AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕನಸಲ್ಲಿ ಕಾಡಿದ 3 ಮಹಿಳೆಯರು; ಭಯದಿಂದ ಪ್ರಾಣವನ್ನೇ ಕಳೆದುಕೊಂಡ ಯುವಕ

ಕನಸಿನಲ್ಲಿ ಮೂವರು ಮಹಿಳೆಯರು ಬಂದು ಕಾಡಿದ್ದರಿಂದ ಭಯಭೀತರಾಗಿದ್ದ ವ್ಯಕ್ತಿಯೊಬ್ಬರನ್ನು ಮಾಂತ್ರಿಕನ ಬಳಿಗೆ ಕರೆದೊಯ್ಯಲಾಗಿತ್ತು. ನಂತರ ಅನಿರೀಕ್ಷಿತ ಘಟನೆಯೊಂದು ನಡೆಯಿತು. ರಾತ್ರಿ ನಿದ್ರೆಯಲ್ಲಿ ಬಿದ್ದ ಆ ಕನಸು ಅವರ ಜೀವವನ್ನೇ ಬಲಿ ತೆಗೆದುಕೊಂಡಿತು. ಅಷ್ಟಕ್ಕೂ ಅಲ್ಲಿ ಆಗಿದ್ದೇನು? ಅವರು ಸಾಯಲು ಕಾರಣವೇನು? ಎಂಬಿತ್ಯಾದಿ ಮಾಹಿತಿ ಇಲ್ಲಿದೆ ಓದಿ...

ಕನಸಲ್ಲಿ ಕಾಡಿದ 3 ಮಹಿಳೆಯರು; ಭಯದಿಂದ ಪ್ರಾಣವನ್ನೇ ಕಳೆದುಕೊಂಡ ಯುವಕ
Depression
ಸುಷ್ಮಾ ಚಕ್ರೆ
|

Updated on: Jan 13, 2026 | 9:26 PM

Share

ನವದೆಹಲಿ, ಜನವರಿ 13: ವಿಜ್ಞಾನವು ಎಷ್ಟೇ ಪ್ರಗತಿ ಸಾಧಿಸುತ್ತಿದ್ದರೂ ಮುಗ್ಧ ಜನರು ಮಾಟ- ಮಂತ್ರಗಳೆಂಬ ಮೂಢನಂಬಿಕೆಗಳಿಗೆ ಬಲಿಯಾಗುತ್ತಿದ್ದಾರೆ. ದೀರ್ಘಕಾಲ ನಿದ್ರಿಸಲು ಸಾಧ್ಯವಾಗದ ಮತ್ತು ಕನಸಿನಲ್ಲಿ ಬರುವ ದುಃಸ್ವಪ್ನಗಳ ಭಯವನ್ನು ಸಹಿಸಲಾಗದ ಯುವಕ ತನ್ನ ಜೀವನವನ್ನು ಮಾನಸಿಕ ಯಾತನೆಯಿಂದ (Depression) ಕೊನೆಗೊಳಿಸಿದ್ದಾರೆ. ಮೂವರು ಮಹಿಳೆಯರ ರೂಪದಲ್ಲಿ ಅವರನ್ನು ಕಾಡುತ್ತಿದ್ದ ಆ ದುಃಸ್ವಪ್ನಗಳು ಅವರನ್ನು ಸಾವಿನ ಮಡಿಲಿಗೆ ತಳ್ಳಿದ್ದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ.

ಆಧುನಿಕ ಯುಗದಲ್ಲೂ ಮೂಢನಂಬಿಕೆಗಳು ಅಮಾಯಕರ ಜೀವಗಳನ್ನು ಬಲಿ ಪಡೆಯುತ್ತಿವೆ. ಮಧ್ಯಪ್ರದೇಶದ ಖಾಂಡ್ವಾ ಜಿಲ್ಲೆಯಲ್ಲಿ 25 ವರ್ಷದ ಯುವಕನಿಗೆ ದುಃಸ್ವಪ್ನಗಳು ಬೀಳುತ್ತಿತ್ತು. ಭಯದಿಂದ ಸರಿಯಾದ ಚಿಕಿತ್ಸೆ ಸಿಗದೆ ಅವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸಂಚಲನ ಮೂಡಿಸಿದೆ. ಮೃತರನ್ನು ರಾಮದಾಸ್ ಎಂದು ಗುರುತಿಸಲಾಗಿದೆ. ರಾಮದಾಸ್ ಕೆಲವು ಸಮಯದಿಂದ ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು.

ಇದನ್ನೂ ಓದಿ: ಬೇಲಿಯೇ ಎದ್ದು ಹೊಲ ಮೇಯ್ದಂತೆ; ಮಹಿಳೆ ಮೇಲೆ ಪೊಲೀಸ್ ಅಧಿಕಾರಿಯಿಂದಲೇ ಲೈಂಗಿಕ ದೌರ್ಜನ್ಯ

ಅವರು ತಮ್ಮ ಕನಸಿನಲ್ಲಿ ನಿರಂತರವಾಗಿ ಮೂವರು ಮಹಿಳೆಯರನ್ನು ನೋಡುತ್ತಿದ್ದರು. ಆ ಮೂವರು ಕನಸಿನಲ್ಲಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಭ್ರಮೆಯನ್ನು ಹೊಂದಿದ್ದರು. ಆ ದುಃಸ್ವಪ್ನಗಳಿಂದಾಗಿ ಅವರು ತೀವ್ರ ಪ್ಯಾನಿಕ್ ಅಟ್ಯಾಕ್‌ಗಳಿಗೆ ಒಳಗಾಗಿದ್ದರು ಮತ್ತು ಮಾನಸಿಕವಾಗಿ ಖಿನ್ನತೆಗೆ ಒಳಗಾದರು.

ರಾಮದಾಸ್ ಅವರ ಸ್ಥಿತಿಯನ್ನು ನೋಡಿದ ಕುಟುಂಬದ ಸದಸ್ಯರಿಗೆ ಇದು ಮಾನಸಿಕ ಸಮಸ್ಯೆ ಎಂದು ಗುರುತಿಸಲು ಸಾಧ್ಯವಾಗಲಿಲ್ಲ. ತಮ್ಮ ಮಗನ ಮೇಲೆ ಯಾರೋ ಮಾಟ-ಮಂತ್ರ ಮಾಡಿದ್ದಾರೆ ಎಂದು ಅವರು ಅನುಮಾನಿಸಿದರು. ರಾಮದಾಸ್ ಅವರ ಸಹೋದರಿ ವಾಸಿಸುತ್ತಿದ್ದ ಅಂಬಾಪತ್ ಹಳ್ಳಿಯಲ್ಲಿರುವ ಮಾಂತ್ರಿಕನ ಬಳಿಗೆ ಅವರನ್ನು ಕರೆದೊಯ್ದರು. ಆ ಮಾಂತ್ರಿಕ ರಾಮದಾಸ್ ಅವರಿಗೆ ಮಾಟಮಂತ್ರ ಮಾಡಿದರು. ಆರಂಭದಲ್ಲಿ, ರಾಮದಾಸ್ 3 ತಿಂಗಳ ಕಾಲ ಚೆನ್ನಾಗಿದ್ದಂತೆ ತೋರುತ್ತಿತ್ತು. ಆದರೆ, ದುಃಸ್ವಪ್ನಗಳು ಮತ್ತೆ ಪ್ರಾರಂಭವಾದವು.

ಇದನ್ನೂ ಓದಿ: Crime News: ತಾಯಿ, ಹೆಂಡತಿಯನ್ನು ಕೊಂದು ಮಾಂಸ ಬಗೆದು ತಿಂದ ಕಿರಾತಕ!

ಮತ್ತೆ 3 ಮಹಿಳೆಯರು ತನಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಭಯದಿಂದ ರಾಮದಾಸ್ ತೀವ್ರವಾಗಿ ವಿಚಲಿತರಾಗಿದ್ದರು. ಈ ಸಮಸ್ಯೆಯಿಂದ ಹೊರಬರಲು ಸಾಧ್ಯವಿಲ್ಲ ಎಂದು ಭಾವಿಸಿ, ಕಳೆದ ಗುರುವಾರ ರಾತ್ರಿ ಮನೆಯ ಬಳಿಯ ಕಾಡಿಗೆ ಹೋಗಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅವರಿಗೆ ಸರಿಯಾದ ಸಮಯಕ್ಕೆ ಮನಶಾಸ್ತ್ರಜ್ಞರ ಬಳಿ ಚಿಕಿತ್ಸೆ ಕೊಡಿಸಿದ್ದರೆ ಅವರು ಬದುಕುಳಿಯುವ ಸಾಧ್ಯತೆ ಇರುತ್ತಿತ್ತು. ಆದರೆ, ಮಾನಸಿಕ ಆರೋಗ್ಯವನ್ನು ಬಹಳ ನಿರ್ಲಕ್ಷ್ಯ ಮಾಡುತ್ತಿರುವ ಈಗಿನ ಕಾಲದಲ್ಲಿ ಈ ರೀತಿಯ ಆತ್ಮಹತ್ಯೆಯ ಘಟನೆಗಳು ಹೆಚ್ಚುತ್ತಲೇ ಇವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ
ಬಿಗ್​​ಬಾಸ್ ಕನ್ನಡ: ಗಿಲ್ಲಿ ಪರವಾಗಿ ಮತ ಕೇಳಿದ ಮಳವಳ್ಳಿ ಶಾಸಕ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಚಿಕ್ಕಮಗಳೂರಲ್ಲಿ ವರುಣನ ಅಬ್ಬರ: ಅಕಾಲಿಕ ಮಳೆಗೆ ಕೊಚ್ಚಿಹೋದ ಕಾಫಿ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು