ರಾಶಿ ಭವಿಷ್ಯ (Horoscope Today) ಗ್ರಹಗಳು ಮತ್ತು ನಕ್ಷತ್ರಗಳ ಚಲನೆಯನ್ನು ಆಧರಿಸಿರುತ್ತದೆ. ಪ್ರತಿಯೊಂದು ರಾಶಿಗಳು ತಮ್ಮದೇ ಆದ ಮಹತ್ವವನ್ನು ಹೊಂದಿದೆ. ಗ್ರಹಗಳು ಮತ್ತು ನಕ್ಷತ್ರಗಳ ಜೊತೆಗೆ ಪಂಚಾಂಗದ ಲೆಕ್ಕಾಚಾರಗಳನ್ನು ವಿಶ್ಲೇಷಿಸಲಾಗಿದೆ. ನಿಮ್ಮ ಕೆಲಸ, ವ್ಯವಹಾರ, ವಹಿವಾಟುಗಳು, ಕುಟುಂಬ, ಸ್ನೇಹಿತರೊಂದಿಗಿನ ಸಂಬಂಧ, ಆರೋಗ್ಯ ಮತ್ತು ದಿನವಿಡೀ ನಡೆಯುವ ಮಂಗಳಕರ ಮತ್ತು ಅಶುಭ ಘಟನೆಗಳ ಬಗ್ಗೆ ಇಂದಿನ (2023 ಡಿಸೆಂಬರ್ 06) ಭವಿಷ್ಯದಲ್ಲಿ ತಿಳಿಯಿರಿ.
ನಿತ್ಯ ಪಂಚಾಂಗ: ಶಾಲಿವಾಹನ ಶಕೆ 1946, ಶೋಭಕೃತ್ ಸಂವತ್ಸರ, ದಕ್ಷಿಣಾಯನ, ಶರತ್ ಋತು, ವೃಶ್ಚಿಕ ಮಾಸ, ಮಹಾನಕ್ಷತ್ರ: ಅನೂರಾಧಾ, ಮಾಸ: ಕಾರ್ತಿಕ, ಪಕ್ಷ: ಕೃಷ್ಣ, ವಾರ: ಬುಧ, ತಿಥಿ: ನವಮೀ, ನಿತ್ಯನಕ್ಷತ್ರ: ಉತ್ತರಾಫಲ್ಗುಣೀ, ಯೋಗ: ಪ್ರೀತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 45 ನಿಮಿಷಕ್ಕೆ,
ಸೂರ್ಯಾಸ್ತ ಸಂಜೆ 06 ಗಂಟೆ 01 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 12:24 ರಿಂದ 01:48 ರ ವರೆಗೆ, ಯಮಘಂಡ ಕಾಲ ಬೆಳಗ್ಗೆ 08:10 ರಿಂದ 09:35ರ ವರೆಗೆ, ಗುಳಿಕ ಕಾಲ ಬೆಳಗ್ಗೆ 10:59 ರಿಂದ 12:24ರ ವರೆಗೆ.
ಮೇಷ ರಾಶಿ: ಸೌಲಭ್ಯಗಳನ್ನು ದುರುಪಯೋಗ ಮಾಡಿಕೊಂಡು ಇತರರ ಕೆಂಗಣ್ಣಿಗೆ ಗುರಿಯಾಗುವಿರಿ. ನಿಮ್ಮ ಆರೋಗ್ಯ ವೃದ್ಧಿಗೆ ಬೇಕಾದ ವಿಧಾನವನ್ನು ಅನುಸರಿಸಿ. ಮನಸ್ಸಿನ ನಿಯಂತ್ರಣವು ಲಯವನ್ನು ತಪ್ಪಬಹುದು. ನೀವು ಇಂದು ವೃತ್ತಿಪರ ರಂಗದಲ್ಲಿ ನಿಮಗೆ ಪ್ರಶಂಸೆ ಸಿಗುವ ಸಾಧ್ಯತೆ ಇದೆ. ಆಸ್ತಿ ಸಮಸ್ಯೆ ಸೌಹಾರ್ದಯುತವಾಗಿ ಬಗೆಹರಿಯುವುದು. ಹೊಸತನ್ನು ಕಲಿಯುವ ಉತ್ಸಾಹದಲ್ಲಿ ಇರುವಿರಿ. ಧೈರ್ಯದಿಂದ ಹೊಸ ಸವಾಲುಗಳನ್ನು ಎದುರಿಸುವಿರಿ. ಭೂಮಿ ಮತ್ತು ಆಸ್ತಿಗೆ ಸಂಬಂಧಿಸಿದ ಕೆಲಸಗಳು ಇರುತ್ತವೆ. ಮಹಿಳೆಯರು ಯಾವುದೇ ಪಾಕದ ಉತ್ಪನ್ನದ ವ್ಯವಹಾರವನ್ನು ಆರಂಭಿಸಲು ಬಯಸುವಿರಿ. ಸುಮ್ಮನೆ ಕುಳಿತಿರುವುದು ನಿಮಗೆ ಆಗದ ಸಂಗತಿ. ಎಲ್ಲರ ಜೊತೆ ಬೆರೆಯುವುದು ಆಗದು.
ವೃಷಭ ರಾಶಿ: ಕಳೆದುಕೊಂಡಿದ್ದರ ಬಗ್ಗೆ ಅತಿಯಾದ ಶೋಕವು ಅನಗತ್ಯ. ಮುಂದಿನ ಕಾರ್ಯಗಳ ಬಗ್ಗೆ ಗಮನಹರಿಸಿದರೆ ಹಳೆಯದು ಮರೆತುಹೋದೀತು. ಹಣಕಾಸಿನ ವಿಷಯದಲ್ಲಿ ಕೆಲವು ಲಾಭಗಳನ್ನು ನಿರೀಕ್ಷಿಸುವಿರಿ. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಸ್ವಂತ ಕೆಲಸವನ್ನು ಮಾಡಲು ಸ್ವಲ್ಪ ಸಮಯವನ್ನು ನೀಡುತ್ತದೆ. ಯಾರನ್ನೋ ಸೋಲಿಸುವುದಕ್ಕೆ ನಿಮ್ಮ ಪ್ರಯತ್ನ ಬೇಡ. ನಿಮ್ಮ ವ್ಯಾಯಾಮದಲ್ಲಿ ಮಿತಿ ಇರಲಿ. ಉತ್ತಮ ಆರೋಗ್ಯದಿಂದ ಆನಂದಿಸುವಿರಿ. ನಿಮ್ಮ ಈ ದಿನವು ಆತ್ಮವಿಶ್ವಾಸದಿಂದ ಇರುತ್ತದೆ. ಕುಟುಂಬದ ಯುವ ಸದಸ್ಯರ ಯಶಸ್ಸಿನಲ್ಲಿ ಹೆಮ್ಮೆ ಪಡುವಿರಿ. ಉದ್ವೇಗದಿಂದ ಕಾರ್ಯಗಳನ್ನು ಮಾಡುವುದಕ್ಕಿಂತ ಚಿತ್ತೈಕಾಗ್ರ್ಯ ಇರಲಿ.
ಮಿಥುನ ರಾಶಿ: ಕೊಟ್ಟ ಮಾತನ್ನು ಉಳಿಸಿಕೊಳ್ಳುವುದು ನಿಮಗೆ ಕಷ್ಟವಾದೀತು. ಅದೇ ನಿಮ್ಮ ತಲೆಯನ್ನು ದಿನವಿಡೀ ಕೊರೆಯಬಹುದು. ಈ ದಿನ ಕೆಲಸದಲ್ಲಿ, ನಿಮ್ಮ ದಕ್ಷತೆಯಿಂದ ಮುಖ್ಯವಾದವರನ್ನು ನೀವು ಮೆಚ್ಚಿಸಲು ಸಾಧ್ಯವಾಗುತ್ತದೆ. ಆಹಾರದ ಬಗ್ಗೆ ನಿಮ್ಮ ಶಿಸ್ತು ದೈಹಿಕ ಸ್ಥಿತಿಯಲ್ಲಿರಿವುದು. ಆಸ್ತಿ ವ್ಯವಹಾರವು ನಿಮಗೆ ಅನುಕೂಲವಾಗುವ ಸಾಧ್ಯತೆಯಿದೆ. ಸುಲಭದ ಕೆಲಸವನ್ನು ಮೊದಲು ಮಾಡಿ, ಯಾರದ್ದಾದರೂ ಸಹಕಾರವನ್ನು ಪಡೆದುಕೊಳ್ಳಿ. ನೀವು ಎಲ್ಲರ ಜೊತೆ ಸಭ್ಯತೆಯನ್ನು ಮೀರದೇ ಮಾತನಾಡಬೇಕು. ನಿಮ್ಮದೇ ಕೆಲಸದ ಒತ್ತಡಗಳು ನಿಮಗೆ ಬರುವುದು. ಓಡಾಟವು ಹೆಚ್ಚಾಗಿರುವುದು. ಉತ್ಸಾಹವನ್ನು ಕಳೆದುಕೊಂಡು ಸುಮ್ಮನೆ ಕುಳಿತುಕೊಳ್ಳುವಿರಿ. ಮಂಗಲಕಾರ್ಯದಲ್ಲಿ ಭಾಗಿಯಾಗುವಿರಿ.
ಕಟಕ ರಾಶಿ: ಭವಿಷ್ಯದ ಬಗ್ಗೆ ಅತಿಯಾದ ಚಿಂತೆಯು ಕಾಡಬಹುದು. ನಿಮ್ಮ ನಡವಳಿಕೆಯು ಇತರರಿಗೆ ಇಷ್ಟವಾಗದೇ ಇರಬಹುದು. ತಂತ್ರಜ್ಞರಿಗೆ ಈ ದಿನವು ಅನುಕೂಲಕರವಾಗಿರುತ್ತದೆ. ಖರೀದಿಯಲ್ಲಿ ಉತ್ಸಾಹವು ಹೆಚ್ಚಿರುವುದು. ಮಾತು ಅತಿಯಾಗುವುದು ಬೇಡ. ಆದರೆ ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ. ದೈಹಿಕ ದಾರ್ಢ್ಯವನ್ನು ನೀವು ಚೆನ್ನಾಗಿರಿಸಿಕೊಳ್ಳುವಿರಿ. ಸುಲಭವಾಗಿ ಸಿಕ್ಕುವುದನ್ನು ಬಿಟ್ಟಕೊಳ್ಳುವಿರಿ. ನಿಮ್ಮ ತಿಳುವಳಿಕೆ ಮತ್ತು ಸಭ್ಯತೆಯಿಂದ ಎಲ್ಲರೂ ಬಹಳ ಪ್ರಭಾವಿತರಾಗಬಹುದು. ನಿಮ್ಮ ಸಮಯವನ್ನು ಬೇಡದ ಕಾರ್ಯದಿಂದ ವ್ಯರ್ಥಮಾಡಿಕೊಳ್ಳುವಿರಿ. ಆರ್ಥಿಕ ಕ್ಷೇತ್ರಕ್ಕೆ ಸಂಬಂಧಿಸಿದ ಜನರು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು. ಸಂಗಾತಿಯಿಂದ ಅನಿರೀಕ್ಷಿತ ಕೊಡುಗೆಯನ್ನು ಪಡೆಯುವಿರಿ.
ಸಿಂಹ ರಾಶಿ: ಪ್ರಶಂಸೆಯಿಂದ ನಿಮಗೆ ಸಂಕೋಚವಾಗುವುದು. ಕೆಲಸವನ್ನು ನಿರ್ವಿಘ್ನವಾಗಿ ಪೂರ್ಣಮಾಡುವಿರಿ. ಇಂದು ಕೆಲಸದ ಸ್ಥಳದ ಸಮಸ್ಯೆಗಳಿಗೆ ನಿಮ್ಮ ನಿಷ್ಪಕ್ಷಪಾತ ವಿಧಾನವು ನಿಮ್ಮನ್ನು ಜನಪ್ರಿಯಗೊಳಿಸುವುದು. ಕೆಲವು ಆಸ್ತಿ ಸಮಸ್ಯೆಗಳು ಬಗೆಹರಿಯುವ ಸಾಧ್ಯತೆ ಇದೆ. ಹೊಸ ಯೋಜನೆಯನ್ನು ಪಡೆದುಕೊಳ್ಳುವಿರಿ. ನೀವು ಇಂದು ಎಲ್ಲರ ಜೊತೆ ವಿನಯದಿಂದ ಮಾತನಾಡಬೇಕು. ರಾಜಕೀಯದಲ್ಲಿ ಸಂಪರ್ಕ ಪ್ರದೇಶವು ವಿಶಾಲವಾಗಿರುತ್ತದೆ. ಕೆಲವು ಹೊಸ ಅವಕಾಶಗಳು ಸಿಗುವ ಲಕ್ಷಣಗಳಿವೆ. ಉತ್ತಮ ಕಾರ್ಯಕ್ಕೆ ಎಲ್ಲ ಕಡೆಯಿಂದ ಅಭಿನಂದನೆಗಳು ಹರಿದುಬರಬಹುದು. ಸರ್ಕಾರಿ ಯೋಜನೆಗೆ ಹಣ ಹೂಡುವ ಸಾಧ್ಯತೆಗಳಿವೆ. ಹಣದ ವ್ಯವಹಾರಗಳಲ್ಲಿ ಯಶಸ್ಸು ಇರುತ್ತದೆ. ನಿಮ್ಮ ಮಿತವಾದ ಮಾತಿನಿಂದ ಇತರರಿಗೆ ಅಚ್ಚರಿಯಾದೀತು.
ಕನ್ಯಾ ರಾಶಿ: ನಿಮ್ಮ ಪ್ರಭಾವವು ಕಡಿಮೆಯಾದಂತೆ ತೋರುತ್ತದೆ. ಸ್ನೇಹಿತರಿಂದ ನಿಮ್ಮ ಉದ್ಯೋಗವು ಬದಲಾದೀತು. ವೃತ್ತಿಪರರು ಇಂದು ಉತ್ತಮ ಅವಕಾಶಗಳನ್ನು ಕಂಡುಕೊಳ್ಳಬಹುದು. ಹಳೆಯ ಬಂಧುಗಳನ್ನು ಭೇಟಿ ಮಾಡುವುದು ಇಂದಿನ ಉತ್ಸಾಹಕ್ಕೆ ಕಾರಣವಾಗುವುದು. ನೀವು ಹೊಸ ಗುರಿಗಳನ್ನು ಹೊಂದಿದ್ದು ನಿಮ್ಮ ಪ್ರಯತ್ನಗಳನ್ನು ಪ್ರಾರಂಭಿಸುವಿರಿ. ಸಣ್ಣ ವ್ಯಾಪಾರಿಗಳು ಅಲ್ಪ ಲಾಭವನ್ನು ಗಳಿಸಿ, ಖುಷಿಪಡುವರು. ನೀವು ಕೆಲವು ವ್ಯವಹಾರ ವಿಷಯಗಳನ್ನು ಜಾಣ್ಮೆಯಿಂದ ನಿಭಾಯಿಸುವಿರಿ. ಸಂಪತ್ತಿನ ಹೆಚ್ಚಳವಾಗಬಹುದು. ಇಂದು ಯಾವುದೇ ಕೆಲಸ ಮಾಡುವಾಗ, ನಿಮ್ಮ ಮನಸ್ಸನ್ನು ಶಾಂತವಾಗಿಟ್ಟುಕೊಳ್ಳಬೇಕು. ಆಪ್ತರ ಮಾತುಗಳು ನಿಮ್ಮ ತಲೆಯಲ್ಲಿ ಕೊರೆಯಬಹುದು.
ತುಲಾ ರಾಶಿ: ಸರ್ಕಾರದ ಕಡೆಯಿಂದ ಒತ್ತಡವು ಬರಲಿದ್ದು, ಪ್ರಭಾವಿ ವ್ಯಕ್ತಿಗಳಿಂದ ಅದನ್ನು ತಪ್ಪಿಸುಕೊಳ್ಳುವಿರಿ. ಬಂಧುಗಳ ಸಲಹೆಯು ಸಮಸ್ಯೆಯನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಲು ನಿಮಗೆ ಸಹಾಯ ಮಾಡುತ್ತದೆ. ದೂರದೂರಿಗೆ ಪ್ರಯಾಣ ಸಾಧ್ಯತೆ ಇದೆ. ನಿಮ್ಮ ದಾಂಪತ್ಯದಲ್ಲಿ ಪರಸ್ಪರ ಸಾಮರಸ್ಯ ಹೆಚ್ಚಾಗುತ್ತದೆ. ಎಂದೋ ಬರುವ ಸಮಸ್ಯೆಗಳಿಗೆ ಇಂದು ಚಿಂತೆಪಡುವಿರಿ. ವೃತ್ತಿಪರ ಜೀವನದಲ್ಲಿ ಪ್ರತಿಯೊಂದು ವಿಷಯದ ಬಗ್ಗೆ ಸ್ಪಷ್ಟ ನಿಲುವನ್ನು ಇಟ್ಟುಕೊಳ್ಳಿ. ಸೋಲನ್ನು ನಿರೀಕ್ಷಿಸಿದರೂ ಅದನ್ನು ಅರಗಿಸಿಕೊಳ್ಳುವುದು ಕಷ್ಟವಾದೀತು. ವ್ಯವಹಾರದ ದೃಷ್ಟಿಯಿಂದ ಎಲ್ಲವೂ ಚೆನ್ನಾಗಿರುತ್ತದೆ. ವಾದಗಳ ಕಡೆ ಹೆಚ್ಚು ಗಮನವಿರುವುದು.
ವೃಶ್ಚಿಕ ರಾಶಿ: ನಿಮ್ಮ ಹಳೆಯ ತಪ್ಪುಗಳಿಂದ ಹೊಸ ಸ್ಥಾನ, ಅವಕಾಶಗಳು ಸಿಗದೇ ಇರಬಹುದು. ಪ್ರಯತ್ನಕ್ಕೆ ಪೂರ್ಣಫಲವು ಲಭ್ಯವಾಗದೇ ಹೋದೀತು. ವೃತ್ತಿಪರ ಸಮಸ್ಯೆಗಳನ್ನು ನಿವಾರಿಸಲು ನಿಮಗೆ ಅವಕಾಶ ದೊರೆಯಲಿದೆ. ಸರಿಯಾದ ಆಹಾರ ಮತ್ತು ಶಿಸ್ತುಬದ್ಧ ಜೀವನವು ನಿಮ್ಮ ಉತ್ತಮ ಆರೋಗ್ಯಕ್ಕೆ ಪ್ರಮುಖವಾಗಿದೆ. ಮನೆಯಲ್ಲಿ ಶಾಂತಿ ಮತ್ತು ಸಾಮರಸ್ಯವನ್ನು ತರಲು ನೀವು ನಿಮ್ಮ ಕೋಪವನ್ನು ನಿಯಂತ್ರಿಸುವುದು ಉತ್ತಮ. ಸಜ್ಜನರ ಕೂಟದಲ್ಲಿ ಭಾಗವಹಿಸುವಿರಿ. ಸಂಜೆಯ ವೇಳೆಗೆ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯುವಿರಿ. ಕಠಿಣ ಪರಿಶ್ರಮದ ಆಧಾರದ ಮೇಲೆ, ಕಷ್ಟಕರವಾದ ಕೆಲಸಗಳನ್ನು ಕೂಡ ಸುಲಭವಾಗಿ ಪೂರ್ಣಗೊಳಿಸುವಿರಿ. ಹಿರಿಯರಿಗೆ ಗೌರವವನ್ನು ಕೊಡುವಿರಿ. ಸಮಯಕ್ಕೆ ಸರಿಯಾಗಿ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದು.
ಧನು ರಾಶಿ: ಕುಟುಂಬದ ಕಲಹವು ಅನಿರೀಕ್ಷಿತವಾಗಿ ಕಾಣಿಸಿಕೊಂಡೀತು. ಸಂಗಾತಿಯ ಬೆಂಬಲವನ್ನು ಪಡೆದುಕೊಳ್ಳುವಿರಿ. ಇಂದು ನಿಮಗೆ ಎಲ್ಲ ರೀತಿಯಲ್ಲೂ ಲಾಭವಾಗಲಿದೆ ಎಂದು ಮನಸ್ಸು ಹೇಳುವುದು. ಖಾಸಗಿ ಕಂಪನಿಗಳಲ್ಲಿ ಕೆಲಸ ಮಾಡುವ ನೌಕರರಿಗೆ ಉನ್ನತ ಅಧಿಕಾರಿಗಳಿಂದ ಪ್ರಶಂಸೆ ಪ್ರಾಪ್ತಿಯಾಗಲಿದೆ. ಮನಸ್ಸಿಗೆ ಅಧಿಕ ವಿಶ್ರಾಂತಿಯ ಅಗತ್ಯವಿರುವುದು. ಇಂದು ಮಹಿಳೆಯರಿಗೆ ಶುಭ ದಿನ. ಪ್ರಾರ್ಥನೆಯ ಪರಿಣಾಮ ನಿಮ್ಮ ಮನಸ್ಸು ಎಂದಿಗಿಂತ ನೆಮ್ಮದಿಯಿಂದ ಇರಲಿದೆ. ಬಂಧುಗಳ ಎದುರು ಸ್ವಾಭಿಮಾನವನ್ನು ಇಟ್ಟುಕೊಳ್ಳುವಿರಿ. ಸ್ಥಗಿತಗೊಂಡ ಕೆಲಸದಲ್ಲಿ ವೇಗವನ್ನು ಪಡೆಯುವುದು ಪ್ರಯೋಜನಕಾರಿಯಾಗಿದೆ. ಕುಟುಂಬದ ಆಸ್ತಿಯನ್ನು ಪಡೆಯುವ ಸಾಧ್ಯತೆಗಳಿವೆ. ವಿದ್ಯುತ್ ಉಪಕರಣದಿಂದ ತೊಂದರೆಯಾದೀತು.
ಮಕರ ರಾಶಿ: ಆರೋಗ್ಯದ ಸ್ಥಿತಿಯೂ ಸರಿಯಿಲ್ಲದೇ ಯಾವುದೂ ನಿಮ್ಮ ಬುದ್ಧಿಗೆ ಸೂಚಿಸದು. ಇಂದು ನಿಮ್ಮ ಆರೋಗ್ಯದ ಮೇಲೆ ಹೆಚ್ಚಿನ ಗಮನ ಇರಿಸಿ. ದೈಹಿಕವಾಗಿ ಸದೃಢವಾಗಿರಲು ನಿಮ್ಮ ಪ್ರಯತ್ನ ಅತಿ ಮುಖ್ಯ. ಆದಾಯದಲ್ಲಿಯೂ ನಿಮಗೇ ಪೂರ್ಣತೃಪ್ತಿ ಇರದು. ಸಂಗಾತಿಯ ಸೂಕ್ಷ್ಮ ಭಾವಕ್ಕೆ ಪೆಟ್ಟು ಬೀಳಬಹುದು. ನಿಮ್ಮ ಸುತ್ತಮುತ್ತಲಿನವರಿಂದ ಸಾಕಷ್ಟು ಪ್ರಶಂಸೆ ಪಡೆಯಲಿದ್ದೀರಿ. ಮಹತ್ವದ ಕೆಲಸವು ಹಲವು ದಿನಗಳವರೆಗೆ ಬಾಕಿಯಿದ್ದರೆ, ಅವುಗಳನ್ನು ಮುಗಿಸಿ. ನಿಮ್ಮ ತಪ್ಪನ್ನು ಯಾರ ಮೇಲೋ ಹಾಕುವಿರಿ. ನೀವು ಉತ್ತಮ ಆರ್ಥಿಕ ಯೋಜನೆಯನ್ನು ಮಾಡಬಹುದು. ಯುವಕರು ಹೊಸ ಉದ್ಯೋಗವನ್ನು ಪಡೆಯುವ ಸಾಧ್ಯತೆಯಿದೆ.
ಕುಂಭ ರಾಶಿ: ಪ್ರಭಾವೀ ವ್ಯಕ್ತಿಗಳ ಸಹಕಾರವನ್ನು ಬಳಸಿಕೊಂಡು ಕಾರ್ಯವನ್ನು ಸಾಧಿಸಿಕೊಳ್ಳುವಿರಿ. ಸ್ವಂತ ಉದ್ಯಮ ಬಗ್ಗೆ ಅತಿಯಾದ ಆಸಕ್ತಿ ಇರುವುದು. ಆಹಾರದಲ್ಲಿ ಶಿಸ್ತನ್ನು ಅಳವಡಿಸಿಕೊಳ್ಳುವ ಮೂಲಕ ನೀವು ಉತ್ತಮ ಆರೋಗ್ಯವನ್ನು ವೃದ್ಧಿಸಿಕೊಳ್ಳುವಿರಿ. ಕುಟುಂಬದ ಸದಸ್ಯರ ಸಲಹೆಯಿಂದ ನೀವು ಪ್ರಯೋಜನ ಪಡೆಯಬಹುದು. ಊಹಾಪೋಹಗಳಿಗೆ ಬೆಲೆಯನ್ನು ಕೊಡುವ ಅಗತ್ಯವಿಲ್ಲ. ಇಂದು ಶೈಕ್ಷಣಿಕ ರಂಗದಲ್ಲಿ ಸಕಾರಾತ್ಮಕ ಫಲಿತಾಂಶವನ್ನು ಪಡೆಯುವಿರಿ. ನಿಮ್ಮ ದಿನದ ಆರಂಭವು ಸಾಮಾನ್ಯವಾಗಿರುತ್ತದೆ. ಹಣವನ್ನು ಬಹಳ ನೈಪುಣ್ಯದಿಂದ ಖರ್ಚು ಮಾಡುವಿರಿ. ನೀವು ಬಂಧುಗಳ ಜೊತೆ ವ್ಯಾಪಾರ ಮಾಡಲು ತೀರ್ಮಾನಿಸುವಿರಿ. ಅಸಾಧ್ಯವನ್ನು ನೀವು ಸಾಧಿಸುವ ಪ್ರಯತ್ನ ಮಾಡುವಿರಿ. ಕೆಲಸದ ಪರಿಸ್ಥಿತಿಗಳು ಸುಧಾರಿಸುವ ಸಾಧ್ಯತೆಯಿದೆ.
ಮೀನ ರಾಶಿ: ಪಿತ್ರಾರ್ಜಿತ ಆಸ್ತಿಯನ್ನು ಪಡೆಯಲು ಹೋಗಿ ಮುಗ್ಗರಿಸುವಿರಿ. ಮಕ್ಕಳ ಬಗ್ಗೆ ನಿಮಗೆ ಸ್ವಲ್ಪ ಅಸಮಾಧಾನವಾಗಬಹುದು. ಇಂದು ಆರ್ಥಿಕ ಲಾಭ ದೊರೆಯುವ ಸಾಧ್ಯತೆ ಇದೆ. ಕೈ ತಪ್ಪಿ ಹೋಗಿದೆ ಎಂದುಕೊಂಡಿದ್ದ ಯೋಜನೆಗಳು ಸಿಗಬಹುದು. ಹೂಡಿಕೆಯಿಂದ ಲಾಭವು ಸಿಗಲಿದೆ. ನಿಮ್ಮನ್ನು ಬಹು ದಿನಗಳಿಂದ ಬಾಧಿಸುತ್ತಿದ್ದ ಅನಾರೋಗ್ಯದಿಂದ ಮುಕ್ತಿ ಪಡೆಯುವಿರಿ. ನೀವು ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಪ್ರತಿ ಗುರಿಯನ್ನು ಸಾಧಿಸುವಿರಿ. ವ್ಯಾಪಾರವನ್ನು ವಿಸ್ತರಿಸಲು ನೀವು ಬ್ಯಾಂಕಿನಿಂದ ಸಾಲ ತೆಗೆದುಕೊಳ್ಳಬಹುದು. ಎಲ್ಲೋ ಕೊಟ್ಟಿರುವ ಹಣವನ್ನು ನೀವು ಮರಳಿ ಪಡೆಯಬಹುದು. ನಿದ್ರೆಯಿಂದ ತೊಂದರೆಯಾಗಬಹುದು.
ಲೋಹಿತಶರ್ಮಾ – 8762924271 (what’s app only)