Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 21ರ ದಿನಭವಿಷ್ಯ

ಜನ್ಮಸಂಖ್ಯೆ 7, 8, 9ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 21ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ನಿಮ್ಮ ಜನ್ಮಸಂಖ್ಯೆ ಆಧಾರಿತ ಈ ಭವಿಷ್ಯವು ದಿನದ ಸವಾಲುಗಳು ಮತ್ತು ಅವಕಾಶಗಳನ್ನು ಎದುರಿಸಲು ನಿಮಗೆ ಸಹಾಯಕವಾಗಲಿದೆ.

Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 7, 8, 9ರ ಜನವರಿ 21ರ ದಿನಭವಿಷ್ಯ
ದಿನ ಭವಿಷ್ಯ
Edited By:

Updated on: Jan 21, 2026 | 12:30 AM

ಜನ್ಮಸಂಖ್ಯೆ 7 (ಯಾವುದೇ ತಿಂಗಳಿನ 7, 16, 25ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 7):

ನೀವು ಇತರರ ಜೊತೆಗೆ ಸ್ಪರ್ಧಿಸಬೇಕಿಲ್ಲ, ಆದರೆ ನಿಮ್ಮ ಸ್ಪರ್ಧೆ ಇರುವುದು ಈ ಹಿಂದೆ ಮಾಡಿದ ತಪ್ಪುಗಳಿಂದ ಆಚೆ ಬರುವುದರಲ್ಲಿ, ನಿರ್ಧಾರ ಮಾಡಿದಂತೆಯೇ ಬದುಕುವುದರಲ್ಲಿ ಎಂಬ ವಿಷಯ ಈ ದಿನ ಪ್ರಾಮುಖ್ಯ ಪಡೆದುಕೊಳ್ಳುತ್ತದೆ. ನೀವು ಯಾವುದೇ ಕ್ಷೇತ್ರಕ್ಕೆ ಸಂಬಂಧಪಟ್ಟವರೇ ಆಗಿದ್ದರೂ ಹೆಚ್ಚಿನ ಶ್ರಮವನ್ನು ಹಾಕಲೇಬೇಕಾಗುತ್ತದೆ. ದಂಪತಿಗಳು- ಪ್ರೀತಿ, ಪ್ರೇಮದಲ್ಲಿ ಇರುವವರು ನಿಮ್ಮ ಒಳಗಿನ ಪ್ರೀತಿಯನ್ನು ಸಾಬೀತು ಮಾಡುವುದಕ್ಕೆ ಅಂತಲೇ ಹೆಚ್ಚು ಸಮಯವನ್ನು ಮೀಸಲಿಡುತ್ತೀರಿ.

ಜನ್ಮಸಂಖ್ಯೆ 8 (ಯಾವುದೇ ತಿಂಗಳಿನ 8, 17, 26ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 8):

ಉದ್ಯಮಿಗಳಿಗೆ ಹಾಗೂ ಉದ್ಯೋಗಿಗಳಿಗೆ ಬಹಳ ಉತ್ತಮವಾದ ದಿನ ಇದಾಗಿರುತ್ತದೆ. ನಿಮ್ಮ ಯೋಜನೆಗಳು ಹಾಗೂ ಅದನ್ನು ಅನುಷ್ಠಾನಕ್ಕೆ ತರುವುದಕ್ಕೆ ಏನು ಮಾಡಬೇಕು ಎಂಬುದನ್ನು ಹೇಳುವ ರೀತಿ ಎಲ್ಲರನ್ನೂ ಆಕರ್ಷಿಸುತ್ತದೆ. ನಿಮ್ಮ ಜಡ್ಜ್ ಮೆಂಟ್ ಬಹಳ ಚೆನ್ನಾಗಿರುತ್ತದೆ. ಆದ್ದರಿಂದ ಅನಿಸಿದ್ದನ್ನು ಹೇಳುವುದಕ್ಕೆ ಹಿಂಜರಿಕೆ ಬೇಡ. ಷೇರು ಮಾರುಕಟ್ಟೆ- ಮ್ಯೂಚುವಲ್ ಫಂಡ್ ಇಂಥದ್ದರಲ್ಲಿ ಈ ಹಿಂದೆ ಯಾವಾಗಲೋ ನೀವು ಮಾಡಿದ್ದ ಸಣ್ಣ ಹೂಡಿಕೆ ಒಳ್ಳೆ ಲಾಭ ತಂದುಕೊಡಲಿದೆ.

ಜನ್ಮಸಂಖ್ಯೆ 9 (ಯಾವುದೇ ತಿಂಗಳಿನ 9, 18, 27ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 9):

ನಿಮ್ಮ ನಿಯಂತ್ರಣದಲ್ಲಿ ಇರುವಂಥ ವಿಷಯಗಳನ್ನು ಮಾತ್ರ ಕಾಳಜಿ ಮಾಡಿ. ಕೈ ಅಳತೆ ಮೀರಿದ ವಿಚಾರಗಳ ತಲೆ ಕೆಡಿಸಿಕೊಳ್ಳಬೇಡಿ. ನೀವು ಸಮಸ್ಯೆಗಳು ಅಂತ ಏನನ್ನು ಅಂದುಕೊಂಡಿರುತ್ತೀರೋ ವಾಸ್ತವಕ್ಕಿಂತ ಹೆಚ್ಚು ಉತ್ಪ್ರೇಕ್ಷೆ ಮಾಡಿಕೊಳ್ಳುತ್ತಿದ್ದೀರಿ ಎಂಬುದು ಗಮನಕ್ಕೆ ಬರಲಿದೆ. ಮದುವೆಗೆ ಪ್ರಯತ್ನಿಸುತ್ತಿರುವ ವಿವಾಹ ವಯಸ್ಕರಿಗೆ ಸೂಕ್ತ ಸಂಬಂಧಗಳ ರೆಫರೆನ್ಸ್ ದೊರೆಯಲಿದೆ. ದುಡ್ಡಿನ ಖರ್ಚು ಮಾಡುವಾಗ ಯಾವ ಉದ್ದೇಶಕ್ಕೆ ಮಾಡುತ್ತಿದ್ದೀರಿ ಎಂಬ ಸ್ಪಷ್ಟತೆ ಇರಲಿ.

ಲೇಖನ- ಸ್ವಾತಿ ಎನ್.ಕೆ.