AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Crime News: ತಾಯಿ, ಹೆಂಡತಿಯನ್ನು ಕೊಂದು ಮಾಂಸ ಬಗೆದು ತಿಂದ ಕಿರಾತಕ!

ಉತ್ತರ ಪ್ರದೇಶದ ಖುಷಿ ನಗರದ ಹಳ್ಳಿಯೊಂದು ನಿನ್ನೆ ಬೆಳಿಗ್ಗೆ ಊಹಿಸಲಾಗದ ಭಯಾನಕ ಘಟನೆಯೊಂದು ನಡೆದಿದೆ. ಕೌಟುಂಬಿಕ ಕಲಹವು ಅಪರಾಧವಾಗಿ ಮಾರ್ಪಟ್ಟು ಎಲ್ಲರನ್ನೂ ಬೆಚ್ಚಿಬೀಳಿಸಿದೆ. ಖುಷಿ ನಗರದಲ್ಲಿ ತಾಯಿ ಮತ್ತು ಹೆಂಡತಿಯನ್ನು ಗ್ರಾಮಸ್ಥರ ಮುಂದೆಯೇ ಕೊಂದ ವ್ಯಕ್ತಿಯೊಬ್ಬ ಮೃತದೇಹದ ಮಾಂಸವನ್ನು ಬಗೆದು ತಿಂದಿದ್ದಾನೆ. ಈ ಘಟನೆ ಸುತ್ತಮುತ್ತಲಿನವರನ್ನು ಬೆಚ್ಚಿ ಬೀಳಿಸಿದೆ.

Crime News: ತಾಯಿ, ಹೆಂಡತಿಯನ್ನು ಕೊಂದು ಮಾಂಸ ಬಗೆದು ತಿಂದ ಕಿರಾತಕ!
Crime News
ಸುಷ್ಮಾ ಚಕ್ರೆ
|

Updated on: Jan 13, 2026 | 8:15 PM

Share

ನವದೆಹಲಿ, ಜನವರಿ 13: ಉತ್ತರಪ್ರದೇಶದ ಖುಷಿ ನಗರದಲ್ಲಿ 30 ವರ್ಷದ ವ್ಯಕ್ತಿಯೊಬ್ಬ ತನ್ನ ತಾಯಿ ಮತ್ತು ಹೆಂಡತಿಯನ್ನು ಮನೆಯಲ್ಲೇ ಹೊಡೆದು ಕೊಂದು (Murder), ಅವರ ತಲೆಗಳನ್ನು ಇಟ್ಟಿಗೆಗಳಿಂದ ಒಡೆದು, ತಲೆಬುರುಡೆಯಿಂದ ಮಾಂಸವನ್ನು ಬಗೆದು ತಿಂದಿದ್ದಾನೆ. ಆತನ ಹಲ್ಲೆಯಿಂದ ಒದ್ದಾಡುತ್ತಿದ್ದ ಆ ಇಬ್ಬರು ಹೆಂಗಸರ ನರಳಾಟವನ್ನು ನೋಡಿ ಸುತ್ತಮುತ್ತಲಿನವರು ಆಘಾತದಿಂದ ಅಲ್ಲಿ ಬಂದು ಸೇರಿದ್ದರು. ಅವರ ಗೋಳಾಟವನ್ನು ನೋಡುತ್ತಿದ್ದ ಜನರೆದುರೇ ಆ ದೇಹಗಳಿಂದ ಮಾಂಸವನ್ನು ತೆಗೆದು ಆತ ತಿಂದಿದ್ದಾನೆ. ಇದನ್ನು ನೋಡಿ ನೆರೆಹೊರೆಯವರು ಭಯದಿಂದ ಮನೆಯೊಳಗೆ ಓಡಿದ್ದಾರೆ.

ಅಹಿರೌಲಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಪಾರ್ಸಾ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಗ್ರಾಮಸ್ಥರು ನೋಡುತ್ತಿದ್ದಾಗ 30 ವರ್ಷದ ವ್ಯಕ್ತಿ ತನ್ನ ತಾಯಿ ಮತ್ತು ಹೆಂಡತಿಯನ್ನು ಕೊಂದಿದ್ದಾನೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ತಿಳಿಸಿದೆ. ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ ನಂತರ ಆರೋಪಿಯಾದ ಸಿಕಂದರ್ ಗುಪ್ತಾ ಎಂಬಾತನನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಪ್ರಿಯಕರನೊಂದಿಗೆ ಓಡಿಹೋಗಿದ್ದಕ್ಕೆ ಪೊಲೀಸ್ ಠಾಣೆಯಲ್ಲೇ ಹೆಂಡತಿಯನ್ನು ಶೂಟ್ ಮಾಡಿ ಕೊಂದ ಗಂಡ!

ಕಿರುಚಾಟ ಕೇಳಿ ನೆರೆಹೊರೆಯವರು ಹೊರಗೆ ಓಡಿಬಂದರು. ಪಕ್ಕದ ಮನೆಯ ಕಡೆಗೆ ಧಾವಿಸಿದ ಅವರು ಅಲ್ಲಿನ ಪರಿಸ್ಥಿತಿ ನೋಡಿ ಶಾಕ್ ಆಗಿ ನಿಂತರು. ರಕ್ತ ಸೋರುತ್ತಿದ್ದರೂ ಬಿಡದೆ ಸಿಕಂದರ್ ತನ್ನ ತಾಯಿ ಹಾಗೂ ಅಮ್ಮನಿಗೆ ಹೊಡೆಯುತ್ತಿದ್ದ. ಅವರೆಲ್ಲರೂ ಬಿಡಿಸಲು ಮುಂದೆ ಹೋಗಲು ಹೆದರಿ ಅಲ್ಲೇ ನಿಂತಿದ್ದರು. ಆಗ ಆತ ಇಟ್ಟಿಗೆಯಿಂದ ಹೊಡೆದು ಅವರಿಬ್ಬರನ್ನೂ ಕೊಂದನು. ಇದರಿಂದ ಜನರು ಭಯದಿಂದ ಹಿಂದೆ ಸರಿದರು. ಪೊಲೀಸ್ ತಂಡಗಳು ಶೀಘ್ರದಲ್ಲೇ ಆಗಮಿಸಿ ಸಿಕಂದರ್ ಅವರನ್ನು ವಶಕ್ಕೆ ತೆಗೆದುಕೊಂಡವು.

ಇದನ್ನೂ ಓದಿ: ಕಾಡು ಹಂದಿಗಾಗಿ ಇಟ್ಟಿದ್ದ ದೇಶಿ ಬಾಂಬ್ ಕಚ್ಚಿ ಆನೆ ಮರಿ ದಾರುಣ ಸಾವು

ಮುಂಬೈನಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕ ಸಿಕಂದರ್ ಸುಮಾರು 1 ತಿಂಗಳ ಹಿಂದೆ ತನ್ನ ಗ್ರಾಮಕ್ಕೆ ಮರಳಿದ್ದ. ಮದ್ಯ ಮತ್ತು ಗಾಂಜಾ ವ್ಯಸನಿಯಾಗಿದ್ದ ಆತ ಈ ಹಿಂದೆಯೂ ಹಲವು ಬಾರಿ ಪತ್ನಿ ಪ್ರಿಯಾಂಕಾ (28) ಮತ್ತು ತಾಯಿ ರುನಾ ದೇವಿ (60) ಇಬ್ಬರ ಮೇಲೂ ಹಲ್ಲೆ ನಡೆಸಿದ್ದ. ಆದರೆ, ಈ ಬಾರಿ ಅವರಿಬ್ಬರನ್ನೂ ಕೊಲೆ ಮಾಡಿ, ಸಿಮೆಂಟ್ ಇಟ್ಟಿಗೆಯಿಂದ ತಲೆಯನ್ನು ಒಡೆದು, ಅದರಿಂದ ಮಾಂಸವನ್ನು ಹೊರಗೆ ತೆಗೆದು ತಿನ್ನುವ ಮೂಲಕ ವಿಕೃತಿ ಮೆರೆದಿದ್ದಾನೆ. ಆತನ ಮಾನಸಿಕ ಆರೋಗ್ಯದ ಬಗ್ಗೆಯೂ ತನಿಖೆಗಳು ನಡೆದಿವೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಕಾಂಗ್ರೆಸ್​​​ನಲ್ಲಿ ಮಹತ್ವದ ಬೆಳವಣಿಗೆ: ಡಿಕೆಶಿಗೆ ರಾಹುಲ್ ಮಹತ್ವದ ಸಂದೇಶ
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಡಿಕೆಶಿ, ಸಿದ್ದರಾಮಯ್ಯ ಜತೆ ಪ್ರತ್ಯೇಕವಾಗ ರಾಹುಲ್ ರಹಸ್ಯ ಮಾತು
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕಾರು ಅಪಘಾತಕ್ಕೆ 1 ವರ್ಷ: ಅಂದಿನ ಕಹಿ ಘಟನೆಯನ್ನು ಮೆಲುಕು ಹಾಕಿದ ಸಚಿವೆ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ಕೇರಳದಲ್ಲಿ ಕರ್ನಾಟಕ ಅಯ್ಯಪ್ಪ ಮಾಲಾಧಾರಿಗಳ ವಾಹನಗಳಿಗೆ ನಿರ್ಬಂಧ
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
ರಾಹುಲ್ ಗಾಂಧಿ ಭೇಟಿ ಬಳಿಕ ಸಿದ್ರಾಮಯ್ಯ ಕೊಟ್ಟ ಸುಳಿವು ಏನು?
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
24 ತಲೆಗಳ 6 ತಲೆಗೆ ಇಳಿಸಿದ್ದೀನಿ, ನಾನು ಒನ್ ಮ್ಯಾನ್ ಆರ್ಮಿ: ಧ್ರುವಂತ್
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಡಾನ್​​ ರೀತಿ ಗನ್​​ ಹಿಡಿದು ಆವಾಜ್​​ ಹಾಕಿದ್ದಾತ ತಂದಿದ್ದು ನಕಲಿ ಬಂದೂಕು!
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಗಿಲ್ಲಿ ನಟ ಬಡವನಾ ಅಥವಾ ಶ್ರೀಮಂತನಾ? ಅಸಲಿ ವಿಷಯ ತೆರೆದಿಟ್ಟ ಸಂಬಂಧಿಕರು
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಸಿಕ್ಕ ನಿಧಿಯನ್ನು ಸರ್ಕಾರಕ್ಕೆ ನೀಡಿದ ಕುಟುಂಬಕ್ಕೆ ಬಂಪರ್ ಗಿಫ್ಟ್
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​
ಜೈಲಿಗೆ ಹೋಗಿ ಬಂದ್ರೂ ಬಾರದ ಬುದ್ಧಿ: ಮತ್ತೆ ದರೋಡೆ ಮಾಡಿದ್ದ ಟೀಂ​​ ಅಂದರ್​​