AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೀವು ಮಿಥುನ ರಾಶಿಯಲ್ಲಿ ಜನಿಸಿದ್ದೀರಾ? ಹಾಗಾದರೆ ಇದನ್ನು ಓದಿ

ಮಿಥುನ ರಾಶಿಯಲ್ಲಿ ಜನಿಸಿದರು ಸ್ತ್ರೀಯಾಗಿದ್ದರೆ ಪುರುಷರ‌ ಮೇಲೂ ಪುರುಷರಾದರೆ ಸ್ತ್ರೀಯ ಮೇಲೂ ಆಸಕ್ತಿ ಇರುವುದು. ತಾಮ್ರವರ್ಣದ ಕಣ್ಣುಳ್ಳವನು ಆಗುವರು. ವಿವಿಧ ವಿದ್ಯೆಗಳನ್ನು ಅವರು ಅಧ್ಯಯನ ಮಾಡಿದ ಪಂಡಿತರಾಗುವರು.

ನೀವು ಮಿಥುನ ರಾಶಿಯಲ್ಲಿ ಜನಿಸಿದ್ದೀರಾ? ಹಾಗಾದರೆ ಇದನ್ನು ಓದಿ
ಪ್ರಾತಿನಿಧಿಕ ಚಿತ್ರ
TV9 Web
| Edited By: ಕಿರಣ್ ಹನುಮಂತ್​ ಮಾದಾರ್|

Updated on: Sep 14, 2023 | 6:00 AM

Share

ಮಿಥುನ ರಾಶಿಯಲ್ಲಿ ಜನಿಸಿದರು ಸ್ತ್ರೀಯಾಗಿದ್ದರೆ ಪುರುಷರ‌ ಮೇಲೂ ಪುರುಷರಾದರೆ ಸ್ತ್ರೀಯ ಮೇಲೂ ಆಸಕ್ತಿ ಇರುವುದು. ತಾಮ್ರವರ್ಣದ ಕಣ್ಣುಳ್ಳವನು ಆಗುವರು. ವಿವಿಧ ವಿದ್ಯೆಗಳನ್ನು ಅವರು ಅಧ್ಯಯನ ಮಾಡಿದ ಪಂಡಿತರಾಗುವರು.

ಇವರು ದೂತಕಾರ್ಯಕ್ಕೆ ಹೆಚ್ಚು ಉಪಯುಕ್ತರಾಗುವರು. ಎಲ್ಲವನ್ನೂ ತಿಳಿದರೂ ಗೌಪ್ಯತೆಯನ್ನು ಬಿಟ್ಟುಕೊಡದೇ ತಿಳಿಸಬೇಕಾದುದನ್ನು ತಿಳಿಸುವರು ಎಂದರ್ಥ. ತಲೆಯ ಕೂದಲು ವಕ್ರವಾಗಿ ಇರುವುದು. ಇವರು ಚುರುಕಾದ ಬುದ್ಧಿಯುಳ್ಳವರು. ಹಾಸ್ಯ ಪ್ರವೃತ್ತಿಯು ಇವರಲ್ಲಿ ಅಧಿಕವಾಗಿ ಇದ್ದು, ಇನ್ನೊಬ್ಬರ ಮನಸ್ಸನ್ನು ತಿಳಿದಿಕೊಳ್ಳುವರು. ದ್ಯೂತ ಮೊದಲಾದ ಹವ್ಯಾಸವನ್ನು ಇಟ್ಟಕೊಂಡವರು.

ಸುಂದರವಾದ ದೇಹವನ್ನು ಉಳ್ಳವರು, ಪ್ರಿಯವಾದ ಮಾತುಗಳನ್ನು ಆಡುವವರೂ, ಹೆಚ್ಚು ಆಹಾರವನ್ನು ಸೇವಿಸುವುದರಲ್ಲಿ ಆಸಕ್ತಿಯೂ, ಸಂಗೀತವನ್ನು ಕೇಳುವುದರಲ್ಲಿಯೂ ಕಲಿಯುವುದರಲ್ಲಿಯೂ ಆಸಕ್ತಿ‌ ಹಾಗೂ ನರ್ತನವನ್ನು ಬಲ್ಲವರಾಗುವರು.

ಇದನ್ನೂ ಓದಿ:ಮಿಥುನ ರಾಶಿಯವರಲ್ಲಿ ನೀವು ಈ ವ್ಯಕ್ತಿತ್ವವನ್ನು ಗಮನಿಸಿದ್ದೀರಾ? ಈ ರಾಶಿಯವರು ಸರಿಪಡಿಸಿಕೊಳ್ಳಬೇಕಾದ ಗುಣಗಳು ಹೀಗಿವೆ

ನಪುಂಸಕರ ಜೊತೆ ಹೆಚ್ಚು ಒಡನಾಟವನ್ನು ಇಟ್ಟುಕೊಳ್ಳುವವರೂ ಉದ್ದನೆಯ ಮೂಗನ್ನು ಹೊಂದಿದವರೂ ಮಿಥುನ ರಾಶಿಯವರು ಆಗುವರು.

ಕಂಠಕ್ಕೆ ಸಂಬಂಧಿಸಿದ ರೋಗ, ಬಿಳಿಯ ಬಣ್ಣ, ಉದ್ದನೆಯ ದೇಹ, ಸ್ಪಷ್ಟವಾದ ಮಾತು, ಹಿಡಿದ‌‌‌ ಕೆಲಸವನ್ನು ಬಿಡದೇ ಮಾಡುವುದು, ಸಮರ್ಥವಾದ ನ್ಯಾಯವಾದಿಯೂ ಕೂಡ ಮಿಥುನ ರಾಶಿಯಲ್ಲಿ ಜನಿಸಿದರು ಆಗುವರು.

–ಲೋಹಿತಶರ್ಮಾ

Follow Us
TV9 Web
TV9 Web

TV9 Kannada

Read More
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಫರೇಷನ್’
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ಅಲ್ಪಸಂಖ್ಯಾತ ಮತದಾರರ ವೋಟ್ ಡಿಲಿಟ್, BJP ಮುಖಂಡರ ಮೇಲೆ FIR ದಾಖಲು
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
ದರ್ಶನ್ ಕೇಸ್: ಮಾಫಿ ಸಾಕ್ಷಿ ವಿಡಿಯೋ ವೈರಲ್ ಮಾಡಿದವರಿಗೆ ಕೋರ್ಟ್ ಶಾಕ್
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ
RSS ಕಚೇರಿಯಲ್ಲೇ ಫಾರ್ಮ್-7 ಮುದ್ರಣ: ತನ್ವೀರ್ ಸೇಠ್ ಆರೋಪ