Astrology: ಏನಿದು ಪಂಚ ಮಹಾಪುರುಷ ಯೋಗ? ಏನಿದರ ಶುಭ ಫಲಗಳು ಎಂಬುದನ್ನು ತಿಳಿಯಿರಿ

ಪಂಚ ಮಹಾಪುರುಷ ಯೋಗ ಅಂದರೇನು? ಕುಜ, ಬುಧ, ಗುರು, ಶುಕ್ರ, ಶನಿ ಗ್ರಹಗಳಿಂದ ಏರ್ಪಡುವ ಈ ಯೋಗದ ಶುಭ ಫಲಗಳೇನು ಎಂಬುದರ ವಿವರಣೆ ಇಲ್ಲಿದೆ.

Astrology: ಏನಿದು ಪಂಚ ಮಹಾಪುರುಷ ಯೋಗ? ಏನಿದರ ಶುಭ ಫಲಗಳು ಎಂಬುದನ್ನು ತಿಳಿಯಿರಿ
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: Skanda

Updated on: Jun 12, 2021 | 6:50 AM

ಇಂದಿನ ಲೇಖನದಲ್ಲಿ ಪಂಚ ಮಹಾಪುರುಷ ಯೋಗಗಳ ಬಗ್ಗೆ ತಿಳಿಸಲಾಗುವುದು. ಐದು ಗ್ರಹಗಳಿಂದ ಏರ್ಪಡುವ ಯೋಗಗಳು ಇವು. ಕುಜ, ಬುಧ, ಗುರು, ಶುಕ್ರ, ಶನಿ ಹೀಗೆ ಐದು ಗ್ರಹಗಳಿಂದ ಏರ್ಪಡುವ ಯೋಗಗಳಾದ್ದರಿಂದ ಇದನ್ನು ಪಂಚ ಮಹಾಪುರುಷ ಯೋಗ ಎನ್ನಲಾಗುವುದು. ಇಂದಿನ ಲೇಖನದಲ್ಲಿ ಆ ಯೋಗಗಳು ಹೇಗೆ ಆಗುತ್ತವೆ ಎಂಬುದನ್ನು ವಿವರಿಸಲಾಗುವುದು. ಇನ್ನೊಂದು ಭಾಗದಲ್ಲಿ ಆ ಯೋಗಗಳ ಫಲ ಏನು ಎಂಬುದನ್ನು ತಿಳಿಸಿಕೊಡಲಾಗುವುದು. ಕುಜ ಗ್ರಹದಿಂದ ರುಚಕ ಯೋಗ, ಬುಧ ಗ್ರಹದಿಂದ ಭದ್ರ ಯೋಗ, ಗುರು ಗ್ರಹದಿಂದ ಹಂಸ ಯೋಗ, ಶುಕ್ರ ಗ್ರಹದಿಂದ ಮಾಲವ್ಯ ಯೋಗ ಮತ್ತು ಶನಿ ಗ್ರಹದಿಂದ ಶಶ ಯೋಗ ಬರುತ್ತದೆ.

1. ರುಚಕ ಯೋಗ ಈ ಯೋಗವು ಕುಜ ಗ್ರಹದಿಂದ ಏರ್ಪಡುತ್ತದೆ. ಬಲಿಷ್ಠ ಕುಜ ಗ್ರಹವು ಲಗ್ನದಿಂದ ಕೇಂದ್ರ ಸ್ಥಾನಗಳಾದ 1, 4, 7, 10ರಲ್ಲಿ ಇದ್ದು, ಒಂದೋ ಸ್ವಕ್ಷೇತ್ರದಲ್ಲಿ ಇದ್ದರೆ ಅಥವಾ ಉಚ್ಚ ಸ್ಥಾನದಲ್ಲಿ ಇದ್ದರೆ ಅಥವಾ ಮೂಲ ತ್ರಿಕೋಣದಲ್ಲಿ (1,5,9) ಇದ್ದರೆ ಈ ಯೋಗ ಬರುತ್ತದೆ. ಇದರಿಂದ ಈ ಜಾತಕರಿಗೆ ಪ್ರೇರಣೆ, ಆತ್ಮವಿಶ್ವಾಸ, ಬಲ ದೊರೆಯುತ್ತದೆ. ಎಂಥ ಸವಾಲನ್ನೂ ಎದುರಿಸುವ ಶಕ್ತಿ ದೊರೆಯುತ್ತದೆ.

* ಮೇಷ, ಮಕರ, ವೃಶ್ಚಿಕ ಲಗ್ನದಲ್ಲಿ ಅಥವಾ 1ನೇ ಮನೆಯಲ್ಲಿ * ಸಿಂಹ, ತುಲಾ, ಮಕರ 4ನೇ ಮನೆ * ವೃಷಭ, ಕರ್ಕಾಟಕ, ತುಲಾ 7ನೇ ಮನೆ * ಕರ್ಕಾಟಕ, ಕುಂಭ, ಮೇಷ 10ನೇ ಮನೆ ಈ ಮೇಲ್ಕಂಡ ಸ್ಥಾನಗಳಲ್ಲಿ ಕುಜ ಇದ್ದಲ್ಲಿ ರುಚಕ ಯೋಗ ಇದೆ ಎಂದರ್ಥ

2. ಭದ್ರ ಯೋಗ ಈ ಯೋಗವು ಬುಧ ಗ್ರಹದಿಂದ ಏರ್ಪಡುತ್ತದೆ. ಬಲಿಷ್ಠ ಬುಧ ಗ್ರಹವು ಲಗ್ನದಿಂದ ಕೇಂದ್ರ ಸ್ಥಾನಗಳಾದ 1, 4, 7, 10ರಲ್ಲಿ ಇದ್ದು, ಒಂದೋ ಸ್ವಕ್ಷೇತ್ರದಲ್ಲಿ ಇದ್ದರೆ ಅಥವಾ ಉಚ್ಚ ಸ್ಥಾನದಲ್ಲಿ ಇದ್ದರೆ ಅಥವಾ ಮೂಲ ತ್ರಿಕೋಣದಲ್ಲಿ (1,5,9) ಇದ್ದರೆ ಈ ಯೋಗ ಬರುತ್ತದೆ. ಇದರಿಂದ ಈ ಜಾತಕರಿಗೆ ಉತ್ತಮ ಶಿಕ್ಷಣ, ಸಂವಹನ ಕೌಶಲ, ವ್ಯವಹಾರ ಚತುರತೆ ಮತ್ತು ಬುದ್ಧಿವಂತಿಕೆ ಬರುತ್ತದೆ.

* ಮಿಥುನ ಲಗ್ನದವರಿಗೆ 1 ಅಥವಾ 4ನೇ ಮನೆಯಲ್ಲಿ * ಕನ್ಯಾ ಲಗ್ನಕ್ಕೆ 1 ಅಥವಾ 10ನೇ ಮನೆ * ಧನು ಲಗ್ನಕ್ಕೆ 7 ಅಥವಾ 10ನೇ ಮನೆ * ಮೀನಕ್ಕೆ 4 ಅಥವಾ 7ನೇ ಮನೆ ಈ ಮೇಲ್ಕಂಡ ಸ್ಥಾನಗಳಲ್ಲಿ ಬುಧ ಇದ್ದಲ್ಲಿ ಭದ್ರ ಯೋಗ ಇದೆ ಎಂದರ್ಥ

3. ಹಂಸ ಯೋಗ ಈ ಯೋಗವು ಗುರು ಗ್ರಹದಿಂದ ಏರ್ಪಡುತ್ತದೆ. ಬಲಿಷ್ಠ ಗುರು ಗ್ರಹವು ಲಗ್ನದಿಂದ ಕೇಂದ್ರ ಸ್ಥಾನಗಳಾದ 1, 4, 7, 10ರಲ್ಲಿ ಇದ್ದು, ಒಂದೋ ಸ್ವಕ್ಷೇತ್ರದಲ್ಲಿ ಇದ್ದರೆ ಅಥವಾ ಉಚ್ಚ ಸ್ಥಾನದಲ್ಲಿ ಇದ್ದರೆ ಅಥವಾ ಮೂಲ ತ್ರಿಕೋಣದಲ್ಲಿ (1,5,9) ಇದ್ದರೆ ಈ ಯೋಗ ಬರುತ್ತದೆ. ಇದರಿಂದ ಈ ಜಾತಕರು ಯಾವುದೇ ಕೆಲಸವನ್ನೂ ಬಹಳ ಅಚ್ಚುಕಟ್ಟಾಗಿ ಮಾಡುತ್ತಾರೆ. ಕ್ರಮಬದ್ಧವಾದ ಕೆಲಸ, ಜವಾಬ್ದಾರಿ ಮತ್ತು ನ್ಯಾಯಸಮ್ಮತ ತೀರ್ಮಾನ ಕೈಗೊಳ್ಳುತ್ತಾರೆ.

* ಕರ್ಕಾಟಕ, ಧನು, ಮೀನ ಲಗ್ನದವರಿಗೆ 1 ಮನೆಯಲ್ಲಿ * ಮಕರ, ಮಿಧುನ, ಕನ್ಯಾ ಲಗ್ನಕ್ಕೆ 7ನೇ ಮನೆ * ತುಲಾ, ಮೀನ, ಮಿಥುನ ಲಗ್ನಕ್ಕೆ 10ನೇ ಮನೆ * ಮೇಷ, ಕನ್ಯಾ, ಧನುಸ್ಸು 4ನೇ ಮನೆ ಈ ಮೇಲ್ಕಂಡ ಸ್ಥಾನಗಳಲ್ಲಿ ಗುರು ಇದ್ದಲ್ಲಿ ಹಂಸ ಯೋಗ ಇದೆ ಎಂದರ್ಥ

4. ಮಾಲವ್ಯ ಯೋಗ ಈ ಯೋಗವು ಶುಕ್ರ ಗ್ರಹದಿಂದ ಏರ್ಪಡುತ್ತದೆ. ಬಲಿಷ್ಠ ಶುಕ್ರ ಗ್ರಹವು ಲಗ್ನದಿಂದ ಕೇಂದ್ರ ಸ್ಥಾನಗಳಾದ 1, 4, 7, 10ರಲ್ಲಿ ಇದ್ದು, ಒಂದೋ ಸ್ವಕ್ಷೇತ್ರದಲ್ಲಿ ಇದ್ದರೆ ಅಥವಾ ಉಚ್ಚ ಸ್ಥಾನದಲ್ಲಿ ಇದ್ದರೆ ಅಥವಾ ಮೂಲ ತ್ರಿಕೋಣದಲ್ಲಿ (1,5,9) ಇದ್ದರೆ ಈ ಯೋಗ ಬರುತ್ತದೆ. ಇದರಿಂದ ಈ ಜಾತಕರು ವಿಲಾಸ ಜೀವನವನ್ನು ಅನುಭವಿಸುತ್ತಾರೆ. ಸಂಪತ್ತು ಸಂಗ್ರಹಿಸುತ್ತಾರೆ ಹಾಗೂ ಜತೆಗೆ ಐಹಿಕ ಸುಖಗಳನ್ನು ಪಡೆಯುವ ಯೋಗ ಇರುತ್ತದೆ.

* ವೃಷಭ, ತುಲಾ, ಮೀನ ಲಗ್ನದವರಿಗೆ 1 ಮನೆಯಲ್ಲಿ * ಮೇಷ, ವೃಶ್ಚಿಕ, ಕನ್ಯಾ ಲಗ್ನಕ್ಕೆ 7ನೇ ಮನೆ * ಮಿಥುನ, ಸಿಂಹ, ಮಕರ ಲಗ್ನಕ್ಕೆ 10ನೇ ಮನೆ * ಧನುಸ್ಸು, ಕುಂಭ, ಕರ್ಕಾಟಕ 4ನೇ ಮನೆ ಈ ಮೇಲ್ಕಂಡ ಸ್ಥಾನಗಳಲ್ಲಿ ಶುಕ್ರ ಇದ್ದಲ್ಲಿ ಮಾಲವ್ಯ ಯೋಗ ಇದೆ ಎಂದರ್ಥ

5. ಶಶ ಯೋಗ ಈ ಯೋಗವು ಶನಿ ಗ್ರಹದಿಂದ ಏರ್ಪಡುತ್ತದೆ. ಬಲಿಷ್ಠ ಶನಿ ಗ್ರಹವು ಲಗ್ನದಿಂದ ಕೇಂದ್ರ ಸ್ಥಾನಗಳಾದ 1, 4, 7, 10ರಲ್ಲಿ ಇದ್ದು, ಒಂದೋ ಸ್ವಕ್ಷೇತ್ರದಲ್ಲಿ ಇದ್ದರೆ ಅಥವಾ ಉಚ್ಚ ಸ್ಥಾನದಲ್ಲಿ ಇದ್ದರೆ ಅಥವಾ ಮೂಲ ತ್ರಿಕೋಣದಲ್ಲಿ (1,5,9) ಇದ್ದರೆ ಈ ಯೋಗ ಬರುತ್ತದೆ. ಇದರಿಂದ ಈ ಜಾತಕರು ದುಃಖ, ದಾರಿದ್ರ್ಯ, ಸಮಸ್ಯೆಗಳನ್ನು ಎದುರಿಸುವುದನ್ನು ತಡೆಯುತ್ತದೆ.

* ಮಕರ, ಕುಂಭ, ತುಲಾ ಲಗ್ನದವರಿಗೆ 1 ಮನೆಯಲ್ಲಿ * ಕರ್ಕಾಟಕ, ಸಿಂಹ, ಮೇಷ ಲಗ್ನಕ್ಕೆ 7ನೇ ಮನೆ * ಮೇಷ, ವೃಷಭ, ಮಕರ ಲಗ್ನಕ್ಕೆ 10ನೇ ಮನೆ * ಕರ್ಕಾಟಕ, ತುಲಾ, ವೃಶ್ಚಿಕ 4ನೇ ಮನೆ ಈ ಮೇಲ್ಕಂಡ ಸ್ಥಾನಗಳಲ್ಲಿ ಶನಿ ಇದ್ದಲ್ಲಿ ಶಶ ಯೋಗ ಇದೆ ಎಂದರ್ಥ

ಇದನ್ನೂ ಓದಿ: Astrology: ಯಾವ ರಾಶಿಗೆ ಯಾವ ಗ್ರಹ ಅಧಿಪತಿ; ಯಾವ ಗ್ರಹಕ್ಕೆ ಎಲ್ಲಿ ಉಚ್ಚ ಸ್ಥಿತಿ ನೀಚ ಸ್ಥಿತಿ ಇಲ್ಲಿದೆ ಮಾಹಿತಿ

(What is Panch Mahapurush Yoga created by Mars, Mercury, Jupiter, Venus and Saturn? How it impact on an individual according to astrology explainer)