Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 12ರ ದಿನಭವಿಷ್ಯ

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 12ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆಗೆ ಅನುಗುಣವಾಗಿ ಅಕ್ಟೋಬರ್ 12ರ ದಿನಭವಿಷ್ಯ
ಸಂಖ್ಯಾಶಾಸ್ತ್ರ
Follow us
| Updated By: ಕಿರಣ್ ಹನುಮಂತ್​ ಮಾದಾರ್

Updated on: Oct 12, 2024 | 12:02 AM

ನಿಮ್ಮ ಜನ್ಮಸಂಖ್ಯೆಗೆ ಅನುಗುಣವಾಗಿ ಇಲ್ಲಿ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆಯನ್ನು ತಿಳಿದುಕೊಳ್ಳುವುದು ಹೇಗೆ ಎಂಬುದಕ್ಕೆ ಇಲ್ಲಿ ಮಾಹಿತಿ ನೀಡಲಾಗಿದೆ. ಜನ್ಮಸಂಖ್ಯೆಯ ಆಧಾರದಲ್ಲಿ ಅಕ್ಟೋಬರ್ 12ರ ಶನಿವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1)

ಸ್ಟೇಷನರಿ ವಸ್ತುಗಳನ್ನು ಮಾರಾಟ ಮಾಡುತ್ತಿರುವವರು, ಪುಸ್ತಕಗಳ ಮುದ್ರಕರು ಹಾಗೂ ಪ್ರಕಾಶಕರಿಗೆ ಬಹಳ ಒಳ್ಳೆ ದಿನ ಇದಾಗಿರುತ್ತದೆ. ದೊಡ್ಡ ಮಟ್ಟದ ಆರ್ಡರ್ ವೊಂದನ್ನು ಕೊಡಿಸುವುದಾಗಿ ನಿಮ್ಮ ಆಪ್ತರು ಭರವಸೆ ನೀಡಬಹುದು. ಅಥವಾ ನಿಮ್ಮನ್ನೇ ಕರೆದುಕೊಂಡು ಹೋಗಿ, ಸಂಬಂಧಿಸಿದವರಿಗೆ ನೇರಾನೇರ ಪರಿಚಯ ಸಹ ಮಾಡಿಕೊಡಬಹುದು. ಅವಕಾಶಗಳು ಯಾವುದೇ ರೂಪದಲ್ಲಿ ಬಂದರೂ ಸದುಪಯೋಗ ಮಾಡಿಕೊಳ್ಳುವ ಕಡೆಗೇ ನಿಮ್ಮ ಲಕ್ಷ್ಯವಿರಲಿ. ವಿದೇಶಗಳಲ್ಲಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಉತ್ತಮವಾದ ಮಾರ್ಗದರ್ಶನ ದೊರೆಯಲಿದೆ. ಅಥವಾ ರೆಸ್ಯೂಮೆ ಸೇರಿದಂತೆ ಉದ್ಯೋಗಕ್ಕೆ ಸಂಬಂಧಿಸಿದಂತೆ ಪ್ರಮುಖ ವಿಚಾರಗಳಲ್ಲಿ ಸರಿಯಾದ ರೀತಿಯಲ್ಲಿ ಸಹಾಯ ಮಾಡುವಂಥ ಕನ್ಸಲ್ಟೆಂಟ್ ಗಳು ಪರಿಚಯ ಆಗಲಿದ್ದಾರೆ. ಪಾರ್ಟಿ- ಗೆಟ್ ಟು ಗೆದರ್ ಗಳಲ್ಲಿ ಭಾಗೀ ಆಗುವಂಥ ಯೋಗ ಇದ್ದು, ಅಲ್ಲಿಯೂ ನಿಮಗೆ ಸಹಾಯ ಆಗಬಲ್ಲಂಥ ವ್ಯಕ್ತಿಗಳು ಪರಿಚಯ ಆಗಲಿದ್ದಾರೆ.

ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2)

ಈ ದಿನ ಸಂಬಂಧಿಗಳು, ಸ್ನೇಹಿತರ ಜತೆಗೆ ಸಂಭ್ರಮಾಚರಣೆಯಲ್ಲಿ ಭಾಗವಹಿಸುವಂಥ ಯೋಗ ನಿಮ್ಮ ಪಾಲಿಗೆ ಇದೆ. ಹೋಮ್ ಸ್ಟೇ, ಪಿ.ಜಿ.ಗಳನ್ನು ನಡೆಸುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಇದೆ. ಬಹಳ ಕಾಲದಿಂದ ಖರೀದಿ ಮಾಡಬೇಕು ಎಂದುಕೊಂಡಿದ್ದ ವಸ್ತುಗಳನ್ನು ಕೊಳ್ಳುವಂಥ ಯೋಗ ಇದೆ. ಇದಕ್ಕಾಗಿ ಒಂದು ವೇಳೆ ಹಣಕಾಸಿನ ಕೊರತೆ ಬಂದಲ್ಲಿ ಅದು ಕೂಡ ಸುಲಭವಾಗಿ ಹೊಂದಿಕೆ ಆಗಲಿದೆ. ಇನ್ನು ನಿಮ್ಮಲ್ಲಿ ವ್ಯಾಪಾರ- ವ್ಯವಹಾರ ಮಾಡುತ್ತಿರುವವರು ನಿರ್ಣಾಯಕವಾದ ಕೆಲವು ನಿರ್ಧಾರಗಳನ್ನು ಈ ದಿನ ತೆಗೆದುಕೊಳ್ಳಬೇಕಾಗುತ್ತದೆ. ಸಂಘ- ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಯೊಂದನ್ನು ವಹಿಸಿಕೊಳ್ಳುವಂತೆ ನಿಮ್ಮ ಬಳಿ ಕೇಳಿಕೊಳ್ಳಬಹುದು. ಜಿಎಸ್ ಟಿ ಅಥವಾ ಬೇರೆ ಯಾವುದಾದರೂ ತೆರಿಗೆಗೆ ಸಂಬಂಧಿಸಿದ ವ್ಯಾಜ್ಯಗಳು ಇದ್ದಲ್ಲಿ ಅದನ್ನು ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಸಮರ್ಥ ತೆರಿಗೆ ಪರಿಣತರೊಬ್ಬರನ್ನು ನೇಮಿಸಿಕೊಳ್ಳಲಿದ್ದೀರಿ.

ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3)

ಕಾಲು ಊತ, ಮಂಡಿ- ಹಿಮ್ಮಡಿ ನೋವು ಈ ರೀತಿಯ ಆರೋಗ್ಯ ಸಮಸ್ಯೆಗಳು ನಿಮ್ಮನ್ನು ಕಾಡಬಹುದು. ಈ ದಿನ ಮಾಡಬೇಕು ಅಂದುಕೊಂಡಂಥ ಹಲವು ಕೆಲಸಗಳನ್ನು ಮುಂದಕ್ಕೆ ಹಾಕಬೇಕಾದ ಸನ್ನಿವೇಶ ನಿರ್ಮಾಣ ಆಗಲಿದೆ. ನಿಮಗೆ ಸಹಾಯ ಮಾಡುವುದಾಗಿ ಮಾತು ನೀಡಿದಂಥವರು ಕೊನೆ ಕ್ಷಣದಲ್ಲಿ ಅಥವಾ ನೀವು ನಿರೀಕ್ಷೆಯೇ ಮಾಡಿರದ ರೀತಿಯಲ್ಲಿ ತಮ್ಮಿಂದ ಏನೂ ಸಹಾಯ ಮಾಡುವುದಕ್ಕೆ ಈಗ ಸಾಧ್ಯವಿಲ್ಲ ಎನ್ನಬಹುದು. ವಿದ್ಯಾರ್ಥಿಗಳಿಗೆ ಪೋಷಕರ ಕೆಲವು ನಿರ್ಧಾರಗಳ ಬಗ್ಗೆ ಮನಸ್ಸಿಗೆ ಬೇಸರ ಆಗಬಹುದು. ಇಷ್ಟವಿಲ್ಲದಿದ್ದರೂ ಕೆಲವು ಸ್ಥಳಕ್ಕೆ ಹೋಗಬೇಕಾಗುತ್ತದೆ. ಅದೇ ರೀತಿ ಕೆಲವು ವ್ಯಕ್ತಿಗಳ ಜತೆಗೆ ಮಾತುಕತೆ ಸಹ ಆಡಬೇಕಾಗುತ್ತದೆ. ಚಾಕೊಲೆಟ್, ತಂಪು ಪಾನೀಯಗಳು, ಬಿಸ್ಕತ್ ನಂಥದ್ದರ ವಿತರಣೆ ಮಾಡುತ್ತಾ ಬಂದಂಥವರಿಗೆ ಹೆಚ್ಚಿನ ಹಣವನ್ನು ಡೆಪಾಸಿಟ್ ಮಾಡುವಂತೆ ಕೇಳಬಹುದು. ಒಂದು ವೇಳೆ ಅಷ್ಟು ಮೊತ್ತ ಕಟ್ಟುವುದಕ್ಕೆ ಸಾಧ್ಯವಿಲ್ಲ ಅಂತಾದರೆ ವಿತರಣೆ ಅವಕಾಶ ಬೇರೆಯವರಿಗೆ ನೀಡುವುದಾಗಿ ಹೇಳಬಹುದು.

ಜನ್ಮಸಂಖ್ಯೆ 4 (ಯಾವುದೇ ತಿಂಗಳಿನ 4, 13, 22, 31ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 4)

ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗೀ ಆಗುವಂಥ ಯೋಗ ನಿಮ್ಮ ಪಾಲಿಗೆ ಇದೆ. ಪ್ರೀತಿ- ಪ್ರೇಮದಲ್ಲಿ ಇರುವಂಥವರಿಗೆ ಮನೆಯಲ್ಲಿ ಈ ದಿನ ವಿಚಾರವನ್ನು ಪ್ರಸ್ತಾವ ಮಾಡುವಂಥ ಅವಕಾಶ ಸಿಗಲಿದೆ. ಕಿರು ಪ್ರವಾಸಕ್ಕಾದರೂ ಸ್ನೇಹಿತರು- ಸಂಬಂಧಿಕರ ಜತೆಗೂಡಿ ತೆರಳುವಂಥ ಸಾಧ್ಯತೆಗಳಿವೆ. ಹಾಗೊಂದು ವೇಳೆ ತೆರಳುತ್ತಿದ್ದೀರಿ ಅಂತಾದಲ್ಲಿ ಆಹಾರ- ನೀರು ಸೇವನೆ ವಿಚಾರದಲ್ಲಿ ಬಹಳ ಜಾಗ್ರತೆಯಿಂದ ಇರುವುದು ಮುಖ್ಯವಾಗುತ್ತದೆ. ಜ್ವರ, ಬಳಲಿಕೆ, ಮೈ- ಕೈ ನೋವಿನಂಥ ಅಸ್ವಾಸ್ಥ್ಯ ಕಾಡಬಹುದು, ಜಾಗ್ರತೆ. ವಕೀಲಿಕೆ, ಚಾರ್ಟರ್ಡ್ ಅಕೌಂಟೆಂಟ್ ಹೀಗೆ ವೃತ್ತಿನಿರತರಿಗೆ ಆದಾಯ ಹೆಚ್ಚಳ ಮಾಡಿಕೊಳ್ಳುವ ನಿಟ್ಟಿನಲ್ಲಿ ದೊಡ್ಡ ಸಂಸ್ಥೆಗಳವರು ಕ್ಲೈಂಟ್ ಗಳಾಗಿ ದೊರೆಯಬಹುದು. ನಿಮ್ಮಲ್ಲಿ ಕೆಲವರು ಬ್ರ್ಯಾಂಡೆಡ್ ಬಟ್ಟೆಗಳನ್ನು ಖರೀದಿ ಮಾಡಲಿದ್ದೀರಿ. ಅದಕ್ಕಾಗಿ ಕ್ರೆಡಿಟ್ ಕಾರ್ಡ್ ಬಳಸಿ, ಇಎಂಐ ಆಗಿ ಕನ್ವರ್ಟ್ ಮಾಡಿಸುವ ನಿರ್ಧಾರ ಮಾಡಲಿದ್ದೀರಿ.

ಜನ್ಮಸಂಖ್ಯೆ 5 (ಯಾವುದೇ ತಿಂಗಳಿನ 5, 14, 23ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 5)

ನಿಮ್ಮದೇ ಸ್ವಂತ ಕೆಲಸಗಳನ್ನು ಮಾಡಿಕೊಳ್ಳುವುದಕ್ಕೆ ಸಾಧ್ಯವಾಗದ ದಿನ ಇದಾಗಿರುತ್ತದೆ. ಸ್ನೇಹಿತರೋ ಅಥವಾ ಆಪ್ತರೋ ಕೆಲವು ಕೆಲಸಗಳನ್ನು ಮಾಡಿಕೊಂಡು ಬರುವುದಕ್ಕೆ ತಮ್ಮ ಜೊತೆಗೆ ಬರುವಂತೆ ನಿಮಗೆ ದುಂಬಾಲು ಬೀಳಬಹುದು. ಅಥವಾ ನೀವಾಗಿಯೇ ಬೇರೆಯವರ ಕೆಲವು ಕೆಲಸಗಳನ್ನು ಮೈ ಮೇಲೆ ಎಳೆದುಕೊಂಡು, ನಂತರದಲ್ಲಿ ನಿಮ್ಮ ಕೆಲಸಗಳನ್ನು ಮಾಡಿಕೊಳ್ಳೋಣ ಅಂತ ಅಂದುಕೊಳ್ಳುವ ಸಾಧ್ಯತೆ ಇದೆ. ಮಾಂಸಾಹಾರ ಸೇವನೆ ಮಾಡುವವರು ಈ ದಿನ ಒಂದಿಷ್ಟು ಎಚ್ಚರಿಕೆಯಿಂದ ಇರಬೇಕು. ಏಕೆಂದರೆ ಆಹಾರದ ಗುಣಮಟ್ಟದಲ್ಲಿ ಏರುಪೇರಾಗಿ, ಹೊಟ್ಟೆ ಕೆಡುವಂಥ ಅಥವಾ ಆರೋಗ್ಯ ಸಂಬಂಧಿ ಸಮಸ್ಯೆಗಳು ಕಾಡುವಂಥ ಸಾಧ್ಯತೆಗಳಿವೆ. ನಿಮ್ಮ ಮನಸ್ಸಿಗೆ ಒಪ್ಪದ ಕೆಲವು ಸಂಗತಿಗಳನ್ನು ನೇರಾನೇರವಾಗಿ ಹೇಳುವುದಕ್ಕೆ ಸಾಧ್ಯವಾಗುವುದೇ ಇಲ್ಲ. ಈ ಸ್ವಭಾವವನ್ನು ಬೇರೆಯವರು ತಪ್ಪಾಗಿ ಅರ್ಥೈಸಲಿದ್ದಾರೆ.

ಜನ್ಮಸಂಖ್ಯೆ 6 (ಯಾವುದೇ ತಿಂಗಳಿನ 6, 15, 24ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 6)

ಮನೆ ನಿರ್ಮಾಣ ಮಾಡಬೇಕು ಎಂದು ಬಹಳ ಸಮಯದಿಂದ ಅಂದುಕೊಳ್ಳುತ್ತಿರುವವರು ಸದ್ಯಕ್ಕೆ ಬೇಡ ಎಂದುಕೊಳ್ಳುವ ಸಾಧ್ಯತೆ ಇದೆ. ನಿಮ್ಮ ಉಳಿತಾಯದ ಹಣವನ್ನು ತೆಗೆದು, ಅದರಿಂದ ಕಾರು ಅಥವಾ ಚಿನ್ನದ ಒಡವೆಗಳನ್ನು ಕೊಳ್ಳುವುದಕ್ಕೆ ಯೋಜನೆ ಹಾಕಿಕೊಳ್ಳಲಿದ್ದೀರಿ. ಮದುವೆಗಾಗಿ ಪ್ರಯತ್ನ ಮಾಡುತ್ತಿರುವವರಿಗೆ ಸಂಬಂಧಿಕರ ಕಡೆಯಿಂದ ರೆಫರೆನ್ಸ್ ದೊರೆಯಬಹುದು. ಈ ದಿನ ಮುಖ್ಯವಾದ ವ್ಯಕ್ತಿಗಳನ್ನು ಭೇಟಿ ಆಗುವುದಕ್ಕೆ ಹೋಗುತ್ತೀರಿ ಅಂತಾದರೆ ಸ್ವಲ್ಪ ಬೇಗ ಮನೆಯಿಂದ ಹೊರಡುವುದು ಒಳ್ಳೆಯದು. ಇಲ್ಲದಿದ್ದರೆ ಟ್ರಾಫಿಕ್ ಜಾಮ್ ನಲ್ಲಿ ಸಿಕ್ಕಿಹಾಕಿಕೊಳ್ಳುವ ಅಥವಾ ನಿಮ್ಮ ವಾಹನವೇ ಸಮಸ್ಯೆಗೆ ಗುರಿ ಆಗುವ ಸಾಧ್ಯತೆಗಳು ಇರುತ್ತವೆ. ಇನ್ನು ಈ ಹಿಂದೆ ನೀವು ಖರೀದಿ ಮಾಡಿದ್ದ ವಸ್ತುವೊಂದರ ಗುಣಮಟ್ಟದಲ್ಲಿ ಸಮಸ್ಯೆ ಇದೆ ಎಂಬುದು ಗಮನಕ್ಕೆ ಬರಲಿದ್ದು, ಅದನ್ನು ಎಕ್ಸ್ ಚೇಂಜ್ ಮಾಡಿಸುವುದಕ್ಕೆ ಅಥವಾ ಅದನ್ನು ಹಿಂತಿರುಗಿಸಿ, ಹಣ ವಾಪಸ್ ಪಡೆಯುವುದಕ್ಕೆ ಹೆಚ್ಚಿನ ಸಮಯ ಹೋಗುತ್ತದೆ.

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7)

ಇತರರನ್ನು ನಂಬಿ, ನೀವು ಒಪ್ಪಿಕೊಂಡ ಕೆಲಸಗಳನ್ನು ಅಂದುಕೊಂಡ ಸಮಯದ ಒಳಗಾಗಿ ಮಾಡಿ, ಮುಗಿಸುವುದು ಅಸಾಧ್ಯ ಎಂಬುದು ನಿಮ್ಮ ಗಮನಕ್ಕೆ ಬರಲಿದೆ. ಸ್ತ್ರೀಯೊಬ್ಬರ ವಿಚಾರಕ್ಕಾಗಿ ತೆಗೆದುಕೊಂಡ ನಿರ್ಧಾರವೊಂದು ಸಮಸ್ಯೆ ತಂದೊಡ್ಡಲಿದೆ. ನಿಮ್ಮ ಕೈ ಕೆಳಗೆ ಕೆಲಸ ಮಾಡುವಂಥವರು ನಿಮ್ಮ ಜತೆಗೆ ಈ ದಿನ ಆಡುವಂಥ ಮಾತು, ನಡೆದುಕೊಳ್ಳುವ ರೀತಿಯಿಂದಾಗಿ ಮನಸ್ಸಿಗೆ ಬಹಳ ಬೇಸರಕ್ಕೆ ಕಾರಣವಾಗಲಿದೆ, ಸೋದರ ಸಂಬಂಧಿಗಳು ನಿಮ್ಮ ನಿರ್ಧಾರಗಳಿಗೆ ಆಕ್ಷೇಪ ವ್ಯಕ್ತಪಡಿಸಬಹುದು. ಇನ್ನು ನೀವೇನಾದರೂ ಈ ಹಿಂದೆ ಅವರಿಂದ ಸಾಲವನ್ನೇನಾದರೂ ಪಡೆದಿದ್ದಲ್ಲಿ ಅದನ್ನು ಕೂಡಲೇ ಹಿಂತಿರುಗಿಸಬೇಕು ಎಂದು ಒತ್ತಡ ಕೂಡ ಹಾಕಲಿದ್ದಾರೆ. ಬೆಲೆ ಬಾಳುವ ಒಡವೆಗಳನ್ನು ಹಾಕಿಕೊಂಡು ಯಾವುದಾದರೂ ಕಾರ್ಯಕ್ರಮ, ಸಮಾರಂಭಗಳಲ್ಲಿ ಭಾಗವಹಿಸುವವರು ಅವುಗಳ ಬಗ್ಗೆ ಹೆಚ್ಚಿನ ಲಕ್ಷ್ಯ ವಹಿಸುವುದು ಕ್ಷೇಮ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8)

ಸಂಬಂಧಿಕರು ಅಥವಾ ಸ್ನೇಹಿತರು- ಆಪ್ತರಾದವರೇ ನಿಮ್ಮ ವಿಚಾರದಲ್ಲಿ ತಾರತಮ್ಯ ಮಾಡುತ್ತಿದ್ದಾರೆ ಎಂದು ಬಲವಾಗಿ ಅನಿಸುವುದಕ್ಕೆ ಶುರುವಾಗುತ್ತದೆ. ಮೇಲುನೋಟಕ್ಕೆ ನಿಮ್ಮ ಪರವಾಗಿ ಇರುವಂತೆ ಕಂಡುಬಂದು, ನಿಮ್ಮ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ ಎಂಬುದು ಸಹ ತಿಳಿದುಬರಲಿದೆ. ಡೇರಿ ವ್ಯವಹಾರದಲ್ಲಿ ತೊಡಗಿಕೊಂಡವರಿಗೆ ಅದರ ವಿಸ್ತರಣೆ ಮಾಡಬೇಕು ಎಂದೆನಿಸಲಿದೆ. ಈಗಾಗಲೇ ಇರುವಂಥ ಜಾಗದಲ್ಲಿ ಕೆಲವು ಅಭಿವೃದ್ಧಿ ಕೆಲಸಗಳನ್ನು ಮಾಡಿಸುವುದಕ್ಕೆ ಮನಸ್ಸು ಮಾಡಲಿದ್ದೀರಿ. ಟ್ರ್ಯಾಕ್ಟರ್ ಸೇರಿದಂತೆ ಕೃಷಿ ಉಪಕರಣಗಳನ್ನು ಖರೀದಿಸುವಂಥ ಯೋಗ ಸಹ ಕಂಡುಬರುತ್ತಿದೆ. ಈ ದಿನ ನಿಮಗೆ ಎಚ್ಚರಿಕೆ ಏನೆಂದರೆ, ಬೇರೆಯವರ ವಾಹನಗಳನ್ನು ಚಾಲನೆ ಮಾಡುವುದಕ್ಕೆ ಹೋಗಬೇಡಿ ಹಾಗೂ ಎತ್ತರದ ಸ್ಥಳಗಳಲ್ಲಿ ಬಹಳ ಹೊತ್ತು ನಿಂತು ಕೆಲಸ ಮಾಡಬೇಕು ಎಂದಾದಲ್ಲಿ ಸಾಮಾನ್ಯ ದಿನಗಳಲ್ಲಿ ತೆಗೆದುಕೊಳ್ಳುವ ಮುನ್ನೆಚ್ಚರಿಕೆಗಿಂತ ಹೆಚ್ಚಿನ ನಿಗಾ ತೆಗೆದುಕೊಳ್ಳಿ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9)

ಮಹಿಳೆಯರಿಗೆ ತವರು ಮನೆಯಿಂದ ಸಂಬಂಧಿಗಳು ನಿಮ್ಮ ಮನೆಗೆ ಬರಲಿದ್ದಾರೆ. ನಿಮ್ಮ ಮಕ್ಕಳಿಗೆ ಉಡುಗೊರೆಗಳನ್ನು ನೀಡುವಂಥ ಸಾಧ್ಯತೆಗಳಿವೆ. ಬಹಳ ಸಮಯದಿಂದ ನಿಮ್ಮ ಮನಸ್ಸಿನಲ್ಲಿ ಕಾಡುತ್ತಿದ್ದ ಹಣಕಾಸಿನ ಸಂಗತಿಯೊಂದಕ್ಕೆ ಪರಿಹಾರ ದೊರೆಯಲಿದೆ. ನೇರವಾಗಿ ಮಾತನಾಡುವ ಮೂಲಕ ಗೊಂದಲಗಳನ್ನು ಬಗೆಹರಿಸಿಕೊಳ್ಳಲಿದ್ದೀರಿ. ಸಂಗಾತಿಯ ಕಡೆ ಸಂಬಂಧಿಕರು ನೆರಚು ಕೇಳಿಕೊಂಡು ನಿಮ್ಮಲ್ಲಿಗೆ ಬರಲಿದ್ದಾರೆ. ಸಹಾಯ ಮಾಡುವುದಕ್ಕೆ ಸಾಧ್ಯವಿದೆಯೋ ಇಲ್ಲವೋ ಅದನ್ನು ಅವರಿಗೆ ತಿಳಿಸುವಾಗ ಪದ ಬಳಕೆ, ಧ್ವನಿ ವ್ಯತ್ಯಾಸವಾಗಿ ಅವಮಾನದ ರೀತಿಯಲ್ಲಿ ಅರ್ಥ ಆಗದಂತೆ ನೋಡಿಕೊಳ್ಳಿ. ಮಕ್ಕಳ ಶಿಕ್ಷಣದ ವಿಚಾರವು ಪ್ರಾಮುಖ್ಯ ಪಡೆದುಕೊಳ್ಳಲಿದ್ದು, ನಿಮ್ಮಲ್ಲಿ ಕೆಲವರು ಆದಾಯದಲ್ಲಿ ಹೆಚ್ಚಳ ಮಾಡಿಕೊಳ್ಳುವ ಸಲುವಾಗಿ ಈಗ ಮಾಡುತ್ತಿರುವ ಕೆಲಸದ ಜತೆಗೆ ಹೊಸ ವ್ಯವಹಾರವನ್ನು ಆರಂಭಿಸುವ ಚಿಂತನೆ ಮಾಡಲಿದ್ದೀರಿ.

ಲೇಖನ- ಎನ್‌.ಕೆ.ಸ್ವಾತಿ

ಜೈಪುರದಲ್ಲಿ ಹಿಟ್ ಆ್ಯಂಡ್ ರನ್; ಮೂವರ ಸಾವಿನ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಜೈಪುರದಲ್ಲಿ ಹಿಟ್ ಆ್ಯಂಡ್ ರನ್; ಮೂವರ ಸಾವಿನ ವಿಡಿಯೋ ಸಿಸಿಟಿವಿಯಲ್ಲಿ ಸೆರೆ
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾಗೆ ಮಕ್ಕಳಿಂದ ಸಿಕ್ತು ಭರ್ಜರಿ ಸ್ವಾಗತ
ಧ್ರುವ ಸರ್ಜಾ ನಟನೆಯ ಮಾರ್ಟಿನ್ ಸಿನಿಮಾಗೆ ಮಕ್ಕಳಿಂದ ಸಿಕ್ತು ಭರ್ಜರಿ ಸ್ವಾಗತ
ಗೃಹಲಕ್ಷ್ಮಿ ಹಣದಲ್ಲಿ ದೇವಿಗೆ ಕಿರೀಟ: ಸಿದ್ದರಾಮಯ್ಯ ಹಾಡಿಹೊಗಳಿದ ಮಹಿಳೆ
ಗೃಹಲಕ್ಷ್ಮಿ ಹಣದಲ್ಲಿ ದೇವಿಗೆ ಕಿರೀಟ: ಸಿದ್ದರಾಮಯ್ಯ ಹಾಡಿಹೊಗಳಿದ ಮಹಿಳೆ
ರವಿ ಕೇಸ್ ಗುರಾಣಿಯಾಗಿ ಬಳಸಲು ವಾಪಸ್ಸು ಪಡೆದಿರುವ ಗುಮಾನಿ ದಟ್ಟವಾಗುತ್ತಿದೆ
ರವಿ ಕೇಸ್ ಗುರಾಣಿಯಾಗಿ ಬಳಸಲು ವಾಪಸ್ಸು ಪಡೆದಿರುವ ಗುಮಾನಿ ದಟ್ಟವಾಗುತ್ತಿದೆ
ಜಾತಿಗಣತಿ ಬಗ್ಗೆ ಮೊದಲು ಬಿಜೆಪಿ ತನ್ನ ನಿಲುವು ಪ್ರಕಟಿಸಲಿ: ಡಿಕೆ ಶಿವಕುಮಾರ್
ಜಾತಿಗಣತಿ ಬಗ್ಗೆ ಮೊದಲು ಬಿಜೆಪಿ ತನ್ನ ನಿಲುವು ಪ್ರಕಟಿಸಲಿ: ಡಿಕೆ ಶಿವಕುಮಾರ್
ತಾಯಿ ಜಗನ್ಮಾತೆಯ ಕೃಪೆಯಿಂದ ಬಳ್ಳಾರಿ ವಾಪಸ್ಸಾಗೋದು ಸಾಧ್ಯವಾಗಿದೆ: ರೆಡ್ಡಿ
ತಾಯಿ ಜಗನ್ಮಾತೆಯ ಕೃಪೆಯಿಂದ ಬಳ್ಳಾರಿ ವಾಪಸ್ಸಾಗೋದು ಸಾಧ್ಯವಾಗಿದೆ: ರೆಡ್ಡಿ
‘ಒಳ್ಳೆಯ ರಿಪೋರ್ಟ್ ಇದೆ’: ಮಾರ್ಟಿನ್​ ಬಿಡುಗಡೆ ಬಳಿಕ ಧ್ರುವ ಪ್ರತಿಕ್ರಿಯೆ
‘ಒಳ್ಳೆಯ ರಿಪೋರ್ಟ್ ಇದೆ’: ಮಾರ್ಟಿನ್​ ಬಿಡುಗಡೆ ಬಳಿಕ ಧ್ರುವ ಪ್ರತಿಕ್ರಿಯೆ
ಮುಡಾ ಹಗರಣ ಸಿದ್ದರಾಮಯ್ಯರನ್ನು ಹೆಚ್ಚು ಆಸ್ತಿಕರನ್ನಾಗಿ ಮಾಡಿರುವಂತಿದೆ!
ಮುಡಾ ಹಗರಣ ಸಿದ್ದರಾಮಯ್ಯರನ್ನು ಹೆಚ್ಚು ಆಸ್ತಿಕರನ್ನಾಗಿ ಮಾಡಿರುವಂತಿದೆ!
ಗೃಹಲಕ್ಷ್ಮಿ ಹಣದ ಉಪಯೋಗ ಹೇಗೆ? ಇಲ್ಲಿದೆ ಬಾಗವ್ವ ಸಣ್ಣಕ್ಕಿಯ ಉದಾಹರಣೆ
ಗೃಹಲಕ್ಷ್ಮಿ ಹಣದ ಉಪಯೋಗ ಹೇಗೆ? ಇಲ್ಲಿದೆ ಬಾಗವ್ವ ಸಣ್ಣಕ್ಕಿಯ ಉದಾಹರಣೆ
ನವರಾತ್ರಿ ಪೂಜಾವಿಧಿಗಳ 9 ನೇ ದಿನ ಜನಿಸಿದ ಮಗು ಶುಭದಾಯಯಕ: ಡಾ ಶೆಲ್ವಪಿಳ್ಳೆ
ನವರಾತ್ರಿ ಪೂಜಾವಿಧಿಗಳ 9 ನೇ ದಿನ ಜನಿಸಿದ ಮಗು ಶುಭದಾಯಯಕ: ಡಾ ಶೆಲ್ವಪಿಳ್ಳೆ