Numerology Prediction: ಸಂಖ್ಯಾಶಾಸ್ತ್ರ ಪ್ರಕಾರ ಜನ್ಮಸಂಖ್ಯೆ 1, 2, 3ರ ಜನವರಿ 28ರ ದಿನಭವಿಷ್ಯ
ಜನ್ಮಸಂಖ್ಯೆಗೆ 1, 2, 3ರ ದಿನಭವಿಷ್ಯವನ್ನು ನೀಡಲಾಗಿದೆ. ಜನ್ಮಸಂಖ್ಯೆ ಆಧಾರದಲ್ಲಿ ಜನವರಿ 28ರ ಬುಧವಾರದ ದಿನ ಭವಿಷ್ಯ ಹೇಗಿದೆ ಎಂಬ ಮಾಹಿತಿ ಇಲ್ಲಿದೆ. ಈ ದಿನ ನಿಮ್ಮ ಅದೃಷ್ಟ ಹೇಗಿರಲಿದೆ, ಯಾವ ಸವಾಲುಗಳನ್ನು ಎದುರಿಸಬೇಕಾಗಬಹುದು ಮತ್ತು ಅದಕ್ಕೆ ಪರಿಹಾರಗಳೇನು ಎಂದು ವಿವರವಾಗಿ ವಿವರಿಸಲಾಗಿದೆ.

ಜನ್ಮಸಂಖ್ಯೆ 1 (ಯಾವುದೇ ತಿಂಗಳಿನ 1, 10, 19, 28ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 1):
ತಮಾಷೆಗೆ ಎಂದು ಆರಂಭಿಸಿದ ಮಾತು ಹೊಸ ವ್ಯವಹಾರವನ್ನೋ ವ್ಯಾಪಾರವನ್ನೋ ಆರಂಭಿಸುವ ಮಟ್ಟಕ್ಕೆ ಒಯ್ಯಲಿದೆ. ನಿಮ್ಮ ಗುಣ- ಸ್ವಭಾವಕ್ಕೆ ಶಿಸ್ತಿನ ಚೌಕಟ್ಟು ಹಾಕಲು ಮುಂದಾಗಲಿದ್ದೀರಿ. ಹಿಂದೆಲ್ಲ ದಾಕ್ಷಿಣ್ಯಕ್ಕೆ ಸಿಲುಕಿಕೊಂಡು, ಒಪ್ಪಿಕೊಂಡು ಬಿಡುತ್ತಿದ್ದ ಕೆಲಸ- ಕಾರ್ಯಗಳಂಥ ಸುಳಿಗೆ ಇನ್ನು ಮುಂದೆ ಸಿಕ್ಕಿಹಾಕಿಕೊಳ್ಳಬಾರದು ಎಂಬ ದೃಢವಾದ ನಿಶ್ಚಯ ಮಾಡುತ್ತೀರಿ. ಆದಾಯದಲ್ಲಿ ಏರಿಕೆ ಮಾಡಿಕೊಳ್ಳಲು ದೊರೆಯುವ ಅವಕಾಶಗಳ ಪೈಕಿ ಯಾವುದಕ್ಕೆ ಆಯ್ಕೆ ಮಾಡಿಕೊಳ್ಳುತ್ತೀರಿ ಎಂಬುದರ ಸ್ಪಷ್ಟತೆ ತುಂಬ ಮುಖ್ಯ ಆಗಲಿದೆ.
ಜನ್ಮಸಂಖ್ಯೆ 2 (ಯಾವುದೇ ತಿಂಗಳಿನ 2, 11, 20, 29ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 2):
ಹೆಚ್ಚಿನ ಹಣ ಸಿಗುತ್ತದೆ ಎಂಬ ಕಾರಣಕ್ಕೆ ನಿಮ್ಮ ಸಾಮರ್ಥ್ಯಕ್ಕೆ ಮೀರಿದ ಕೆಲಸಗಳನ್ನು ಒಪ್ಪಿಕೊಳ್ಳುವುದಕ್ಕೆ ಹೋಗಬೇಡಿ. ನಿಮ್ಮ ಮನವೊಲಿಸಲು ಕೆಲವು ಸ್ನೇಹಿತರು ನೀಡುವ ಕಾರಣಗಳನ್ನು ವಿಶ್ಲೇಷಣೆ ಮಾಡದೆ ಒಪ್ಪಿಕೊಂಡು ಬಿಟ್ಟರೆ ಆ ನಂತರ ಪರಿತಪಿಸುವಂತೆ ಆಗಲಿದೆ. ದಂಪತಿ ಮಧ್ಯೆ ಹಣಕಾಸಿನ ವಿಚಾರಕ್ಕೆ ಅಭಿಪ್ರಾಯ ಭೇದ ಕಾಣಿಸಿಕೊಳ್ಳಬಹುದು. ನಿಮಗೆ ಇಷ್ಟವಿಲ್ಲದ ಸ್ಥಳಕ್ಕೆ ಯಾರದೋ ಬಲವಂತಕ್ಕೆ ತೆರಳಿ, ಅಲ್ಲಿ ಅವಮಾನ ಪಡುವಂತೆ ಆಗಲಿದೆ. ಕೆಲವು ಕೆಲಸ- ಕಾರ್ಯಗಳು ನಿಧಾನವಾಗಿಯೇ ಆದರೂ ಪರವಾಗಿಲ್ಲ, ಆತುರ ಮಾಡುವುದಕ್ಕೆ ಹೋಗಬೇಡಿ.
ಜನ್ಮಸಂಖ್ಯೆ 3 (ಯಾವುದೇ ತಿಂಗಳಿನ 3, 12, 21, 30ನೇ ತಾರೀಕು ಹುಟ್ಟಿದವರ ಜನ್ಮಸಂಖ್ಯೆ 3):
ನಿಮ್ಮ ಕೈ ಕೆಳಗೆ ಕೆಲಸ ಮಾಡುವವರ ಬಗ್ಗೆ ಮೂಡುವ ಅಸಮಾಧಾನದ ಮನಸ್ಥಿತಿಯಿಂದ ಆಚೆ ಬರುವುದಕ್ಕೆ ನಾನಾ ಪ್ರಯತ್ನಗಳನ್ನು ಮಾಡಲಿದ್ದೀರಿ. ನಿಮಗೆ ಬರಬೇಕಾದ ಹಣಕ್ಕೆ ಏನಾದರೊಂದು ಕಾರಣ ಒಡ್ಡಿ, ಅಡ್ಡಗಾಲು ಹಾಕಿದವರು ಯಾರು ಎಂಬ ಮಾಹಿತಿ ದೊರೆಯಲಿದೆ. ಕೆಲವು ಉದ್ಯೋಗಾವಕಾಶ ನಿಮ್ಮನ್ನು ಹುಡುಕಿಕೊಂಡು ಬರಲಿದೆ. ನಿಮ್ಮ ಮಾತಿನ ಮೂಲಕ ಕೆಲವು ಕೆಲಸ- ಕಾರ್ಯ ಮಾಡಿಸಿಕೊಳ್ಳಲಿದ್ದೀರಿ.
ಲೇಖನ- ಸ್ವಾತಿ ಎನ್.ಕೆ.
