AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜೀ5ನಲ್ಲಿ ಬರ್ತಿದೆ ‘ರಾಕ್ಷಸ’ ವೆಬ್ ಸೀರಿಸ್; ಒಟಿಟಿ ಜಗತ್ತಿಗೆ ವಿಜಯ್ ರಾಘವೇಂದ್ರ ಎಂಟ್ರಿ

Zee5 ಕನ್ನಡದಲ್ಲಿ 'ರಾಕ್ಷಸ' ಎಂಬ ಹೊಸ ಕ್ರೈಮ್ ಸೈಕಾಲಾಜಿಕಲ್ ವೆಬ್ ಸರಣಿ ಘೋಷಿಸಿದೆ. ವಿಜಯ್ ರಾಘವೇಂದ್ರ ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಇದು ಅವರ ಒಟಿಟಿ ಜಗತ್ತಿಗೆ ಮೊದಲ ಹೆಜ್ಜೆ. ತರುಣ್ ಸುಧೀರ್ ಪ್ರೊಡಕ್ಷನ್ಸ್ ನಿರ್ಮಿಸಿರುವ ಈ 7-ಎಪಿಸೋಡ್ ಸರಣಿ ಸ್ಟ್ರೀಮಿಂಗ್ ಆಗಲಿದೆ.

ಜೀ5ನಲ್ಲಿ ಬರ್ತಿದೆ ‘ರಾಕ್ಷಸ’ ವೆಬ್ ಸೀರಿಸ್; ಒಟಿಟಿ ಜಗತ್ತಿಗೆ ವಿಜಯ್ ರಾಘವೇಂದ್ರ ಎಂಟ್ರಿ
ರಾಕ್ಷಸ ಸರಣಿ
ರಾಜೇಶ್ ದುಗ್ಗುಮನೆ
|

Updated on:Feb 07, 2026 | 7:43 AM

Share

ಪರಭಾಷೆಗಳಿಗೆ ಹೋಲಿಕೆ ಮಾಡಿದರೆ ಕನ್ನಡದಲ್ಲಿ ವೆಬ್ ಸೀರಿಸ್​​ಗಳ ಸಂಖ್ಯೆ ತುಂಬಾನೇ ಕಡಿಮೆ. ಆ ಕೊರತೆಯನ್ನು ನೀಗಿಸುವ ಕೆಲಸ ಜೀ5 ಕಡೆಯಿಂದ ಆಗುತ್ತಿದೆ. ‘ಅಯ್ಯನ ಮನೆ’, ‘ಮಾರಿಗಲ್ಲು’ (Marigallu) ಬಳಿಕ ಜೀ 5 ಕನ್ನಡ ಹೊಸದಾದ ಒರಿಜಿನಲ್ ಸಿರೀಸ್ ಘೋಷಿಸಿದೆ. ಈ ಸರಣಿಗೆ ‘ರಾಕ್ಷಸ’ ಎಂಬ ಟೈಟಲ್ ಇಟ್ಟಿದೆ. ಅಪರಾಧದ ಕಥೆಯ ಸುತ್ತ ಸಿನಿಮಾ ಸಾಗಲಿದೆ. ಟ್ರೇಲರ್ ವೆಬ್ ಸರಣಿ ಮೇಲಿನ ನಿರೀಕ್ಷೆ ಹೆಚ್ಚುವಂತೆ ಮಾಡಿದೆ.

ವಿಜಯ್ ರಾಘವೇಂದ್ರ ಅವರು ಸಿನಿಮಾಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಕಿರುತೆರೆಯಲ್ಲೂ ಆ್ಯಕ್ಟೀವ್ ಆಗಿದ್ದು, ರಿಯಾಲಿಟಿ ಶೋಗೆ ಜಡ್ಜ್ ಆಗಿದ್ದಾರೆ. ಈಗ ಅವರು ವೆಬ್ ಸರಣಿ ಲೋಕಕ್ಕೆ ಕಾಲಿಟ್ಟಿದ್ದಾರೆ. ‘ರಾಕ್ಷಸ’ ಸರಣಿಯಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಮಯೂರಿ, ಅವಿನಾಶ್, ಮಾಳವಿಕ, ಅಪ್ಪಣ್ಣ ಮತ್ತು ಅಭಿಜಿತ್ ಮೊದಲಾದವರು ನಟಿಸಿದ್ದಾರೆ.

ಸುಹಾನ್ ಪ್ರಸಾದ್ ಮತ್ತು ಅಪೂರ್ವ ‘ರಾಕ್ಷಸ’ ಸರಣಿಗೆ ಕಥೆ ಬರೆದಿದ್ದಾರೆ. ಸುಹಾನ್ ಪ್ರಸಾದ್ ನಿರ್ದೇಶನ ಸರಣಿಗೆ ಇದೆ. ತರುಣ್‌ಸುಧೀರ್ ತಮ್ಮದೇ ‘ತರುಣ್ ಸುಧೀರ್ ಪ್ರೊಡಕ್ಷನ್ಸ್’ ಮೂಲಕ ಇದನ್ನು ನಿರ್ಮಿಸಿದ್ದಾರೆ. ವೆಬ್ ಸೀರಿಸ್ ಲೋಕಕ್ಕೆ ಕಾಲಿಡುವುದಕ್ಕೆ ವಿಜಯ್​ಗೆ ಖುಷಿ ಇದೆ. ‘ಒಟಿಟಿ ಜಗತ್ತಿಗೆ ಇದು ನನ್ನ ಮೊದಲ ಹೆಜ್ಜೆ. ಒಟಿಟಿ ಪ್ರಯಾಣ ಆರಂಭಿಸಲು ಇದು ಸೂಕ್ತ ಕಥೆ’ ಎಂದು ವಿಜಯ್ ಹೇಳಿದ್ದಾರೆ. ಕನ್ನಡಕ್ಕೆ ವೆಬ್ ಸರಣಿಗಳನ್ನು ತರುವ ಪ್ರಯತ್ನ ಮಾಡುತ್ತಿರುವ ಜೀ5 ಗೆ ಅವರು ಧನ್ಯವಾದ ಹೇಳಿದ್ದಾರೆ.

ಇದನ್ನೂ ಓದಿ: ‘ಮಾರಿಗಲ್ಲು’ ವೆಬ್ ಸರಣಿಯಲ್ಲಿ ಪುನೀತ್ ರಾಜ್​​ಕುಮಾರ್: ಜೀ5 ಒಟಿಟಿಯಲ್ಲಿ ಅ.31ರಿಂದ ಪ್ರಸಾರ

ಕ್ರೈಮ್ ಸೈಕಾಲಜಿಕಲ್ ಕಥಾಹಂದರ ಹೊಂದಿರುವ ರಾಕ್ಷಸ ‘ಸರಣಿ’ ಏಳು ಎಪಿಸೋಡ್​​ಗಳನ್ನು ಹೊಂದಿದೆ. ಫೆಬ್ರವರಿ 20ರಿಂದ zee5ನಲ್ಲಿ ಸ್ಟ್ರೀಮಿಂಗ್ ಆಗಲಿದೆ. ‘ಅಯ್ಯನ ಮನೆ’ ಹಾಗೂ ‘ಮಾರಿಗಲ್ಲು’ ಎರಡೂ ಸರಣಿಗಳು ಗಮನ ಸೆಳೆದವು. ಈಗ ಈ ಸರಣಿ ಮತ್ತಷ್ಟು ಜನರಿಗೆ ತಲುಪುತ್ತದೆಯೇ ಎಂಬ ಕುತೂಹಲ ಮೂಡಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:41 am, Sat, 7 February 26

ಇಸ್ಲಾಮಾಬಾದ್‌ನಲ್ಲಿ ನಡೆದ ಬಾಂಬ್ ದಾಳಿಯ ವಿಡಿಯೋ ಇಲ್ಲಿದೆ
ಇಸ್ಲಾಮಾಬಾದ್‌ನಲ್ಲಿ ನಡೆದ ಬಾಂಬ್ ದಾಳಿಯ ವಿಡಿಯೋ ಇಲ್ಲಿದೆ
ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ
ಕಾಡಿನ ರಸ್ತೆಯಲ್ಲಿ ನಿಲ್ಲಿಸಿದ್ದ ಕಾರನ್ನು ಎತ್ತಲು ಯತ್ನಿಸಿದ ಆನೆ
ಐತಿಹಾಸಿಕ ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಇಂಟ್ರೆಸ್ಟಿಂಗ್ ಮಾಹಿತಿ
ಐತಿಹಾಸಿಕ ಲಕ್ಕುಂಡಿ ಚೌಕಿಮಠ ಕುಟುಂಬಸ್ಥರ ಇಂಟ್ರೆಸ್ಟಿಂಗ್ ಮಾಹಿತಿ
ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ
ಮದುವೆ ಮಾಡಿಸಿ ಎಂದು ವಿದ್ಯುತ್ ತಂತಿ ಹಿಡಿದು ನೇತಾಡಿದ 15 ವರ್ಷದ ಬಾಲಕ
ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ
ಕೇಂದ್ರವೇ ಮೆಟ್ರೋ ದರ ಏರಿಸಿದ್ದಾದ್ರೆ ರಾಜ್ಯ ಇವತ್ತೇ ಪತ್ರ ಬರೆಯಲಿ
ಬಿರಿಯಾನಿ ಕೊಟ್ಟು ಸಿನಿಮಾ ತೋರಿಸ್ತಿದ್ದಾರೆ: ನಿರ್ಮಾಪಕರ ಟೀಕಿಸಿದ ಕೆ ಮಂಜು
ಬಿರಿಯಾನಿ ಕೊಟ್ಟು ಸಿನಿಮಾ ತೋರಿಸ್ತಿದ್ದಾರೆ: ನಿರ್ಮಾಪಕರ ಟೀಕಿಸಿದ ಕೆ ಮಂಜು
ಚಂದ್ರಚೂಡ್ ವಿವಾದ: ಸುದೀಪ್ ಬಗ್ಗೆ ಮಾತನಾಡಿದ್ದಕ್ಕೆ ಕೆ. ಮಂಜು ಸ್ಪಷ್ಟನೆ
ಚಂದ್ರಚೂಡ್ ವಿವಾದ: ಸುದೀಪ್ ಬಗ್ಗೆ ಮಾತನಾಡಿದ್ದಕ್ಕೆ ಕೆ. ಮಂಜು ಸ್ಪಷ್ಟನೆ
ರಸ್ತೆಗಳು ಮಾತ್ರವಲ್ಲ,ಮನಷ್ಯರು ತಿರುಗಾಡುವ ಫುಟ್​​​ಬಾತ್​​ಗಳು ಸರಿ ಇಲ್ಲ
ರಸ್ತೆಗಳು ಮಾತ್ರವಲ್ಲ,ಮನಷ್ಯರು ತಿರುಗಾಡುವ ಫುಟ್​​​ಬಾತ್​​ಗಳು ಸರಿ ಇಲ್ಲ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ
ಹಿಂದೂ ಧರ್ಮಕ್ಕೆ ಅಪಮಾನವಾಗೋ ರೀತಿ ಸ್ಟೇಟಸ್​​ ಇಟ್ಟಿದ್ದ ಯುವಕನ ಬಂಧನ
ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ
ಪ್ರೀತಿಗೆ ಒಪ್ಪಿಲ್ಲವೆಂದು ಶಿಕ್ಷಕಿಯ ತುಟಿ ಕಚ್ಚಿ ತುಂಡರಿಸಿದ ವಿದ್ಯಾರ್ಥಿ