ ವಿಪರೀತದ ಕೆಲಸಗಳೇನೋ ಮಾಡುವುದಕ್ಕೆ ತೊಡಗಬೇಡಿ. ಈ ಸಮಯ ಕಳೆಯಲು ಬಿಡಿ. ನೀವು ಅನುಸರಿಸುವ ಧರ್ಮದ ಅಥವಾ ಮನಸಿಗೆ ನೆಮ್ಮದಿ- ಚೈತನ್ಯ ನೀಡುವಂಥ ಆಡಿಯೋಗಳನ್ನು ಕೇಳಿಸಿಕೊಳ್ಳಿ.
ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)
ನಿಮ್ಮ ಚರ್ಮದ ಆರೈಕೆ ಕಡೆಗೆ ಲಕ್ಷ್ಯ ಕೊಡಿ. ಹುಳು- ಹುಪ್ಪಟದಿಂದ ಕಡಿತ, ಅಥವಾ ಯಾವುದಾದರೂ ಕ್ರೀಮ್- ಲೋಷನ್‌ನಿಂದ ಅಲರ್ಜಿ ಇಂಥವುಗಳಿಂದ ಚರ್ಮ ಸಮಸ್ಯೆ ಆಗಬಹುದು. ವಿರಾಮ ಇದೆ ಅಂತಾದರೆ ಅಧ್ಯಾತ್ಮ ಚಿಂತನೆಯ ಕೆಲವು ಆಡಿಯೋ ಅಥವಾ ವಿಡಿಯೋಗಳನ್ನು ಕೇಳಿ- ನೋಡಿ. ಸುಬ್ರಹ್ಮಣ್ಯ ಅಥವಾ ಕುಮಾರಸ್ವಾಮಿ ಚಿತ್ರವನ್ನು ನಿಮ್ಮ ಫೋನ್‌ನ ಸ್ಕ್ರೀನ್‌ಸೇವರ್ ಅಥವಾ ಡಿಪಿ ಆಗಿ ಮಾಡಿಕೊಳ್ಳಿ.
ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)
ಈ ದಿನ ಪಾರ್ಟಿಗಳಲ್ಲಿ ಭಾಗೀ ಆಗುವುದಕ್ಕೆ ನಿಮ್ಮನ್ನು ಕರೆಯಲಿದ್ದಾರೆ. ಪರಿಚಯಗಳು, ಹೊಸ ಹೊಸ ಜನರ ಸಂಪರ್ಕ ನಿಮ್ಮ ಪಾಲಿಗೆ ಒದಗಿ ಬರಲಿದೆ. ವಿದೇಶಗಳಿಗೆ ಯಾವುದಾದರೂ ಟ್ರಾನ್ಸಿಷನ್‌ಗೆ ಹೋಗಬೇಕೆಂದಿರುವವರಿಗೆ ಒಂದಿಲ್ಲೊಂದು ನಿರಾಶೆ ಆಗುವಂಥ ವರ್ತಮಾನ ಬರಬಹುದು. ಆದರೆ ಇದು ತಾತ್ಕಾಲಿಕ ಗೊಂದಲ ಅಷ್ಟೇ ಆಗಿರುತ್ತದೆ. ಯಾರ ಮೇಲೂ ಸಿಟ್ಟಾಗಬೇಡಿ.
ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)
ಕುಟುಂಬ ಸದಸ್ಯರ ಜತೆಗೆ ಶಾಪಿಂಗ್ ಮಾಡುವ ಯೋಗ ಈ ದಿನ ನಿಮ್ಮ ಪಾಲಿಗೆ ಇದೆ. ಪರ್ಸ್- ವ್ಯಾಲೆಟ್- ಕ್ರೆಡಿಟ್ ಕಾರ್ಡ್ ಹಾಗೂ ವಾಹನದ ಕೀಗಳನ್ನು ನೆನಪಿನಲ್ಲಿರುವಂಥ ಕಡೆ ಇಟ್ಟುಕೊಳ್ಳಿ. ಭಾವನಾತ್ಮಕವಾಗಿ ಯಾವುದೇ ನಿರ್ಧಾರ ತೆಗೆದುಕೊಳ್ಳುವುದು ಬೇಡ. ಏನಾದರೂ ಆಫರ್‌ಗಳು ಬಂದಲ್ಲಿ ಒಂದೆರಡು ದಿನ ಸಮಯ ಕೇಳಿ.
ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)
ನೀವು ಹೇಳಿದಂತೆಯೇ ಆಯಿತು, ನಾವು ನಿಮ್ಮ ಮಾತು ಕೇಳಬೇಕಿತ್ತು ಎಂದು ನಿಮ್ಮಿಂದ ದೂರವಾದ ಸ್ನೇಹಿತರು ಅಥವಾ ನಿಮ್ಮ ಜತೆ ಕೆಲಸ ಮಾಡುತ್ತಿದ್ದವರು ಮತ್ತೆ ಬರಬಹುದು. ಈ ಸಲ ತುಂಬ ಕಠಿಣವಾಗಿ ವರ್ತಿಸಬೇಡಿ, ಹಂಗಿಸಬೇಡಿ. ಅಂದಹಾಗೆ ಇದರಲ್ಲಿ ನಿಮ್ಮ ಸಂಬಂಧಿಕರು, ಕುಟುಂಬದವರು ಸಹ ಇರಬಹುದು. ಇನ್ನು ಈ ದಿನ ರುಚಿಕಟ್ಟಾದ ಭೋಜನ ಸವಿಯುವ ಯೋಗ ನಿಮ್ಮ ಪಾಲಿಗಿದೆ.
ಲೇಖನ- ಎನ್.ಕೆ.ಸ್ವಾತಿ