ನಿತ್ಯಪಂಚಾಂಗ: ಶಾಲಿವಾಹನ ಶಕೆ 1947, ಕ್ರೋಧೀ ಸಂವತ್ಸರ, ದಕ್ಷಿಣಾಯನ, ಶರದ್ ಋತು, ಕನ್ಯಾ ಮಾಸ, ಮಹಾನಕ್ಷತ್ರ: ಹಸ್ತಾ, ಮಾಸ: ಆಶ್ವಯುಜ, ಪಕ್ಷ: ಶುಕ್ಲ, ವಾರ: ಶನಿ, ತಿಥಿ: ದಶಮೀ, ನಿತ್ಯನಕ್ಷತ್ರ: ಶ್ರಾವಣ, ಯೋಗ: ಧೃತಿ, ಕರಣ: ಕೌಲವ, ಸೂರ್ಯೋದಯ ಬೆಳಗ್ಗೆ 06 ಗಂಟೆ 24 ನಿಮಿಷಕ್ಕೆ, ಸೂರ್ಯಾಸ್ತ ಸಂಜೆ 06 ಗಂಟೆ 13 ನಿಮಿಷಕ್ಕೆ, ರಾಹು ಕಾಲ ಬೆಳಗ್ಗೆ 09:22 ರಿಂದ 10:50, ಯಮಘಂಡ ಕಾಲ ಮಧ್ಯಾಹ್ನ 01:48ರಿಂದ 03:16ರವರೆಗೆ, ಗುಳಿಕ ಕಾಲ ಬೆಳಗ್ಗೆ 06:25 ರಿಂದ 07:53 ರವರೆಗೆ.
ಮೇಷ ರಾಶಿ: ನಿಮ್ಮ ಜೀವನದ ಅತ್ಯಂತ ನಿರ್ಣಾಯಕ ಕ್ಷಣವನ್ನು ಎದುರಿಸುವಾಗ ಜಾಗರೂಕರಾಗಿರಿ. ಕಾನೂನಿನ ವಿಚಾರದಲ್ಲಿ ನಿಮಗೆ ಸಕಾರಾತ್ಮಕ ಬೆಳವಣಿಗೆಯು ಇರಲಿದೆ. ಮಕ್ಕಳ ಜೊತೆ ವಾಗ್ವಾದ ಮಾಡುವ ಸಂದರ್ಭವು ಬರಬಹುದು. ಪ್ರಾರಬ್ಧಕರ್ಮಗಳನ್ನು ಅನುಭವಿಸಿ ತೀರುವುದೇ ದಾರಿ. ಆಗಿಹೋದ ಘಟನೆಗಳು ನಿಮ್ಮ ಸ್ಮರಣೆಗೆ ಬರಲಿದ್ದು ಅದನ್ನು ಮರೆಯುವ ಪ್ರಯತ್ನ ಮಾಡಿದರೂ ಅಸಾಧ್ಯ ಎನಿಸಬಹುದು. ಮನಸ್ಸನ್ನು ಒಂದೇ ವಿಚಾರದಲ್ಲಿ ಮನಸ್ಸನ್ನು ನಿಲ್ಲಿಸಲು ಪ್ರಯತ್ನಿಸುವಿರಿ. ವಾಹನ ಸಂಚಾರದಿಂದ ನಿಮಗೆ ನೆಮ್ಮದಿ. ಭವಿಷ್ಯದ ಬಗ್ಗೆ ಹತ್ತಾರು ಕನಸುಗಳು ಇರಲಿವೆ. ವಿದ್ಯಾರ್ಥಿಗಳು ಅಧ್ಯಯನಕ್ಕೆ ತೊಡಗುವುದು ಕಷ್ಟವಾದೀತು. ಸಹೋದ್ಯೋಗಿಗಳ ವರ್ತನೆಯು ಇಷ್ಟವಾಗದೇ ಸಿಟ್ಟಾಗುವಿರಿ. ಹಲವಾರು ವರ್ಷದ ಕನಸಿಗೆ ಗರಿಬಂದಂತೆ ಆಗಬಹುದು.
ವೃಷಭ ರಾಶಿ: ವಿದ್ಯಾಭ್ಯಾಸವನ್ನು ಮುಂದುವರಿಸುವುದು ಕಷ್ಟವಾಗಬಹುದು. ನಿಮ್ಮ ಉದಾರ ಮತ್ತು ಬೆಂಬಲದ ಸ್ವಭಾವದಿಂದ, ಜನರು ನಿಮ್ಮ ಬಳಿ ಬಂದು ನಿಮ್ಮ ಕೆಲಸದಲ್ಲಿ ನೆರವಾಗುತ್ತಾರೆ. ನಿಮ್ಮ ತೊಂದರೆಗಳನ್ನು ಇನ್ನೊಬ್ಬರ ಜೊತೆ ಹಂಚಿಕೊಳ್ಳುವಿರಿ. ನಿಮ್ಮ ವಿರೋಧಿಗಳು ಸಹಜವಾಗಿ ಕಡಿಮೆಯಾಗುವರು. ನೀವು ನಿಯೋಜಿತ ಕಾರ್ಯಗಳನ್ನು ಒಂದೊಂದಾಗಿ ಮಾಡಿ ಮುಗಿಸುವುದು ಉತ್ತಮ. ದಾಂಪತ್ಯದಲ್ಲಿ ಉಂಟಾದ ಕಲಹವು ಮಧ್ಯಸ್ತಿಕೆಯಿಂದ ಪರಿಹಾರವಾಗುವುದು. ಮಾಡಿದ ತಪ್ಪನ್ನೇ ಮತ್ತೆ ಮಾಡಿ ಮನೆಯಲ್ಲಿ ಬೈಗುಳವನ್ನು ತಿನ್ನುವಿರಿ. ಅಪರಿಚಿತರ ಜೊತೆ ಅಂತರದಿಂದ ಮಾತನಾಡಿ. ಕಲಿತ ವಿದ್ಯೆಯನ್ನು ಎಲ್ಲಿಯಾದರೂ ಬಳಸುವುದು ಸೂಕ್ತ. ನಿಮ್ಮದಾದ ವಾಹನವಿಲ್ಲದೇ ನೀವು ಬೇಸರಿಸುವಿರಿ. ದೂರದ ಊರಿಗೆ ಪ್ರವಾಸ ಹೋಗುವ ಇಚ್ಛೆ ಇದ್ದರೂ ಅದು ಆಗದು. ನಿಮ್ಮ ಬಗ್ಗೆ ತಪ್ಪು ತಿಳಿವಳಿಕೆಯು ಬರಬಹುದು. ಪುಣ್ಯಕ್ಷೇತ್ರದ ದರ್ಶನವನ್ನು ಮಾಡಿ. ಮಿತವಾದ ಮಾತು ನಿಮಗೆ ಆಗದು.
ಮಿಥುನ ರಾಶಿ: ದುರಭ್ಯಾಸವು ಜಗಜ್ಜಾಹಿರಾಗಬಹುದು. ನಿಮ್ಮ ಈ ದಿನ ಚೆನ್ನಾಗಿ ಪ್ರಾರಂಭವಾಗಿರಲಿದ್ದು, ನಿಮ್ಮ ಸಾಮರ್ಥ್ಯಗಳಿಂದ ಪ್ರತಿಯೊಬ್ಬರನ್ನೂ ಅಚ್ಚರಿಗೊಳಿಸುವಿರಿ. ನಿಮ್ಮ ಆದಾಯದ ಮೂಲವನ್ನು ಎಲ್ಲರ ಜೊತೆ ಹಂಚಿಕೊಳ್ಳುವುದು ಬೇಡ. ಇದರಿಂದ ನಿಮ್ಮ ಆದಾಯಕ್ಕೆ ತೊಂದರೆ ಆಗುವ ಸಾಧ್ಯತೆ ಇದೆ. ನಿಮ್ಮ ತಮಾಷೆಗೂ ಒಂದು ಮಿತಿ ಇರಲಿ. ಉದ್ಯೋಗದ ಆರಂಭದ ದಿನಗಳು ನಿಮಗೆ ಕಷ್ಟ ಎಂದು ಅನ್ನಿಸಬಹುದು. ಸಹೋದ್ಯೋಗಿಗಳ ಸಹಾಯವನ್ನು ನೀವು ಪಡೆಯಬೇಕಾಗಬಹುದು. ನಿಮ್ಮ ಮಕ್ಕಳ ವರ್ತನೆಯಲ್ಲಿ ಬದಲಾವಣೆ ಆಗಲಿದೆ. ನಿಮ್ಮ ಜೀವನ ಸಂಗಾತಿಯ ಆರೋಗ್ಯವು ಹದ ತಪ್ಪಬಹುದು. ಮಾಡಬೇಕಾದ ಕೆಲಸಗಳನ್ನು ಆಸಕ್ತಿಯಿಂದ ಮಾಡುವಿರಿ. ನಿಮ್ಮನ್ನು ಭೂಮಿಯ ಖರೀದಿಗೆ ಒತ್ತಾಯಿಸಬಹುದು. ಉದ್ಯಮದಲ್ಲಿ ಕ್ರಿಯಾಶೀಲತೆಯನ್ನು ಬಯಸುವಿರಿ. ನೂತನ ವಸ್ತುಗಳಿಂದ ಸಂತೋಷವು ಸಿಗುವುದು.
ಕರ್ಕಾಟಕ ರಾಶಿ: ಕರ್ತವ್ಯದಲ್ಲಿ ಲೋಪವಾಗುವ ಸಾಧ್ಯತೆ ಹೆಚ್ಚು. ನಿಮ್ಮ ಸುತ್ತಲಿನ ಮಾತುಕತೆಗಳನ್ನು ಗಮನಿಸುತ್ತಿರಿ. ನಿಮಗೆ ಇದಮಿತ್ಥಂ ಎಂದು ಸರಿಯಾದ ನಿರ್ಧಾರವನ್ನು ತೆಗದುಕೊಳ್ಳಲು ನಿಮಗೆ ಆಗದು. ಒಂದು ಕಾರ್ಯಕ್ಕೆ ಹತ್ತಾರು ಆಲೋಚನೆಗಳು ಒಟ್ಟಿಗೇ ಬರುವ ಕಾರಣ ಹೀಗಾಗುವುದು. ದೈವಲೀಲೆಯ ಬಗ್ಗೆ ನಿಮಗೆ ನಂಬಿಕೆ ಹೆಚ್ಚಿರುವುದು. ಪರರಿಗೆ ಸಂತೋಷವನ್ನು ಕೊಡುವುದು ಪೂಜೆಯಷ್ಟೇ ಫಲ. ಹಠದ ಸ್ವಭಾವವನ್ನು ಮಕ್ಕಳೂ ಮುಂದುವರಿಸಬಹುದು. ಅವರೆದುರು ನಕಾರಾತ್ಮಕ ಗುಣಗಳು ಬೇಡ. ತಂದೆ ಮತ್ತು ಮಕ್ಕಳ ನಡುವೆ ಶೀತಲ ಸಮರವು ನಡೆಯುವುದು. ತಾಳ್ಮೆಯ ಮಟ್ಟವು ಮಿತಿಮೀರುವ ಸಂದರ್ಭವು ಬರಬಹುದು. ಹಿತವಾದ ಆಹಾರವನ್ನು ಸ್ವೀಕರಿಸಿ. ಹಣಕಾಸಿನ ವ್ಯವಹಾರದಲ್ಲಿ ವೈಮನಸ್ಯ ಉಂಟಾಗುವುದು. ನಿಮ್ಮ ಮೌನವು ಏನನ್ನೋ ಹೇಳುವುದು. ಸಮಾರಂಭಗಳಲ್ಲಿ ಬಂಧುಗಳು ನಿಮ್ಮನ್ನು ಭೇಟಿಯಾಗುವರು. ನಿಮ್ಮ ವಿರೋಧಿಗಳಗೆ ಮಾತಿನಿಂದ ಉತ್ತರಿಸಿ ಉಪಯೋಗವಿಲ್ಲ.