Astrology: ಈ ರಾಶಿಯವರು ರಾಜಕೀಯ ಸೇರುವ ಪ್ರಯತ್ನ ಮಾಡುವಿರಿ
ರಾಶಿ ಭವಿಷ್ಯ, ಭಾನುವಾರ(ಅಕ್ಟೋಬರ್: 06): ಇದು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ವೃತ್ತಿಯ ಬಗ್ಗೆ ಗೌರವ ಇರಲಿ. ನಿಮ್ಮ ವಾದವು ಸರಿ ಇದ್ದರೂ ವ್ಯಕ್ತಪಡಿಸುವ ರೀತಿಯಿಂದ ಅದು ಭಿನ್ನವೆನಿಸಬಹುದು. ಹಳೆಯ ಸ್ನೇಹಿತರಿಂದ ನಿಮಗೆ ಸಹಾಯವು ಸಿಗುವುದು. ಹಾಗಾದರೆ ಅಕ್ಟೋಬರ್: 06ರ ದಿನ ಭವಿಷ್ಯ ಮತ್ತು ಪಂಚಾಂಗ ಇಲ್ಲಿದೆ ನೋಡಿ.
ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಭಾನು, ತಿಥಿ: ಚತುರ್ಥೀ, ನಿತ್ಯನಕ್ಷತ್ರ: ವಿಶಾಖಾ, ಯೋಗ: ಪ್ರೀತಿ, ಕರಣ: ಗರಜ, ಸೂರ್ಯೋದಯ ಬೆಳಗ್ಗೆ 06 ಗಂಟೆ 23 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 17 ನಿಮಿಷಕ್ಕೆ, ರಾಹು ಕಾಲ ಮಧ್ಯಾಹ್ನ 04:48 ರಿಂದ 06:17, ಯಮಘಂಡ ಕಾಲ ಮಧ್ಯಾಹ್ನ 12:21ರಿಂದ 01: 50ರ ವರೆಗೆ, ಗುಳಿಕ ಕಾಲ ಮಧ್ಯಾಹ್ನ 03:19 ರಿಂದ 04:48 ರವರೆಗೆ.
ಧನು ರಾಶಿ: ಸ್ನೇಹಿತರ ಜೊತೆ ನೀವು ಈ ದಿನವನ್ನು ಆನಂದದಿಂದ ಕಳೆಯುವಿರಿ. ಆದಾಯದಲ್ಲಿ ಹಿನ್ನಡೆ ಆಗುವುದು. ಬುದ್ಧಿವಂತಿಕೆಯಿಂದ ನೀವು ಹಣದ ವಂಚನೆಯಿಂದ ತಪ್ಪಿಸಿಕೊಳ್ಳುವಿರಿ. ದಿನ ನಿತ್ಯದ ಜೀವನವು ಏರುಪೇರಾಗಬಹುದು. ಇದು ಆರೋಗ್ಯದ ಮೇಲೂ ಪರಿಣಾಮ ಬೀರಬಹುದು. ವೃತ್ತಿಯ ಬಗ್ಗೆ ಗೌರವ ಇರಲಿ. ನಿಮ್ಮ ವಾದವು ಸರಿ ಇದ್ದರೂ ವ್ಯಕ್ತಪಡಿಸುವ ರೀತಿಯಿಂದ ಅದು ಭಿನ್ನವೆನಿಸಬಹುದು. ಹಳೆಯ ಸ್ನೇಹಿತರಿಂದ ನಿಮಗೆ ಸಹಾಯವು ಸಿಗುವುದು. ಅವಿವಾಹಿತರು ವಿವಾಹಕ್ಕೆ ಸಂಬಂಧಿಸಿದ ಸುದ್ದಿಯು ಬರಬಹುದು. ಸುಮ್ಮನಿರುವ ಶತ್ರುಗಳನ್ನು ಏನನ್ನಾದರೂ ಹೇಳಿ ಎಬ್ಬಿಸಬೇಡಿ. ನಿಮ್ಮ ಕೆಲಸವನ್ನು ಪೂರ್ತಿ ಮಾಡಿಕೊಳ್ಳಲು ಆದ್ಯತೆ ನೀಡಿ. ತಂದೆಯಿಂದ ನಿಮಗೆ ಸಹಕಾರ ಸಿಗಲಿದೆ. ಸಹೋದರರ ಮಾತಿಗೆ ಪೂರ್ಣ ವಿರೋಧ ಬೇಡ. ಆದರೆ ತಿಳಿಸುವ ಕ್ರಮದಲ್ಲಿ ತಿಳಿಸಿ. ನಿಮ್ಮ ನೇರ ಮಾತಿನಿಂದ ತೊಂದರೆ ಆಗಬಹುದು. ಪ್ರೇಮದಲ್ಲಿ ಯಾರನ್ನಾದರೂ ನಿಮ್ಮವರನ್ನಾಗಿ ಮಾಡಿಕೊಳ್ಳುವ ಕಲೆ ನಿಮಗೆ ತಿಳಿಯದು.
ಮಕರ ರಾಶಿ: ಉದ್ಯಮವನ್ನು ಸಡಿಲಮಾಡುವುದು ಬೇಡ. ನಿರುದ್ಯೋಗದ ಕಾರಣಕ್ಕೆ ಎಲ್ಲರೂ ನಿಮ್ಮನ್ನು ತಮಾಷೆ ಮಾಡಬಹುದು. ಕುಟುಂಬದ ಜೊತೆ ಹೆಚ್ಚು ಸಮಯವನ್ನು ಕಳೆಯುವಿರಿ. ಇಬ್ಬರಿಗೂ ಸಂತೋಷವಾಗಲಿದೆ. ನೀವಂದುಕೊಂಡಿದ್ದೇ ಸತ್ಯ ಎನ್ನುವ ಮಾನಸಿಕ ಸ್ಥಿತಿಯನ್ನು ಬೆಳೆಸಿಕೊಂಡಿದ್ದರೆ ಅದರಿಂದ ಹೊರಬರುವುದು ಒಳ್ಳೆಯದು. ಯಾವುದೇ ಉಪಕರಣಗಳನ್ನು ಮರುಬಳಕೆಗೆ ಯೋಚಿಸುವಿರಿ. ಇಲ್ಲವಾದರೆ ಎಲ್ಲ ಕಡೆಯೂ ಇದೇ ಸ್ಥಿತಿ ಎದುರಾಗಿ ನೆಮ್ಮದಿಯನ್ನು ಕಳೆದುಕೊಳ್ಳಬೇಕಾಗಬಹುದು. ಬಹಳ ಪ್ರಯತ್ನಪೂರ್ವಕವಾಗಿ ಮಾಡಿದ ಕೆಲಸವು ವ್ಯರ್ಥವಾಗು ಸಂಭವವಿದೆ. ನಿಮ್ಮ ಮಕ್ಕಳು ಪ್ರಗತಿಯತ್ತ ಸಾಗುತ್ತಿರುವುದು ನಿಮಗೆ ಖುಷಿಯ ಸಂಗತಿಯಾಗಿದೆ. ಪಾಲುದಾರಿಕೆಯಲ್ಲಿ ಸಣ್ಣ ವಿಷಯವನ್ನೂ ಗಂಭೀರವಾಗಿ ಪರಿಹಣಿಸುವಿರಿ. ಹಳೆಯ ಬಟ್ಟೆಗಳನ್ನು ನೀವು ಇಂದು ಧರಿಸಬಹುದು. ಸಂಗಾತಿಯನ್ನು ಮನವೊಲಿಸುವುದು ನಿಮಗೆ ಕಷ್ಟವಾಗಿ, ಸಿಟ್ಟುಗೊಳ್ಳಬೇಕಾಗುವುದು.
ಕುಂಭ ರಾಶಿ: ಇನ್ನೊಬ್ಬರ ಭಾವನೆಗೆ ಬೆಲೆ ಕೊಟ್ಟಾಗ ನಿಮಗೂ ಅದು ಸಿಗುವುದು. ನಿಮ್ಮ ವೃತ್ತಿಯ ಆದಾಯಕ್ಕಿಂತ ಬೇರೆ ಕಡೆಯಿಂದ ಆದಾಯ ಸಿಗಲಿದೆ. ಮನೋರಂಜನೆಗೆ ಅಧಿಕ ಸಮಯವನ್ನು ನೀವು ನೋಡುವಿರಿ. ನಿಮ್ಮ ಕಠಿಣ ಪರಿಶ್ರಮದಿಂದ ಚಿಂತಿತಕಾರ್ಯವು ಸಾಧ್ಯವಾಗಬಹುದು. ವಿದೇಶದಲ್ಲಿ ಇದ್ದವರಿಗೆ ಕೆಲವು ಆತಂಕದ ಸನ್ನಿವೇಶವು ಬರಬಹುದು. ನಿಮ್ಮ ಯಶಸ್ಸನ್ನು ಸಹಿಸಲಾಗದೇ ನೊಂದುಕೊಳ್ಳುವರು. ಅದನ್ನು ಲೆಕ್ಕಿಸದೇ ಮುಂದುವರಿಯಿರಿ. ದಾಂಪತ್ಯದಲ್ಲಿ ವಿವಾದವಾಗಬಹುದು. ಬೆಳಗಿನ ಉತ್ಸಾಹವು ಸಂಜೆಯವರೆಗೂ ಇರಲಿದೆ. ಅರ್ಥವಿಲ್ಲದ ಚರ್ಚೆಗಳಲ್ಲಿ ಸಮಯವನ್ನು ನಷ್ಟ ಮಾಡಿಕೊಳ್ಳುವುದು ಬೇಡ. ನಿಮ್ಮ ಮನಸ್ಸನ್ನು ಯೋಗ್ಯರ ಜೊತೆ ಹಂಚಿಕೊಳ್ಳಿ. ವ್ಯಾಪಾರ ಮಾಡುವ ಜನರ ಜೊತೆ ಸೇರಿ ಕೆಲವು ಕೆಲಸಗಳನ್ನು ಮಾಡಲು ಅವಕಾಶವಿದೆ. ನಿಮ್ಮ ಕನಸಿಗೆ ಆಕಾರ ಸಿಕ್ಕಿದ್ದು ಖುಷಿಕೊಡುವುದು. ಸೌಂದರ್ಯಕ್ಕೆ ಹೆಚ್ಚು ಮಹತ್ತ್ವ ಕೊಡುವಿರಿ. ನೀವು ಹೇಳಿದ್ದನ್ನು ಬಂಧುಗಳು ಮಾಡಿಕೊಡುವರು.
ಮೀನ ರಾಶಿ: ನಿಮ್ಮ ವಿರುದ್ಧದ ಸಂಚು ಇಂದು ಬಯಲಾಗಬಹುದು. ಪರರ ಭಾಗ್ಯವನ್ನು ನೆನೆದು ಕೊರಗುವುದಕ್ಕಿಂತ ನಿಮ್ಮ ಇರುವ ಭಾಗ್ಯವನ್ನು ನೆನೆದು ಸಂತೋಷಪಡಿ. ತಿಳಿವಳಿಕೆ ಇಲ್ಲದವರಿಗೆ ನಿಮ್ಮ ವ್ಯವಹಾರಗಳನ್ನು ಹೇಳಬೇಡಿ. ನಿಮಗೆ ಬರಬೇಕಾದ ಹಣದ ಬಗ್ಗೆ ನಿರ್ಲಕ್ಷ್ಯ ತೋರಿದ್ದರಿಂದ ನಿಮಗೆ ನಷ್ಟವಾಗಬಹುದು. ಆಪ್ತರಿಗಾಗಿ ನೀವು ರಾಜಕೀಯಕ್ಕೆ ಸೇರುವ ಪ್ರಯತ್ನವನ್ನು ಮಾಡುವಿರಿ. ಇಂದು ಸ್ವಲ್ಪ ದೇಹಕ್ಕೂ ಮನಸ್ಸಿಗೂ ವಿಶ್ರಾಂತಿಯನ್ನು ನೀಡಿದರೆ ಒಳ್ಳೆಯದು. ಆಗಬೇಕಾಗಿರುವ ಕೆಲಸದ ಬಗ್ಗೆ ಗಮನ ಹರಿಸಿ ಮುಗಿಸುವುದು ಒಳ್ಳೆಯದು. ಸಂಬಂಧಗಳನ್ನು ಸರಿಯಾಗಿ ಹಾಳು ಮಾಡಿಕೊಳ್ಳುವುದು ಬೇಡಿ. ಔದ್ಯೋಗಿಕ ಕ್ಷೇತ್ರಕ್ಕೆ ಸೇರಲು ನಿಮ್ಮ ತರಬೇತಿ ಇರುವುದು. ನಿಮ್ಮನ್ನು ನೆಚ್ಚುವವರ ಸಂಖ್ಯೆ ಕಡಿಮೆಯಾಗುವ ಸಾಧ್ಯತೆ ಇದೆ. ನಿಮ್ಮ ಸಣ್ಣ ಮನಸ್ಸನ್ನು ಅವರಿಗೆ ತೋರಿಸಬೇಡಿ. ಉನ್ನತ ಅಧ್ಯಯನವನ್ನು ಬಯಸಿ ಬೇರೆ ಕಡೆಗೆ ತೆರಳುವಿರಿ.