Horoscope: ಅವಮಾನಿಸಿದವರಿಗೆ ನಿಮ್ಮ ಯಶಸ್ಸಿನಿಂದ ತಕ್ಕ ಉತ್ತರ ಕೊಡುವಿರಿ

ಅಕ್ಟೋಬರ್ 06,​ 2024: ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೀಳುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಕಡಿಮೆ ಆಗಬಹುದು. ನಿಮ್ಮ ಬಗ್ಗೆ ಬಂಧುಗಳು ಆಡಿಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಯನ್ನು ಇಟ್ಟುಕೊಳ್ಳುವರಿದ್ದಾರೆ. ಹಾಗಾದರೆ ಅಕ್ಟೋಬರ್ 06ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Horoscope: ಅವಮಾನಿಸಿದವರಿಗೆ ನಿಮ್ಮ ಯಶಸ್ಸಿನಿಂದ ತಕ್ಕ ಉತ್ತರ ಕೊಡುವಿರಿ
ಅವಮಾನಿಸಿದವರಿಗೆ ನಿಮ್ಮ ಯಶಸ್ಸಿನಿಂದ ತಕ್ಕ ಉತ್ತರ ಕೊಡುವಿರಿ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on: Oct 06, 2024 | 12:05 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಪ್ರೀತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 17 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:48 ರಿಂದ 06:17, ಯಮಘಂಡ ಕಾಲ ಮಧ್ಯಾಹ್ನ 12:21ರಿಂದ 01: 50ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:19 ರಿಂದ 04:48 ರವರೆಗೆ.

ಮೇಷ ರಾಶಿ: ಇಂದಿನ ವ್ಯವಹಾರವನ್ನು ತಾಳ್ಮೆಯಿಂದ ನಿರ್ವಹಿಸಬೇಕು. ಆಸ್ತಿಯ ಬಗ್ಗೆ ಕಾನೂನಾತ್ಮಕವಾಗಿ ಇರಬೇಕಾಗುವುದು. ನಿಮ್ಮ ಮಾತುಗಳೇ ನಿಮಗೆ ತಿರುಗುಬಾಣವಾಗಿ ಬರಬಹುದು. ನೀವು ಇಂದು ವಾಹನಕ್ಕೆ ಸಂಬಂಧಿಸಿದಂತೆ ಹಣವನ್ನು ವ್ಯಯಿಸಬೇಕಾಗಬಹುದು. ನಿಮ್ಮ ಮೇಲೆ ಕೆಟ್ಟ ದೃಷ್ಟಿ ಬೀಳುವ ಸಾಧ್ಯತೆ ಇದೆ. ಧಾರ್ಮಿಕ ಆಚರಣೆಗಳಲ್ಲಿ ನಂಬಿಕೆ ಕಡಿಮೆ ಆಗಬಹುದು. ನಿಮ್ಮ ಬಗ್ಗೆ ಬಂಧುಗಳು ಆಡಿಕೊಳ್ಳಬಹುದು. ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಬಗ್ಗೆ ಸರಿಯಾದ ದೃಷ್ಟಿಯನ್ನು ಇಟ್ಟುಕೊಳ್ಳುವರಿದ್ದಾರೆ. ನಿಮಗೆ ಇಂದು ಬಹಳ ಕಾರ್ಯದ ಒತ್ತಡ ಇದ್ದರೂ ನೀವು ನಿಮ್ಮವರಿಗೆ ಸಮಯವನ್ನು ಕೊಡುವಿರಿ. ಯಾರಿಗೋ ಸಹಕರಿಸಲು ನೀವು ಒದ್ದಾಟ ಮಾಡಬೇಕಾಗುವುದು. ಯಾರ ಸಹಕಾರವನ್ನು ಅತಿಯಾಗಿ ತೆಗದುಕೊಳ್ಳುವುದು ಬೇಡ. ನಿಮ್ಮ ನಿರ್ಧಾರಗಳೇ ಅಂತಿಮವಾಗಬೇಕು ಎನ್ನುವ ಮನಃಸ್ಥಿತಿ ಇರುವುದು. ನಿಮ್ಮ ಯೋಚನೆಗಳನ್ನು ವಿಸ್ತರಿಸಿದರೆ ಎಲ್ಲವೂ ಸುಂದರವೇ.

ವೃಷಭ ರಾಶಿ: ನಿಮ್ಮನ್ನು ನೀವು ಏನೋ ಅಂದುಕೊಳ್ಳುವುದು ಬೇಡ. ಅಸ್ಪಷ್ಟ ಮಾಹಿತಿಗಳು ನಿಮ್ಮ ದಿಕ್ಕು ತಪ್ಪಿಸಬಹುದು. ಸಂತೋಷ ಪಡಲು ನೀವು ನಿಮ್ಮದೇ ಮಾರ್ಗವನ್ನು ಕಂಡುಕೊಳ್ಳುವಿರಿ. ನೋವನ್ನು ಸ್ವಲ್ಪ ಕಾಲ ಮರೆಯುವಿರಿ. ಅನವಶ್ಯಕ ವಿಚಾರಕ್ಕೆ ನೀವು ಸಮಯವನ್ನು ಕೊಡುವಿರಿ. ತಂದೆಯಿಂದ ಬೈಗುಳ ಪಡೆಯಬಹುದು. ಹೆಚ್ಚು ಆಯಾಸವಾಗುವ ಕೆಲಸವನ್ನು ನೀವು ಮಾಡುವಿರಿ. ಅವಿವಾಹಿತರಿಗೆ ವಿವಾಹದ ಮಾತುಕತೆ ಬರಲಿದೆ. ಹಿರಿಯರ ಆಸೆಗಳನ್ನು ಪೂರ್ಣ ಮಾಡುವ ಮನಸ್ಸು ಬರಬಹುದು. ತುಂಬ ದಿನದ ಆಸ್ತಿಯ ವಿವಾದವು ಇಂದು ಮುಕ್ತಾಯಗೊಳ್ಳುವ ಸಾಧ್ಯತೆ ಇದೆ. ಆರ್ಥಿಕ ಪರಿಸ್ಥಿತಿಯು ಮಧ್ಯಗತಿಯಲ್ಲಿ ಇರಲಿದೆ. ನಿಮ್ಮನ್ನು ಕಂಡು ಅವಮಾನಿಸುವವರಿಗೆ ತಕ್ಕ ಉತ್ತರವನ್ನು ಕೊಡುವಿರಿ. ಆಶ್ರಯ ಕೊಟ್ಟವರನ್ನು ಗೌರವಿಸಿ. ಧಾರ್ಮಿಕ ವಿಚಾರದಲ್ಲಿ ನಂಬಿಕೆ ಅಧಿಕವಾಗುವುದು.

ಮಿಥುನ ರಾಶಿ: ನಿಮ್ಮ ಕರ್ತವ್ಯದಲ್ಲಿ ಯಾವುದೇ ಲೋಪವನ್ನು ಮಾಡುವುದು ಬೇಡ. ಇನ್ನೊಬ್ಬರ ಮಾತನ್ನು ಪೂರ್ಣವಾಗಿ ನಂಬಿ ನಿಮ್ಮವರನ್ನು ಕಳೆದುಕೊಳ್ಳಲಿದ್ದೀರಿ. ನಿಮಗೆ ಇಂದು ಮಕ್ಕಳ ಕಡೆಯಿಂದ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಬೇಸರದಿಂದ ದುಶ್ಚಟಗಳಿಗೆ ಸಿಕ್ಕಿಕೊಳ್ಳುವ ಸಾಧ್ಯತೆ ಇದೆ. ಸ್ವಾವಲಂಬನೆಯ ಕಡೆಯೇ ನಿಮ್ಮ ಆಲೋಚನೆಗಳು ಇರಲಿವೆ. ನಿಮ್ಮ ಒಳ್ಳೆಯ ಭಾವವು ದುರುಪಯೋಗವಾಗಬಹುದು. ಸಣ್ಣ ಆದಾಯವನ್ನು ನೀವು ಇಂದು ಪಡೆಯಬಹುದು. ಪ್ರವಾಸ ಮಾಡುವ ಮನಸ್ಸಾಗಲಿದೆ. ಲಾಭವಿದೆ ಎಂದು ಗೊತ್ತಿಲ್ಲದ ಕೆಲಸಕ್ಕೆ ಕೈ ಹಾಕಿ ಸುಟ್ಟುಕೊಳ್ಳುವಿರಿ. ಸಾವಧಾನತೆ ನಿಮಗೆ ವರದಾನವಾಗಿದೆ. ಉಪಕರಣವನ್ನು ನೀವು ಸದುಪಯೋಗ ಮಾಡಿಕೊಳ್ಳುವಿರಿ. ಸಣ್ಣತನವನ್ನು ಬಿಡಿವುದು ಸೂಕ್ತ. ಯಾರು ಏನೇ ಮಾಡಿದರೂ ನಿಮ್ಮ ನಿರ್ಧಾರ ಬದಲಾಗದು. ಯಾರನ್ನಾದರೂ ನಿಮ್ಮ ವ್ಯವಹಾರದ ಪಾಲುದಾರರನ್ನಾಗಿ ಮಾಡಲು ನೀವು ಯೋಚಿಸುತ್ತಿದ್ದರೆ, ಈಡೇರುತ್ತದೆ.

ಕರ್ಕಾಟಕ ರಾಶಿ: ಹಿರಿಯರ ಮಾತನ್ನು ಧಿಕ್ಕರಿಸಿ ಮುನ್ನಡೆಯುವುದು ಬೇಡ. ನೀವು ಬದಲಿಸಿಕೊಂಡ ಜೀವನಶೈಲಿಯ ಬಗ್ಗೆ ಕೆಲಸವರು ಆಡಿಕೊಳ್ಳಬಹುದು. ದಾಂಪತ್ಯದಲ್ಲಿ ವಿರಸದ ಮನೋಭಾವವು ಮುಂದುವರಿಯಬಹುದು. ಹಾಳಾದ ವಸ್ತುವನ್ನು ದುರಸ್ತಿ ಮಾಡಿಕೊಳ್ಳುವಿರಿ. ಇಂದು ನೀವು ಶುಭ ವಾರ್ತೆಯನ್ನು ನಿರೀಕ್ಷಿಸಬಹುದು. ಇಂದು ನಿಮ್ಮ ಮನಸ್ಸು ಬಹಳ ಸಂತೋಷದಿಂದ ಇರಲಿದೆ. ಸಹೋದರಿಯು ನಿಮಗೆ ಧನಸಹಾಯವನ್ನು ಮಾಡುವರು. ಆರೋಗ್ಯದ ಸಮಸ್ಯೆಗಳನ್ನು ಸರಿಯಾದ ವೈದ್ಯರ ಮೂಲಕ ಸರಿಮಾಡಿಕೊಳ್ಳುವುದು ಉತ್ತಮ. ತಮಾಷೆಯ ಮಾತುಗಳಿಂದ ನಿಮಗೆ ಕಷ್ಟವಾದೀತು. ಆದರೆ ದುಂದು ವೆಚ್ಚಗಳನ್ನು ಮಾಡಿಕೊಳ್ಳುವುದು ಬೇಡ. ನಿಮ್ಮ ವರ್ತನೆಯು ಬಹಳ ಅಚ್ಚರಿ ಎನಿಸೀತು. ಅಪರಿಚಿತರ ನಂಬಿ ವ್ಯವಹಾರವನ್ನು ಮಾಡಲು ಯೋಜಿಸುವುದು ಬೇಡ. ವಿವಾದಕ್ಕಾಗಿಯೇ ಮಾತನಾಡುವುದು ಬೇಡ. ಉದ್ಯೋಗದಲ್ಲಿ ಕೆಲವು ವಿಚಾರಗಳನ್ನು ನೀವು ಕಲಿಯಬೇಕಾಗುವುದು.