ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಪ್ರೇಮ ಪ್ರಯತ್ನ ನಗೆಪಾಟಲಿಗೆ ಸಿಕ್ಕಿಕೊಳ್ಳುವುದು…

ಸೆಪ್ಟೆಂಬರ್ ೨೩, ೨೦೨೬ರ ಇಂದಿನ ದೈನಿಕ ರಾಶಿ ಭವಿಷ್ಯ ತಿಳಿಯಿರಿ. ಈ ದಿನ ಮೇಷದಿಂದ ಮೀನದವರೆಗೆ ಪ್ರತಿ ರಾಶಿಯವರಿಗೆ ಪ್ರೇಮ, ಆರ್ಥಿಕ, ಉದ್ಯೋಗ, ಆರೋಗ್ಯ, ಆಸ್ತಿ ಮತ್ತು ಕುಟುಂಬ ಜೀವನದ ಕುರಿತು ವಿಶೇಷ ಒಳನೋಟಗಳನ್ನು ನೀಡಲಾಗಿದೆ. ಕೆಲವರಿಗೆ ಪ್ರೇಮ ಪ್ರಯತ್ನಗಳು ನಗೆಪಾಟಲಿಗೆ ಸಿಕ್ಕಿಕೊಳ್ಳುವ ಎಚ್ಚರಿಕೆ. ಈ ದಿನದ ಗ್ರಹಗತಿಗಳು ನಿಮ್ಮ ಮೇಲೆ ಹೇಗೆ ಪ್ರಭಾವ ಬೀರಲಿವೆ, ನಿಮ್ಮ ಅದೃಷ್ಟ, ಸವಾಲುಗಳು ಮತ್ತು ಯಶಸ್ಸಿನ ಮಾರ್ಗಗಳನ್ನು ಅರಿತುಕೊಳ್ಳಿ.

ನಿತ್ಯ ಭವಿಷ್ಯ: ಇಂದು ಈ ರಾಶಿಯವರ ಪ್ರೇಮ ಪ್ರಯತ್ನ ನಗೆಪಾಟಲಿಗೆ ಸಿಕ್ಕಿಕೊಳ್ಳುವುದು...
Edited By:

Updated on: Sep 23, 2026 | 3:14 AM

ಶಾಲಿವಾಹನ ಶಕವರ್ಷ 1949ರ ದಕ್ಷಿಣಾಯನ, ವರ್ಷ ಋತುವಿನ ಭಾದ್ರಪದ ಮಾಸದ ಶುಕ್ಲ ಪಕ್ಷದ ದ್ವಾದಶೀ ತಿಥಿಯ ಬುಧವಾರದಂದು ಕಳೆದುಕೊಳ್ಳುವ ಭಯ, ನಾಲಗೆಯ ಹಿಡಿತವಿರದು, ದೈಹಿಕ ಶ್ರಮ, ನಿರಂತರತೆ, ನಿರ್ಮಮತ್ವ, ಸಂಶಯ ನಿವಾರಣೆ, ಊಹಿಸದ ಘಟನೆ, ಪ್ರಜ್ಞೆಯಿಂದ ವ್ಯವಹಾರ ಇವೆಲ್ಲ ಇಂದಿನ ವಿಶೇಷ.

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ದಕ್ಷಿಣಾಯನ, ಋತು : ವರ್ಷ, ಚಾಂದ್ರಮಾಸ : ಭಾದ್ರಪದ, ಸೌರ ಮಾಸ : ಕನ್ಯಾ, ಮಹಾನಕ್ಷತ್ರ : ಉತ್ತರಾಫಲ್ಗುಣೀ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಧನಿಷ್ಠಾ, ಯೋಗ : ಸುಕರ್ಮ, ಕರಣ : ಬಾಲವ, ಸೂರ್ಯೋದಯ – 06 – 09 am, ಸೂರ್ಯಾಸ್ತ – 06 – 14 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:12 – 13:42, ಯಮಗಂಡ ಕಾಲ 07:40 – 09:11, ಗುಳಿಕ ಕಾಲ 10:41 – 12:12

ಮೇಷ ರಾಶಿ :
ಆಸ್ತಿಯ ಸಮಸ್ಯೆಯನ್ನು ಪರಿಹರಿಸಿಕೊಳ್ಳುವಿರಿ. ಸರ್ಕಾರಿಯ ಕೆಲಸದ ವಿಳಂಬದಿಂದ ನಿಮಗೆ ಬೇಸರವಾಗಲಿದೆ. ರಾಜಕಾರಣಿಗಳ ಕಾರ್ಯಕ್ಕೆ ಪ್ರಶಂಸೆಯು ಸಿಗಲಿದೆ. ಜವಾಬ್ದಾರಿಯನ್ನು ತೆಗೆದುಕೊಳ್ಳುವುದು ಸುಲಭ. ಗೊತ್ತಾಗದಂತೆ ಇನ್ನೊಬ್ಬರ ಅಧಿಕಾರವನ್ನು ಪಡೆಯುವಿರಿ. ಅದರೆ ನಿರ್ವಹಣೆ ಕಷ್ಟ. ನಿಮ್ಮ ಅಮೂಲ್ಯ ವಸ್ತುವನ್ನು ನಿಮಗೆ ಗೊತ್ತಿಲ್ಲದೇ ಕೊಟ್ಟು ಬಿಡುವಿರಿ. ನಿಮ್ಮ ಮಾತುಗಳು ಅನ್ಯಾರ್ಥವನ್ನು ಕೊಡಲಿದೆ.

ವೃಷಭ ರಾಶಿ :
ದೃಷ್ಟಿದೋಷದಿಂದ ನೀವು ಪೀಡಿತರಾಗುವ ಸಾಧ್ಯತೆ ಇದೆ. ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಕಳೆದುಕೊಂಡು ಕಳವಳಗೊಳ್ಳುವಿರಿ. ಸಹೋದ್ಯೋಗಿಗಳಿಂದ ನಿಮಗೆ ಧೈರ್ಯ ಬರುವುದು. ಹಣವನ್ನು ಪೂರ್ಣ ಕೊಡದೇ ಕಂತಿನ ವ್ಯವಹಾರಕ್ಕೆ ಹೋಗುವಿರಿ. ಆಸ್ತಿಯ ವಿಚಾರದಲ್ಲಿ ವಂಚನೆ ಆಗುವ ಸಾಧ್ಯತೆ ಇದೆ. ವಿವಾಹದ ಮಾತುಕತೆ ಗೊಂದಲದಲ್ಲಿ ಮುಕ್ತಾಯವಾಗಬಹುದು. ಹೊಸ ವಸ್ತುಗಳ ಬಳಕೆಯನ್ನು ತಿಳಿಯದೇ ಅದನ್ನು ಹಾಳು ಮಾಡಿಕೊಳ್ಳುವಿರಿ.

ಮಿಥುನ ರಾಶಿ :
ನಿಮ್ಮ ಆಸ್ತಿಯ ಮೇಲೆ ಬೇರೆಯವರ ಕಣ್ಣು ಬೀಳಲಿದೆ. ಕೆಲವರು ನಿಮ್ಮಿಂದ ಉಪಕಾರವನ್ನು ಪಡೆದುಕೊಳ್ಳುವವರಿದ್ದಾರೆ. ಅನಂತರ ನಿರ್ಲಕ್ಷ್ಯಿಸಬಹುದು. ನಿಮ್ಮ ಭದ್ರತೆಯನ್ನು ಆಧುನಿಕ ವ್ಯವಸ್ಥೆಯಿಂದ ಬಲಮಾಡಿಕೊಳ್ಳುವಿರಿ. ಸಂಗಾತಿಯನ್ನು ಹಲವು ದಿನಗಳ ಅನಂತರ ಭೇಟಿಯಾಗುವಿರಿ. ನಿಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ಗುರಿಯು ಬದಲಾಗುವುದು. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸಿ, ಅವರಿಂದ ನಿಷ್ಠುರವಾಗುವಿರಿ.

ಕರ್ಕಾಟಕ ರಾಶಿ :
ಹಣಕಾಸಿನ ಸಹಾಯವನ್ನು ಮಿತ್ರರಿಂದ ಪಡೆಯುವಿರಿ. ತಂದೆಯ ಆರೋಗ್ಯದಲ್ಲಿ ವ್ಯತ್ಯಾಸವಾಗಲಿದ್ದು ನಿಮಗೆ ಆತಂಕವಾಗಲಿದೆ. ಬಂಧುಗಳನ್ನು ಪ್ರೀತಿಸುವಿರಿ. ಆರೋಗ್ಯದ ತಪಾಸಣೆಯನ್ನು ಮಾಡಿಸಿಕೊಂಡು ಶರೀರದ ಬಗ್ಗೆ ತಿಳಿದಿಕೊಳ್ಳುವಿರಿ. ಸಾಲದಿಂದ ಮುಕ್ತರಾಗಲು ಎಷ್ಟೇ ಪರಿಶ್ರಮಿಸಿದರೂ ಸಾಧ್ಯವಾಗದು. ತಾಳ್ಮೆಯನ್ನು ಕಳೆದುಕೊಳ್ಳದೇ ವರ್ತಿಸುವುದು ಮುಖ್ಯವಾಗಲಿದೆ. ಹಿರಿಯರಿಗೆ ಕೊಡುವ ಅಗೌರವವು ನಿಮಗೂ ಮುಳುವಾಗಬಹುದು ಎಂಬ ಆಲೋಚನೆ ಮನಸ್ಸಿನಲ್ಲಿ ಇರಬೇಕಾದೀತು.

ಸಿಂಹ ರಾಶಿ :
ಯೋಜನೆಯ ಕೆಲಸಗಳು ಹಿಂದುಳಿಯುವುದು. ಕುಟುಂಬದ ಕೆಲಸಕ್ಕೆ ಸಹಕಾರವನ್ನು ನೀಡುವಿರಿ. ಸಂಗಾತಿಯ ಬಗ್ಗೆ ಕಾಳಜಿ ಇರಲಿದೆ. ನೀವು ಇಷ್ಟಪಟ್ಟಿದ್ದನ್ನು ಪಡೆದುಕೊಳ್ಳುವಿರಿ‌. ನಿಮ್ಮ ಗೆಲುವಿಗೆ ಬೀಗದೇ ಸಮಾಧಾನ ಚಿತ್ತದಿಂದ ಆಸ್ವಾದಿಸಿ. ಭವಿಷ್ಯದ ಹಣವನ್ನು ನೀವು ಗೌಪ್ಯವಾಗಿ ಕೂಡಿಡುವಿರಿ. ನಿಮ್ಮ ಕಾರ್ಯಗಳು ಇತರರಿಗೆ ಅಸೂಯೆಯನ್ನು ಕೊಡಬಹುದು. ನಿಮ್ಮ ದೌರ್ಬಲ್ಯಗಳು ಇನ್ನೊಬ್ಬರಿಗೆ ಆಹಾರವಾಗಬಹುದು. ನಿಮ್ಮನ್ನು ಪ್ರಶಂಸಿಸುವವರ ಜೊತೆ ಹೆಚ್ಚು ಸಮಯ ಇರುವಿರಿ.

ಕನ್ಯಾ ರಾಶಿ :
ಮನಸ್ಸಿಗೆ ಘಾಸಿಯಾಗುವಂತಹ ಮಾತನ್ನು ಬಂಧುಗಳು ಆಡುವರು. ತೆಗೆದುಕೊಂಡ ಸಾಲದ ಬಗ್ಗೆ ನಿಮಗೆ ಲೆಕ್ಕಾಚಾರವಿರಲಿ. ಪ್ರೀತಿಯ ವಿಚಾರದಲ್ಲಿ ನಿಮಗೆ ಕೆಲವು ಹಿತವಚನಗಳನ್ನು ಅನುಭವಿಗಳು ಹೇಳುವರು. ಸರಳವಾಗಿರಲು ಇರುವುದು ಇಷ್ಟವಾಗಲಿದೆ. ನಂಬಿಕೆಯನ್ನು ಇಟ್ಟುಕೊಂಡು ವ್ಯವಹಾರವನ್ನು ಮುಂದುವರಿಸಿ. ಕಾಲಹರಣ ಮಾಡಲು ಅನವಶ್ಯಕ ಮಾತುಗಳನ್ನು ಆಡುವಿರಿ. ಅನಿವಾರ್ಯತೆ ಇರುವಲ್ಲಿ ಮಾತ್ರ ನಿಮ್ಮ ಪ್ರವೇಶವಿರುವುದು ಯೋಗ್ಯವಾಗುವುದು.

ತುಲಾ ರಾಶಿ :
ಮಿತ್ರರಿಗೆ ಸಹಾಯ ಮಾಡಲು ಹೋಗಿ ನೀವು ತೊಂದರೆಯಲ್ಲಿ ಸಿಕ್ಕಿಕೊಳ್ಳುವಿರಿ. ಆಕಸ್ಮಿಕ ಧನಲಾಭವು ನಿಮಗೆ ನೆಮ್ಮದಿಯನ್ನು ತರಬಹುದು. ಶಂಕೆಯನ್ನು ವ್ಯಕ್ತಪಡಿಸುವುದು ಸರಿಯಾದ ವ್ಯಕ್ತಿಯಾಗಿರಲಿ. ಉದ್ಯೋಗದಲ್ಲಿ ಅವಘಡವು ಸಂಭವಿಸಬಹುದು. ಸ್ವಂತಿಕೆಯನ್ನು ಬಿಡದೇ ಆಗಬೇಕಾದ ಕೆಲಸವನ್ನು ಮಾಡಿಸಿಕೊಳ್ಳುವಿರಿ. ಶ್ರದ್ಧೆಯು ಕಡಿಮೆ ಆಗಲಿದೆ. ಬಂಧುಗಳು ಮನಸ್ಸಿಗೆ ನೋವಾಗುವ ಮಾತುಗಳನ್ನು ಆಡಿದರೂ ಅದನ್ನು ಮನಸ್ಸಿನಲ್ಲಿ ಇರಿಸಿಕೊಳ್ಳುವುದಿಲ್ಲ.

ವೃಶ್ಚಿಕ ರಾಶಿ :
ನೀವು ಕಾನೂನಾತ್ಮಕ ಹೋರಾಟಕ್ಕೆ ತಯಾರಿ ನಡೆಸುವಿರಿ. ದುರ್ಬಲ್ಯವನ್ನು ಬಳಸಿಕೊಂಡು ಆಡಿಕೊಳ್ಳಬಹುದು. ನೇರವಾದ ಮಾತಿನಿಂದ ನೀವು ನಿಷ್ಠುರರಾಗುವಿರಿ. ನಿಮ್ಮೊಳಗಾದ ಬದಲಾವಣೆಯು ನಿಮಗೆ ಆಶ್ಚಯರ್ಯವನ್ನು ಕೊಟ್ಟೀತು.‌ ಎಲ್ಲವನ್ನೂ ಒಟ್ಟಿಗೇ ಹೇರುವುದಕ್ಕಿಂತ ಹಂತಹಂತವಾಗಿ ಹೇಳಿದರೆ ಉತ್ತಮ. ಸಹನೆಯನ್ನು ನೀವು ಬೆಳೆಸಿಕೊಳ್ಳಬೇಕಾಗಿದೆ. ಸಮೀಪದ ದೇವಾಲಯಕ್ಕೆ ಹೋಗಿ ಮನಸ್ಸಿಗೆ ಶಾಂತಿಯನ್ನು ಪಡೆದುಕೊಂಡು ಬರುವಿರಿ. ಸಿಕ್ಕ ಅಧಿಕಾರವು ಅಲ್ಪ ಕಾಲದ್ದು ಎಂಬ ಭಾವ ಇರಲಿ.

ಧನು ರಾಶಿ :
ಎಲ್ಲವನ್ನೂ ನಿಮಗೆ ಬೇಕೆನ್ನುವ ಬಯಕೆ ಇರಲಿದೆ. ಆರ್ಥಿಕವಾಗಿ ವೃದ್ಧಿಯಾಗಲು ತಂತ್ರಗಳನ್ನು ಹೂಡುವ ಅವಶ್ಯಕತೆ ಇದೆ. ಪ್ರಭಾವೀ ವ್ಯಕ್ತಿಗಳ ಮೆಚ್ಚುಗೆಯಿಂದ ನಿಮಗೆ ಅನುಕೂಲವೂ ಆಗಬಹುದು. ವೃತ್ತಿಯಲ್ಲಿ ನೀವು ಸರಳ ವಿಧಾನದಿಂದ ಕೆಲಸವನ್ನು ಮಾಡುವಿರಿ. ಪ್ರೇಮಿ ಇರುವಾಗಲೇ ಹೊಸ ಪ್ರೇಮಕ್ಕೆ ಆದ್ಯತೆ ಕೊಡುವಿರಿ. ಅತಿಯಾದ ಪ್ರಯತ್ನದಿಂದ ಪಡೆಯುವ ಅವಶ್ಯಕತೆ ಇಲ್ಲ. ರಾಜಕಾರಣಿಗಳಿಗೆ ಸಮಾಜದಿಂದ ಗೌರವವನ್ನು ಪಡೆಯಬೇಕು ಎನ್ನುವ ಆಸೆ ಇರಲಿದೆ.

ಮಕರ ರಾಶಿ :
ನಿಮ್ಮ ಭವಿಷ್ಯವನ್ನು ರೂಪಿಸಿಕೊಳ್ಳಲು ಬೇಕಾದ ಆರ್ಥಿಕ ವ್ಯವಸ್ಥೆಯನ್ನು ಮಾಡಿಕೊಳ್ಳುವಿರಿ. ಇಬ್ಬರ ನಡುವಿನ ಜಗಳದಲ್ಲಿ ಮಧ್ಯಸ್ತಿಕೆ ವಹಿಸಲು ಹೋಗುವಿರಿ. ಮೊದಲು ಹೇಳಿದ ಸತ್ಯವನ್ನು ನೀವು ತಿರುಚಿವಿರಿ. ಯೋಜಿತ ಕಾರ್ಯವನ್ನು ಕಾರ್ಯಗತ ಮಾಡಿ ಸಂತೋಷಗೊಳ್ಳುವಿರಿ. ಹಳೆಯದನ್ನು ನೆನಪಿಸಿಕೊಂಡು ಬೇಸರಗೊಳ್ಳುವಿರಿ. ಕೋಪವನ್ನು ಮಾಡಬಾರದೆಂದು ತೀರ್ಮಾನಿಸಿದಾಗಲೇ ಕೋಪಕ್ಕೆ ಅವಕಾಶಗಳು ಸಿಗುವುದು. ಏಕಾಂತವು ಬೇಕು ಎನಿಸಬಹುದು.

ಕುಂಭ ರಾಶಿ :
ನೀವು ಹೇಳದೇ ಇರುವ ರಹಸ್ಯವನ್ನು ಇಂದು ನಿಮ್ಮಿಂದ ತಿಳಿಯಲಿದೆ. ಮಾನಸಿಕ ಒತ್ತಡವು ಕಡಿಮೆ ಇದ್ದರೂ ನೆಮ್ಮದಿಯ ಕೊರತೆ ಕಾಣಿಸಿಕೊಳ್ಳಲಿದೆ. ಧನಲಾಭದ ನಿರೀಕ್ಷೆಯಲ್ಲಿ ನೀವು ಇರುವಿರಿ. ಬೇಡದ ಸಂಗತಿಗಳನ್ನು ಬೇಗನೆ ರೂಢಿಸಿಕೊಳ್ಳುವಿರಿ. ನಿಮ್ಮ ಭವಿಷ್ಯವನ್ನು ಸರಿಯಾಗಿ ಊಹಿಸಲಾರಿರಿ. ಬಂಧುಗಳ ಭೇಟಿಯು ಖುಷಿಯನ್ನು ಕೊಡುವುದು. ವಿವಾಹಕ್ಕೆ ಅನ್ಯರಿಂದ ಅಡಚಣೆ ಬರಬಹುದು. ಆದಾಯಕ್ಕಿಂತ ಹೆಚ್ಚು ಖರ್ಚು ಹೆಚ್ಚಿದ್ದು ನಿಮಗೆ ನಿಯಂತ್ರಣವು ಕಷ್ಟವಾದೀತು.

ಮೀನ ರಾಶಿ :
ಆರ್ಥಿಕತೆಯನ್ನು ಸುಧಾರಿಸಿಕೊಳ್ಳಲು ಆಪ್ತರ ಜೊತೆ ಮಾತನಾಡಿ. ಔದ್ಯೋಗಿಕ ವಲಯದಲ್ಲಿ ನಿಮ್ಮನ್ನು ಗುರುತಿಸಿಕೊಳ್ಳುವುದು ಸುಲಭವಾಗದು. ಆದರೂ ಪ್ರಯತ್ನವಂತೂ ನಿರಂತರವಾಗಿ ಇರುವುದು. ನಿಮ್ಮ ದುರ್ಬಲರಿಗೆ ಸಹಾಯವನ್ನು ಮಾಡಿ. ನಿಮ್ಮ ಪ್ರತಿಭೆಯನ್ನು ಮಾಧ್ಯಮಗಳಲ್ಲಿ ನೋಡುವರು. ಸಾಮಾಜಿಕ ಚಿಂತನೆಯನ್ನು ಬೆಳೆಸಿಕೊಳ್ಳುವುದು ಉತ್ತಮ. ಬೇಡದ ವಿಚಾರಗಳಿಂದ ನಿಮ್ಮ ತಲೆ ಹಾಳಾಗಬಹುದು.

-ಲೋಹಿತ್ ಹೆಬ್ಬಾರ್-8762924271 (what’s app only)

Published On - 3:13 am, Wed, 23 September 26

Loading...
Unable to load recommendations.
Follow Us