ಮಿಥುನ ರಾಶಿಯಲ್ಲಿ ಜನಿಸಿದರು ಸ್ತ್ರೀಯಾಗಿದ್ದರೆ ಪುರುಷರ ಮೇಲೂ ಪುರುಷರಾದರೆ ಸ್ತ್ರೀಯ ಮೇಲೂ ಆಸಕ್ತಿ ಇರುವುದು. ತಾಮ್ರವರ್ಣದ ಕಣ್ಣುಳ್ಳವನು ಆಗುವರು. ವಿವಿಧ ವಿದ್ಯೆಗಳನ್ನು ಅವರು ಅಧ್ಯಯನ ಮಾಡಿದ ಪಂಡಿತರಾಗುವರು.
ಇವರು ದೂತಕಾರ್ಯಕ್ಕೆ ಹೆಚ್ಚು ಉಪಯುಕ್ತರಾಗುವರು. ಎಲ್ಲವನ್ನೂ ತಿಳಿದರೂ ಗೌಪ್ಯತೆಯನ್ನು ಬಿಟ್ಟುಕೊಡದೇ ತಿಳಿಸಬೇಕಾದುದನ್ನು ತಿಳಿಸುವರು ಎಂದರ್ಥ. ತಲೆಯ ಕೂದಲು ವಕ್ರವಾಗಿ ಇರುವುದು. ಇವರು ಚುರುಕಾದ ಬುದ್ಧಿಯುಳ್ಳವರು. ಹಾಸ್ಯ ಪ್ರವೃತ್ತಿಯು ಇವರಲ್ಲಿ ಅಧಿಕವಾಗಿ ಇದ್ದು, ಇನ್ನೊಬ್ಬರ ಮನಸ್ಸನ್ನು ತಿಳಿದಿಕೊಳ್ಳುವರು. ದ್ಯೂತ ಮೊದಲಾದ ಹವ್ಯಾಸವನ್ನು ಇಟ್ಟಕೊಂಡವರು.
ಸುಂದರವಾದ ದೇಹವನ್ನು ಉಳ್ಳವರು, ಪ್ರಿಯವಾದ ಮಾತುಗಳನ್ನು ಆಡುವವರೂ, ಹೆಚ್ಚು ಆಹಾರವನ್ನು ಸೇವಿಸುವುದರಲ್ಲಿ ಆಸಕ್ತಿಯೂ, ಸಂಗೀತವನ್ನು ಕೇಳುವುದರಲ್ಲಿಯೂ ಕಲಿಯುವುದರಲ್ಲಿಯೂ ಆಸಕ್ತಿ ಹಾಗೂ ನರ್ತನವನ್ನು ಬಲ್ಲವರಾಗುವರು.
ಇದನ್ನೂ ಓದಿ:ಮಿಥುನ ರಾಶಿಯವರಲ್ಲಿ ನೀವು ಈ ವ್ಯಕ್ತಿತ್ವವನ್ನು ಗಮನಿಸಿದ್ದೀರಾ? ಈ ರಾಶಿಯವರು ಸರಿಪಡಿಸಿಕೊಳ್ಳಬೇಕಾದ ಗುಣಗಳು ಹೀಗಿವೆ
ನಪುಂಸಕರ ಜೊತೆ ಹೆಚ್ಚು ಒಡನಾಟವನ್ನು ಇಟ್ಟುಕೊಳ್ಳುವವರೂ ಉದ್ದನೆಯ ಮೂಗನ್ನು ಹೊಂದಿದವರೂ ಮಿಥುನ ರಾಶಿಯವರು ಆಗುವರು.
ಕಂಠಕ್ಕೆ ಸಂಬಂಧಿಸಿದ ರೋಗ, ಬಿಳಿಯ ಬಣ್ಣ, ಉದ್ದನೆಯ ದೇಹ, ಸ್ಪಷ್ಟವಾದ ಮಾತು, ಹಿಡಿದ ಕೆಲಸವನ್ನು ಬಿಡದೇ ಮಾಡುವುದು, ಸಮರ್ಥವಾದ ನ್ಯಾಯವಾದಿಯೂ ಕೂಡ ಮಿಥುನ ರಾಶಿಯಲ್ಲಿ ಜನಿಸಿದರು ಆಗುವರು.
–ಲೋಹಿತಶರ್ಮಾ