Daily Horoscope: ಈ ರಾಶಿಯವರು ಎಲ್ಲದಕ್ಕೂ ಧೈರ್ಯವಾಗಿ ಮುನ್ನಡೆಯುವಿರಿ

ನೀವು ಸಿಂಹ, ಕನ್ಯಾ, ತುಲಾ, ವೃಶ್ಚಿಕ, ಅಕ್ಟೋಬರ್​ 06: ಕಳೆದುಕೊಂಡದ್ದರ ಬಗ್ಗೆ ಪಶ್ಚಾತ್ತಾಪ ಮೂಡಬಹುದು. ಯಾರನ್ನೂ ಅಲ್ಪವೆಂದು ಭಾವಿಸಿ, ಅವರ ಬಗ್ಗೆ ಹಗುರಾಗಿ ಮಾತನಾಡುವುದು ಬೇಡ. ವಿವಾಹದ ವಿಳಂಬಕ್ಕೆ ದೈವಜ್ಞರ ಬಳಿ ಹೋಗಿ ವಿಚಾರಿಸಿ. ಹಾಗಾದರೆ ಅಕ್ಟೋಬರ್​ 06ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.

Daily Horoscope: ಈ ರಾಶಿಯವರು ಎಲ್ಲದಕ್ಕೂ ಧೈರ್ಯವಾಗಿ ಮುನ್ನಡೆಯುವಿರಿ
ಈ ರಾಶಿಯವರು ಎಲ್ಲದಕ್ಕೂ ಧೈರ್ಯವಾಗಿ ಮುನ್ನಡೆಯುವಿರಿ
Follow us
| Updated By: ಗಂಗಾಧರ​ ಬ. ಸಾಬೋಜಿ

Updated on: Oct 06, 2024 | 12:10 AM

ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಪ್ರೀತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 17 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:48 ರಿಂದ 06:17, ಯಮಘಂಡ ಕಾಲ ಮಧ್ಯಾಹ್ನ 12:21ರಿಂದ 01: 50ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:19 ರಿಂದ 04:48 ರವರೆಗೆ.

ಸಿಂಹ ರಾಶಿ: ಇಂದು ನಿಮ್ಮ ಹಿತ್ತಾಳೆ ಕಿವಿಯಿಂದ ಸಂಬಂಧವು ಹಾಳಾಗುವುದು. ಕೆಲಸಗಳಲ್ಲಿ ಹಿನ್ನಡೆಯಾಗಿ ಮೇಲಧಿಕಾರಿಗಳಿಂದ‌ ಸೂಚನೆ ಬರಬಹುದು. ಒರಟು ಮಾತುಗಳಿಂದ ಸುಮ್ಮನಾಗಿ. ಕಛೇರಿಯ ಕೆಲಸದಲ್ಲಿ ವ್ಯತ್ಯಾಸವಾದ ಕಾರಣ ಕಿರಿಕಿರಿಯಿಂದ ಕೋಪ ಉಂಟಾಗಬಹುದು. ನಿಮ್ಮ ಮೇಲೆ ಸಹೋದ್ಯೋಗಿಗಳು ಸಲ್ಲದ ಅಪವಾದವನ್ನು ಮಾಡಿಯಾರು. ರಾಜಕೀಯಕ್ಕೆ ಹೋಗಲು ನಿಮಗೆ ಬೆಂಬಲವು ಸಿಗಲಿದೆ. ಅನಿವಾರ್ಯವಾಗಿ ಕಛೇರಿಯ ಕೆಲಸವನ್ನು ಮಾಡಬೇಕಾಗುವುದು. ನೀವೂ ಬಹಳ ಉತ್ಸುಕರಾಗಿರುವಿರಿ. ವ್ಯಾಪಾರವು ನಿಮಗೆ ಲಾಭಾಂಶವನ್ನು ಕಡಿಮೆ‌ ಮಾಡೀತು. ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳಲು ಆಲೋಚನೆಯನ್ನು ಮಾಡುವಿರಿ. ನಿಮಗೆ ಕುಟುಂಬದ ಬೆಂಬಲವಿದ್ದು, ಧೈರ್ಯವಾಗಿ ಮುನ್ನಡೆಯುವಿರಿ. ಆದಾಯದ ಮೂಲವನ್ನು ನೀವು ಬದಲಿಸಿಕೊಳ್ಳುವಿರಿ. ಯಾರಾದರೂ ಮುಖಸ್ತುತಿಯನ್ನು ಮಾಡಬಹುದು.

ಕನ್ಯಾ ರಾಶಿ: ಹಿತಶತ್ರುಗಳನ್ನು ಆಪ್ತತೆಯಿಂದ ನಿಮ್ಮವರನ್ನಾಗಿ ಮಾಡಿಕೊಳ್ಳುವಿರಿ. ಎಲ್ಲವನ್ನು ನೀವು ಕಲ್ಪಿಸಿಕೊಂಡು ಅನಂತರ ಸಂಕಟಪಡುವಿರಿ. ಆರೋಗ್ಯವನ್ನು ಚೆನ್ನಾಗಿಟ್ಡುಕೊಳ್ಳಲು ವ್ಯಾಯಾಮಗಳನ್ನು ಆರಂಭಿಸಬಹುದು. ವೇಗವಾಗಿ ಸಾಲವನ್ನು ಮುಗಿಸಲು ನೀವು ಪ್ರಯತ್ನಿಸಬೇಕಾದೀತು. ಆಲಸ್ಯದಿಂದ ಹೊರಬಂದು ಆ ಕುರಿತು ಆಲೋಚಿಸಿ. ಅದೃಷ್ಟವನ್ನು ನಂಬಿ ಕುಳಿತುಕೊಳ್ಳುವುದು ಬೇಡ. ನಿಮ್ಮ ಪ್ರಯತ್ನವೂ ಇರಲಿ. ಯಾವುದಾದರೂ ಆಮಿಷಕ್ಕೆ ಬಲಿಯಾಗುವ ಸಂಭವವಿದೆ. ಉದ್ಯೋಗದ ಕಾರಣದಿಂದ ನೀವು ಪ್ರಯಾಣವನ್ನು ಮಾಡಬೇಕಾಗಿಬರಬಹುದು. ತುಂಬಾ ದಿನಗಳಿಂದ ನಡೆಯುತ್ತಿರುವ ಕುಟುಂಬದ ಶೀತಲ ಕಲಹವು ನಿಮಗೆ ಬೇಸರ ತರುತ್ತದೆ. ಇಂದು ನೀವು ಯಾವುದೇ ವೈಯಕ್ತಿಕ ಲಾಭವನ್ನು ನಿರೀಕ್ಷಿಸದೇ ಕೆಲಸವನ್ನು ಮಾಡುವಿರಿ. ಹಿರಿಯರು ನಿಮ್ಮ‌ ಬಗ್ಗೆ ವ್ಯಂಗ್ಯವಾಗಿ ಮಾತನಾಡಬಹುದು. ಉದ್ಯೋಗದ ಕಾರಣ ದೂರ ಪ್ರಯಾಣ ಮಾಡಲು ಇಷ್ಟವಾಗದು. ನೀವೇ ಬುದ್ಧಿಪೂರ್ವಕವಾಗಿ ರಾಜಕೀಯದಿಂದ ಹಿಂದೇಟು ಹಾಕುವಿರಿ.

ತುಲಾ ರಾಶಿ: ಮಕ್ಕಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಬಹುದು. ಭೂಮಿ ವ್ಯವಹಾರದಲ್ಲಿ ಅನಿರೀಕ್ಷಿತ ಆದಾಯವು ಆಗುವುದು. ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದಂತೆ ದಾಂಪತ್ಯದಲ್ಲಿ ಬಿರುಕು ಬರುವ ಸಾಧ್ಯತೆ ಇದೆ. ಇದು ಮಕ್ಕಳ‌ ಮೇಲೆ ಬೇರೆ ಪರಿಣಾಮವನ್ನು ಬೀರಬಹುದು. ದೈವದ ಬಗ್ಗೆ ಆಸಕ್ತಿ, ಶ್ರದ್ಧೆ, ಭಕ್ತಿಗಳ ಕೊರತೆ ಇರಲಿದೆ. ಸಂಬಂಧವನ್ನು ಉಳಿಸಿಕೊಳ್ಳಲು ನೀವು ಹಣವನ್ನು ವ್ಯಯಿಸಬೇಕಾಗಬಹುದು. ಸ್ವ ಉದ್ಯೋಗವನ್ನು ನಡೆಸುತ್ತಿದ್ದರೆ, ಕೆಲಸಕ್ಕೆ ಕೆಲವರನ್ನು ತೆಗೆದುಕೊಳ್ಳುವಿರಿ. ಪಶ್ಚಾತ್ತಾಪವು ನಿಮ್ಮನ್ನು ಶುದ್ಧ ಮಾಡುವುದು. ಸ್ನೇಹಿತರು ನಿಮ್ಮ ಜೊತೆ ಎಂದಿನಂತೆ ಇಲ್ಲವೆಂದು ಬುದ್ಧಿಯು ಊಹಿಸುತ್ತದೆ. ನೆಮ್ಮದಿ ಬೇಕಾದ ಎಲ್ಲ ಸಂಗತಿಗಳು ಇದ್ದರೂ ಚಿಂತೆ ಕಾಡಿಸಬಹುದು. ಸಕಾರಾತ್ಮಕ ಆಲೋಚನೆ ಇರಲಿ. ಸಮಾರಂಭಗಳಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಿರಿ. ಹೂಡಿಕೆಯ ವಿಚಾರದಲ್ಲಿ ಸಮಸ್ಯೆಯಾಗಬಹುದು. ಕಾನೂನಿನ ತೀರ್ಮಾನಕ್ಕೆ ತಲೆಬಾಗುವುದು ಸೂಕ್ತ. ಯಾರದೋ ಒತ್ತಡದಿಂದ ಮನಸ್ಸು ವಿಚಲಿತವಾಗಬಹುದು.

ವೃಶ್ಚಿಕ ರಾಶಿ: ಇಂದು ನೀವು ಬಹಳ ಸೌಮ್ಯತೆಯಿಂದ ವ್ಯವಹರಿಸಬೇಕು. ಉದ್ಯೋಗದಿಂದ ಹೊರಬಂದು ಮನೆಯ ಬಗ್ಗೆ ಗಮನ ಹೆಚ್ಚಾಗುವುದು. ಸಂತರಿಗೆ ಸಮಾನವಾದ ವ್ಯಕ್ತಿಗಳಿಂದ‌ ನಿಮಗೆ ಸಾಂತ್ವನ ಸಿಗಲಿದೆ. ನಿಮಗೆ ಸೌಕರ್ಯಗಳು ಅಧಿಕವಾಗಿ ಬೇಕು ಎನಿಸಬಹುದು. ಉದ್ಯಮದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳಿ. ಸ್ಥಾನಭ್ರಷ್ಟವಾಗುವ ಭಯವು ನಿಮಗೆ ಕಾಡಬಹುದು. ಭೂಮಿಯ ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಕೆಲವು ಸಮಸ್ಯೆಯನ್ನು ಎದುರಿಸಬೇಕಾಗಬಹುದು. ಕುಟುಂಬದಲ್ಲಿ ನಿಮ್ಮ ಕುರಿತು ಬೇಸರ ಉಂಟಾಗಬಹುದು. ಕಳೆದುಕೊಂಡದ್ದರ ಬಗ್ಗೆ ಪಶ್ಚಾತ್ತಾಪ ಮೂಡಬಹುದು. ಯಾರನ್ನೂ ಅಲ್ಪವೆಂದು ಭಾವಿಸಿ, ಅವರ ಬಗ್ಗೆ ಹಗುರಾಗಿ ಮಾತನಾಡುವುದು ಬೇಡ. ವಿವಾಹದ ವಿಳಂಬಕ್ಕೆ ದೈವಜ್ಞರ ಬಳಿ ಹೋಗಿ ವಿಚಾರಿಸಿ. ರಮಣೀಯ ಪ್ರದೇಶದಲ್ಲಿ ನೀವು ಹೆಚ್ಚು ಸಮಯವನ್ನು ಕಳೆಯುವಿರಿ. ಯಾರನ್ನೂ ಅವಲಂಬಿಸುವುದು ನಿಮಗೆ ಕಷ್ಟವಾಗುವುದು. ಕಾದಾಟದಿಂದ ಸಮಯವು ವ್ಯರ್ಥವಾಗಲಿದೆ. ಮಾತಿನಿಂದ ಆಪ್ತರನ್ನು ದೂರ ಮಾಡಿಕೊಳ್ಳುವಿರಿ.

‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
‘ಬಿಗ್​ಬಾಸ್ ಅನ್ನು ಹಾಳು ಮಾಡಲು ನಿಮ್ಮಪ್ಪನಾಣೆ ಸಾಧ್ಯವಿಲ್ಲ‘
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಸಿದ್ದರಾಮಯ್ಯ ಪಾರ್ವತಿ ಅವರನ್ನು ಮದುವೆ ಆಗಿದ್ದೇ ತಪ್ಪಾ? ಸಿಎಂ ಇಬ್ರಾಹಿಂ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದ ದೇವಸ್ಥಾನದಲ್ಲಿ ಡೋಲು ಬಾರಿಸಿದ ಪ್ರಧಾನಿ ಮೋದಿ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಮೈಸೂರು ದಸರಾದಲ್ಲಿ ಗಿಡ್ಡ ಕಾಲಿನ ಬಂಡೂರು ಕುರಿಯೇ ಆಕರ್ಷಣೆ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಲಾಯರ್ ಜಗದೀಶ್ ವಿಚಾರಣೆ ನಡೆಸುವ ಸುಳಿವು ಕೊಟ್ಟ ಕಿಚ್ಚ: ವಿಡಿಯೋ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಪಿಡಿಒ, ಕಾರ್ಯದರ್ಶಿಗಳ ಹೋರಾಟಕ್ಕೆ ಬೆಂಬಲ ಘೋಷಿಸಿದ ಕುಮಾರಸ್ವಾಮಿ,ವಿಜಯೇಂದ್ರ
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ಶನಿವಾರ ಭಕ್ತರ ಪರಾಕಾಷ್ಠೆ-ತಿಮ್ಮಪ್ಪನ ದರ್ಶನಕ್ಕೆ ಕಾಯಬೇಕು 18 ಗಂಟೆ...
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
ನಾಮಿನೇಷನ್ ತೂಗುಗತ್ತಿ ಜೊತೆ ಕುತೂಹಲ ಮೂಡಿಸಿದ ಕಿಚ್ಚನ ಪಂಚಾಯ್ತಿ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
Daily Devotional: ನವರಾತ್ರಿ ಮೂರನೇ ದಿನ ಚಂದ್ರಘಂಟಾ ದೇವಿ ಆರಾಧನೆ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ
ಶ್ರೀರಂಗಪಟ್ಟಣ ದಸರಾ ವೇದಿಕೆಗೆ ಶಿವಣ್ಣ ಎಂಟ್ರಿ; ಅಭಿಮಾನಿಗಳಿಗೆ ಭಾರಿ ಖುಷಿ